ಎಲ್ಲೋರಾದ ಗುಹಾಂತರ ದೇವಾಲಯಗಳ ಅದ್ಭುತ ಶಿಲ್ಪಕಲೆ ಹಾಗೂ ತ್ರಿಧರ್ಮ ಸಂಗಮದ  ವೈಭವವನ್ನು ಸಂಕೇತಿಸುವ ಚಿತ್ತಾರದ ಬಗ್ಗೆ ಸವಿವರವಾಗಿ ತಿಳಿಯೋಣವೇ.......?

ಕಳೆದ ಮಾರ್ಚ್‌ ಸಂಚಿಕೆಯಲ್ಲಿ ನಾನು ಅಜಂತಾ ಗುಹಾಲಯಗಳ ಬಗ್ಗೆ ಮಾಹಿತಿ ನೀಡಿದ್ದು, ಈ ಸಲದ ಪ್ರವಾಸಿ ಲೇಖನದಲ್ಲಿ ಎಲ್ಲೋರಾ ಕೈಲಾಸನಾಥ ಹಾಗೂ ಇತರೆ ಗುಹಾಲಯಗಳ ಬಗ್ಗೆ ತಿಳಿದುಕೊಳ್ಳೋಣವೇ......?

ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇವಾಲಯ

ಔರಂಗಾಬಾದ್‌ ನಿಂದ 18 ಮೈಲುಗಳ ದೂರದಲ್ಲಿ ಎಲ್ಲೋರಾದ ಗುಹೆಗಳು ಇವೆ. ಹಾಗೆ ದಾರಿಯಲ್ಲಿ ಹೋಗುವಾಗ ನಮಗೆ ಗೃಷ್ಣೇಶ್ವರ ದೇವಾಲಯದ ದರ್ಶನವಾಯಿತು. ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಇದು ಅತಿ ಕಿರಿದಾದ ಹಾಗೂ ಶಕ್ತಿವಂತ ಲಿಂಗವಾಗಿದೆ. ಗೃಷ್ಣೇಶ್ವರ ಎಂದರೆ ದಯಾವಂತ ಎಂದು ಅರ್ಥ. 14ನೇ ಶತಮಾನದಲ್ಲಿ ದೆಹಲಿಯ ಸುಲ್ತಾನರು ಮರಾಠ ರಾಜರ ಮೇಲೆ ದಂಡೆತ್ತಿ ಬಂದು ಈ ದೇವಾಲಯವನ್ನು ಸಂಪೂರ್ಣವಾಗಿ ಹಾಳುಗೆಡವಿದರು. ತದನಂತರ ಮರಾಠ ರಾಣಿ ಅಹಲ್ಯಾ ಬಾಯೀ ಹೋಳ್ಕರ್‌ ಇದನ್ನು ಪುನರ್‌ ನಿರ್ಮಾಣ ಮಾಡಿದ್ದಾರೆ. ಮಕ್ಕಳಾಗದೇ ಇರುವ ದಂಪತಿಗಳು, ತಮಗೆ ಮಕ್ಕಳು ಆಗಬೇಕೆಂದು ಈ ದೇವಾಲಯಕ್ಕೆ ಬಂದು ಹರಕೆ ಕಟ್ಟಿಕೊಳ್ಳುತ್ತಾರೆ. ನಾವು ದೇವರ ದರ್ಶನ ಪಡೆದು ಮುಂದೆ ಸಾಗಿದೆ.

IMG_20230830_105628

ಎಲ್ಲೋರಾದ ಗುಹಾಂತರ ದೇವಾಲಯಗಳು

ದೇವರು ಮತ್ತು ದೇವತೆಗಳು ಹಾಗೂ ಬೃಹತ್‌ ಧರ್ಮಗಳ ಸ್ಮರಣೆಯಾಗಿರುವ ಎಲ್ಲೋರಾದ ಗುಹೆಗಳು ಬೌದ್ಧ ಧರ್ಮ, ಹಿಂದೂ ಹಾಗೂ ಜೈನ ಧರ್ಮಗಳ ಸಂಗಮವಾಗಿವೆ. ಪ್ರತಿಯೊಂದು ಗುಹೆಗಳೂ ತಮ್ಮದೇ ಆದ ಕಲಾಶೈಲಿಯನ್ನು ಹೊಂದಿದ್ದು, ಎಲ್ಲ ಧರ್ಮದ ಪ್ರವಾಸಿಗರನ್ನು ತನ್ನತ್ತ ಕೈಬೀಸಿ ಕರೆಯುತ್ತಿದೆ.

ಎಲ್ಲೋರಾ ರಾಷ್ಟ್ರಕೂಟ ಅರಸರ ಕಾಲದ ಗುಹಾಲಯವಾಗಿದ್ದು, ಮೊಟ್ಟ ಮೊದಲು ಸಿಗುವ ಗುಹಾ ಕ್ರಮ ಸಂಖ್ಯೆ 16. ಇದು ಶಿವನ ಕೈಲಾಸ ದೇವಾಲಯವಾಗಿದೆ. ಇಲ್ಲಿ ಒಟ್ಟು 24 ಗುಹಾಲಯವಿದ್ದು, ಕ್ರಮ ಸಂಖ್ಯೆ 112 ಬೌದ್ಧ, 1329 ಹಿಂದೂ ಹಾಗೂ 3034 ಜೈನ ಧರ್ಮದ ಗುಹಾಲಯವಾಗಿದೆ. ಎಲ್ಲ ಗುಹಾಲಯವೂ ನಯನ ಮನೋಹರವಾಗಿದ್ದು, ನಮ್ಮ ಭಾರತೀಯ ಸಂಸ್ಕೃತಿಯ ವಿವಿಧತೆಯಲ್ಲಿ ಏಕತೆಯನ್ನು ಬಿಂಬಿಸುವ ಕೈಗನ್ನಡಿಯಂತಿದೆ.

ಏಕಶಿಲಾ ಕೈಲಾಸನಾಥ ದೇವಾಲಯ ಇದರ ಕ್ರ.ಸಂ.16. ಎಲ್ಲೋರಾ ಗುಹಾಲಯಕ್ಕೆ ಕಾಲಿಡುತ್ತಿದ್ದಂತೆ ಮೊಟ್ಟ ಮೊದಲು ಸಿಗುವ ಗುಹಾ ಕ್ರ.ಸಂ.16. ಅದುವೇ ಶಿವನ ನಿವಾಸ ಸ್ಥಾನವಾದ ಕೈಲಾಸ ಪರ್ವತದ ಉತ್ಪನ್ನವಿದ್ದು, ಎಲ್ಲೋರಾ ಉತ್ಪನ್ನಗಳ ಪೈಕಿ ಅತ್ಯುತ್ತಮವಾದದ್ದು ಮತ್ತು ಭಾರತದಲ್ಲಿ ಪ್ರಸಿದ್ಧ ಸ್ಮಾರಕ ಆಗಿದೆ. 9ನೇ ಶತಮಾನದ ಕಲಾಕುಶಲತೆಯನ್ನು ತೋರುವ ಕಲ್ಲು ಕೆತ್ತನೆಯ ಶಿಲಾ ವಿನ್ಯಾಸ ಇದಾಗಿದೆ.

ಈ ಕೈಲಾಸ ದೇವಾಲಯ ವಿಶ್ವದಲ್ಲಿಯೇ ಏಕ ಶಿಲ್ಪಕಲಾ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ನೂರಾರು ಶಿಲ್ಪ ಕಲಾಕಾರರು ಹಾಗೂ ವಿನ್ಯಾಸಕಾರರು ಈ ಭವ್ಯವಾದ ಕಲ್ಲು ಕೆತ್ತನೆಯನ್ನು ಮಾಡಿದ್ದಾರೆ. ಬಹುಶಃ 30 ಲಕ್ಷ ಕ್ಯೂಬಿಕ್‌ ಅಡಿಗಳಷ್ಟು ಕೆತ್ತನೆಯ ಕಾರ್ಯಕ್ಕೆ ಸುಮಾರು 100 ವರ್ಷಗಳಷ್ಟು ಸಮಯ ತೆಗೆದುಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

ಈ ಗುಹಾಲಯ ಒಟ್ಟು 3 ಅಂತಸ್ತುಗಳಿಂದ ಕೂಡಿದ್ದು, ಇಲ್ಲಿ ನಾವು ಮೊದಲಿಗೆ ಗಜರಾಜರು ಶ್ರೀದೇವಿ ಲಕ್ಷ್ಮಿಗೆ ತಮ್ಮ ಸೊಂಡಿಲುಗಳಿಂದ ನೀರನ್ನು ಎರಚಿ ಸ್ನಾನ ಮಾಡಿಸುತ್ತಿರುವ ವಿಗ್ರಹವನ್ನು ನೋಡಬಹುದು. ಹಾಗೆಯೇ ನಾಟ್ಯವಾಡುತ್ತಿರುವ ನಟರಾಜನ ವಿಗ್ರಹ, ದೊಡ್ಡ ದೊಡ್ಡ ಸ್ತಂಭಗಳು, ಬೃಹದಾಕಾರದ ಆನೆಗಳು, ಕುದುರೆ ಹಾಗೂ ಸಿಂಹಗಳ ಕಲ್ಲಿನ ಕೆತ್ತನೆಯನ್ನು ನೋಡಬಹುದು. ಹಾಗೆಯೇ ಇಲ್ಲಿಯ ಗೋಡೆಗಳ ಮೇಲೆ ದೇವಿಯು ಮಹಿಷಾಸುರನನ್ನು ಮರ್ದನ ಮಾಡುತ್ತಿರುವ, ರಾವಣಾಸುರನು ಸೀತಾ ಮಾತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಣ ಮಾಡುತ್ತಿರುವ, ದಶಕಂಠನಾದ ರಾಣನು ಭೂ ಕೈಲಾಸವನ್ನು ಎತ್ತಿ ಹಿಡಿದಿರುವ ಶಿಲ್ಪವನ್ನು ಅತಿ ಮನೋಹರವಾಗಿ ಕೆತ್ತಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ