ಐವತ್ತನೇ ವಿವಾಹ ವಾರ್ಷಿಕೋತ್ಸವದಂದು ಗಂಡನ ಕಣ್ಣಲ್ಲಿ ಎರಡು ಹನಿ ಕಣ್ಣೀರನ್ನು ನೋಡಿದ ಹೆಂಡತಿ, ``ನೀವು ಇಷ್ಟು ಭಾವುಕರು ಅಂತ ತಿಳಿದಿರಲಿಲ್ಲ ರೀ.....'' ಎಂದಳು.
ಗಂಡ ಹೇಳಿದ, ``50 ವರ್ಷಗಳ ಹಿಂದೆ ನಾನು ಕೋಣೆಯಲ್ಲಿ ಸಿಕ್ಕಾಗ ನಿಮ್ಮಪ್ಪ `ಲಗ್ನ ಆಗ್ತೀಯಾ... ಇಲ್ಲಾ ಐವತ್ತು ವರ್ಷ ಜೈಲಿಗೆ ಹಾಕ್ಲಾ....' ಅಂತ ಕೇಳಿದ್ದರು. ಜೈಲಿಗೆ ಹೋಗಿದ್ದಿದ್ದರೆ ಇಂದು ಬಿಡುಗಡೆ ಆಗ್ತಿತ್ತು. ಅದನ್ನು ನೆನಪಿಸಿಕೊಂಡು ಕಣ್ಣೀರು ಬಂತು ಅಷ್ಟೆ....''
ತಂದೆ : ಮಗನೇ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದಿದ್ದರೆ ಮದುವೆಗೆ ಮೊದಲು ಸಾಧಿಸು.
ಮಗ : ಯಾಕಪ್ಪಾ?
ತಂದೆ : ಮದುವೆಯಾದ ನಂತರ ಸಾಧಿಸಿದರೆ ಹೆಂಡತಿಯ ಕಾಲ್ಗುಣ ಅಂತಾರೆ.
ಗೆಳೆಯ : ನೀನು ಮಾಡಿದ ತಪ್ಪಿಗೆ ನೀನೇ ಕಠಿಣ ಶಿಕ್ಷೆ ವಿಧಿಸಿಕೊಳ್ಳುತ್ತಿದ್ದೀಯಂತೆ ಹೌದಾ....?
ಗುಂಡ : ಹೌದಯ್ಯ.... ಮುಂದಿನ ತಿಂಗಳು ನಾನು ಮದುವೆ ಆಗ್ತಾ ಇದೀನಿ.
ಗುಂಡ : ಇತ್ತೀಚೆಗೆ ಒಂದೇ ಕಡೆ ನೋಡಿ ನೋಡಿ ಕಣ್ಣು ನೋಯ್ತಾ ಇದೆ ಡಾಕ್ಟರ್.
ವೈದ್ಯ : ಸ್ವಲ್ಪ ಲೇಡೀಸ್ ಹಾಸ್ಟೆಲ್ ಕಡೆ ನೋಡೋದನ್ನು ಕಡಿಮೆ ಮಾಡು. ಎಲ್ಲಾ ಸರಿ ಹೋಗುತ್ತೆ.
ಹೆಂಡತಿ : ಆ ಕಾಮಿಡಿ ಸಿನಿಮಾ ನೋಡಿ ನಕ್ಕು ನಕ್ಕು ನನ್ನ ಅರ್ಧ ಪ್ರಾಣಾನೇ ಹೋದ ಹಾಗಾಯ್ತು ರೀ.
ಗಂಡ : ಹೌದಾ...? ಹಾಗಾದರೆ ಆ ಸಿನಿಮಾನ ಇನ್ನೊಂದು ಸಲ ನೋಡು.
ಹೆಂಡತಿ : ರೀ ಅಡುಗೆ ಏನ್ಮಾಡ್ಲಿ ಅಂತ ಯೋಚನೆ ಆಗ್ತಿದೆ.
ಗಂಡ : ನಿನ್ನದೊಂದು ಯೋಚನೆ ಆದರೆ ನನ್ನದೊಂದು ಯೋಚನೆ.
ಹೆಂಡತಿ : ನಿಮ್ಮದೇನು ಯೋಚನೆ?
ಗಂಡ : ಅದನ್ನು ತಿನ್ನುವುದು ಹೇಗೇಂತ....?
ಪತಿ : ಇಂತಹ ತುಂತುರು ಮಳೆ ಬಿದ್ದು ವಾತಾವರಣ ತುಂಬಾ ಹಿತಕರವಾಗಿದೆ. ಇಂಥ ಸಮಯದಲ್ಲಿ ನೀನು ಏನಾದರೂ ವಿಶೇಷವಾದದ್ದನ್ನು ಹೇಳಬಾರದೇ ಡಾರ್ಲಿಂಗ್.....?
ಪತ್ನಿ : ವಾವ್.... ಹೌ ನೈಸ್! ನಡೀರಿ ಶಾಪಿಂಗ್ ಹೋಗೋಣ.
ಗೆಳೆಯ : ಏನೋ ಗುಂಡ ತುಂಬಾ ಸಂತೋಷದಿಂದ ಸ್ವೀಟ್ಸ್ ಹಂಚುತ್ತಾ ಇದೀಯಾ? ಲಾಟರಿ ಏನಾದರೂ ಹೊಡೀತಾ....?
ಗುಂಡ : ಅಯ್ಯೋ ಹಾಗೇನೂ ಇಲ್ಲ ಕಣೋ... ನಾಳೆಯಿಂದ ನನ್ನ ಹೆಂಡತಿನೇ ಅಡುಗೆ ಮಾಡ್ತೀನೀಂತ ಹೇಳಿದಾಳೆ.
ತಾಯಿ : ಮಗಳೇ ನೀನು ಮಾತನಾಡುವ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಗಳಿಸಿದ್ದಕ್ಕೆ ನಿನ್ನ ತಂದೆ ಏನೆಂದರು?
ಮಗಳು : ಮಗಳೇ... ನೀನು ದಿನದಿಂದ ದಿನಕ್ಕೆ ಮಾತನಾಡುವುದರಲ್ಲಿ ನಿನ್ನ ತಾಯಿಯನ್ನು ಮೀರಿಸುತ್ತಿದ್ದೀಯಾ ಎಂದರು.
ವಿಮಲಮ್ಮ ಸೀರೆ ಕೊಳ್ಳಲೆಂದು ಅಂಗಡಿಗೆ ಹೋದರು. ಸೇಲ್ಸ್ ಮ್ಯಾನ್ ಎಂಥ ಸೀರೆ ತೋರಿಸಿದರೂ ಬಡಪಟ್ಟಿಗೆ ಅವರು ಒಪ್ಪುತ್ತಿರಲಿಲ್ಲ.
ಸೇಲ್ಸ್ ಮ್ಯಾನ್: ಮೇಡಂ, ಮತ್ತೆ... ನಿಮಗೆಂಥ ಸೀರೆ ತಾನೇ ತೋರಿಸಲಿ, ಹೇಳಿ!
ವಿಮಲಮ್ಮ : ಅದನ್ನು ನಾನು ಉಟ್ಟುಕೊಂಡು ಹೊರಗೆ ಬಂದು ನಿಂತ ತಕ್ಷಣ ಅಕ್ಕಪಕ್ಕದ ಮನೆಯವಳು, ಎದುರು ಮನೆಯವಳು ಹೊಟ್ಟೆಕಿಚ್ಚಿಗೆ ಎದೆಯೊಡೆದು ಸಾಯಬೇಕು.... ಅಂಥದ್ದು ತೋರಿಸಿ!
ಅಜಿತ್: ಒಂದು ಪಕ್ಷ ನಿನ್ನ ಮದುವೆ ಅವಳಿ ಸಹೋದರಿಯರಲ್ಲಿ ಒಬ್ಬಳ ಜೊತೆ ಆಯಿತು ಅಂತಿಟ್ಕೊ, ಆಗ ನಿಮ್ಮ ಮನೆಗೆ ಅಕ್ಕನನ್ನು ನೋಡಲು ತಂಗಿ ಬರುತ್ತಾಳೆ. ಒಂದೇ ತರಹ ಇವರು ಇಬ್ಬರೂ ಒಂದೇ ಡಿಸೈನಿನ ಸೀರೆ ಉಟ್ಟಿದ್ದರೆ, ನಿನ್ನ ಹೆಂಡತಿಯನ್ನು ಹೇಗೆ ಗುರುತಿಸುತ್ತೀಯಾ?