ಮದುವೆ ಅಂದ್ಮೇಲೆ ಡ್ಯಾನ್ಸ್ ಕಲಿಯದಿದ್ರೆ ಹೇಗೆ? : ಇತ್ತೀಚಿನ ಅಬ್ಬರದ ಮದುವೆಗಳಲ್ಲಿ ವರ ತಾನೇ ಡ್ಯಾನ್ಸ್ ಆಡದಿದ್ದರೆ ಬಿಟ್ಟೋರು ಯಾರು? ಈ ಕ್ರೇಜ್‌ ವಿಶ್ವದೆಲ್ಲೆಡೆ ಹರಡಿದೆ. ಗ್ರೇಟ್‌ ಇಂಡಿಯನ್‌ ವೆಡ್ಡಿಂಗ್ಸ್ ತರಹ ವಿದೇಶಗಳಲ್ಲೂ, ಮದುವೆಗೆ ಮೊದಲೇ ಭಾವೀ ವಧೂವರರು ಧಾರಾಳ ಡ್ಯಾನ್ಸ್ ಪ್ರಾಕ್ಟೀಸ್‌ ಮಾಡುತ್ತಾರೆ. ಮದುವೆಗೆ ಬರುವ ಅತಿಥಿಗಳಿಗೆ ರಸಗವಳದ ಜೊತೆ ಧಾರಾಳ ಮನರಂಜನೆ ಸಿಗುತ್ತದೆ. ಮದುವೆಗೆ ಬರಲಾಗದವರು ಈ ವಿಡಿಯೋ ನೋಡಿಯಾದರೂ ಸಂತಸ ಪಡಬಹುದಲ್ಲವೇ?

ನಾವು ಯಾರಿಗೇನು ಕಡಿಮೆ? :  ಡ್ಯಾನ್ಸ್ ಮಾಧ್ಯಮದಿಂದ ಮಹಿಳಾ ಸಶಕ್ತೀಕರಣದ ಮೆಸೇಜ್‌ ನೀಡಬಹುದಾಗಿದೆ. ಅಮೆರಿಕಾದ  ಡಾನ್‌ನ ಹಾಟ್‌ ಫೀಮೇಲ್‌ ಡ್ಯಾನ್ಸರ್ಸ್‌ ಪಾಪ್‌ ಕ್ವೀನ್‌ ಸೆಸಾಯಿಯ ವುಮನ್‌ ಎಂಪವರ್ಮೆಂಟ್‌ ಪಾರ್ಟಿಯಲ್ಲಿ ಸ್ಪಷ್ಟಪಡಿಸಿದ್ದೆಂದರೆ, ಹೆಂಗಸರನ್ನು ದುರ್ಬಲರು ಎಂದು ಭಾವಿಸುವ ತಿಳಿಗೇಡಿ ಕೆಲಸ ಯಾರೂ ಮಾಡಬಾರದು, ಈಗ ಅವರು ಗ್ಲಾಮರ್‌ಗೊಂಬೆಗಳಲ್ಲ, ಆಧುನಿಕ ದಿಟ್ಟೆಯರು!

 

ನೋಡಬೇಕು ಏನನ್ನು? : ಸಾಂಡ್ರಾ ವಿಟೋವಿರ್ಥ್‌ ಸ್ಯಾಂಡ್ರಿಕಾ ಓಲ್ಡ್ ಯೂರೋಪಿನ ಪ್ರೊಫೆಶನಲ್ ಡ್ಯಾನ್ಸರ್‌, ಕೊರಿಯೋ ಗ್ರಾಫರ್‌ ಜೊತೆಗೆ ಮಾಡೆಲ್‌ ಕೂಡಾ ಹೌದು. ಹೀಗಾಗಿಯೇ ಈಕೆ ತೆಗೆಸಿಕೊಂಡಿರುವ ಗ್ಲಾಮರಸ್‌ ಫೋಟೋಗಳನ್ನು ನೋಡಿ, ಮೂರು ಬಗೆಯ ಪ್ರತಿಭೆಗಳು ಒಟ್ಟಾಗಿ ಮೇಳೈಸಿರುವುದು ಗೊತ್ತಾಗುತ್ತದೆ.

 

ಭರವಸೆಯ ಪಯಣ : ಯೂರೋಪಿನಲ್ಲಿ ಅನೇಕ ವರ್ಷಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜಿಪ್ಸಿ ಜನಾಂಗ ಕಂಡುಬರುತ್ತಿದೆ. ಈ ಅಲೆಮಾರಿಗಳು ಒಮ್ಮೆ ಇಲ್ಲಿದ್ದರೆ ಮತ್ತೊಮ್ಮೆ ಇನ್ನೆಲ್ಲೋ. ಅನಾದಿಕಾಲದಿಂದ ಇವರನ್ನು ಸಂದೇಹಾಸ್ಪದ ದೃಷ್ಟಿಯಿಂದಲೇ ನೋಡಲಾಗುತ್ತಿತ್ತು. ಆದರೆ ಸದೃಢ ಪರ್ಸನಾಲ್ಟಿಯಿಂದಾಗಿ ಇವರು ಡ್ಯಾನ್ಸ್ ಮೂಲಕ ಗಟ್ಟಿಗರೆನಿಸಿದರು. ಇದೀಗ ಜಿಪ್ಸಿ ಕ್ಯಾರವಾನ್‌ ಡ್ಯಾನ್ಸ್ ಇಂಟರ್‌ನ್ಯಾಷನಲ್ ಆಗಿ ವಿಶ್ವದೆಲ್ಲೆಡೆ ತಮ್ಮ ಥಳುಕು ಬಳುಕಿನ ನೃತ್ಯದಿಂದ ಗಮನ ಸೆಳೆಯುತ್ತಿದ್ದಾರೆ. ನಮ್ಮಲ್ಲಿನ ನಟನಟಿಯರ ಹಾಗೆ ಇವರ ಸ್ಥಿತಿ ಶೋಚನೀಯವಲ್ಲವಾದರೂ, ಸಮಾಜಮುಖಿಯಾಗಿ ಗುರುತಿಸಿಕೊಳ್ಳುವಲ್ಲಿ ಸೋತಿದ್ದಾರೆ.

ಕಿಲಾಡಿಗಳು ಎಲ್ಲೆಡೆ ಇರ್ತಾರೆ : ಸ್ಪೇನ್‌ನಲ್ಲಿ ರಾಷ್ಟ್ರೀಯ ಪೊಲೀಸರು ಯುವ ಜೋಡಿಯೊಂದನ್ನು ಬಂಧಿಸಿದರು. ಮಾದಕ ದ್ರವ್ಯ ಖರೀದಿಸಲೆಂದು ಬಂದಿದ್ದ ಒಬ್ಬ ಯುವಕನನ್ನು ಈ ಜೋಡಿ ಆಕ್ರಮಿಸಿ ಹಣ ಡ್ರಾ ಮಾಡುವಂತೆ ಒತ್ತಾಯಿಸಿತ್ತು. ಆ ಯುವಕ ಹೇಗೋ ಕಿಲಾಡಿತನದಿಂದ ಅವರೊಡನೆ ಹೋರಾಡಿ, ಅಲ್ಲಿನ ಪೊಲೀಸರ ಗಮನಸೆಳೆದು ದೂರು ನೀಡುವಲ್ಲಿ ಯಶಸ್ವಿಯಾದ.

ಹಿಟ್‌ಎನಿಸಿರುವ ಫಿಟ್‌ನೆಸ್‌ ದಂಧೆ : ಒಂದು ಕಡೆ ನಾವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಡೆವಲಪ್‌ ಮಾಡುವಲ್ಲಿ ಬಿಝಿ ಆಗಿದ್ದರೆ, ಮತ್ತೊಂದು ಕಡೆ ಶಿಥಿಲವಾಗುತ್ತಿರುವ ದೇಹ ರಿಪೇರಿ ಮಾಡುವಲ್ಲಿ ಫಿಟ್‌ನೆಸ್‌ ದಂಧೆಯಂತೂ ಈಗ ಲಕಲಕ ಹೊಳೆಯುತ್ತಿದೆ, ಏಕೆಂದರೆ ಈಗ ಎಲ್ಲಾ ಸ್ಮಾರ್ಟ್‌ ಕೆಲಸಗಳೂ ಒಂದಿಷ್ಟೂ ಕಷ್ಟಪಡದೆ ಆಗಿಹೋಗುತ್ತಿವೆ. ಹೀಗಾಗಿ ನಮ್ಮ ಕೈಕಾಲುಗಳು ನಿಷ್ಕ್ರಿಯವಾಗುತ್ತಿವೆ. ಪರಿಣಾಮ... ಒಬೆಸಿಟಿ ಆರ್ಥ್‌ರೈಟಿಸ್‌, ಹಾರ್ಟ್‌ ಡಿಸೀಸ್‌ ಇತ್ಯಾದಿ. ಇದರಿಂದಾಗಿ ಬೀದಿ ಬೀದಿಯಲ್ಲಿ ನಾಯಿಕೊಡೆಗಳಂತೆ ತಲೆಯೆತ್ತುತ್ತಿವೆ ಫಿಟ್‌ನೆಸ್‌ ಸೆಂಟರ್ಸ್‌. ಇದು ಯಾವಾಗ ರೋಬೋಟ್‌ ಟ್ರೇನರ್‌ಗಳ ಕೈಗೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಪ್ರತಿಯೊಬ್ಬರೂ ತಂತಮ್ಮ ಮನೆಗಳಲ್ಲಿ ತಮ್ಮೆಲ್ಲ ಕೆಲಸಗಳನ್ನು ಮಾಡಿಕೊಳ್ಳುತ್ತಾ, ಸೋಮಾರಿತನ ಬಿಟ್ಟು ವರ್ತಿಸಿದರೆ ಇವುಗಳ ಅಗತ್ಯವಾದರೂ ಏನು?

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ