ಎಲ್ಲರಿಗೂ ಗೊತ್ತಿರುವಂತೆ ಮಕ್ಕಳ ಅಭಿೃದ್ಧಿಗಾಗಿ, ಆರಂಭಿಕ ದಿನಗಳು ಬಹಳ ಮಹತ್ವಪೂರ್ಣವಾದವು. ಏಕೆಂದರೆ ಆಟಗಳ ಮೂಲಕ ಅವರು ಅನೇಕ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾರೆ. ಕ್ಲಾಸಿಕ್ ಮ್ಯೂಸಿಕ್ ಸಹ ಮಕ್ಕಳ ಸ್ಕಿಲ್ಸ್ ನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಅದು ಅವರಿಗೆ ಜೀವನವಿಡೀ ಪ್ರಯೋಜನಕಾರಿ ಆಗಿರುತ್ತದೆ. ಅಂದರೆ ಪಿಯಾನೋದಲ್ಲಿ ಅಳವಡಿಸಿರುವ ಸಂಖ್ಯೆಗಳು ಅವರಿಗೆ ಸೌಂಡ್ ಜೊತೆಯಲ್ಲಿ ಗಣಿತ ಕಲಿಸುವ ಕೆಲಸವನ್ನೂ ಮಾಡುತ್ತದೆ. ಇಷ್ಟು ಮಾತ್ರವಲ್ಲ, ಮಕ್ಕಳು ಹೊಸ ಹೊಸ ವಸ್ತುಗಳನ್ನು ನೋಡಿ ತಿಳಿಯುವುದಲ್ಲದೆ, ಅರ್ಥೈಸಿಕೊಳ್ಳಲು ಮುಂದಾಗುತ್ತಾರೆ.
ಮ್ಯೂಸಿಕ್ ಮಕ್ಕಳಿಗೆ ವಿಭಿನ್ನ ಭಾಷೆಗಳ ಸೈನ್ಸ್ ಕಲಿಸುತ್ತದೆ. ನಾವು ಮಾತನಾಡಲು ತೊಡಗಿದಾಗ ಕೊನೆಯ ವಾಕ್ಯದ ಹೊತ್ತಿಗೆ ನಿಧಾನವಾಗುತ್ತೇವೆ, ಅದೇ ರೀತಿ ಮ್ಯೂಸಿಕ್‌ನ ಅಂತ್ಯದಲ್ಲೂ ಸಹ, ಹೀಗಾಗಿ ಮಕ್ಕಳು ಇದನ್ನು ಅರಿಯಲು ಸಹಜವಾಗಿ ಪ್ರಯತ್ನಿಸುತ್ತಾರೆ.
ನಿಮಗೆ ತಿಳಿಸಬೇಕಾದ ಒಂದು ಮುಖ್ಯ ವಿಚಾರ ಎಂದರೆ, ನಾವು ಮ್ಯೂಸಿಕ್ ಕೇಳಿದಾಗೆಲ್ಲ, ನಾವು ಕೇವಲ ಅದನ್ನು ಕೇಳಿಸಿಕೊಳ್ಳುವುದಷ್ಟೇ ಅಲ್ಲ, ಬದಲಿಗೆ ಆ ಬಗ್ಗೆ ನಾವು ಹೆಚ್ಚು ಯೋಚಿಸುತ್ತೇವೆ, ಅನುಭವಿಸುತ್ತೇವೆ. ಮುಂದೆ ನಾವು ಅದರಲ್ಲಿ ಮುಳುಗಿ ಹೋಗುತ್ತೇವೆ. ಮ್ಯೂಸಿಕ್‌ನಲ್ಲಿ ಎಷ್ಟು ಶಕ್ತಿ ಇದೆ ಅಂದರೆ ಅದು ನಮ್ಮನ್ನು ಸಂಪೂರ್ಣ ತನ್ನಲ್ಲಿ ಲೀನಗೊಳಿಸುತ್ತದೆ.
ಇದೇ ನಿಟ್ಟಿನಲ್ಲಿ ಅಮೆರಿಕಾದ ಮಲ್ಟಿನ್ಯಾಶನಲ್ ಟಾಯ್ ಕಂಪನಿ `ಮೆಟಲ್' ಎಷ್ಟೋ ವರ್ಷಗಳಿಂದ ಸತತ ಪ್ರಯಾಸದಲ್ಲಿದೆ. ಆ ಮೂಲಕ ಮಕ್ಕಳ ವಿಕಾಸದಲ್ಲಿ ಅವರು ಪ್ರಧಾನ ಪಾತ್ರ ವಹಿಸುತ್ತಿದ್ದಾರೆ. ಅವರ ಮ್ಯೂಸಿಕ್‌ಟಾಯ್ಸ್ ರೇಂಜ್‌ಈ ರೀತಿ ಇದೆ.
3 ಇನ್ 1, ಮೂಸ್, ಮ್ಯೂಸಿಕ್ ಮೊಬೈಲ್, ಮ್ಯೂಸಿಕ್ ಆ್ಯಕ್ಟಿವಿಟಿ ಜಿಮ್, ಝೈಲೋಫೋನ್, ಪಪೀ ಪಿಯಾನೋ ಇತ್ಯಾದಿ. ಈ ಅದ್ಭುತ ಆಟಿಕೆಗಳು ಮಕ್ಕಳ ಮಾನಸಿಕ ವಿಕಾಸದಲ್ಲಿ ನೆರವಾಗುವುದು ಮಾತ್ರವಲ್ಲದೆ, ಅವರು ಜೀವನವಿಡೀ ಮ್ಯೂಸಿಕ್‌ಗೆ ತೀರಾ ಸನಿಹ ಇರುವಂತೆ ಮಾಡುವಲ್ಲಿಯೂ ಯಶಸ್ವಿಯಾಗಿವೆ.