ತಮ್ಮಿಚ್ಛೆಯಂತೆ ಜೀವಿಸುವುದು ಸರ್ವರ ಹಕ್ಕು
ಕಂದಾಚಾರಿ ಸರ್ಕಾರದ ಸರ್ವ ಅಡೆತಡೆಗಳ ನಡುವೆಯೂ ಸಲಿಂಗಿಗಳಿಗೆ ಸುಪ್ರಿಂಕೋರ್ಟ್‌ನಿಂದ ದೊರೆತ ವಿಜಯ ತಮ್ಮದೇ ಆದ ರೀತಿಯಲ್ಲಿ ಜೀವಿಸುವ ಹಕ್ಕು ಅಪೇಕ್ಷಿಸುವವರ ಉತ್ಸಾಹವನ್ನು ಹೆಚ್ಚಿಸಿದೆ. ಸರ್ವಾಧಿಕಾರಿ ಧೋರಣೆಯಲ್ಲಿ ಸರ್ಕಾರದ ನಡೆಯು ಸಿಂಗಾಪುರ ಈಗ ಸಲಿಂಗಿಗಳ ಮುಕ್ತ ಪ್ರದರ್ಶನವನ್ನು ಎದುರಿಸುತ್ತಿದೆ. ಸಿಂಗಾಪುರ ಹಿಂದೊಮ್ಮೆ ಬ್ರಿಟಿಷರ ಅಧೀನದಲ್ಲಿತ್ತು. ಅದು ಅವರ ಪೊಳ್ಳು ನೈತಿಕತೆಯನ್ನು ಈಗಲೂ ಪಾಲಿಸಿಕೊಂಡು ಹೋಗುತ್ತಿದೆ. ಅಲ್ಲಿನ ಪೀನಲ್ ಕೋಡ್‌ನ ಸಂಖ್ಯೆ ಭಾರತದ ನಕಲು ಎಂಬಂತಿದೆ. 377 `ಎ' ಕಲಂ ಅನ್ವಯ ಅದು ಅಪರಾಧವಾಗಿದೆ.
ಬ್ರಿಟಿಷ್ ವಸಾಹತುಶಾಹಿಗಳಾಗಿದ್ದ ಶ್ರೀಲಂಕಾ ಹಾಗೂ ಕೀನ್ಯಾದಲ್ಲೂ ಇದೇ ಸ್ಥಿತಿ ಇದೆ. ಈ ಕಾನೂನಿನ ವಿರುದ್ಧ ಹೋರಾಡಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಇದಕ್ಕಾಗಿ ಭಾರತೀಯ ವಕೀಲರ ಸಹಾಯ ಪಡೆಯಲಾಗುತ್ತದೆ. ವಿಕ್ಟೋರಿಯನ್ ಯುಗದ ಮಾನದಂಡಗಳಿಂದ ಬ್ರಿಟನ್ ಈಗ ಪರಿಪೂರ್ಣ ಸ್ವತಂತ್ರವಾಗಿದೆ. ಆದರೆ ಅದು ಯಾವ ದೇಶದಲ್ಲಿ ಆಡಳಿತ ನಡೆಸಿತ್ತೋ ಅಲ್ಲಿ ಮಾತ್ರ ಇನ್ನೂ ಚಾಲ್ತಿಯಲ್ಲಿದೆ.
ತಮ್ಮಿಚ್ಛೆಯಂತೆ ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಬೇರೆಯವರ ಹಕ್ಕುಗಳಿಗೆ ಚ್ಯುತಿ ತರುವ ಹಕ್ಕು ಯಾರಿಗೂ ಇಲ್ಲ. ಧರ್ಮದ ಪೂಜಾರಿಗಳು ಇದಕ್ಕೆ ವಿರುದ್ಧವಾಗಿದ್ದಾರೆ.... ಏಕೆಂದರೆ ಅವರು ಮನೆ ಹೊಕ್ಕು ಜನರ ರೀತಿನೀತಿಗಳ ಮೇಲೆ ನಿಯಂತ್ರಣ ಹೇರಲು ಇಚ್ಛಿಸುತ್ತಾರೆ.
ಯಾವ ಸಮಾಜ ಇದಕ್ಕೆ ಅನುಮತಿ ಕೊಡುತ್ತೋ, ಅಲ್ಲಿ ಸದಾ ಉಸಿರುಗಟ್ಟುವ ವಾತಾವರಣ ಇರುತ್ತದೆ ಹಾಗೂ ಪರತಂತ್ರ ಕ್ರಿಮಿಗಳು ಹೆಮ್ಮೆಯಿಂದ ಬೆಳೆಯುತ್ತಿವೆ.
ನಮ್ಮ ಮನೆಗಳಲ್ಲಿ ಪರಸ್ಪರ ವಿವಾದದ ಬಹಳಷ್ಟು ಸೂತ್ರಗಳು ಈ ಸಲಿಂಗ ಅಥವಾ ಪರಸ್ತ್ರೀ ಮೋಹದಂತಹ ಕಾನೂನಿನ ನೆರಳಿನಲ್ಲಿ ಹುಟ್ಟಿಕೊಂಡ ರೀತಿರಿವಾಜುಗಳಿಗೆ ಸಂಬಂಧಪಟ್ಟಿವೆ.
ಶಬರಿಮಲೈಯಲ್ಲಿ ಋತುಮತಿ ಮಹಿಳೆಯರಿಗೆ ಏಕೆ ಪ್ರವೇಶ ಕೊಡಲಾಗುವುದಿಲ್ಲ ಎಂದರೆ ಅದರಿಂದಾಗಿ ದೇವರಿಗೆ ಮೈಲಿಗೆ ಆಗುತ್ತದಂತೆ. ಈ ಮೂಲಕ ಅವರನ್ನು ಪುರುಷರಿಗಿಂತ ಕಡಿಮೆ ಎಂದು ಬಿಂಬಿಸಲಾಗುತ್ತದೆ. ಮೂಢನಂಬಿಕೆಗೊಳಗಾದವರು ತಮ್ಮಿಚ್ಛೆಯಂತೆ ಪೂಜೆ ಸಹಿತ ಮಾಡಲು ಆಗುವುದಿಲ್ಲ. ಶಬರಿಮಲೈಗೆ ಹೋಗುವುದು, ಪೂಜೆ ಮಾಡುವುದು ಯಾವುದೇ ಉತ್ಪಾದಕ ಕೆಲಸವೇನಲ್ಲ. ಆದರೂ ಅದರ ಮೇಲೆ ಅಂಕುಶ ಹೇರಲಾಗಿದೆ.
ಸಲಿಂಗ ಕಾಮದ ಕಾನೂನನ್ನು ವೈಯಕ್ತಿಕ ನಿರ್ಧಾರದ ವಿರುದ್ಧ ಎಂದು ಭಾವಿಸುವುದರ ಅರ್ಥ, ಜನ ತಮ್ಮ ತಮ್ಮ ದೇಹವನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವುದರ ಹಕ್ಕು ಹೊಂದಿದ್ದಾರೆ ಎನ್ನುವುದನ್ನು ವಿರೋಧಿಸುವುದಾಗಿದೆ. ಇಬ್ಬರು ವ್ಯಕ್ತಿಗಳು ಒಪ್ಪಿಗೆಯಿಂದ ಲೈಂಗಿಕ ಸಂಬಂಧ ಹೊಂದುವುದು ಅವರ ಹಕ್ಕು.ಇದೇ ತೆರನಾದ ಇಚ್ಛೆಯನ್ನು ಯಾವುದೇ ದೇವಿ ದೇವತೆ, ಧರ್ಮ ರಾಜಕೀಯ ಪಕ್ಷವನ್ನು ಇಷ್ಟಪಡುವ ಸ್ವಾತಂತ್ರ್ಯವನ್ನು ನೀಡಬೇಕು. ಧರ್ಮದ ಹೆಸರಿನಲ್ಲಿ ಯಾರಿಗೆ ಆದರೂ ಮನೆ ಕೊಡದೇ ಇರುವುದು, ಮನಸ್ಸಿಗೆ ಬಂದಾಗ ಥಳಿಸುವುದು, ದಂಗೆ ಎಬ್ಬಿಸುವುದು, ಗದ್ದಲವೆಬ್ಬಿಸಿ ಶಾಂತಿಗೆ ಭಂಗ ತರುವುದು ಸರಿಯಾದುದಲ್ಲ. ಇದು ಕೇವಲ ಪುರುಷರಿಗಷ್ಟೇ ರಿಯಾಯಿತಿ ನೀಡುವುದಿಲ್ಲ, ಮಹಿಳೆಯರ ಪರಿಪೂರ್ಣ ಸ್ವಾತಂತ್ರ್ಯದ ಬೇಡಿಕೆಯ ದಾರಿಯನ್ನು ಮುಕ್ತಗೊಳಿಸಲು ನೆರವಾಗುತ್ತದೆ.
ನಿಮ್ಮ ಮೇಲೆ ನಂಬಿಕೆ ಇಡಿ, ದೇವರ ಮೇಲಲ್ಲ