ಇಂದು ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಂಪೂರ್ಣವಾಗಿ ಬದಲಾಗಿದೆ. ಅವರಿಂದು ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವುದರ ಜೊತೆಗೆ ಕೆರಿಯರ್‌ ರೂಪಿಸಿಕೊಳ್ಳುವುದರದಲ್ಲಿಯೂ ಆಸಕ್ತಿ ವಹಿಸುತ್ತಿದ್ದಾರೆ. ಅಲ್ಲದೆ, ಕುಟುಂಬದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದರಲ್ಲಿಯೂ ಮುಖ್ಯ ಪಾತ್ರ ವಹಿಸುತ್ತಿದ್ದಾರೆ. ಹಾಗಿರುವಾಗ ಇನ್‌ವೆಸ್ಟ್ ಮೆಂಟ್‌ನಂತಹ ಮಹತ್ವಪೂರ್ಣ ನಿರ್ಣಯದ ವಿಷಯದಲ್ಲಿ ಹಿಂದೆ ಉಳಿಯಲು ಹೇಗೆ ಸಾಧ್ಯ?

ಮಹಿಳೆಯರ ಆ್ಯಕ್ಟಿವ್ ರೋಲ್

ಪುರುಷರಿಗೆ ಹೋಲಿಸಿದರೆ ಮಹಿಳೆಯರು ಹೆಚ್ಚು ಧೈರ್ಯಶಾಲಿ ಮತ್ತು ತಿಳಿವಳಿಕೆಯುಳ್ಳವರೆಂಬ ಮಾತನ್ನು ತಳ್ಳಿಹಾಕುವಂತಿಲ್ಲ. ಮನೆ ನಡೆಸುವುದಾಗಲಿ ಅಥವಾ ಮನೆಗೆ ರೇಶನ್‌ ತರುವ ವಿಷಯವಾಗಲಿ, ಅವರು ಚೆನ್ನಾಗಿ ಹ್ಯಾಂಡಲ್ ಮಾಡಬಲ್ಲರು. ಅಲ್ಲದೆ, ಅವರು ತಮಗೆ ದೊರೆಯುವ ಪಾಕೆಟ್‌ಮನಿಯಲ್ಲಿಯೂ ಉಳಿತಾಯ ಮಾಡಬಲ್ಲರು. ಇನ್‌ವೆಸ್ಟ್ ಮೆಂಟ್‌ನ ವಿಷಯ ಬಂದಾಗ, ಅವರ ಈ ಗುಣ ಕೆಲಸಕ್ಕೆ ಬರುತ್ತದೆ. ಕೆಲವು ವಿಶ್ಲೇಷಣೆಗಳ ಪ್ರಕಾರ ಪುರುಷರಿಗಿಂತ ಮಹಿಳೆಯರು ಮಲ್ಟಿ ಟಾಸ್ಕಿಂಗ್‌ ಆಗಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರು ಉತ್ತಮರೆಂದು ಸಾಬೀತು ಮಾಡಲ್ಪಟ್ಟಿದೆ.

ನಮಗೆ ಯಾವಾಗ ಏನಾಗುತ್ತದೆ ಎಂಬುದು ತಿಳಿಯುವುದೇ ಇಲ್ಲ. ನಮ್ಮ ಕಾಲಾನಂತರ ಅಥವಾ ಮಕ್ಕಳು ನಮ್ಮಿಂದ ದೂರವಾದಾಗ, ಹಣವನ್ನು ಎಲ್ಲೆಲ್ಲಿ ಇನ್‌ವೆಸ್ಟ್ ಮಾಡಲಾಗಿದೆ ಎಂಬುದು ತಿಳಿದಿರಬೇಕು. ಆಗ ನಿಮ್ಮ  ಅಗತ್ಯಕ್ಕೆ ತಕ್ಕಂತೆ ಅದನ್ನು ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಇಂತಹ ಸಮಯದಲ್ಲಿ ಇನ್‌ವೆಸ್ಟ್ ಮೆಂಟ್‌ ಡಿಸಿಶನ್‌ನಲ್ಲಿ ಮಹಿಳೆಯರ ರೋಲ್‌ಮುಖ್ಯವಾಗುತ್ತದೆ.

ಫೈನಾನ್ಶಿಯಲ್ ಪ್ಲಾನಿಂಗ್

ಮಹಿಳೆ ತನ್ನ ಕುಟುಂಬದವರ ಆರೋಗ್ಯಕ್ಕಾಗಿ ಬ್ಯಾಲೆನ್ಸ್  ಡಯೆಟ್‌ಬಗ್ಗೆ ಕಾಳಜಿ ವಹಿಸುವಂತೆ ಇನ್‌ವೆಸ್ಟ್ ಮೆಂಟ್‌ ಬಗ್ಗೆಯೂ ಗಮನವಿರಿಸಬೇಕು. ಇನ್‌ವೆಸ್ಟ್ ಮೆಂಟ್‌ ಚಿಕ್ಕದಾಗಲಿ ಅಥವಾ ದೊಡ್ಡದಾಗಲಿ, ಮುಂದೆ ಇದು ಲಾಭದಾಯಕವಾಗುತ್ತದೆ. ನೀವು ಶೇರ್‌, ಗೋಲ್ಡ್ ಅಥವಾ ರಿಯಲ್ ಎಸ್ಟೇಟ್‌ನಲ್ಲಿ ಇನ್‌ವೆಸ್ಟ್ ಮಾಡಬಹುದು. ಹೆಚ್ಚು ಲಾಭ ಬರುವಂತಹದನ್ನು ನೋಡಿ ಇನ್‌ವೆಸ್ಟ್ ಮಾಡುವುದು ನಿಮ್ಮ ನಿರ್ಧಾರವನ್ನು ಅವಲಂಬಿಸಿರುತ್ತದೆ. ಜೊತೆಗೆ ದೀರ್ಘಾವಧಿಯ ಹೂಡಿಕೆಯಲ್ಲಿ ಉಂಟಾಗಬಹುದಾದ ರಿಸ್ಕ್ ಗೂ ನೀವು ಸಿದ್ಧರಿರಬೇಕು.

ಹೆಚ್ಚು ಲಾಭ ತರುವ ಯೋಜನೆಯಲ್ಲಿ ರಿಸ್ಕ್ ಸಹ ಹೆಚ್ಚಾಗಿರುವುದೆಂಬುದನ್ನು ನೀವು ತಿಳಿದಿರಬೇಕು. ಆದ್ದರಿಂದ ಇನ್‌ವೆಸ್ಟ್ ಮಾಡುವಾಗ ಚೆನ್ನಾಗಿ ಯೋಚಿಸಿ. ಶೇರ್‌ನಲ್ಲಿ ಹಣ ತೊಡಗಿಸುವುದರಿಂದ ಲಾಭ ದೊರೆಯುವುದರ ಜೊತೆಗೆ ನಷ್ಟವಾಗುವ ಸಂಭವ ಇರುತ್ತದೆ. ಏಕೆಂದರೆ ಶೇರ್‌ಬೆಲೆ ಯಾವಾಗ ಕುಸಿಯಬಹುದೆಂದು ಹೇಳಲಾಗುವುದಿಲ್ಲ.  ಅದೇ ಎಫ್‌ಡಿ ಮುಂತಾದವುಗಳಲ್ಲಿ  ಹಣ ಮುಳುಗಿ ಹೋಗುವ ಭಯವಿರುವುದಿಲ್ಲ.

ಇನ್‌ವೆಸ್ಟ್ಮೆಂಟ್‌ ಮಾಡುವಾಗ ನಿಮಗೆ ಧೈರ್ಯವಿರಬೇಕು. ಏಕೆಂದರೆ ಲಾಭ ಬಹು ಬೇಗನೆ ಕೈಗೆಟುಕುವುದಿಲ್ಲ. ನೀವು ಚಿಕ್ಕ ವಯಸ್ಸಿನಲ್ಲಿಯೇ ಇನ್‌ವೆಸ್ಟ್ಮೆಂಟ್‌ ಪ್ರಾರಂಭಿಸಿದರೆ, ಬೆಲೆ ಕುಸಿದರೂ  ರಿಕವರಿಯ ಸಾಧ್ಯತೆ ಹೆಚ್ಚಾಗಿರುತ್ತದೆ. ಏಕೆಂದರೆ ಉದ್ಯೋಗ ಮಾಡಲು ಇನ್ನೂ ಹೆಚ್ಚು ಸಮಯ ನಿಮ್ಮಲ್ಲಿ ಉಳಿದಿರುತ್ತದೆ. ಅದೇ ವಯಸ್ಸಾದ ಮೇಲೆ ಬೆಲೆ ಕುಸಿತ ಕಂಡರೆ ರಿಕವರ್‌ಆಗಲು ಸಾಕಷ್ಟು ತೊಂದರೆ ಎದುರಿಸಬೇಕಾಗುತ್ತದೆ.

ಎಕ್ಸ್ ಪರ್ಟ್‌ನ ಸಹಾಯ

ಬೇಗನೆ ಲಾಭ ಗಳಿಸುವ ಆತುರದಲ್ಲಿ ಹಣ ಕಳಕೊಳ್ಳದಂತಾಗಲು ಇನ್‌ವೆಸ್ಟ್ ಮೆಂಟ್‌ಎಕ್ಸ್ ಪರ್ಟ್‌ನ ಸಹಾಯ ಪಡೆಯಿರಿ. ಅವರು ನಿಮಗೆ ಇದರ ಬಗ್ಗೆ ಹೆಚ್ಚಿನ ತಿಳಿವಳಿಕೆ ನೀಡಬಲ್ಲರು. ಅವರು ನಿಮಗೆ ಯಾವುದರಲ್ಲಿ ಇನ್‌ವೆಸ್ಟ್ ಮಾಡುವುದರಿಂದ ಲಾಭ ದೊರೆಯುತ್ತದೆ ಮತ್ತು ಸುರಕ್ಷಿತವಾಗಿರುತ್ತದೆ, ಸಮಸ್ಯೆಯ ಸಮಯದಲ್ಲಿ ಕಡಿಮೆ ರಿಸ್ಕಿನಲ್ಲಿ ಹೇಗೆ ತಪ್ಪಿಸಿಕೊಳ್ಳಬಹುದು ಎಂಬುದನ್ನೆಲ್ಲ ತಿಳಿಸಿಕೊಡುತ್ತಾರೆ. ಇಂತಹ ಸಲಹೆಯ ಮೂಲಕ ತೆರಿಗೆಯಲ್ಲಿಯೂ ಉಳಿತಾಯ ಮಾಡಬಹುದು. ಆದ್ದರಿಂದ ಇನ್‌ವೆಸ್ಟ್ ಮಾಡುವ ಮೊದಲು ಎಕ್ಸ್ ಪರ್ಟ್‌ನ ಸಲಹೆ ಪಡೆಯಲು ಮರೆಯದಿರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ