- ರಾಘವೇಂದ್ರ ಅಡಿಗ ಎಚ್ಚೆನ್.
ಕುಂಭಮೇಳ ಮೋನಲಿಸಳ ನೆನಪಿದೆಯಾ? ಅದೇ, ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದ ಯುವತಿಯ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಆಕೆ ಸೆಲೆಬ್ರಿಟಿ ಆಗಿದ್ದು, ಇದೀಗ ನೆರೆಯ ತೆಲುಗು ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ನೀಡುತ್ತಿದ್ದಾರೆ
ಕುಂಭಮೇಳ ಮೊನಲಿಸ ಇದೀಗ ತೆಲುಗು ಚಿತ್ರರಂಗಕ್ಕೆ ಕಾಲಿರಿಸಿದ್ದಾರೆ. ತೆಲುಗಿನ ‘ಲೈಫ್’ ಹೆಸರಿನ ಸಿನಿಮಾನಲ್ಲಿ ಕುಂಭಮೇಳ ಮೊನಲಿಸ ನಟಿಸುತ್ತಿದ್ದಾರೆ. ಈ ಸಿನಿಮಾಕ್ಕೆ ಸಾಯಿ ಚರಣ್ ನಾಯಕ. ಶ್ರೀನು ಕೋಟಪೇಟಿ ನಿರ್ದೇಶನ ಮಾಡುತ್ತಿದ್ದಾರೆ. ವಂಗಮಾಂಬ ಕ್ರಿಯೇಶನ್ಸ್ ಮೂಲಕ ಸಿನಿಮಾದ ನಿರ್ಮಾಣ ಮಾಡಲಾಗುತ್ತಿದ್ದಾರೆ ನಿರ್ಮಾಪಕ ಅಂಜಯ್ಯ. ನಿನ್ನೆಯಷ್ಟೆ ಸಿನಿಮಾದ ಮುಹೂರ್ತ ಹೈದರಾಬಾದ್ನ ಪ್ರಸಾದ್ ಲ್ಯಾಬ್ಸ್ನಲ್ಲಿ ನಡೆದಿದ್ದು, ಮೊನಲಿಸಾ ಹಾಗೂ ನಾಯಕ ಸಾಯಿ ಚರಣ್ ಅವರ ಓಪನಿಂಗ್ ಶಾಟ್ಗಳ ಚಿತ್ರೀಕರಣ ಸಹ ಮಾಡಲಾಗಿದೆ.
ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಮೊನಲಿಸಾ, ‘ಹೈದರಾಬಾದ್ಗೆ ಬಂದಿರುವುದು ಮತ್ತು ತೆಲುಗು ಸಿನಿಮಾನಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಬಹಳ ಖುಷಿಯಾಗಿದೆ. ‘ಲೈಫ್’ ಸಿನಿಮಾ ಈ ಸಿನಿಮಾನಲ್ಲಿ ಕೆಲಸ ಮಾಡಿರುವ ಎಲ್ಲರಿಗೂ ಲೈಫ್ ನೀಡಲಿದೆ ಎಂಬ ವಿಶ್ವಾಸ ನನಗೆ ಇದೆ. ಈಗ ನನಗೆ ತೆಲುಗು ಬರುವುದಿಲ್ಲ ಆದರೆ ಸಿನಿಮಾ ಮುಗಿಯುವ ವೇಳೆಗೆ ತೆಲುಗು ಕಲಿಯುವ ವಿಶ್ವಾಸವಿದೆ. ಅವಕಾಶ ನೀಡಿದ ನಿರ್ಮಾಪಕರು, ನಿರ್ದೇಶಕರಿಗೆ ಧನ್ಯವಾದ’ ಎಂದಿದ್ದಾರೆ.

ಮಧ್ಯ ಪ್ರದೇಶದ ಇಂಧೋರದ ಮೋನಲಿಸ ಭೋಸ್ಲೆ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆ, ಜಪಮಾಲೆ, ಹೂವು ಮಾರಾಟ ಮಾಡುತ್ತಿದ್ದರು. ಕುಂಭಮೇಳಕ್ಕೆ ಭೇಟಿ ನೀಡಿದ ಫೋಟೊಗ್ರಾಫರ್ ಒಬ್ಬರು ಇವರ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದೇ ತಡ ಆ ಚಿತ್ರ ವೈರಲ್ ಆಯ್ತು. ಇವರ ಅಂದಕ್ಕೆ ಜನ ಮಾರುಹೋದರು. ಮೊನಲಿಸ ಭೋಂಸ್ಲೆಗೆ ಕುಂಭಮೇಳ ಮೊನಲಿಸ ಎಂಬ ಹೆಸರು ಬಿತ್ತು. ಚಿತ್ರ ವೈರಲ್ ಆದ ಬೆನ್ನಲ್ಲೆ ಮೊನಲಿಸ ಸೆಲೆಬ್ರಿಟಿ ಆದರು. ಈಗ ದೇಶದಾದ್ಯಂತ ಹಲವು ಖಾಸಗಿ ಇವೆಂಟ್ಗಳಲ್ಲಿ ಭಾಗಿ ಆಗುತ್ತಾರೆ, ಅದಕ್ಕಾಗಿ ಲಕ್ಷಾಂತರ ರೂಪಾಯಿ ಹಣ ಚಾರ್ಜ್ ಮಾಡುತ್ತಾರೆ. ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಪ್ಯಾಷನ್ ಶೋಗಳಲ್ಲಿಯೂ ಭಾಗವಹಿಸುತ್ತಿದ್ದಾರೆ. ತೆಲುಗು ಮಾತ್ರವಲ್ಲದೆ ಒಂದು ಹಿಂದಿ ಸಿನಿಮಾನಲ್ಲಿಯೂ ಮೊನಲಿಸ ನಟಿಸುತ್ತಿದ್ದಾರೆ.





