ದಾಂಪತ್ಯ ಜೀವನನ್ನು ದೀರ್ಘಾವಧಿಯವರೆಗೂ ಸದಾ ತಾಜಾ ಆಗಿಟ್ಟುಕೊಳ್ಳಲು, ಇಲ್ಲಿನ ಮಾಹಿತಿಯನ್ನು ಮರೆಯದೆ ಬಳಸಿಕೊಳ್ಳಿ.....
ಇತ್ತೀಚಿನ ಓಡುಯುಗದ ಧಾವಂತದ ಜೀವನದಲ್ಲಿ ಟೆನ್ಶನ್ಸ್ ಬಿಟ್ಟರೆ ಏನೂ ಇಲ್ಲ. ಇಂತ ಲೈಫ್ ಸೆಲ್ ಫಾಲೋ ಮಾಡು ನಮಗೆ ಕಿರಿಯ ವಯಸ್ಸಿನಲ್ಲೇ ರೋಗಗಳ ಕಾಟ ತಪ್ಪಿದ್ದಲ್ಲ. ಅಗತ್ಯವಾಗಿ ಇದರ ಪರಿಣಾಮ ನಮ್ಮ ಸೆಕ್ಸ್ ಲೈಫ್ ಮೇಲಾಗುತ್ತದೆ. ಹಾಗಾದಾಗ ಸೆಕ್ಸ್ ಲೈಫ್ ಬಲು ಬೇಗ ಮುಗಿದೇ ಹೋಗುತ್ತದೆ. ಇದರ ಬದಲಿಗೆ ನೀವು ನಿಮ್ಮ ದಾಂಪತ್ಯವನ್ನು ಸದಾ ನಳನಳಿಸುವಂತೆ ಇರಿಸಿಕೊಳ್ಳ ಬಯಸಿದರೆ, ಇಲ್ಲಿನ ಸಲಹೆಗಳನ್ನು ಅಗತ್ಯವಾಗಿ ಅನುಸರಿಸಿ.
ಸದಾ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ : `ಆರೋಗ್ಯಕ್ಕೆ ಮಿಗಿಲಾದ ಭಾಗ್ಯವಿಲ್ಲ!' ಹೀಗಾಗಿ ಸ್ವಸ್ಥ ದೇಹ ಮಾತ್ರ ಖುಷಿಯಾಗಿರಲು ಸಾಧ್ಯ. ನಮಗೆ ರೋಗ ಬಂದುಬಿಟ್ಟರೆ, ನಾವು ಸುಖವಾಗಿರೋದಿಲ್ಲ, ನಮ್ಮನ್ನು ನಂಬಿಕೊಂಡವರಿಗೂ ನೆಮ್ಮದಿ ಇರೋದಿಲ್ಲ. ಹಾಗಿರುವಾಗ ಅದು ದಂಪತಿಗಳ ದಾಂಪತ್ಯ ಸುಖಕ್ಕೆ ಅನ್ವಯಿಸದೆ ಇರಲು ಸಾಧ್ಯವೇ? ಅಸ್ವಸ್ಥ ದೇಹ ಸೆಕ್ಸ್ ಸುಖ ಸವಿಯಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ದೇಹಾರೋಗ್ಯದ ಕಡೆ 200% ಗಮನಹರಿಸಿ, ಸದಾ ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಿ. ಆಗ ಮಾತ್ರ ನಿಮ್ಮ ದಾಂಪತ್ಯ ದೀವಿಗೆ ಸದಾ ಉಜ್ವಲವಾಗಿ ಬೆಳಗುತ್ತಿರಲು ಸಾಧ್ಯ. ಸದಾ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ, ಒಂದಿಷ್ಟು ಹೊತ್ತು ವ್ಯಾಯಾಮ, ಯೋಗ, ಬೆಳಗಿನ ಬ್ರಿಸ್ಕ್ ವಾಕಿಂಗ್, ಜಾಗಿಂಗ್ ಇತ್ಯಾದಿ ರೂಢಿಸಿಕೊಳ್ಳಿ. ಟೆನ್ಶನ್ಸ್ ದೂರವಿರಿಸಿ, ಚಿಂತೆ ಕಾಡದಂತೆ ನೋಡಿಕೊಳ್ಳಿ. ಇದ್ದಕ್ಕಿದ್ದಂತೆ ಅಕಾಲದಲ್ಲಿ ಕಾಡಬಹುದಾದ ದೊಡ್ಡ ರೋಗಗಳಿಂದ ದೂರವಿರಲು ಯತ್ನಿಸಿ.
ಸದಾ ದೇಹವನ್ನು ಫಿಟ್ & ಫೈನ್ ಆಗಿ ಇರಿಸಿಕೊಳ್ಳಿ : ಪ್ರತಿ ದಂಪತಿಗಳೂ ತಮ್ಮ ಸಂಗಾತಿ ಸುಂದರ, ಸದೃಢವಾಗಿ ಇರಲೆಂದು ಬಯಸುತ್ತಾರೆ. ಇದಕ್ಕಾಗಿ ಇಬ್ಬರೂ ಸ್ಥೂಲತೆಗೆ ಬಲಿಯಾಗದಿರಲು ಸದಾ ಪ್ರಯತ್ನಿಸಬೇಕು. ಆಗ ಮಾತ್ರ ನಿಮ್ಮ ಮೈಮಾಟ ಸದೃಢವಾಗಿರಲು ಸಾಧ್ಯ. ನಿಮ್ಮ ದೇಹವನ್ನು ಸದಾ ಫಿಟ್‌ಫೈನ್ ಆಗಿ ಇರಿಸಿಕೊಳ್ಳಿ. ಆಗ ಮಾತ್ರ ನೀವು ನಿಮ್ಮ ಸಂಗಾತಿಯ ಆಕರ್ಷಣೆ ಗೆಲ್ಲಬಹುದು. ಸಹಜವಾಗಿ ಅದು ನಿಮ್ಮ ದಾಂಪತ್ಯ ಜೀವನ ನಂದನವನ ಆಗಿಸಲು ಸಹಕಾರಿ. ಇದಕ್ಕಾಗಿ ನೀವು ನಿಯಮಿತವಾಗಿ ಪೌಷ್ಟಿಕ ಆಹಾರ ಸೇವನೆ ಜೊತೆ ಜಂಕ್ ಫುಡ್, ಫಾಸ್ಟ್ ಫುಡ್ ದೂರ ಇರಿಸಬೇಕು. ಯೋಗ, ವ್ಯಾಯಾಮ ರೂಢಿಸಿಕೊಳ್ಳಬೇಕು. ದೇಹ ತೂಕ ನಿಯಂತ್ರಣದಲ್ಲಿದ್ದಾಗ ಮಾತ್ರ ನೀವು ಫಿಟ್ & ಫೈನ್ ಆಗಿ ಇರಬಲ್ಲಿರಿ. ಮಾನಸಿಕ ಸಂತೃಪ್ತಿಯೂ ಅಷ್ಟೇ ಮುಖ್ಯ.
ವಯಸ್ಸಿಗೆ ತಕ್ಕಂತೆ ನಿಮ್ಮ ಡಯೆಟ್ ಪ್ಲಾನ್ ಇರಲಿ : ದಾಂಪತ್ಯ ಜೀವನ ಬಹುಕಾಲ ನಳನಳಿಸುತ್ತಿರಲಿ ಎಂದು ಬಯಸಿದರೆ, ಅದರಲ್ಲಿ ಸೆಕ್ಸ್ ನ ಸಂತೃಪ್ತಿ ಮುಖ್ಯ ಪಾತ್ರ ವಹಿಸುತ್ತದೆ. ಇದಕ್ಕೆ ಅತಿ ಮುಖ್ಯವಾದುದು ಎಂದರೆ, ನಿಮ್ಮನ್ನು ನೀವು ಆದಷ್ಟೂ ಯುಂಗ್‌ಎನರ್ಜಿಟಿಕ್ ಆಗಿ ಇರಿಸಿಕೊಳ್ಳುವುದು. ಪತಿ/ಪತ್ನಿ ಯಾರೇ ಇರಲಿ, ತಮ್ಮ ವಯಸ್ಸಿಗೆ ತಕ್ಕಂತೆ ಡಯೆಟ್ ಪ್ಲಾನ್ ಇರಿಸಿಕೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ಹೆಂಗಸರು ತಮ್ಮ ಡಯೆಟ್ ಕುರಿತಾಗಿ ಹೆಚ್ಚು ಕಾನ್ಶಿಯಸ್ ಆಗಿರಬೇಕು. ಏಕೆಂದರೆ ಅವರು ಮನೆವಾರ್ತೆ, ಆಫೀಸ್, ಮನೆ ಮಂದಿಯ ಎಲ್ಲರ ಬಗೆಗೂ ಸದಾ ಚಿಂತಿತರಾಗಿರುತ್ತಾರೆ. ಇದಕ್ಕಾಗಿ ಹೆಂಗಸರು ಸದಾ ಫಿಟ್‌ಸ್ಟ್ರಾಂಗ್ ಆಗಿರಬೇಕು. ಅವರ ಆಹಾರ ಕ್ರಮ ಸರಿಯಾಗಿದ್ದು, ತುಂಬಾ ಪೌಷ್ಟಿಕತೆಯಿಂದ ಕೂಡಿರಬೇಕು. ಹೆಂಗಸರು ಹೆಚ್ಚುತ್ತಿರುವ ತಮ್ಮ ವಯಸ್ಸಿನ ಪ್ರತಿ ಘಟ್ಟದಲ್ಲೂ, ಬೇರೆ ಬೇರೆ ನ್ಯೂಟ್ರಿಯಸ್ ಹೆಲ್ದಿ ಡಯೆಟ್ ಫಾಲೋ ಮಾಡಬೇಕು. ಏಕೆಂದರೆ 40-45 ನಂತರ, ಹೆಂಗಸರ ದೇಹದಲ್ಲಿ ಹಾರ್ಮೋನ್ ಬದಲಾವಣೆ ಅತಿ ಸಹಜ. ಇನ್ ಸುಲಿನ್ ಲೆವೆಲ್ ನಲ್ಲಿ ಸಹ ಏರುಪೇರು ಉಂಟಾಗುತ್ತದೆ. ಮೂಳೆಗಳ ಸವೆಯುವಿಕೆ, ಮೆನೋಪಾಸ್, ಇನ್ನಿತರ ದೈಹಿಕ ತೊಂದರೆಗಳು ಕಾಡತೊಡಗುತ್ತವೆ. ಹೀಗಾಗಿ ಈ ವಯಸ್ಸಿನಲ್ಲಿ ಅವರು ತಮ್ಮ ದೈನಂದಿನ ಆಹಾರದತ್ತ ಹೆಚ್ಚು ಎಚ್ಚರ ವಹಿಸಬೇಕು. ಹೆಚ್ಚು ಫೈಬರ್, ಪ್ರೋಟೀನ್ ಯುಕ್ತ ಪ್ರಾಡಕ್ಟ್ಸ್, ತಾಜಾ ಹಸಿರು ತರಕಾರಿ, ಕ್ಯಾಲ್ಶಿಯಂಯುಕ್ತ ಡೇರಿ ಪ್ರಾಡಕ್ಟ್ಸ್, ನಟ್ಸ್ ಇತ್ಯಾದಿಗಳನ್ನು ತಮ್ಮ ಡಯೆಟ್ ನಲ್ಲಿ ಅಳವಡಿಸಿಕೊಳ್ಳಬೇಕು, ಆಗ ಮಾತ್ರ ಆರೋಗ್ಯ ಚೆನ್ನಾಗಿರುತ್ತದೆ.





