ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದ ರಂಜನಿ ರಾಘವನ್‌ಗೆ ಬಾಲ್ಯದಿಂದಲೇ ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ವಿಶೇಷ ಆಸಕ್ತಿಯಿತ್ತು. ಕಾಲೇಜು ಹಂತ ತಲುಪುವ ಹೊತ್ತಿಗೆ ಸಾಹಿತ್ಯದ ಚಟುವಟಿಕೆಗಳಲ್ಲಿ, ಸ್ಪರ್ಧೆಗಳಲ್ಲಿ ತೊಡಗುವಷ್ಟು ಮಟ್ಟಿಗೆ ಅವರ ಹವ್ಯಾಸ ಹೆಚ್ಚುತ್ತಾ ಹೋಯಿತು. ಹಾಡು, ನೃತ್ಯ, ಸಂಗೀತದ ಬಗೆಗಿನ ಒಲವು ಹೆಚ್ಚಾಗಿ ಗಾಯನದ ಕ್ಷೇತ್ರದಲ್ಲಿ ಛಾಪು ಮೂಡಿಸಬೇಕೆಂಬ ಅಭಿಲಾಷೆ ಮನದಲ್ಲಿ ಮೂಡಲಾರಂಭಿಸಿತ್ತು.

ಶೇಷಾದ್ರಿಪುರಂ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ನಾಗಾಭರಣರವರು `ಕೆಳದಿ ಚೆನ್ನಮ್ಮ' ಧಾರಾವಾಹಿಗಾಗಿ ಆಡಿಷನ್‌ಮಾಡುತ್ತಿದ್ದರು. ರಂಜನಿ ಕೂಡ ಅದರಲ್ಲಿ ಪಾಲ್ಗೊಂಡು ತನ್ನ ಅಭಿನಯ ಸಾಮರ್ಥ್ಯ ತೋರಿಸಿಕೊಟ್ಟು ನಾಗಾಭರಣರಿಂದ ಸೈ ಅನ್ನಿಸಿಕೊಂಡಳು. ಆ ಧಾರಾವಾಹಿ ಪ್ರಸಾರ ಆರಂಭಿಸಲಿಲ್ಲ. ಆದರೆ ಅದಕ್ಕಾಗಿ ರಂಜನಿ ಕೊಟ್ಟ ಆಡಿಷನ್‌ ಮಾತ್ರ ಅವರ ಅಭಿನಯಕ್ಕೊಂದು ಉತ್ತಮ ವೇದಿಕೆ ಕಲ್ಪಿಸಿತು. ಆ ಬಳಿಕ `ಆಕಾಶದೀಪ' ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿತು.

ರೂಪಾಂತರದ ನೆರವು

ತನ್ನ ನಟನಾ ಸಾಮರ್ಥ್ಯಕ್ಕೆ ಇನ್ನಷ್ಟು ಮೆರುಗು ಕೊಡಬೇಕೆಂದು ನಿರ್ಧರಿಸಿ `ರೂಪಾಂತರ' ಎಂಬ ರಂಗಭೂಮಿ ತಂಡಕ್ಕೆ ಸೇರ್ಪಡೆ. `ಯೆಹೂದಿ ಹುಡುಗಿ, ಕರ್ಯೋಲಾ, ಟ್ರೇನ್‌ ಟು ಪಾಕಿಸ್ತಾನ್‌, ರಾಮಧಾನ್ಯ,' ಮುಂತಾದ ನಾಟಕಗಳಲ್ಲಿ ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ, ಅಭಿನಯದ ವಿವಿಧ ಮಜಲುಗಳ ಬಗ್ಗೆ ತಿಳಿದುಕೊಂಡರು.`ರಾಜಹಂಸ, ಟಕ್ಕರ್‌' ಎಂಬ ಎರಡು ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಸಿಕ್ಕರೂ ಅವರ ಅಭಿನಯದ ಸಾಮರ್ಥ್ಯ ಹೊರಹೊಮ್ಮಿಸಲಿಲ್ಲ. `ಪುಟ್ಟಗೌರಿ' ಧಾರಾವಾಹಿ ಒಳ್ಳೆಯ ಹೆಸರು ತಂದುಕೊಟ್ಟಿತು.`ಕನ್ನಡತಿ'ಯ ಟೀಚರ್‌ ಪುಟ್ಟಗೌರಿಯ ಬಳಿಕ ರಂಜನಿಗೆ ಸಿಕ್ಕ `ಕನ್ನಡತಿ'ಯ ಭುವನೇಶ್ವರಿ ಪಾತ್ರ ಅವರ ಅಭಿನಯ ಸಾಮರ್ಥ್ಯವನ್ನು ಬಿಂಬಿಸಿತು. ಧಾರಾವಾಹಿಯ ಕೊನೆಯಲ್ಲಿ ಅವರು ಕನ್ನಡದ ಕೆಲವು ವಿಶಿಷ್ಟ ಪದಗಳಿಗೆ ಅರ್ಥ ಕೊಡುತ್ತಾರೆ. ಅವರು ಶಬ್ದಗಳನ್ನು ಪ್ರಸ್ತುತಪಡಿಸುವ ರೀತಿ ಅವರನ್ನು `ಕನ್ನಡ ಟೀಚರ್‌'ಎಂದೇ ಕರೆಯುವಂತೆ ಮಾಡಿದೆ. ಈ ಧಾರಾವಾಹಿ ಮೂಲಕ ಸಾಂಸ್ಕೃತಿಕ ಹಾಗೂ ಕನ್ನಡ ತಾಯಿಯ ಸೇಲೆ ಸಲ್ಲಿಸುವ ಅವಕಾಶ ಸಿಕ್ಕಿರುವುದು ನನಗೆ ಹೆಮ್ಮೆಯನ್ನುಂಟು ಮಾಡುತ್ತದೆ, ಎಂದು ರಂಜಿನಿ ಹೇಳುತ್ತಾರೆ.

ಹಿರಿತೆರೆಯತ್ತ

`ಕನ್ನಡತಿ'ಯ ಅಭಿನಯ ಸಾಮರ್ಥ್ಯ ಮತ್ತು ಜನಪ್ರಿಯತೆ ಕನ್ನಡ ಚಿತ್ರರಂಗ ಅವರತ್ತ ವಾಲುವಂತೆ ಮಾಡಿದೆ. `ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ' ಎಂಬ ಚಲನಚಿತ್ರದಲ್ಲಿ ದಿಗಂತ್‌ ಜೊತೆ ಹಾಗೂ `ಅಸ್ಥಾಂತರ' ಸಿನಿಮಾದಲ್ಲಿ ಸಂಚಾರಿ ವಿಜಯ್‌ ಜೊತೆ ನಟಿಸುವ ಅವಕಾಶ ದೊರಕಿದೆ.

ಒಂದೆಡೆ ಕನ್ನಡತಿ, ಇನ್ನೊಂದೆಡೆ ಸಿನಿಮಾಗಳು. ಎರಡಕ್ಕೂ ಸಮಾನ ನ್ಯಾಯ ಒದಗಿಸುವ ಜವಾಬ್ದಾರಿ ರಂಜನಿಯರ ಮುಂದಿದೆ.

ಅವಕಾಶ ಸಿಕ್ಕರೆ ಬೋನಸ್

image 6483441-(5)

ಇಂದಿನ ಯುವ ಪೀಳಿಗೆಗೆ ನೀವೇನು ಹೇಳಬಯಸುವಿರಿ? ಎಂದು ಕೇಳಿದರೆ, ``ಬಣ್ಣದ ಪ್ರಪಂಚವನ್ನು ಅರಸಿಕೊಂಡು ಬರೋರು ಅಸಂಖ್ಯ ಜನ. ಎಲ್ಲರಿಗೂ ಒಳ್ಳೆಯ ಅವಕಾಶ ಸಿಗುವುದಿಲ್ಲ. ಅವಕಾಶ ಸಿಕ್ಕರೂ ಪ್ರೂವ್ ‌ಆಗೋಲ್ಲ. ಪ್ರೂವ್ ‌ಮಾಡಿಕೊಂಡೋರೆಲ್ಲ ಸಕ್ಸೆಸ್‌ ಆಗೋಲ್ಲ. ಇಲ್ಲಿ ತುಂಬಾ ಅನಿಶ್ಚತತೆ ಇರುತ್ತದೆ. ನೀವು ಓದ್ತಾ ಇದ್ರೆ, ಕೆಲಸ ಮಾಡುತ್ತಿದ್ದರೆ ಅದರಲ್ಲಿಯೇ ಮುಂದುವರಿಯಿರಿ. ಅವಕಾಶಕ್ಕಾಗಿ ಕಾಯುತ್ತಾ ಇರಿ. ಹಾಗೊಮ್ಮೆ ಅವಕಾಶ ಸಿಕ್ರೆ ಅದನ್ನು ಬೋನಸ್‌ ಎಂದು ಭಾವಿಸಿ,'' ಎಂದು ರಂಜನಿ ವಾಸ್ತವ ನೆಲೆಗಟ್ಟಿನಲ್ಲಿ ಬದುಕುವ ಬಗ್ಗೆ ಕಿವಿಮಾತು ಹೇಳುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ