ಮಹಿಳೆಯರಿಗೆ ಹೆಲ್ತ್ ಇನ್‌ಶ್ಯೂರೆನ್ಸ್ ನ ಕುರಿತಾದ ಈ ಮಾಹಿತಿಗಳನ್ನು ತಿಳಿದುಕೊಳ್ಳುವುದು ಹೆಚ್ಚು ಲಾಭಕರ. ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ಗಮನಿಸೋಣವೇ……...?

ಮಹಿಳೆಯರು ಮಾತ್ರವೇ ತಮ್ಮ ಕುಟುಂಬದ ಸ್ವಸ್ಥ ಜೀವನಶೈಲಿಗೆ ಒತ್ತು ನೀಡಲು ಸಾಧ್ಯ. ಮನೆಯವರೆಲ್ಲರನ್ನೂ ಗಮನಿಸಿಕೊಳ್ಳುವ ಆತಂಕದಲ್ಲಿ ಅವರು ತಮ್ಮ ಆರೋಗ್ಯವನ್ನೇ ನಿರ್ಲಕ್ಷಿಸುತ್ತಾರೆ. ಅದರಲ್ಲೂ ಉದ್ಯೋಗಸ್ಥ ವನಿತೆಯರಂತೂ ಅತ್ತ ಕೆರಿಯರ್‌ ಇತ್ತ ಕುಟುಂಬ ಎನ್ನುತ್ತಾ ಎರಡು ದೋಣಿಗಳಲ್ಲಿ ಒಟ್ಟೊಟ್ಟಿಗೆ ತೇಲುತ್ತಾ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಾರೆ. ಎಷ್ಟೋ ಮಹಿಳೆಯರಿಗೆ ತಾವು ಸ್ವಸ್ಥರಾಗಿದ್ದರೆ ಮಾತ್ರ ತಮ್ಮ ಕುಟುಂಬದವರ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಸಾಧ್ಯ ಎಂಬುದನ್ನೂ ನಿರ್ಲಕ್ಷಿಸುತ್ತಾರೆ.

ಹೀಗಿರುವಾಗ ಆರೋಗ್ಯ ವಿಮೆಯ ಬಗ್ಗೆ ತಿಳಿದಿರಬೇಕಾದುದು ಸಹ ಅತ್ಯಗತ್ಯ. ಇದು ನಿಮ್ಮನ್ನು ಯಾವುದೇ ಅಪಾಯಕರ ಸ್ಥಿತಿಯಲ್ಲಿ ಕಾಪಾಡುತ್ತದೆ. ನೀವು ತಪಾಸಣೆಗೆ ಒಳಪಟ್ಟು ದೊಡ್ಡ ಕಾಯಿಲೆಯ ವಿಷಯ ಪತ್ತೆಯಾದಾಗ, ಅದರಿಂದ ನಿಮ್ಮ ಆರೋಗ್ಯಕ್ಕಷ್ಟೇ ಹಾನಿಯಲ್ಲ, ಅದು ನಿಮ್ಮ ಇಡೀ ಜೀವನವನ್ನೇ ಕತ್ತಲೆಗೆ ದೂಡಬಹುದು. ಇತ್ತೀಚೆಗಂತೂ ಇಂಥ ದೊಡ್ಡ ಕಾಯಿಲೆಗಳಿಗೆ ಚಿಕಿತ್ಸೆ ಬಲು ದುಬಾರಿಯಾಗುತ್ತಿದೆ. ಯಾವ ವ್ಯಕ್ತಿಗೇ ಆಗಲಿ, ಆರೋಗ್ಯ ವಿಮೆಯ ನೆರವಿಲ್ಲದೆ ಇಂಥ ದೈತ್ಯ ಬಿಲ್‌ಗಳ ಪಾವತಿ ಅಸಾಧ್ಯ ಎಂಬಂತಾಗಿಬಿಟ್ಟಿದೆ.

ಆರೋಗ್ಯ ವಿಮೆ

ಎಲ್ಲಾ ವಯಸ್ಸಿನವರಿಗೂ ಉಪಯುಕ್ತ. ಅವಿವಾಹಿತ ಯುವತಿಯರು ತಮಗೆ ಮಾತ್ರವಲ್ಲದೆ, ತಮ್ಮ ತಾಯಿ ತಂದೆಯರ ಹೆಸರಿನಲ್ಲೂ ಇದನ್ನು ಮಾಡಿಸಬಹುದು. ಅದೇ ತರಹ ವಿವಾಹಿತ ಮಹಿಳೆ ತನಗೂ, ತನ್ನ ಕುಟುಂಬದ ಸದಸ್ಯರಿಗೂ ಇದನ್ನು ಮಾಡಿಸಬಹುದಾಗಿದೆ.

ಆರೋಗ್ಯ ವಿಮೆಯ ಮಹತ್ವ

ಆರೋಗ್ಯ ವಿಮೆ ಎಂಬುದು ಒಂದು ವ್ಯಾಪಕ ಕಾನ್‌ಸೆಪ್ಟ್, ಇದು ಜನರಿಗೆ ಯಾವುದೇ ಅತಿ ದೊಡ್ಡ ವೈದ್ಯಕೀಯ ಆಪತ್ತು ಹಾಗೂ ಅದರಿಂದಾಗುವ ಖರ್ಚಿನಿಂದ ಸುರಕ್ಷತೆ ಒದಗಿಸುತ್ತದೆ. ಇಂದು ಮಾರುಕಟ್ಟೆಯಲ್ಲಿ ಈ ಕುರಿತಾಗಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಇದರಲ್ಲಿ ಕಲರ್‌, ಲಾಭ ಇತ್ಯಾದಿ ಲಭ್ಯವಿವೆ. ಆದರೆ ಪ್ರತಿಯೊಂದರಲ್ಲೂ ಅಲ್ಪಸ್ವಲ್ಪ ಅಂತರ ಇದ್ದೇ ಇರುತ್ತದೆ.

ಮಹಿಳೆಯರಿಗೆಂದೇ ವಿಶೇಷ ವಿಮೆ

ಇಂದಿನ ಮಾರುಕಟ್ಟೆಯಲ್ಲಿ ಮಹಿಳೆಯರಿಗೆಂದೇ ಮೀಸಲಾದ ಅನೇಕ ವಿಶೇಷ ಯೋಜನೆಗಳು ಲಭ್ಯವಿವೆ. ಅದು ಕೇವಲ ಅವರ ವೈಯಕ್ತಿಕ ಅಗತ್ಯಗಳನ್ನು ಪೂರೈಸಿ, ಗಂಭೀರ ಕಾಯಿಲೆಗಳನ್ನೂ ಕವರ್‌ ಮಾಡುತ್ತದೆ. ಪ್ರಸ್ತುತ, ಮಾರುಕಟ್ಟೆಯಲ್ಲಿ ಲಭ್ಯವಿರುವ ಈ ಯೋಜನೆಗಳಿಗೆ ಇಂತಿಷ್ಟೇ ಫಿಕ್ಸ್ಡ್ ಪ್ರೀಮಿಯಂ ಎಂದೇನೂ ವಿಶೇಷ ಬಗೆಯದ್ದಿಲ್ಲ.

ಎಲ್ಲಾ ಆರೋಗ್ಯ ವಿಮಾ ಕಂಪನಿಗಳೂ, ಮಹಿಳೆಯರ ಮೇಲೆ ಕೇಂದ್ರೀಕರಿಸಲಾದ ಉತ್ಪನ್ನಗಳನ್ನು ದೊರಕಿಸಿ ಕೊಡುವುದಿಲ್ಲ. ಆದರೆ ಕಂಪನಿಗಳ ನೀತಿಗಳಲ್ಲಿ ಮೆಟರ್ನಿಟಿ ಬೆನಿಫಿಟ್ಸ್ ಶಾಮೀಲಾಗಿರುತ್ತವೆ. ಕಂಪನಿಗಳ ಹೊಸ ಹೊಸ ಯೋಜನೆಗಳನ್ನು ವಿಭಿನ್ನ ವಯಸ್ಸಿನ ಮಹಿಳೆಯರು, ಅವರ ಜೀವನದ ವಿವಿಧ ಘಟ್ಟಗಳನ್ನು ಆಧರಿಸಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ರತ್ಯೇಕ ಪಾಲಿಸಿಗಳು, ಬೇರೆ ಪಾಲಿಸಿಗಳಿಗಿಂತ ಖಂಡಿತಾ ವಿಭಿನ್ನವಾಗಿರುತ್ತವೆ. ಎಲ್ಲಾ ಪಾಲಿಸಿಗಳ ಕೆಲವು ಸಾಮಾನ್ಯ ಲಕ್ಷಣಗಳು ಹೀಗಿರುತ್ತವೆ :

- ವಿಮೆಯ ಕಂಪನಿಯ ನೆಟ್‌ವರ್ಕ್‌ನ ಆಸ್ಪತ್ರೆಗಳಲ್ಲಿ ಕ್ಯಾಶ್‌ಲೆಸ್‌ ಹಾಸ್ಪಿಟೈಲೇಸೇಷನ್‌ಗೆ ಅವಕಾಶ.

- ಆಸ್ಪತ್ರೆಯಲ್ಲಿ  ದಾಖಲಾಗುವ ಮೊದಲು ಅಥವಾ ದಾಖಲುಗೊಳ್ಳುವ ಸಂದರ್ಭದಲ್ಲಿ ಬರುವ ಖರ್ಚಿನ ನಿರ್ವಹಣೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ