ಕುಳಿತಿದ್ದಾಳೆ ಅವಳಲ್ಲೇ

ಗಂಡನ ಕಾಲಡಿಯಲ್ಲೇ

ಜೀವದಂಬಲ ತೊರೆದು

ಕನಸುಗಳ ಕಿತ್ತೊಗೆದು

 

ಒಮ್ಮೆ ನೋಡಿ ಆ ಚಿತ್ರವನ್ನ

ಮೂಗು ಮುರಿದು ಪುಟ ತಿರುವುವ ಮುನ್ನ

ಸಂದೇಶವೇನಿದೆ ಅದರಲ್ಲಿ

ನಾಳೆಯ ಆತಂಕವಿದೆ ಪ್ರತಿ ಗೀರಲ್ಲಿ

 

ಅವರೇನು ಸೈನಿಕರೇ?

ಧರ್ಮ ಪ್ರಚಾರಕರೇ?

ಅಥವಾ ರಾಜಕಾರಣಿಗಳೇ?

ಸಂಸಾರದೊಡನೆ ವಿಹರಿಸಲು ಹೋದವರು

ಕಾಶ್ಮೀರದ ಸೌಂದರ್ಯಕ್ಕೆ ಮರುಳಾದವರು

 

ಅಂತವರು ನಿಮಗೇನು ಮಾಡಿಯಾರು?

ಧರ್ಮಾಂಧರಾಗಿ ಸುಟ್ಟಿರಲ್ಲ

ಗುರುತು ಕೇಳಿ ಕೇಳಿ ಹೊಡೆದವರಾರು?

ನೀವು ಮಾನವರಾಗಲು ಲಾಯಕ್ಕಿಲ್ಲ

 

ಇದು ಗಡಿ ಸೀಮೆಗಳ ಮೀರಿದ ದ್ವೇಷ

ದೇವರ ಹೆಸರಲ್ಲಿ ಹಬ್ಬುತಿಹ ಆಕ್ರೋಶ

ಮಗುವೊಂದು ಮಾತು ಕಲಿಯುವ ಮುನ್ನ

ಉಗ್ರವಾದದ ಪಾಠ ನಡೆವುದೇ ಕಾರಣ

 

ಅವರೆಂದೂ ಬದಲಾಗುವುದಿಲ್ಲ

ತಪ್ಪು ಸರಿ ವಿಚಾರಿಸುವುದೂ ಇಲ್ಲ

ಅವರಿಗೆ ಕ್ಷಮೆಯ ಅಗತ್ಯವೇನು?

ಮಾನವೀಯತೆಯ ಪ್ರಶ್ನೆಯೇ ಬರದಿನ್ನು.

 

ಕಣ್ಣಿಗೆ ಕಣ್ಣು, ಕೈಗೆ ಕೈ

ತಲೆಗೆ ತಲೆ ತರಲೇಬೇಕು ನಮ್ಮ ಸೈನಿಕರು

ಮಲಗಲಿ ಶಾಂತಿಯಿಂದ ಅಮಾನುಷವಾಗಿ ಸತ್ತವರು

ಜೀವಗಳು ಕಳೆದು ಹೋದವು

ಕನಸುಗಳು ಕಮರಿ ಹೋದವು

ಮರುಹುಟ್ಟು ಕಷ್ಟವಿದೆ

ಉಳಿದವರ ಸಂತೈಸಬೇಕಿದೆ

 

ಈಗಲಾದರೂ ನಿಲ್ಲಿಸಿ

ಬ್ರಾಹ್ಮಣ ಲಿಂಗಾಯತ ದಲಿತ

ಎಂಬ ಹುಚ್ಚು ಹೋರಾಟ

ಭಾಷೆ-ರಾಜ್ಯಗಳ ಬಡಿದಾಟ

 

ಉಗ್ರನ ಬಂದೂಕಿಗೆ ನಾವೆಲ್ಲ ಒಂದೇ

ಅಂದ ಮೇಲೆ ಬಡಿದಾಡಬೇಕೆ ಜಾತಿಗೆ

ಅರ್ಥವೇನಿದೆ ಚರಿತ್ರೆಯ ತಪ್ಪುಗಳಿಗೆ

ಬಾಗಿಲು ಬಳಿ ಜವರಾಯ ಬರುವ ಮೊದಲು

ಸಾಧಿಸಿ ಎಲ್ಲರೊಳಗೆ ಒಕ್ಕೊರಲು

 

ಒಂದಾಗದ ಹೊರತು ಬದುಕೆಂಬುದಿಲ್ಲ

ಮುಂದಿನ ಪೀಳಿಗೆ ನಮ್ಮ ಕ್ಷಮಿಸುವುದಿಲ್ಲ

ದೇಶ ದೊಡ್ಡದೆಂದು ತಿಳಿದ ಎಲ್ಲಾ ಧರ್ಮಗಳು

ಒಂದಾಗಬೇಕು ಭಾರತದ ಹಿತವ ಕಾಯಲು.

 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ