ಬಾಲಿವುಡ್ ಸೂಪರ್ ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಬೆಂಗಳೂರಿನ ಒಂದು ಹೈ-ಎಂಡ್ ಪಬ್ನಲ್ಲಿ ಸಾರ್ವಜನಿಕವಾಗಿ ಮಿಡಲ್ ಫಿಂಗರ್ ತೋರಿಸಿದ್ದಾರೆ. ಈ ವೀಡಿಯೊ ಕೆಲವೇ ಗಂಟೆಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ, ವ್ಯಾಪಕ ಟೀಕೆಗೆ ಗುರಿಯಾಗಿದೆ.
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಆರ್ಯನ್ ಖಾನ್ ಅಭಿಮಾನಿಗಳತ್ತ ತಮ್ಮ ಮಧ್ಯದ ಬೆರಳು ತೋರಿಸಿ ಉದ್ಧಟತನ ಮೆರೆದಿರುವ ವೀಡಿಯೋಗೆ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಖಾಸಗಿ ಕಾರ್ಯಕ್ರಮದ ನಿಮಿತ್ತ ಆರ್ಯನ್ ಖಾನ್ ಬೆಂಗಳೂರಿಗೆ ಬಂದಿದ್ದು ಬಹಳಷ್ಟು ಸುದ್ದಿಯಾಗಿತ್ತು. ಆದರೊಂದಿಗೆ ಅವರ ವರ್ತನೆ ಈಗ ಇನ್ನಷ್ಟು ಸುದ್ದಿಯಾಗಿದೆ.
ಬೆಂಗಳೂರಿನ ಪಬ್ ವೊಂದಕ್ಕೆ ಬಂದಿದ್ದ ಆರ್ಯನ್ ಖಾನ್ ತಮ್ಮನ್ನು ನೋಡಲು ಬಂದಿದ್ದ ಅಭಿಮಾನಿಗಳತ್ತ ಮಧ್ಯದ ಬೆರಳು ತೋರಿಸಿ ಅಗೌರವ ತೋರಿದ್ದಾರೆ ಎನ್ನಲಾಗಿದೆ.
ವೀಡಿಯೊದಲ್ಲಿ ಆರ್ಯನ್ ಖಾನ್ ತಮ್ಮ ಸ್ನೇಹಿತರೊಂದಿಗೆ ಪಬ್‌ನಿಂದ ಹೊರಬರುತ್ತಿರುವುದು ಕಂಡುಬಂದಿದೆ. ಹೊರಗೆ ಕಾಯುತ್ತಿದ್ದ ಅಭಿಮಾನಿಗಳು ಫೋಟೋ-ವೀಡಿಯೊ ತೆಗೆದಿದ್ದಾರೆ. ಆ ವೇಳೆ ಆರ್ಯನ್ ಕೈ ಬೀಸಿದ ನಂತರ ಮಿಡಲ್ ಫಿಂಗರ್ ತೋರಿಸಿದ್ದಾರೆ. ಬಳಿಕ ಪಕ್ಕದಲ್ಲಿಯೇ ಇದ್ದ ನಲಪಾಡ್, ಆರ್ಯನ್ ಗೆ ಏನೋ ಹೇಳಿದ್ದು ಈ ವೇಳೆ ಆರ್ಯನ್ ಕೈ ಬೀಸುತ್ತಾ ಒಳಗೆ ಹೋಗಿದ್ದಾರೆ.
ಆರ್ಯನ್ ಖಾನ್ ಆ ರಾತ್ರಿ ತಮ್ಮ ಆಪ್ತ ಸ್ನೇಹಿತರಾದ ಜೈದ್ ಖಾನ್ ಹಾಗೂ ಬೆಂಗಳೂರಿನ ಪ್ರಮುಖ ಬಿಲ್ಡರ್ ಹಾಗೂ ರಾಜಕೀಯ ಮುಖಂಡನ ಪುತ್ರ ಮೊಹಮದ್ ನಲಪಾಡ್ ಜೊತೆಯಲ್ಲಿದ್ದರು. ಮೂವರೂ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ, ನಂತರ ಆ ಪಬ್‌ಗೆ ತೆರಳಿದ್ದರು. ಈ ವೀಡಿಯೊ ವೈರಲ್ ಆದ ಬಳಿಕ ಸಾಮಾಜಿಕ ಮಾಧ್ಯಮದಲ್ಲಿ ಆಕ್ರೋಶದ ಅಲೆ ಎದ್ದಿದೆ.





