ಪ್ರಶಂಸೆ ಎಲ್ಲರಿಗೂ ಇಷ್ಟವೇ. ಜನರ ದೃಷ್ಟಿಯಲ್ಲಿ ತಾವು ಶೋಭಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ಇಂತಹ ಮೆಚ್ಚುಗೆಯಿಂದ ಸಮಾಜದಲ್ಲಿ ಹೆಸರು ಗಳಿಸುವುದಲ್ಲದೆ, ನಿಮಗೆ ಆತ್ಮವಿಶ್ವಾಸ ಲಭಿಸುತ್ತದೆ. ಈ ಆತ್ಮವಿಶ್ವಾಸವೇ ಸಫಲತೆಯ ಮೆಟ್ಟಿಲು. ಇದಕ್ಕಾಗಿ ಬಾಹ್ಯವಾಗಲ್ಲದೆ, ಆಂತರಿಕವಾಗಿಯೂ ನಿಮ್ಮನ್ನು ನೀವು ತಿದ್ದಿ ತೀಡಬೇಕು. ಗ್ರೂಮಿಂಗ್‌ನ ಅಗತ್ಯವೇನು ಎಂದು ತಿಳಿಯೋಣ :
ಗ್ರೂಮಿಂಗ್ ಮಹತ್ವ
ನಿತ್ಯಾಂಜಲಿ ಇನ್‌ಸ್ಟಿಟ್ಯೂಟ್ ಟ್ರಸ್ಟಿ ಮತ್ತು ಫ್ಯಾಕಲ್ಟಿ ಆಗಿರುವ ಗಿರೀಶ್‌ರ ಪ್ರಕಾರ ಒಬ್ಬ ವ್ಯಕ್ತಿಗೆ ಗ್ರೂಮಿಂಗ್ ಅಗತ್ಯ. ಗ್ರೂಮಿಂಗ್‌ಶಾರೀರಿಕವಾಗಿಯಲ್ಲದೆ ಮಾನಸಿಕವಾಗಿಯೂ ಬದಲಾವಣೆ ತರುತ್ತದೆ. ನಿಮ್ಮ ಬಗ್ಗೆ ನಿಮಗೆ ಹೆಮ್ಮೆಯುಂಟಾದಾಗ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಸಾಮಾನ್ಯವಾಗಿ ಜನರು ನಿಮ್ಮ ಹೊರನೋಟದಿಂದ ಆಕರ್ಷಿತರಾಗುತ್ತಾರೆ. ನಿಮ್ಮ ಸ್ಟೈಲ್, ಹೈಜೀನ್ ಮತ್ತು ಪರ್ಸನಾಲಿಟಿಯ ಬಗ್ಗೆ ನೀವೆಷ್ಟು ಎಚ್ಚರ ವಹಿಸುವಿರಿ ಎಂದು ಕಂಡುಬರುತ್ತದೆ. ನಿಮ್ಮ ಈ ಮೊದಲ ನೋಟವೇ ಜನರನ್ನು ನಿಮ್ಮೆಡೆಗೆ ಸೆಳೆಯುತ್ತದೆ.
ಬಾಹ್ಯ ಸೌಂದರ್ಯ ಮಾತ್ರವಲ್ಲದೆ, ನಿಮ್ಮ ಇತರ ಸಣ್ಣಪುಟ್ಟ ವಿಷಯಗಳ ಕಡೆ ಗಮನವಿರಿಸುವುದೇ ಗ್ರೂಮಿಂಗ್. ನಿಮ್ಮದೊಂದು ಪರ್ಫೆಕ್ಟ್ ಆದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದೇ ಗ್ರೂಮಿಂಗ್‌ನ ಅರ್ಥ. ಪರ್ಸನಲ್ ಗ್ರೂಮಿಂಗ್ ಮಾತ್ರವಲ್ಲದೆ, ಪ್ರೊಫೆಶನಲ್ ಮತ್ತು ಸೋಶಿಯಲ್ ಗ್ರೂಮಿಂಗ್ ಮೂಲಕ ನಿಮ್ಮ ವ್ಯಕ್ತಿತ್ವಕ್ಕೊಂದು ವಿಶೇಷ ಕಳೆ ನೀಡುವುದೇ ಇದರ ಉದ್ದೇಶ.
ಗ್ರೂಮಿಂಗ್ ಪ್ರಾರಂಭ
ಎಲ್ಲಕ್ಕಿಂತ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಂಡು ಸ್ವೀಕರಿಸಬೇಕಾಗುತ್ತದೆ. ನಂತರ ಹೆಲ್ತ್ ಅಂಡ್ ಹೈಜೀನ್ ಬಗ್ಗೆ ನೋಡಲಾಗುತ್ತದೆ. ಅದಾದ ಮೇಲೆ ಪ್ರೊಫೆಶನಲ್ ಲೈಫ್ ವಿಷಯ ಬರುತ್ತದೆ. ನಿಮ್ಮ ಡ್ರೆಸಿಂಗ್ ಸ್ಟೈಲ್, ನೀವು ಜನರೊಂದಿಗೆ ಮಾತನಾಡುವ ರೀತಿ, ನಿಮ್ಮ ಆತ್ಮವಿಶ್ವಾಸ ಮುಂತಾದ ವಿಷಯಗಳು ಪರಿಗಣಿಸಲ್ಪಡುತ್ತವೆ.
ಪರ್ಸನಲ್ ಗ್ರೂಮಿಂಗ್‌ನಲ್ಲಿ ನಿಮ್ಮ ಚರ್ಮ, ಕತ್ತು, ಉಗುರು ಮತ್ತು ಓವರ್ ಆಲ್ಹೈಜೀನ್‌ನ್ನು ಗಮನಿಸಲಾಗುತ್ತದೆ. ತಲೆಯಿಂದ ಕಾಲಿನವರೆಗೆ ನೀವು ಎಷ್ಟು ಪರ್ಫೆಕ್ಟ್ ಆಗಿರುವಿರಿ ಎಂಬುದನ್ನು ಇಲ್ಲಿ ಗುರುತಿಸಲಾಗುತ್ತದೆ. ಪ್ರೊಫೆಶೆನಲ್ ಗ್ರೂಮಿಂಗ್‌ನಲ್ಲಿ ನಿಮ್ಮ ವ್ಯಕ್ತಿತ್ವದ ಹೆಚ್ಚುಗಾರಿಕೆಯನ್ನು ಕಾಣಲಾಗುತ್ತದೆ. ನೀವು ಮಾತನಾಡುವ ಟೋನ್, ಮಾತನಾಡುವಾಗ ನೀವು ಕೈಗಳನ್ನು ಬಳಸುವ ರೀತಿ, ನಿಮ್ಮ ಮುಗುಳ್ನಗೆ ಇವುಗಳಿಂದ ಜನರ ಮನಸ್ಸನ್ನು ಹಿಡಿದಿಡಲು ಸಾಧ್ಯವಾಗುತ್ತದೆ.
ಪ್ರೊಫೆಶನಲ್ ಗ್ರೂಮಿಂಗ್‌ನಲ್ಲಿ ನಿಮ್ಮ ಉದ್ಯೋಗ ಯಾವ ಬಗೆಯದು ಎಂದು ನೋಡಲಾಗುತ್ತದೆ. ನೀವು ಟೀಚರ್ ಆಗಿದ್ದರೆ, ನೀವು ಮೈಲ್ಡ್ ಮೇಕಪ್‌ನೊಂದಿಗೆ ಪರ್ಫೆಕ್ಟ್ ಸ್ಯಾರಿ ಡ್ರೇಪಿಂಗ್‌ನ್ನು ಕಲಿಯಬೇಕಾಗುತ್ತದೆ. ನೀವು ಕಂಪನಿಯೊಂದರ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ಕೆಲಸ ಮಾಡುತ್ತಿದ್ದರೆ, ಸ್ಕರ್ಟ್ ಮತ್ತು ಟ್ರೌಸರ್ ನಂತಹ ಡ್ರೆಸ್‌ಧರಿಸಬೇಕಾಗುತ್ತದೆ. ಆದರೆ ಈ ಬಾಹ್ಯರೂಪವಲ್ಲದೆ, ನೀವು ಕಲೀಗ್ಸ್ ಜೊತೆ ಹೇಗೆ ನಡೆದುಕೊಳ್ಳಬೇಕು ಮತ್ತು ಕ್ಲಯೆಂಟ್ಸ್ ಜೊತೆ ಹೇಗೆ ವ್ಯವಹರಿಸಬೇಕು ಎಂಬುದನ್ನೂ ಕಲಿಸಿಕೊಡಲಾಗುತ್ತದೆ.
ಫಿಸಿಕಲ್ ಆ್ಯಕ್ಟಿವಿಟಿ
ಇದರಲ್ಲಿ ಮೊದಲು ನಿಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳಲು ಹೇಳಲಾಗುತ್ತದೆ. ನಂತರ ಇಡೀ ಶರೀರವನ್ನು ಗಮನಿಸಲು ಸಲಹೆ ನೀಡಲಾಗುತ್ತದೆ. ಇದರಿಂದ ನಿಮ್ಮ ಶರೀರದ ಬಗ್ಗೆ ನಿಮಗೆ ಅರಿವುಂಟಾಗುತ್ತದೆ. ಆಮೇಲೆ ಡ್ರೆಸ್‌ಮಾಡಿಕೊಂಡು ಅಪ್‌ಟು ಡೇಟ್ ಆಗಿ ಕನ್ನಡಿಯ ಮುಂದೆ ನಿಲ್ಲುವುದರಿಂದ ನಿಮಗೆ ಡ್ರೆಸಿಂಗ್‌ಸೆನ್ಸ್ ಮತ್ತು ಪ್ರೆಸೆಂಟೆಬಲ್ ಆಗಿರುವ ವಿಧಾನವನ್ನು ಕಲಿಯುಲು ಸಾಧ್ಯವಾಗುತ್ತದೆ. ಈ ರೀತಿ ನೀವು ತಲೆಯಿಂದ ಕಾಲಿನವರೆಗೆ ನಿಮ್ಮ ಸ್ಟೈಲ್‌ನ್ನು ಉತ್ತಮಪಡಿಸಿಕೊಳ್ಳ ಬಲ್ಲವರಾಗುವಿರಿ.