ಗೃಹಶೋಭಾ ಮಹಿಳಾ ಓದುಗರ ವಿಶೇಷ ಅಭಿವೃದ್ಧಿ, ವ್ಯಕ್ತಿತ್ವ ವಿಕಾಸ, ಏಳಿಗೆಗಾಗಿ ಎಂದೇ, ಡೆಲ್ಲಿ ಪ್ರೆಸ್‌ ಪ್ರಕಟಣಾ ತಂಡ, ಗೃಹಶೋಭಾ ಮಾಸಪತ್ರಿಕೆಯ ವತಿಯಿಂದ `ಎಂಪವರ್‌ ಹರ್‌' ಇವೆಂಟನ್ನು ಇತ್ತೀಚೆಗೆ ಬಲು ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಪ್ರಮುಖ ಪ್ರಾಯೋಜಕರು ಎಂದರೆ ಬ್ಯಾಂಕಿಂಗ್‌ ಪಾರ್ಟ್‌ ನರ್‌ ಕೆನರಾ ಬ್ಯಾಂಕ್‌, ಹೋಮಿಯೋಪಥಿ ಪಾರ್ಟ್‌ ನರ್‌ SBL  ಅಸೋಸಿಯೇಟ್‌ ಸ್ಪಾನ್ಸರ್‌ WOW ಹಾಗೂ ಗಿಫ್ಟಿಂಗ್‌ ಪಾರ್ಟ್‌ ನರ್‌ ಸದ್ಗುರು ಆಯುರ್ವೇದ.

7

ಈ ಕಾರ್ಯಕ್ರಮದ ಇಡೀ ಫೋಕಸ್‌ ಮಹಿಳಾ ಸಬಲೀಕರಣ (ವಿಮನ್‌ ಎಂಪವರ್ಮೆಂಟ್‌)ದ ಕುರಿತಾಗಿತ್ತು. ಕಳೆದ ತಿಂಗಳು ಜೂನ್‌ 8 ರಂದು, ಈ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ರಾಜಾಜಿನಗರದ ಮಾಗಡಿ ರಸ್ತೆಯ ಹೋಟೆಲ್ ವೆಸ್ಟ್ ಫೋರ್ಟ್‌ ನಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ನಗರದ ನೂರಾರು ಮಹಿಳೆಯರು ಅತಿ ಉತ್ಸಾಹದಿಂದ ತಮ್ಮ ಆರೋಗ್ಯ ಸೌಂದರ್ಯ, ನ್ಯೂಟ್ರಿಷನ್‌, ಫೈನಾನ್ಸ್ ಕುರಿತಾಗಿ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಸೇರಿದ್ದರು.

ಸ್ಕಿನ್ಕೇರ್ಸೆಷನ್

ಡಾ. ಜಗದೀಶ್‌ ಪಿ., MBBS, DDVL, FRGUHS  (ಡರ್ಮಟಾಲಜಿ) ಇವರು ಬೆಂಗಳೂರಿನ ಕ್ಯುಟಿಕೇರ್‌ ಸೆಂಟರಿನ ಫೌಂಡರ್‌, ಡೈರೆಕ್ಟರ್‌ ಚೀಫ್‌ ಕನ್ಸಲ್ಟೆಂಟ್‌ ಡರ್ಮಟಾಲಜಿಸ್ಟ್ ಆಗಿದ್ದು, ಹೆಂಗಸರಿಗೆ ಸ್ಕಿನ್‌ ಕೇರ್‌ ಬಗ್ಗೆ ಅಪಾರವಾಗಿ ಅತ್ಯುತ್ತಮ ವೈಜ್ಞಾನಿಕ ಮಾಹಿತಿ ತಿಳಿಸಿಕೊಟ್ಟರು. ಚರ್ಮದ ಆರೈಕೆಗೆ ಹೆಣ್ಣುಮಕ್ಕಳು ಹೇಗೆ ಪ್ರಾಮುಖ್ಯತೆ ಕೊಡಬೇಕು, ಯಾವ ರೀತಿ ಮುತುವರ್ಜಿ ವಹಿಸಬೇಕು, ಆರೋಗ್ಯ ಕೆಡದಿರಲು ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ವಿವರಗಳನ್ನು ತಿಳಿಸಿಕೊಟ್ಟರು.

1

ಚರ್ಮದಲ್ಲಿನ 3 ಬಗೆಗಳಾದ ಡ್ರೈ ಸ್ಕಿನ್‌, ಆಯ್ಲಿ ಸ್ಕಿನ್‌, ನಾರ್ಮಲ್ ಸ್ಕಿನ್‌ ಇವುಗಳನ್ನು ಪತ್ತೆ ಹಚ್ಚಿ ತಮ್ಮ ಪ್ರಕಾರ ಯಾವುದೆಂದು ತಿಳಿದುಕೊಂಡು ಅದಕ್ಕೆ ತಕ್ಕಂತೆ ವೈದ್ಯರ ಸಲಹೆಯ ಮೇರೆಗೆ ಕೆಮಿಕಲ್ಸ್ ರಹಿತ ಸೋಪ್‌, ಫೇಸ್‌ ವಾಶ್‌, ಸ್ಕ್ರಬ್‌ ಇತ್ಯಾದಿ ಬಳಸಬೇಕೆಂದು ಸಲಹೆ ನೀಡಿದರು. ದಿನ ಬೆಳಗಾಗುವಷ್ಟರಲ್ಲಿ ಯಾವು ಯಾವುದೋ ಕ್ರೀಂ ಹಚ್ಚಿಕೊಂಡು ಶ್ಯಾಮಲ ವರ್ಣದವರು, ಗೌರವರ್ಣ ಪಡೆಯಲಿಕ್ಕಾಗದು, ಇಂಥ ಜಾಹೀರಾತುಗಳಿಗೆ ಎಂದೂ ಮರುಳಾಗಬಾರದು ಎಂದು ಎಚ್ಚರಿಸಿದರು.

5

ವಿಟಿಲಿಗೊ ಸರ್ಜರಿ, ಲೇಸರ್‌ ಥೆರಪಿ, ಡರ್ಮಟೊ ಸರ್ಜರಿಯಲ್ಲಿ ನುರಿತ ಇವರು ಚರ್ಮ ರಕ್ಷಣೆಯ ಜೊತೆಗೆ ಕೂದಲಿನ ರಕ್ಷಣೆ,  ಬಾಲ್ಡ್ ನೆಸ್‌ ಸಮಸ್ಯೆಗಳು, ಕೂದಲು ಉದುರುವಿಕೆ.... ಇತ್ಯಾದಿ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳ ಕುರಿತು ಸಹ ಮಾಹಿತಿ ನೀಡಿದರು. ತೊನ್ನು, ವಿಟಿಲಿಗೊ, ಅದರ ಕುರಿತಾದ ನಿವಾರಣೆ ಬಗ್ಗೆ ತಿಳಿಸಿಕೊಟ್ಟರು. ಒಟ್ಟಾರೆ ಯಾವುದೇ ಜಾಹೀರಾತಿಗೆ ಮರುಳಾಗಿ ಪವಾಡದಂಥ ಚರ್ಮ ಬದಲಾವಣೆ, ಬೊಕ್ಕ ತಲೆ ಸಮಸ್ಯೆ ನಿವಾರಣೆ ಅಥವಾ ವಿಟಿಲಿಗೊ ಸಮಸ್ಯೆಗೆ ರಾತ್ರೋರಾತ್ರಿ ತೊನ್ನು ಹೋಗಿ ತಿಳಿ ಚರ್ಮ ಬರುವುದು ಇತ್ಯಾದಿ ನಂಬದೆ, ನುರಿತ ತಜ್ಞರಿಂದ ಚಿಕಿತ್ಸೆ ಪಡೆಯಬೇಕು, ಇದಕ್ಕಾಗಿ ಮನೆಯಲ್ಲಿ ಉತ್ತಮ ಪೌಷ್ಟಿಕ ಆಹಾರ ಸೇವಿಸಬೇಕು ಎಂದು ವಿವರಿಸಿದರು. ಇವೆಂಟಿಗೆ ಬಂದಿದ್ದ ಹೆಂಗಸರು ಇವರ ಬಳಿ ತಮ್ಮ ಸ್ಕಿನ್‌ ಕೇರ್‌ ಮತ್ತು ಹೇರ್‌ ಕೇರ್‌ ಸಮಸ್ಯೆಗಳ ಬಗ್ಗೆ ಅನುಮಾನ ಪರಿಹರಿಸಿಕೊಂಡರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ