ಮಹಿಳೆಯರು ಪ್ರತಿಯೊಂದು ವಿಷಯದಲ್ಲಿಯೂ ಸ್ಮಾರ್ಟ್ ಆಗಿರುತ್ತಾರೆ. ಅಡುಗೆ ಮಾಡುವುದಾಗಿರಲಿ, ಪತಿಯನ್ನು ಸಂತೋಷಗೊಳಿಸುವುದಾಗಿರಲಿ, ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಡುವುದಾಗಿರಲಿ ಅಥವಾ ಅವರ ವಿದ್ಯಾಭ್ಯಾಸದ ವಿಷಯವಾಗಿರಲಿ ಎಲ್ಲದರಲ್ಲಿಯೂ ಮಹಿಳೆಯರು ಸ್ಮಾರ್ಟ್! ಮನೆ ಮತ್ತು ಹೊರಗೆ ಎರಡೂ ಕಡೆಯ ಜವಾಬ್ದಾರಿಗಳನ್ನು ಅವರು ಚೆನ್ನಾಗಿ ನಿರ್ವಹಿಸುತ್ತಾರೆ. ಅಷ್ಟೇ ಅಲ್ಲ, ಪುರುಷರಿಗೆ ಹೋಲಿಸಿದರೆ ಮಹಿಳೆಯರೇ ಉತ್ತಮವಾದ ರೀತಿಯಲ್ಲಿ ಸೇವಿಂಗ್ಸ್ ಮಾಡುತ್ತಾರೆ. ಆದ್ದರಿಂದ ನಾವೀಗ ಮಹಿಳೆಯರಿಗಾಗಿ ಕೆಲವು ಸುಲಭವಾದ ಸೇವಿಂಗ್ ಟಿಪ್ಸ್ ಪ್ರಸ್ತುತಪಡಿಸಲಿದ್ದೇವೆ. ತನ್ಮೂಲಕ ಅವರು ತಮ್ಮ ಉಳಿತಾಯವನ್ನು ಮತ್ತಷ್ಟು ಹೆಚ್ಚಿಸಬಹುದು.
ಪಿಗ್ಗೀ ಬ್ಯಾಂಕ್
ಪ್ರತಿ ತಿಂಗಳು ಸ್ವಲ್ಪ ಸ್ವಲ್ಪ ಉಳಿತಾಯ ಮಾಡಿ ಪಿಗ್ಗೀ ಬ್ಯಾಂಕ್‌ನಲ್ಲಿ ಸೇರಿಸುತ್ತಾ ಹೋಗಿ. ಇದರಿಂದ ನೀವು ಕಡಿಮೆ ಖರ್ಚಿನಲ್ಲಿ ಸಾಮಾನುಗಳನ್ನು ಮ್ಯಾನೇಜ್ ಮಾಡಲು ಕಲಿಯುವಿರಿ. ಜೊತೆಗೆ ಈ ಉಳಿತಾಯದಿಂದ ನಿಮ್ಮ ಪಿಗ್ಗೀ ಬ್ಯಾಂಕ್‌ತುಂಬಿದಾಗ ನಿಮಗೆ ಬೇಕಾದ ವಸ್ತುವನ್ನು ಕೊಳ್ಳಲು ಸಾಧ್ಯವಾಗುತ್ತದೆ. ಕಷ್ಟಕಾಲದಲ್ಲಿ ಈ ಸಣ್ಣ ಉಳಿತಾಯದಿಂದ ಹೆಚ್ಚಿನ ಸಹಾಯವಾಗಬಲ್ಲದು. ಈ ಬಗ್ಗೆ ನಗರದ ಶ್ರೀರಾಮಪುರದ ನಿವಾಸಿ ಪುಷ್ಪಾ ಅವರೊಡನೆ ಮಾತನಾಡಿದಾಗ, ಅವರು ಹೀಗೆ ಹೇಳುತ್ತಾರೆ, ``ಪ್ರಾರಂಭದಲ್ಲಿ ನನ್ನ ಪತಿ ನನಗೆ ಕೊಡುತ್ತಿದ್ದ ಅಲ್ಪ ಮೊತ್ತದ ಪಾಕೆಟ್ ಮನಿಯಲ್ಲಿ ನಾನು ಪ್ರತಿ ತಿಂಗಳು 100 ರೂ.ಗಳನ್ನು ಮಾತ್ರ ಪಿಗ್ಗೀ ಬ್ಯಾಂಕ್‌ಗೆ ಹಾಕಲು ಸಾಧ್ಯವಾಗುತ್ತಿತ್ತು. ಆದರೆ 5 ವರ್ಷಗಳ ನಂತರ ಆ ಪಿಗ್ಗೀ ಬ್ಯಾಂಕ್‌ನ್ನು ತೆರೆದು ನೋಡಿದಾಗ ಅದರಲ್ಲಿ 6 ಸಾವಿರ ರೂಪಾಯಿಗಳು ಜಮೆಯಾಗಿತ್ತು. ಆ ಸಣ್ಣ ಉಳಿತಾಯದಿಂದ ದೊರೆತ ಹಣ ನನಗೆ ಬಹಳ ಸಂತೋಷ ನೀಡಿತು.'' ಆದ್ದರಿಂದ ಉಳಿತಾಯ ಸಣ್ಣದೆಂದು ಯೋಚಿಸಬೇಡಿ. ಅದು ಇಂದು ಸಣ್ಣದೆನಿಸಿದರೂ ಬರುಬರುತ್ತಾ ದೊಡ್ದದಾಗುವುದು. ಆದ್ದರಿಂದ ಖರ್ಚು ಮಾಡುವ ಮುನ್ನ ಒಮ್ಮೆ ಯೋಚಿಸಿ. ಡಿಸ್ಕೌಂಟ್ ಆಫರ್ಸ್ ನ ಲಾಭ ಪಡೆಯಿರಿ.
ಡಿಸ್ಕೌಂಟ್ ಆಫರ್‌ಗಳ ಬಗ್ಗೆ ಗಮನವಿರಿಸಿ. ಫೋನ್ ರೀಚಾರ್ಜ್ ವಿಷಯವೇ ಆಗಬಹುದು. ಅನೇಕ ಕಂಪನಿಗಳು ಕೆಲವೊಮ್ಮೆ ಅನ್ ಲಿಮಿಟೆಡ್ ನೆಟ್, ಮತ್ತೊಮ್ಮೆ ಫ್ರೀ ಕಾಲ್ಸ್ ನ ಆಫರ್ ನೀಡುತ್ತವೆ. ಇಂತಹ ಅವಕಾಶಗಳ ಲಾಭ ಪಡೆಯಿರಿ. ಇಷ್ಟೇ ಅಲ್ಲ, ಇಡೀ ವರ್ಷದ ನೆಟ್‌ರೀಚಾರ್ಜ್‌ಮತ್ತು ಟಿವಿ ಕೇಬಲ್ ಚಾರ್ಜ್‌ಗಳನ್ನು ಒಟ್ಟಿಗೆ ಕಟ್ಟಿದರೆ ಕೂಡ ನಿಮಗೆ ರಿಯಾಯಿತಿ ದೊರೆಯುತ್ತದೆ.
ಅನಾವಶ್ಯಕ ಶಾಪಿಂಗ್ ಬೇಡ
ನಿಮ್ಮ ಇನ್‌ಕಂ ದೊಡ್ಡ ಮೊತ್ತದ್ದಾಗಿರಬಹುದು, ಹಾಗೆಂದು ನೀವು ಪ್ರತಿ ವೀಕೆಂಡ್‌ನಲ್ಲಿ ಶಾಪಿಂಗ್‌ಗೆಂದು ಹೊರಡಬೇಕಿಲ್ಲ. ನ್ಯೂ ಟ್ರೆಂಡ್ ಯಾವುದಿದೆ ಎಂದು ತಿಳಿಯುವ ಕುತೂಹಲಕ್ಕಾಗಿ ಹೋಗಿ ಶಾಪಿಂಗ್ ಮಾಡಬೇಡಿ. ಅನಾವಶ್ಯಕ ವಸ್ತುಗಳನ್ನು ಕೊಳ್ಳುವ ಮೂಲಕ ನಿಮ್ಮ ಬಜೆಟ್ ಏರುಪೇರಾಗುತ್ತದೆ. ಅಗತ್ಯವಿದ್ದಾಗ ಮಾತ್ರ ಒಳ್ಳೆಯ ಅಂಗಡಿಗೆ ಹೋಗಿ ವ್ಯಾಪಾರ ಮಾಡಿ. ಹ್ಞಾಂ, ವಿಂಡೋ ಶಾಪಿಂಗ್‌ಗೆ ಅಡ್ಡಿಯಿಲ್ಲ!
ಜಾಣ್ಮೆಯಿಂದ ಉಳಿತಾಯ
ಆನ್‌ಲೈನ್ ಶಾಪಿಂಗ್‌ನ ಕ್ರೇಜ್‌ನಿಂದಾಗಿ ಯೋಚಿಸದೆ ಆರ್ಡರ್ ಮಾಡಬೇಡಿ. ಬೆಂಗಳೂರಿನ ಇಂದಿರಾನಗರ ನಿವಾಸಿ ಸುಮಾ ಹೀಗೆ ಹೇಳುತ್ತಾರೆ, ``ಕಳೆದ ಆಗಸ್ಟ್ ತಿಂಗಳಿನಲ್ಲಿ ನನ್ನ ಮಗ ರೋಹಿತ್ ಐಫೋನ್‌ಗಾಗಿ ಪೀಡಿಸುತ್ತಿದ್ದ. ಆಗ ಆನ್‌ಲೈನ್‌ನಲ್ಲಿ ಅದರ ಬೆಲೆ 43 ಸಾವಿರ ರೂ. ಇತ್ತು. ದೀಪಾವಳಿಗೆ ಡಿಸ್ಕೌಂಟ್ ಇರುತ್ತದೆ ಎಂದು ಹೇಳಿ ನಾನು ಅವನನ್ನು ಸುಮ್ಮನಿರಿಸಿದೆ. ಅದರಂತೆ ದೀಪಾವಳಿಯಲ್ಲಿ ಆನ್‌ಲೈನ್ ಸೇವ್‌ನಲ್ಲಿ ಅದೇ ಫೋನ್‌ನ್ನು 36 ಸಾವಿರ ರೂಪಾಯಿಗಳಿಗೆ ಖರೀದಿಸಿ ಸಾಕಷ್ಟು ಉಳಿತಾಯ ಮಾಡಿದೆ.''