ಬೆಂಗಳೂರಿನ ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಒಬ್ಬ ಮಹಿಳೆ ತನ್ನ ಗಂಡನ ವಿರುದ್ಧ ರಾಜಕಾರಣಿಗಳು ಮತ್ತು ಸಹಚರರ ಜೊತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸಿದ್ದಾನೆ, ಗರ್ಭಪಾತ ಮಾಡಿಸಿದ್ದಾನೆ, ಆರು ಬಾರಿ ತಲಾಖ್ ನೀಡಿದ್ದಾನೆ ಮತ್ತು ವರದಕ್ಷಿಣೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ, ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳಾದ ಗಂಡ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ ಹಾಗೂ ತಾಯಿ ಪಹೀನ್ ತಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸಂತ್ರಸ್ತೆಯು 25 ಜೂನ್ 2021ರಂದು ಯೂನಸ್ ಪಾಷಾನನ್ನು ವಿವಾಹವಾಗಿದ್ದರು. ಮದುವೆಯಾದ ನಾಲ್ಕು ತಿಂಗಳ ನಂತರ, ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ, ಮತ್ತು ತಾಯಿ ಪಹೀನ್ ತಾಜ್ ಸಂತ್ರಸ್ತೆಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಲು ಆರಂಭಿಸಿದ್ದಾರೆ. ಈ ಅವಧಿಯಲ್ಲಿ ಸಂತ್ರಸ್ತೆ ಗರ್ಭವತಿಯಾಗಿದ್ದಾಗ, ಯೂನಸ್ ಪಾಷಾ ಆಕೆಯ ಹೊಟ್ಟೆಗೆ ಒದ್ದು, ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. 17 ಡಿಸೆಂಬರ್ 2021ರಂದು ಆಕೆಯನ್ನು ಬೆದರಿಸಿ, ಒತ್ತಾಯಪೂರ್ವಕವಾಗಿ ಗರ್ಭಪಾತ ಮಾಡಿಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.

ಯೂನಸ್ ಪಾಷಾ ತನ್ನ ಪತ್ನಿಯನ್ನು ರಾಜಕಾರಣಿಗಳು ಮತ್ತು ಸ್ಥಳೀಯ ರೌಡಿಗಳ ಜೊತೆ ದೈಹಿಕ ಸಂಬಂಧಕ್ಕೆ ಒತ್ತಾಯಿಸುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆಕೆ ಈ ಒತ್ತಾಯವನ್ನು ವಿರೋಧಿಸಿದಾಗ, ಆತ ಆಯುಧಗಳನ್ನು ತೋರಿಸಿ, ತಲೆಗೆ ಗನ್ ಇಟ್ಟು ಬೆದರಿಕೆ ಹಾಕುತ್ತಿದ್ದ. ಅಲ್ಲದೆ, ಸಂತ್ರಸ್ತೆಯ ತಂದೆ ಮತ್ತು ಕುಟುಂಬದವರನ್ನು ಕೊಲೆ ಮಾಡುವುದಾಗಿ ಧಮಕಿ ಹಾಕುತ್ತಿದ್ದ ಎನ್ನಲಾಗಿದೆ. 2023ರಲ್ಲಿ ಆತ ಸಂತ್ರಸ್ತೆಯ ಮೇಲೆ ಗಂಭೀರವಾದ ದೈಹಿಕ ಹಲ್ಲೆ ನಡೆಸಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ಆರೋಪಿಯ ರಾಜಕೀಯ ಸಂಪರ್ಕಗಳು ಮತ್ತು ಸ್ಥಳೀಯ ರೌಡಿಗಳ ಜೊತೆಗಿನ ನಂಟಿನಿಂದಾಗಿ, ಆತ ತನ್ನ ಪತ್ನಿಯನ್ನು “ಮಾರಾಟ” ಮಾಡಲು ಪ್ರಯತ್ನಿಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಆರೋಪಗಳಿಂದ ಭಯಗೊಂಡ ಸಂತ್ರಸ್ತೆ ಕಳೆದ ಎರಡು ತಿಂಗಳಿಂದ ಗಂಡನ ಮನೆಯಿಂದ ದೂರವಾಗಿ, ತನ್ನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ.

2025ರ ಜೂನ್ 4ರಂದು ಸಂತ್ರಸ್ತೆ ತನ್ನ ಬಟ್ಟೆಗಳನ್ನು ತರಲು ಗಂಡನ ಮನೆಗೆ ತೆರಳಿದ್ದಾಗ, ಯೂನಸ್ ಪಾಷಾ ಆಕೆಗೆ ಮತ್ತು ಆಕೆಯ ತಾಯಿಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಘಟನೆಯಿಂದ ಮನನೊಂದ ಸಂತ್ರಸ್ತೆ, ಆರೋಪಿಗಳ ವಿರುದ್ಧ ಕಾನೂನು ಕ್ರಮಕ್ಕಾಗಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಯೂನಸ್ ಪಾಷಾ, ಆತನ ತಂದೆ ಚಿಂದ್ ಪಾಷಾ ಮತ್ತು ತಾಯಿ ಪಹೀನ್ ತಾಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ಆರೋಪಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ