ಸುಪ್ರೀಂ ಕೋರ್ಟ್ ಹೇಟ್ ಸ್ಪೀಚ್ ಅಂದ್ರೆ ವಿದ್ವೇಷ ಹುಟ್ಟುಹಾಕುವ ಘೃಣಾತ್ಮಕ ಸ್ವೀಚುಗಳ ಕುರಿತು ಹಿಯರಿಂಗ್ ಆರಂಭಿಸಿದೆ. ಮಹಾರಾಷ್ಟ್ರದಲ್ಲಿ ಬಹಳ ಕಡೆ ಹಿಂದೂ ಮುಸ್ಲಿಂ ಪ್ರಕರಣಗಳ ಕುರಿತಾಗಿ ಹಿಂದೂ ಪ್ರಚಾರಕರು, ಪ್ರವಚನಕಾರರಿಂದ ಅನಗತ್ಯ ಮಾತುಗಳು ಹೊರಬಿದ್ದಾಗ, ಈ ಮಾತುಗಳನ್ನು ಭಗವಾ ರಾಜಕೀಯದವರು ಗಬಕ್ಕನೇ ಹಿಡಿದುಕೊಳ್ಳುತ್ತಾರೆ. ಹಿಂದೂ ಧರ್ಮದ ಕುರಿತಾಗಿ ಸುಧಾರಣೆಯೂ ಹಿಂದೂಗಳಿಂದಲೇ ಬಂದಿದ್ದರೂ, ಇದನ್ನು ದೈವನಿಂದೆ, ದೇಶದ್ರೋಹ ಎಂದೆಲ್ಲಾ ಹೇಳುತ್ತಾ, ಮುಸ್ಮಾನರು ವಿಷಕಾರುವ ಮಾತನಾಡುತ್ತಾರೆ ಎಂದವರನ್ನು, ಅಲ್ಲಿನ ಶಿಂಧೆ ಸರ್ಕಾರ ಏನೂ ಮಾಡುವುದಿಲ್ಲ.
ಈ ವಿಷಕಾರಕ ಮಾತುಗಳು ಧರ್ಮಪ್ರಚಾರ, ವೋಟ್ ಬ್ಯಾಂಕಿಂಗಾಗಿ ಹೇಳಲಾಗುತ್ತದೆ. ಜನರನ್ನು ಬೇರೆ ಧರ್ಮದ ವಿರುದ್ಧ ಎತ್ತಿಕಟ್ಟಿ, ತಮ್ಮ ಧರ್ಮದ ಸುರಕ್ಷತೆಗಾಗಿ ಚಂದಾ ವಸೂಲಿ ಮಾಡಿ ಎನ್ನಲಾಗುತ್ತದೆ. ಹಣ ಕೊಡದಿದ್ದರೆ ಬೇರೆ ಧರ್ಮ ಮತ್ತೆ ಮೆರೆಯಲಿದೆ, ಮೊಘಲರಂಥ ದುರಾಡಳಿತ ಮತ್ತೆ ಮರಳಲಿದೆ ಎಂದು ಜನರನ್ನು ಉತ್ತೇಜಿಸಲಾಗುತ್ತಿದೆ.
ಹೇಟ್ ಸ್ಪೀಚ್ ಅಸಲಿಗೆ ಮನೆಯಿಂದ ಹೊರಗೆ ಹಾಲ್, ಮೆರವಣಿಗೆ, ಸಮ್ಮೇಳನಗಳಲ್ಲಿ ಹೆಚ್ಚಾಗಿರುತ್ತದೆ. ಹಾಗೆಯೇ ಇದು ಹರಡುತ್ತಾ ಗಲ್ಲಿ ಗಲ್ಲಿ ಸುತ್ತಿ ಮನೆಯ ಒಳಗೂ ನುಸುಳುತ್ತದೆ. ಕೇಳುವವರು ತಾವು ಒಂದಿಷ್ಟು ಬೈಗುಳ, ಅವಾಚ್ಯ ಶಬ್ದ, ನಿಂದನೆಯ ಆರೋಪಗಳಿಗೆ ತುತ್ತಾಗಿ ಅದನ್ನು ಅಂಗಡಿ, ನೆರೆಹೊರೆ, ಬೀದಿ, ಅಪರಿಚಿತರ ಎದುರಲ್ಲೂ ಬಳಸುವಂತೆ ಆಗಿದೆ. ಮನೆಯಲ್ಲಿ ದುರ್ಬಲರ ಎದುರು ಅಂದೂ ಆಡಿಕೊಳ್ಳುತ್ತಾರೆ.
ಪತಿ ತನ್ನ ಪತ್ನಿಯನ್ನು ಬೈಯುತ್ತಾ ಇಂಥ ಅವಾಚ್ಯ ಶಬ್ದ ಬಳಸುತ್ತಾನೆ, ಜೊತೆಗೆ ಅವಳ ಕೆಲಸದಲ್ಲೂ ಹಿಂದೂ ಮುಸ್ಲಿಂನ ಅಂತರ ಹುಡುಕುತ್ತಾನೆ. ಪತಿಗೆ ಪತ್ನಿ ಮನೆಯವರು ಹಾಗೂ ಪತ್ನಿಗೆ ಪತಿಯ ಮನೆಯವರು ವಿಧರ್ಮಿಗಳೇ ಆಗುತ್ತಾರೆ, ಇದೇ ಕೆಟ್ಟ ಮಾನದಂಡ ಎಲ್ಲೆಡೆ ಚಾಲ್ತಿಯಲ್ಲಿದೆ.
ಮನೆಗಳಲ್ಲಿ ನಡೆಯುವ ವಿವಾದ, ಕೌಟುಂಬಿಕ ಹಿಂಸಾಚಾರದ ರೂಪ ತಾಳಿ ಹೊರಬರುವುದು ಸಹ, ಇಂಥದ್ದೇ ಬೀಜಾಂಕುರದಿಂದಾಗಿ. ಇದು ನಮ್ಮ ಧಾರ್ಮಿಕ, ರಾಜಕೀಯ ನೇತಾರರ ಕೊಡುಗೆ. ಇಂಥ ಬೀಜಗಳ ಮೊಳಕೆ ಗಿಡ ಹೆಮ್ಮರವಾಗಿ ಮನೆ ಮನೆಗಳಲ್ಲೂ ಪರಸ್ಪರ ಅಲರ್ಜಿ ಹುಟ್ಟು ಹಾಕುತ್ತವೆ. ಹಿಂದೂ ಮುಸ್ಲಿಂ ವಿವಾದ, ಪತಿ ಪತ್ನಿ ವಿವಾದ, ಅಣ್ಣತಮ್ಮಂದಿರ ಜಗಳ, ಅಣ್ಣ ತಂಗಿ ಗಲಾಟೆ, ತಂದೆ ಮಕ್ಕಳ ಜಗಳಗಳಾಗಿ ಬದಲಾಗುತ್ತವೆ. ನೆರೆಹೊರೆಯರ ಜೊತೆ ಈ ವಿವಾದ ಉಗ್ರ ಹೋರಾಟವೇ ಆಗುತ್ತದೆ. ವ್ಯಾಪಾರದಲ್ಲಿ ಪ್ರತಿಸ್ಪರ್ಧೆ ಒಡ್ಡುವ ವಿಧರ್ಮಿ ಶತ್ರುವೇ ಆಗುತ್ತಾನೆ.
ಈ ತರಹದ ಧರ್ಮಾಧಾರಿತ ವಿವಾದಗಳ ವಾತಾವರಣ, ತಂತಮ್ಮ ಧರ್ಮಗಳ ಕುರಿತು ಗರ್ವಪಡಲು ಕಲಿಸುತ್ತವೆ. ಆದರೆ ನಮ್ಮ ಧರ್ಮದಲ್ಲೂ ಸಹ ಅಣ್ಣತಮ್ಮಂದಿರ ವಿವಾದ ಗದ್ದುಗೆಯಿಂದ ನಾಸ ಹಾಗೂ ಘೋರಯುದ್ಧಕ್ಕೆ ನಾಂದಿಯಾಗಿದೆ. ಸಹಯೋಗಿ ದಸ್ಯುಗಳಿಗೆ ಮೋಸ ಮಾಡಿ ದೇವತೆಗಳು ಅಮೃತ ಕಸಿಯಲಿಲ್ಲವೇ? ಅಕಾರಣ ಪತ್ನಿ ತ್ಯಾಗ, ಪತ್ನಿಯನ್ನು ಆರೋಪಿಸಿ ಶಿಕ್ಷಿಸುವುದನ್ನು ಕಲಿಸುತ್ತದೆ. ಜೊತೆಗೆ ಇಂಥವನ್ನೆಲ್ಲ ಧರ್ಮಾಚರಣೆ, ಅಗತ್ಯ ಕಲಿಯಿರಿ ಅಥವಾ ವಿಧರ್ಮಿ ದುರಾಡಳಿತಕ್ಕೆ ಸಿದ್ಧರಾಗಿರಿ ಎಂದು ಭಯಪಡಿಸಲಾಗುತ್ತಿದೆ.
ವಿವಾದಗಳಿಗೆ ಸಭ್ಯ ಅಸಭ್ಯ ಎರಡೂ ತರಹದ ಭಾಷೆ ಬಳಸಬಹುದು. ವಿವಾದಕ್ಕಾಗಿ ಸತ್ಯ, ನ್ಯಾಯ, ತರ್ಕಗಳನ್ನು ಬಳಸಬಹುದು, ಸುಳ್ಳು ಕುತರ್ಕಗಳನ್ನೂ ಸಹ. ಹೇಟ್ ಸ್ಪೀಚ್ ನೀಡುವವರಿಗೆ ಅತ್ತ ಸತ್ಯದ ಗೊಡವೆ ಇಲ್ಲ, ಇತ್ತ ನ್ಯಾಯತರ್ಕ ಬೇಕಾಗಿಲ್ಲ. ಅವರು ಮನಸ್ಸಿಗೆ ಬಂದಂತೆ ಯಾವಾಗ, ಏನು ಬೇಕಾದರೂ ಮಾತನಾಡಬಹುದು. ಅದೀಗ ಮನೆ ಮನೆಗಳಲ್ಲೂ ರಿಂಗುಣಿಸುತ್ತಿದೆ. ಯಾವ ತರಹ ತುಳಸಿದಾಸರು ರಾಮಚರಿತ ಮಾನಸದಲ್ಲಿ ಬಹಳ ಮಂದಿಗೆ ಅಪಮಾನಜನಕ ಶಬ್ದಗಳನ್ನು ಕಲಿಸಿದ್ದಾರೋ, ಅದು ನಮ್ಮ ಸ್ವಧರ್ಮೀಯರಿಗೇ ಹೊರತು, ವಿಧರ್ಮೀಯರಿಗಲ್ಲ. ಅದೇ ತರಹ ಹೇಟ್ ಸ್ಪೀಚ್ ಗಳಲ್ಲಿ ಇಂಥ ಕೆಟ್ಟದ್ದನ್ನು ಮತ್ತೆ ಮತ್ತೆ ರಿಪೀಟ್ ಮಾಡುತ್ತಾರೆ. ಹೀಗಾಗಿ ಇಂದಿಗೂ ಸಹ ಹೆಂಗಸರು ಸೀತಾ, ದ್ರೌಪದಿ, ಕುಂತಿ, ಹೋಲಿಕಾರಂತೆ ಅತ್ತ ಬಾಳಲಾಗದೆ ಇತ್ತ ಸಾಯಲಾಗದೇ ಹಿಂಸೆ ಅನುಭವಿಸುತ್ತಿದ್ದಾರೆ.