ನೇಣುಗಂಬದ ಮುಂದೆ ನಿಂತು ನಕ್ಕಿದ್ದ 25 ವರ್ಷದ ಅಗ್ನಿಪುರುಷನ ಅತಿ ವಿಚಿತ್ರ ಅಂತ್ಯದ ವೀರಗಾಥೆ!
“ವಕೀಲನೂ ಬೇಡ.. ಕ್ಷಮೆಯೂ ಬೇಡ.. ಅಸಲಿಗೆ ಈ ಕೋರ್ಟಿಗೆ ನನ್ನ ತೀರ್ಪು ಕೊಡುವ ಹಕ್ಕೇ ಇಲ್ಲ"
ಸಿಂಹದಂತೆ ಕಟಕಟೆಯಲ್ಲೇ ನಿಂತು ಗರ್ಜಿಸಿದ್ದ ಆ ಕ್ರಾಂತಿಕಾರಿ!
ಆಗಸ್ಟ್ 17, 1909.
ಲಂಡನ್‌ನ ಪೆಂಟನ್‌ವಿಲ್ಲೆ ಜೈಲು.
ಬೆಳಗ್ಗೆ 9 ಗಂಟೆ.
ಜೈಲಿನ ಹೊರಗೆ ಭಾರತೀಯ ವಿದ್ಯಾರ್ಥಿಗಳ ಗುಂಪು ನಿಂತಿದೆ..
ಒಳಗೆ, 25 ವರ್ಷದ ಒಬ್ಬ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣುಗಂಬದ ಕಡೆ ನಡೆದು ಹೋಗ್ತಿದ್ದಾನೆ.
ಕೈಯಲ್ಲಿ ಭಗವದ್ಗೀತೆ..
ಬಾಯಲ್ಲಿ ರಾಮ-ಕೃಷ್ಣ ನಾಮ..
ಮುಖದಲ್ಲಿ ಏನನ್ನೋ ಗೆದ್ದ ಮಂದಹಾಸ.
ಆ ಹುಡುಗನ ಹೆಸರು ಮದನ್ ಲಾಲ್ ಧಿಂಗ್ರಾ!!
ಧಿಂಗ್ರಾ ಬಡವನಲ್ಲ..
ಕಷ್ಟದಲ್ಲಿ ಬೆಳೆದ ಹುಡುಗನಲ್ಲವೇ ಅಲ್ಲ..
ಅವನದು ಪಂಜಾಬ್‌ನ ಸ್ಥಿತಿವಂತ ಕುಟುಂಬ.
ತಂದೆ ಬ್ರಿಟಿಷ್ ಸರ್ಕಾರದ ನಿಷ್ಠಾವಂತ ಬೆಂಬಲಿಗ.
ಕುಟುಂಬದ ನಿರೀಕ್ಷೆ, ಮಗ ಇಂಗ್ಲೆಂಡ್‌ನಲ್ಲಿ ಓದಲಿ..
ದೊಡ್ಡ ಹುದ್ದೆ ಪಡೆದು ಸುಖವಾಗಿರಲಿ ಅನ್ನೋದು..
ಅವನೂ ಹಾಗೆಯೇ ಇದ್ದ.. ಷೋಕಿವಾಲಾ!
ಆದ್ರೆ ಲಂಡನ್‌ನ ಇಂಡಿಯಾ ಹೌಸ್‌ಗೆ ಆತ ಕಾಲಿಟ್ಟ ಕ್ಷಣವೇ ಎಲ್ಲವೂ ಬದಲಾಯ್ತು..
ಸಾವರ್ಕರ್ ಅವರ ಸಂಪರ್ಕ ದೊರೆಯಿತು..
ಭಾರತದಲ್ಲಿ ನಡೀತಿರೋ ಶೋಷಣೆ, ಅವಮಾನ, ಬಡತನ — ಒಟ್ಟಾಗಿ ಅವನೊಳಗೆ ಬೆಂಕಿ ಹೊತ್ತಿಸಿತ್ತು..
ನಿರ್ಧರಿಸಿದ...
ಬ್ರಿಟೀಷರ ಡಿಗ್ರಿ ಬೇಡ..
ಅವರ ಸರ್ಕಾರಿ ಹುದ್ದೆಯೂ ಬೇಡ..
ಆದರೆ ಒಂದು ಕೆಲಸ ಮಾಡ್ಬೇಕು..
ಏನದು?

ಜುಲೈ 1, 1909
ಲಂಡನ್‌ನ ಸಾರ್ವಜನಿಕ ಕಾರ್ಯಕ್ರಮ.
ಭಾರತೀಯ ಕ್ರಾಂತಿಕಾರಿಗಳಿಗೆ ಕ್ರೂರ ಶಿಕ್ಷೆ ಕೊಡಿಸಿದ್ದ ಸರ್ ವಿಲಿಯಂ ಕರ್ಜನ್ ವೈಲಿ ಅಲ್ಲಿದ್ದ.
ಧಿಂಗ್ರಾ ಅಲ್ಲಿಗೆ ಬಂದ.. ಗುಂಡು ಹಾರಿಸಿದ..
ವೈಲಿ ಸತ್ತುಬಿದ್ದಿದ್ದ..
ಕೊಂದವನು ಮಾತ್ರ ಓಡಲಿಲ್ಲ..
ತಪ್ಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ..
ನಿಂತಲ್ಲೇ ನಿಂತಿದ್ದ..
ಬ್ರಿಟಿಷ್ ಪೊಲೀಸರು ಬಂಧಿಸಿದ್ರು.
ಕೋರ್ಟಿನಲ್ಲಿ ವಿಚಾರಣೆ ಶುರುವಾಯ್ತು.
ಜಡ್ಜ್ ಕೇಳಿದ ‘ನಿನ್ನ ಪರ ವಕೀಲ ಯಾರು? ’
ಧಿಂಗ್ರಾ ಉತ್ತರ ಕೊಟ್ಟ
"ವಕೀಲ..? ನನಗೆ ಬೇಕಿಲ್ಲ."
"ಯಾಕೆ?"
"ಈ ಕೋರ್ಟ್‌ಗೆ ನನ್ನ ವಿಚಾರ ತೀರ್ಪು ಕೊಡುವ ಹಕ್ಕೇ ಇಲ್ಲ. ನಮ್ಮ ನೆಲದಲ್ಲಿ ನಿಮ್ಮ ಕಾನೂನು ಕಳ್ಳ ಆಳ್ವಿಕೆ ಮಾತ್ರ."
ಕಡೆಗೆ ಅದೇ ಕೋರ್ಟ್ ಮರಣ ದಂಡನೆ ವಿಧಿಸಿತ್ತು..
ಆ ಸಾವಿನ ತೀರ್ಪು ಕೇಳಿಯೂ ನಗುತ್ತಲೇ ಕೋರ್ಟಿನಿಂದ ಹೊರನಡೆದಿದ್ದ ಧಿಂಗ್ರಾ..
ಇದು ಬ್ರಿಟಿಷ್ ನ್ಯಾಯಾಲಯ ನೋಡಿದ ಅತ್ಯಂತ ಅಸಾಮಾನ್ಯ ದೃಶ್ಯ!
ಕೊನೆಗೂ ಆ ದಿನ ಬಂತು..
ಅವನ ಮರಣದಂಡನೆ ಸಾಮಾನ್ಯ ಮರಣದಂಡನೆಯಾಗಿರಲಿಲ್ಲ..
ಅದರ ಹಿಂದೆ ಲೆಕ್ಕಾಚಾರದ ಹೆಸರಲ್ಲಿ ಹೆಣೆಯಲಾದ ಘೋರ ಸಂಚು ಅಡಗಿತ್ತು.
ಬ್ರಿಟಿಷರು ಮರಣದಂಡನೆ ನೀಡಲು "ಲಾಂಗ್ ಡ್ರಾಪ್" ಅನ್ನೋ ಸೂತ್ರ ಬಳಸುತ್ತಿದ್ದರು..
ಅದೇನು ಅಂದರೆ..
ಕೊರಳಿಗೆ ಹಗ್ಗ ಕಟ್ಟಿ ಸುಮ್ಮನೆ ತೂಗಾಡಿಸಿ ಕೊಲ್ಲುವುದರ ಬದಲಿಗೆ,
ವ್ಯಕ್ತಿಯ ಎತ್ತರ ಮತ್ತು ತೂಕವನ್ನು ಲೆಕ್ಕ ಹಾಕಿ,
ಕ್ಷಣಾರ್ಧದಲ್ಲಿ ಆತನ ಬೆನ್ನುಮೂಳೆ ಮುರಿಯುವಂತೆ ಮರದ ಹಲಗೆಯನ್ನು ಕೆಳಗೆ ಬೀಳಿಸುವ ತಂತ್ರಜ್ಞಾನ!!
ಹಗ್ಗದ ಲೆಕ್ಕಾಚಾರದಲ್ಲಿ ಕೆಲವು ಇಂಚು ಕಡಿಮೆಯಾದರೂ ಸಾಕು,
ಆ ವ್ಯಕ್ತಿ ಉಸಿರುಗಟ್ಟಿ ನರಳಿ ನರಳಿ ಸಾಯಬೇಕಾಗುತ್ತದೆ!
ಅದೇ ಹಗ್ಗ ಸ್ವಲ್ಪ ಉದ್ದವಾದರೆ, ಬಿದ್ದ ರಭಸಕ್ಕೆ ಕುತ್ತಿಗೆಯೇ ಶರೀರದಿಂದ ಬೇರ್ಪಟ್ಟು ಚೆಲ್ಲಾಪಿಲ್ಲಿಯಾಗುತ್ತದೆ!!
ಅಂದು ಆ 25 ವರ್ಷದ ಯುವಕನಿಗೆ ಬ್ರಿಟಿಷ್ ಎಕ್ಸಿಕ್ಯೂಷನರ್, ಹುಡುಗನ ದೈಹಿಕ ಎತ್ತರ ಮತ್ತು ತೂಕಕ್ಕೆ ಸರಿಯಾಗಿ ಅತಿಯಾದ, ಅಸಹಜವಾದ, ಕೌರ್ಯ ಪ್ರಹಾರ ಮಾಡಲು ಸಜ್ಜಾಗಿದ್ದ.





