ರಮೇಶ ಹಳ್ಳಿಯೊಂದರಲ್ಲಿರಲ್ಲಿ ಆರತಿಗೊಬ್
ತಾವು ಪಡುತ್ತಿರುವ ಕಷ್ಟವನ್ನು ತಮ್ಮ ಮಗ ಮಹೇಶನಿಗೆ ಬರಬಾರದೆಂದು ಬಾಲ್ಯದಿಂದಲೂ ಆತನಿಗೆ ಸಾಧ್ಯವಾದಷ್ಟೂ ಸೌಲಭ್ಯಗಳನ್ನು ನೀಡಿ ತಮ್ಮೂರಿನಲೇ ಇದ್ದ ಶಾಲೆಯಲ್ಲಿ ಓದಿಸುತ್ತಿದ್ದ. ಆರ್ಥಿಕವಾಗಿ ಬಡವರಾಗಿದ್ದರೂ, ಬೌದ್ಧಿಕವಾಗಿ ಶ್ರೀಮಂತರಾಗಿದ್ದ ಕಾರಣ ಮಹೇಶ ಬಾಲ್ಯದಿಂದಲೂ ಆಟ ಪಾಠಗಳಲ್ಲಿ ಚುರುಕಾಗಿಯೇ ಇದ್ದು ಓಹೋ ಎನ್ನಲಾಗದಿದ್ದರೂ, ತರಗತಿಯಲ್ಲಿ ಮೊದಲ ಮೂರು ಸ್ಥಾನ ಪಡೆಯುತ್ತಿದ್ದ. ಅದೇ ರೀತಿಯಲ್ಲಿ ಪಠ್ಯೇತರ ಚಟುವಟಿಕೆಗಳಾದ ನಾಟಕ, ಪ್ರಬಂಧ, ಚರ್ಚಾ ಸ್ಪರ್ಧೆಯಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲೂ ಆಸ್ತಕ್ತಿಯಿಂದ ಭಾಗವಹಿಸಿ ನಾಲ್ಕಾರು ಬಹುಮಾನಗಳನ್ನು ಗಳಿಸಿದ್ದ ಕಾರಣ ತನ್ನ ಶಾಲೆಯ ಶಿಕ್ಷಕವೃಂದದವರಿಗೆ ಅಚ್ಚುಮೆಚ್ಚಿನ ಶಿಷ್ಯನಾಗಿದ್ದ.
ಹೀಗೆ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರತಿ ಬಾರಿ ಪಟ್ಟಣಗಳಿಗೆ ಹೋದಾಗಲೂ ಅಲ್ಲಿನ ಹೈಸ್ಕೂಲು ಹುಡುಗ ಹುಡುಗಿಯರು ಧರಿಸುತ್ತಿದ್ದ ಬಟ್ಟೆ ಬರೆಗಳು, ಕೈಯ್ಯಲ್ಲಿ ಹಿಡಿದಿರುತ್ತಿದ್ದ ಮೊಬೈಲ್ಲುಗಳು, ಶಾಲೆ ಬಿಟ್ಟ ನಂತರ ಶಾಲೆಯ ಪಕ್ಕದಲ್ಲೇ ಇರುತ್ತಿದ್ದ ಅಂಗಡಿ ಮತ್ತು ಹೋಟೇಲ್ಲುಗಳಲ್ಲಿ ತಮಗೆ ಬೇಕಾದದ್ದನ್ನು ತಿನ್ನುತ್ತಾ ಐಸ್ ಕ್ರೀಮ್ ಮೆಲ್ಲುತ್ತಾ ಹರಟುತ್ತಿದ್ದದ್ದು ಮಹೇಶನಿಗೆ ಅಚ್ಚರಿ ಮೂಡಿಸುತಿದ್ದದ್ದಲ್ಲದೇ, ತಾ
ಹತ್ತನೆಯ ತರಗತಿಯ ಪರೀಕ್ಷೆಗಳು ಹತ್ತಿರ ಬಂದಾಗ, ರಮೇಶ ದಂಪತಿಗಳು ತಮ್ಮ ಮಗನನ್ನು ಮತ್ತಷ್ಟು ಕಾಳಜಿಯಿಂದ ನೋಡಿ ಕೊಳ್ಳತೊಡಗಿದ್ದಲ್ಲದೇ ತಡರಾತ್ರಿಯಲ್ಲೂ ಅವನ ಓದಿಗೆ ಯಾವುದೇ ತೊಂದರೆಯಾಗದಂತೆ ಟೀ ಕಾಫೀ ಮಾಡಿಕೊಡುತ್ತಾ ಪರೀಕ್ಷೆಯ ದಿನ ರಮೇಶನೇ ತನ್ನದೇ ಟಿವಿಎಸ್-50 ಯಲ್ಲಿ ಮಹೇಶನನ್ನು ಕೂರಿಸಿಕೊಂಡು ಪರೀಕ್ಷೆಗೆ ಬಿಟ್ಟು ಬಂದಿದ್ದ. ಪರೀಕ್ಷೇಗಳೆಲ್ಲವೂ ಮುಗಿದು ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ಮಗ ಮಹೇಶನಿಗಿಂತಲೂ ಅಪ್ಪಾ ರಮೇಶನಿಗೆ ಆತಂಕ ಹೆಚ್ಚಾಗಿತ್ತು.ಇತ್ತೀಚಿನ ದಿನಗಳಲ್ಲಿ ಫಲಿತಾಂಶವೆಲ್ಲವೂ ಬೆರಳ ತುದಿಯಲ್ಲಿ ಮೊಬೈಲ್ ಮುಖಾಂತರವೇ ನೋಡಬಹುದಾಗಿದ್ದರೂ, ರಮೇಶನ ಬಳಿ ಸಾಧಾರಣವಾದ ಮೊಬೈಲ್ ಇದ್ದ ಕಾರಣ, ಫಲಿತಾಂಶವನ್ನು ಶಾಲೆಯಲ್ಲೇ ನೋಡಲು ನಿರ್ಧರಿಸಿ ಆ ದಿನ ಬೆಳ್ಳಂಬೆಳಿಗ್ಗೆಯೇ ಅಪ್ಪಾ ಮಗ ಎದ್ದು ನಿತ್ಯಕರ್ಮಗಳನ್ನು ಮುಗಿಸಿ, ವಿಶೇಷವಾಗಿ ದೇವರಿಗೆ ಕೈ ಮುಗಿದು ಮಡದಿ ಕೊಟ್ಟ ತಿಂಡಿಯನ್ನು ತಿನ್ನುವಾಗಲೂ ಫಲಿತಾಂಶದ ದುಗುಡವೇ ಹೆಚ್ಚಾಗಿತ್ತು.





