ದೀಕ್ಷಾ ದೇವಾಡಿಗ ಸ್ಯಾಕ್ಸೋಫೋನ್‌ ವಾದ್ಯದಲ್ಲಿ ಬಗೆಬಗೆಯ ಹಾಡುಗಳನ್ನು ನುಡಿಸುವುದರ ಮೂಲಕ ಹೊಸದೊಂದು ಅಧ್ಯಾಯ ಬರೆದಿದ್ದಾರೆ. ಅವರ ನಾದ ಹೊರ ಹೊಮ್ಮಿಸುವಿಕೆಗೆ ನಾಡಿನ ವಿವಿಧ ಕ್ಷೇತ್ರಗಳ ಪ್ರಖ್ಯಾತ ವ್ಯಕ್ತಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಸ್ಯಾಕ್ಸೋಫೋನ್‌ ವಾದ್ಯ ನುಡಿಸುವ ಮಹಿಳೆಯರ ಸಂಖ್ಯೆ ಬೆರಳೆಣಿಕೆಯಷ್ಟು. ಅಂಥವರಲ್ಲಿ ದೀಕ್ಷಾ ದೇವಾಡಿಗ ಅವರ ಹೆಸರು ಮುಂಚೂಣಿಯಲ್ಲಿದೆ.

ಸ್ಯಾಕ್ಸೋಫೋನ್‌ ಎಂಬ ವಾದ್ಯವನ್ನು ಹುಟ್ಟು ಹಾಕಿದವರು ಬೆಲ್ಜಿಯಂ ದೇಶದ ಅಡಾಲ್ಫ್ ಸ್ಯಾಕ್ಸ್ ಎಂಬುವರು. ಹೀಗಾಗಿ ಈ ವಾದ್ಯದೊಂದಿಗೆ ಅವರ ಹೆಸರು ಥಳುಕು ಹಾಕಿಕೊಂಡಿದೆ. ಈ ವಾದ್ಯವನ್ನು ಭಾರತದಲ್ಲಿ ಅದರಲ್ಲೂ ಕರ್ನಾಟಕ ಸಂಗೀತದಲ್ಲಿ ಹೆಚ್ಚು ಪ್ರಚಲಿತಗೊಳಿದವರೆಂದರೆ, ಕದ್ರಿ ಗೋಪಾಲನಾಥ್‌.

ಅಪ್ಪನೇ ಮೊದಲ ಗುರು

ಮಹಿಳೆಯರು ಈ ವಾದ್ಯ ನುಡಿಸಲು ಹೆಚ್ಚು ಆಸಕ್ತಿ ತೋರಿಸುವುದಿಲ್ಲ. ಅಂಥದರಲ್ಲಿ ದೀಕ್ಷಾ ದೇವಾಡಿಗ ಅವರಿಗೆ ಈ ಆಸಕ್ತಿ ಹೇಗೆ ಬಂತು? ಅವರ ತಂದೆ ನಾದಸ್ವರ ನುಡಿಸುವುದರಲ್ಲಿ ಎತ್ತಿದ ಕೈ. ಸ್ಯಾಕ್ಸೋಫೋನ್‌ ನುಡಿಸಲು ಕೂಡ ಗೊತ್ತಿತ್ತು. ತಂದೆ ರಾಘವ ಶೇರಿಗಾರರ ಬಳಿ 2 ವರ್ಷ ಕಲಿತು, ಬಳಿಕ ಉಡುಪಿ ಕೆ. ರಾಘವೇಂದ್ರ ರಾವ್ ‌ರ ಬಳಿ 11 ವರ್ಷಗಳ ಕಾಲ ನಿರಂತರ ಅಭ್ಯಾಸ ಮಾಡಿ, ಸ್ಯಾಕ್ಸೋಫೋನ್‌ ನ್ನು ಹೇಗ್ಹೇಗೆ ನುಡಿಸಬಹುದು ಎಂಬ ಪಟ್ಟುಗಳನ್ನೆಲ್ಲ ಕಲಿತುಕೊಂಡರು. ಆನಂತರದ ಅಭ್ಯಾಸವನ್ನು ವಿದೂಷಿ ಮಾಧವಿ ಭಟ್‌ ಬಳಿ ಮುಂದುವರಿಸಿದ್ದಾರೆ.

ವಾದ್ಯ ನುಡಿಸುವುದರ ಜೊತೆ ಜೊತೆಗೆ ಶೈಕ್ಷಣಿಕವಾಗಿಯೂ ದೀಕ್ಷಾ ಬಹಳ ಗಮನ ಕೊಟ್ಟರು. 2017 ರಲ್ಲಿ ಎಂ.ಎ ಶಿಕ್ಷಣ ಪೂರೈಸಿದ ಅವರು, 2020 ರಲ್ಲಿ ಬಿ.ಎಡ್‌ ವ್ಯಾಸಂಗ ಮುಗಿಸಿದರು.

17 ವರ್ಷಗಳ ಶ್ರಮ

ಸ್ಯಾಕ್ಸೋಫೋನ್‌ ವಾದನದಲ್ಲಿ ದೀಕ್ಷಾರದು ಅವಿರತ ಶ್ರಮ. ಕಳೆದ 17 ವರ್ಷಗಳಿಂದ ಆ ವಾದ್ಯ ನುಡಿಸುತ್ತಿರುವ ಅವರು ಅನೇಕ ಕೃತಿಗಳನ್ನು ನುಡಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ತ್ಯಾಗರಾಜರ ಅನೇಕ ಕೃತಿಗಳು, ವರ್ಣಗಳು, ದೇವರ ನಾಮಗಳನ್ನು ನುಡಿಸುವುದರಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ. ಕೀರವಾಣಿ ರಾಗವೆಂದರೆ ಅವರಿಗೆ ಬಲು ಇಷ್ಟ. ಈ ರಾಗದಲ್ಲಿಯೇ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಆನಂದಭೈರವಿ, ಹಂಸಧ್ವನಿ, ಕಾನಡಾಗಳು ಕೂಡ ಅವರಿಗೆ ಇಷ್ಟದ ರಾಗಗಳಾಗಿವೆ.

8000ಕ್ಕೂ ಹೆಚ್ಚು ಕಾರ್ಯಕ್ರಮಗಳು

ಸ್ಯಾಕ್ಸೋಫೋನ್‌ ನುಡಿಸುವ ಬಗೆಗಿನ ಅವರ ಪ್ರಖ್ಯಾತಿ ರಾಜ್ಯಾದ್ಯಂತ ಪಸರಿಸಿದೆ. ಅದರ ಜೊತೆ ಜೊತೆಗೆ ಬೇರೆ ಬೇರೆ ರಾಜ್ಯಗಳಿಂದಲೂ ಕಾರ್ಯಕ್ರಮ ಕೊಡಲು ಅವರಿಗೆ ಆಹ್ವಾನಗಳು ಬರುತ್ತಿರುತ್ತವೆ. ಹಾಗಾಗಿ ದೀಕ್ಷಾ ಕನ್ನಡದ ಜೊತೆ ಜೊತೆಗೆ ಹಿಂದಿ, ತಮಿಳು ಭಾಷೆಯ ಗೀತೆಗಳನ್ನು ನುಡಿಸುತ್ತಾರೆ. ಆಯಾ ಭಾಷೆಗಳಲ್ಲಿನ ಜನಪ್ರಿಯ ಹಾಡುಗಳನ್ನೂ ನುಡಿಸಲು ಅವಿರತ ಪ್ರಯತ್ನ ನಡೆಸುತ್ತಿರುತ್ತಾರೆ.

ಉಡುಪಿ, ಮಂಗಳೂರು, ಧರ್ಮಸ್ಥಳ, ಹುಬ್ಬಳ್ಳಿ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ ಸೇರಿದಂತೆ ನಾಡಿನ ಉದ್ದಗಲಕ್ಕೂ ಅವರು ಕಾರ್ಯಕ್ರಮ ಕೊಟ್ಟು ತಮ್ಮ ಜನಪ್ರಿಯತೆಯ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡಿದ್ದಾರೆ. ಮುಂಬೈ, ಗೋವಾ, ಚೆನ್ನೈ, ಕೇರಳದಲ್ಲೂ ಅವರು ಕಾರ್ಯಕ್ರಮ ಕೊಟ್ಟು ಅನ್ಯ ಭಾಷಿಕರ ಪ್ರೀತಿಗೂ ಪಾತ್ರರಾಗಿದ್ದಾರೆ.

ಭಾವಗೀತೆ/ಸಿನಿಮಾ ಗೀತೆಗಳಿಗೂ ಸೈಸ್ಯಾಕ್ಸೋಫೋನ್‌ ನಲ್ಲಿ ಅರು ಕೃತಿಗಳಿಗೆ ಪ್ರಾಧಾನ್ಯತೆ ಕೊಡುತ್ತಾರೆ. ಜನರ ಬೇಡಿಕೆಗೆ ಅನುಗುಣವಾಗಿ ಭಾವಗೀತೆಗಳು ಹಾಗೂ ಸಿನಿಮಾ ಗೀತೆಗಳನ್ನು ನುಡಿಸುತ್ತಾರೆ.`ಕಾಣದಾ ಕಡಲಿಗೆ ಹಂಬಲಿಸಿದೆ ಮನ' ಜಿಎಸ್‌ಎಸ್‌ ಅವರ ಈ ಭಾವಗೀತೆ ಸ್ಯಾಕ್ಸೋಫೋನ್‌ ನಲ್ಲಿ ಕೇಳಿಸುತ್ತಿದ್ದಂತೆಯೇ ಪ್ರೇಕ್ಷಕರು ತನ್ಮಯರಾಗಿ ಕುಳಿತು ಬಿಡುತ್ತಾರೆ. ಅದೇ ರೀತಿ `ನೂರು ಜನ್ಮಕೂ ನೂರಾರು ಜನ್ಮಕೂ' ಸೇರಿದಂತೆ ಹಲವು ಹಳೆಯ ಸಿನಿಮಾ ಹಾಡುಗಳನ್ನು ಅವರು ಸ್ಯಾಕ್ಸೋಫೋನ್ ನಲ್ಲಿ ನುಡಿಸುತ್ತಾರೆ. ಚಂದ್ರಮುಖಿ ಪ್ರಾಣಸಖಿ ಚಿತ್ರದ ನಾಯಕಿಯಲ್ಲಿ ಒಬ್ಬರಾದ ಭಾವನಾ, ದೀಕ್ಷಾ ನುಡಿಸಿದ ರೀತಿಗೆ ತಮ್ಮ ಮೆಚ್ಚುಗೆ ಸೂಚಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ