ಇಂಡಿಗೋ ವಿಮಾನ ಸಂಚಾರ ಡಿಸೆಂಬರ್ 10-15ರ ಸಮಯಕ್ಕೆ ಸಹಜ ಸ್ಥಿತಿಗೆ ಬರುವ ನಿರೀಕ್ಷೆಯಿದೆ ಎಂದು ಸಿಇಓ ಪೀಟರ್ ಎಲ್ಬರ್ಸ್ ಹೇಳಿದ್ದಾರೆ.

ಇಂಡಿಗೋ ಕಂಪನಿಯು ಇಂದು ಒಂದು ಸಾವಿರ ವಿಮಾನ ಸಂಚಾರ ರದ್ದುಗೊಳಿಸಿದೆ.  ಇದರಿಂದಾಗಿ ಇಂಡಿಗೋ ಕಾರ್ಯಾಚರಣೆಯಲ್ಲಿ ಬಿಕ್ಕಟ್ಟು ಎದುರಾಗಿದೆ ಎಂಬುದನ್ನು ಪೀಟರ್ ಎಲ್ಬರ್ಸ್ ಒಪ್ಪಿಕೊಂಡಿರುವ ಅವರು, ಇಂಡಿಗೋಗೆ ಇಂದು ಕಾರ್ಯಾಚರಣೆಯ ವಿಷಯದಲ್ಲಿ ಇದು ಕೆಟ್ಟ ದಿನ ಎಂದು ಹೇಳಿದ್ದಾರೆ.

ಶನಿವಾರವೂ (ಡಿ.6 ) ಬಿಕ್ಕಟ್ಟು ಮುಂದುವರಿಯುವ ಸಾಧ್ಯತೆಯಿದೆ. ಆದರೆ, ಸಾವಿರಕ್ಕಿಂತ ಕಡಿಮೆ ವಿಮಾನ ರದ್ದಾಗುತ್ತವೆ ಎಂದಿದ್ದಾರೆ.ಇಂಡಿಗೋ ಸಾಮಾನ್ಯ ಸ್ಥಿತಿಗೆ ಮರಳಲು ದಿನದ 24 ಗಂಟೆಯೂ ಶ್ರಮಿಸುತ್ತಿದೆ. ಡಿಸೆಂಬರ್ 10 ರಿಂದ 15ರ ನಡುವೆ ವಿಮಾನ ಸಂಚಾರ ಕಾರ್ಯಾಚರಣೆಯೂ ಸಹಜ ಸ್ಥಿತಿಗೆ ಮರಳುವ ನಿರೀಕ್ಷೆ ಇದೆ ಎಂದು ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.

ವಿಮಾನ ಸಂಚಾರ ರದ್ದಿನಿಂದ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ. ರದ್ದತಿ ಮತ್ತು ಅಡಚಣೆಗಳ ವಿಷಯದಲ್ಲಿ ಇಂದು ನಮಗೆ ಅತ್ಯಂತ ಸವಾಲಿನ ದಿನವಾಗಿದೆ. ಚೇತರಿಕೆ ಕ್ರಮಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ” ಎಂದು ಹೇಳಿದರು.

ವಿಮಾನಯಾನ ಸಂಸ್ಥೆಯು ತನ್ನ ಬದ್ಧತೆಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಒಪ್ಪಿಕೊಂಡಿರುವ ಪೀಟರ್‌ ಎಲ್ಬರ್ಸ್, "ಕಳೆದ ಕೆಲವು ದಿನಗಳು ನಮ್ಮ ಅನೇಕ ಇಂಡಿಗೋ ಗ್ರಾಹಕರು ಮತ್ತು ಸಹೋದ್ಯೋಗಿಗಳಿಗೆ ಕಷ್ಟಕರವಾಗಿತ್ತು.  ನಾವು ಭರವಸೆಯನ್ನು ಈಡೇರಿಸಲು ಸಾಧ್ಯವಾಗಲಿಲ್ಲ ಮತ್ತು ಅದಕ್ಕಾಗಿ ನಾವು ಕ್ಷಮೆಯಾಚಿಸಿದ್ದೇವೆ" ಎಂದು ಅವರು ಸಿಬ್ಬಂದಿಗೆ ಆಂತರಿಕ ಇಮೇಲ್‌ನಲ್ಲಿ ತಿಳಿಸಿದ್ದಾರೆ.ಕಾರ್ಯಾಚರಣೆಯ ಸವಾಲುಗಳ ಸಂಯೋಜನೆಯು ಪರಿಸ್ಥಿತಿಗೆ ಕಾರಣವಾಗಿದೆ ಎಂದಿರುವ ಅವರು, "ಸಣ್ಣ ತಂತ್ರಜ್ಞಾನದ ದೋಷಗಳು, ವೇಳಾಪಟ್ಟಿ ಬದಲಾವಣೆಗಳು, ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ವಾಯುಯಾನ ಪರಿಸರ ವ್ಯವಸ್ಥೆಯಲ್ಲಿ ಹೆಚ್ಚಿದ ದಟ್ಟಣೆ ಮತ್ತು ಹೊಸದಾಗಿ ಬಿಡುಗಡೆಯಾದ FDTL ಮಾನದಂಡಗಳ ಅನುಷ್ಠಾನ ಸೇರಿದಂತೆ ಹಲವಾರು ಕಾರ್ಯಾಚರಣೆಯ ಸವಾಲುಗಳು ನಮ್ಮ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವಂತೆ ನಕಾರಾತ್ಮಕವಾಗಿ ಸಂಯೋಜಿಸಲ್ಪಟ್ಟಿದೆ" ಎಂದು ಪೀಟರ್ ಎಲ್ಬರ್ಸ್ ಹೇಳಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ