ಭಾರತದ ಮೊದಲ ವಿಶ್ವ ಚಾಂಪಿಯನ್ಮಹಿಳಾ ಮೋಟಾರ್ಸ್ಪೋರ್ಟ್ಸ್ ಕ್ರೀಡಾಪಟು

``ದೀರ್ಘ ಚಿಕಿತ್ಸೆ ಮತ್ತು ತರಬೇತಿಯ ನಂತರ, ನಾನು ಟ್ರ್ಯಾಕ್ಗೆ ಮರಳಿದೆ ಹಾಗೂ ನನ್ನ ಆತ್ಮವಿಶ್ವಾಸ ಎಲ್ಲರನ್ನೂ ಅಚ್ಚರಿಗೊಳಿಸಿದೆ.''

ಆಟೋಮೋಟಿವ್ ಅಚೀವರ್ಅವಾರ್ಡ್

ಐಶ್ವರ್ಯಾ ಪಿಸ್ಸೆ ಕರ್ನಾಟಕದ ಬೆಂಗಳೂರಿನ ಪ್ರಸಿದ್ಧ ರೇಸರ್‌. 2019ರಲ್ಲಿ ನಡೆದ ಎಫ್‌ಐಎಂ ಬಜಾಸ್‌ ವರ್ಲ್ಡ್ ಕಪ್‌ (ಮಹಿಳಾ ವಿಭಾಗ)ನಲ್ಲಿ ಇತಿಹಾಸ ನಿರ್ಮಿಸಿದಾಗ ಅವರು ವಿಶ್ವ ಪ್ರಶಸ್ತಿ ಗೆದ್ದ ಮೊದಲ ಮಹಿಳಾ ಭಾರತೀಯ ಮೋಟಾರ್‌ ಸ್ಪೋರ್ಟ್ಸ್ ಅಥ್ಲೀಟ್‌ ಎನಿಸಿಕೊಂಡರು. ಐಶ್ವರ್ಯಾ ಇಂದು ಟಿವಿಎಸ್‌ ರೇಸಿಂಗ್‌ ತಂಡದ ವೃತ್ತಿಪರ ರೈಡರ್‌ ಆಗಿದ್ದಾರೆ ಹಾಗೂ ದೇಶೀಯವಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರಬಲವಾದ ಪ್ರದರ್ಶನಕ್ಕಾಗಿ ಮನ್ನಣೆ ಪಡೆದಿದ್ದಾರೆ.

ಐಶ್ವರ್ಯಾ 1995ರ ಆಗಸ್ಟ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ಮಹಿಳಾ ಸೇವಾ ಸಮಾಜ ಸೀನಿಯರ್‌ ಸೆಕೆಂಡರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ ನಂತರ ಸುರಾನಾ ಕಾಲೇಜಿನಲ್ಲಿ ಮನೋವಿಜ್ಞಾನದಲ್ಲಿ ಪದವಿ ಪಡೆದರು. ಅವರಿಗೆ ಬಾಲ್ಯದಿಂದಲೂ ಅಡ್ವೆಂಚರ್‌ ಎಂದರೆ ಬಹಳ ಇಷ್ಟ. ಆದರೆ ಬೈಕ್‌ ರೇಸಿಂಗ್‌ ಬಗೆಗಿನ ಉತ್ಸಾಹ ಅವರ 18ನೇ ವಯಸ್ಸಿನಲ್ಲಿ ಬಂದಿತು. ಆ ವಯಸ್ಸಿನಲ್ಲಿ ಅವರು 4 ರಲ್ಲಿ ತರಬೇತಿ ಪಡೆದ ನಂತರ ರೇಸಿಂಗ್‌ ಮಾಡಲು ಪ್ರಾರಂಭಿಸಿದರು. ನಂತರ ಮೋಟಾರ್‌ ಸ್ಪೋರ್ಟ್ಸ್ ಜಗತ್ತಿನಲ್ಲಿ ಹೆಸರು ಮಾಡಲು ಪ್ರಾರಂಭಿಸಿದರು.

ಇತಿಹಾಸ ನಿರ್ಮಾಣ

ಐಶ್ವರ್ಯಾ 2016-17ರಲ್ಲಿ ಹೋಂಡಾ ಒನ್‌ ಮೇಕ್‌ ಚಾಂಪಿಯನ್‌ ಶಿಪ್‌ ಮತ್ತು ಟಿವಿಎಸ್‌ ಒನ್‌ ಮೇಕ್‌ ರೋಡ್‌ ರೇಸಿಂಗ್ ಪ್ರಶಸ್ತಿಗಳನ್ನು ಗೆದ್ದರು. ನಂತರ ಅವರು ಸತತ ಆರು ಭಾರತೀಯ ರಾಷ್ಟ್ರೀಯ ರಾಲಿ ಚಾಂಪಿಯನ್‌ ಶಿಪ್‌ ಪ್ರಶಸ್ತಿಗಳು ಒಳಗೊಂಡಂತೆ ಸತತ ಏಳು ಎಫ್‌ಎಂಎಸ್‌ಸಿಐ ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

2018ರಲ್ಲಿ (ಸ್ಪೇನ್‌)ಯಲ್ಲಿ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಐಶ್ವರ್ಯಾ ಇತಿಹಾಸ ನಿರ್ಮಿಸಿದರು. ಈ ರಾಲಿಯನ್ನು ವಿಶ್ವದ ಅತ್ಯಂತ ಕಠಿಣ ರೇಸ್‌ ಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದಾಗ್ಯೂ ಅವರ ಪ್ರಯಾಣ ಸುಲಭದ ಮಾತಾಗಿರಲಿಲ್ಲ. ಜೊತೆಗೆ ಈಕೆ ಹಲವಾರು ಗಂಭೀರ ಗಾಯಗಳನ್ನು ಅನುಭವಿಸಿದರು. ಒಮ್ಮೆ ಛಿದ್ರಗೊಂಡು ಅವರ ಜೀವಕ್ಕೂ ಅಪಾಯ ಉಂಟು ಮಾಡಿತು. ನಂತರ ಅವರು, ನಿರಂತರ ಚಿಕಿತ್ಸೆ ಮತ್ತು ತರಬೇತಿಯ ಮೂಲಕ ಪುನಃ ಟ್ರ್ಯಾಕ್ ಗೆ ಮರಳಿ ಎಲ್ಲರನ್ನೂ ಅಚ್ಚರಿಗೊಳಿಸಿದರು.

2019ರಲ್ಲಿ ಭಾರತೀಯ ಮಹಿಳೆಯರು ಯಾರಿಗೂ ಕಡಿಮೆ ಇಲ್ಲ ಎಂದು ಜಗತ್ತಿಗೆ ತೋರಿಸಿದರು. ಮಹಿಳಾ ವಿಭಾಗದಲ್ಲಿ ಗೆಲ್ಲುವ ಮೂಲಕ ಭಾರತಕ್ಕೆ ಹೆಮ್ಮೆ ತಂದರು. ದುಬೈ, ಪೋರ್ಚುಗಲ್, ಸ್ಪೇನ್‌ ಮತ್ತು ಹಂಗೇರಿಯಲ್ಲಿ ನಾಲ್ಕು ಸುತ್ತುಗಳಲ್ಲಿ ಸ್ಪರ್ಧಿಸಿ 65 ಅಂಕಗಳೊಂದಿಗೆ ಮುಗಿಸಿದರು. ಈ ಗೆಲುವಿನೊಂದಿಗೆ ಅವರು ಮೋಟಾರ್‌ ಸ್ಪೋರ್ಟ್ಸ್ ನಲ್ಲಿ ಭಾರತದ ಮೊದಲ ವಿಶ್ವ ಚಾಂಪಿಯನ್‌ ಅಥ್ಲೀಟ್‌ ಆದರು. ಐಶ್ವರ್ಯಾ ಇದುವರೆಗೂ ಹಲವಾರು ಪ್ರಶಸ್ತಿ ಹಾಗೂ ಗೌರವಗಳಿಗೆ ಭಾಜನರಾಗಿದ್ದಾರೆ :

ಮೋಟಾರ್‌ ಸ್ಪೋರ್ಟ್ಸ್ ನಲ್ಲಿ ಅತ್ಯುತ್ತಮ ಮಹಿಳೆಯ ಪ್ರದರ್ಶನಕ್ಕಾಗಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ