ಭಾರತದ ಅತ್ಯಂತ ವಿಶ್ವಾಸಾರ್ಹ ಜ್ಯೂವೆಲರಿ ಎಂಬ ಖ್ಯಾತಿ ಪಡೆದಿರುವ ಜಿಆರ್‌ಟಿ ಜ್ಯೂವೆಲರ್ಸ್‌, ಮತ್ತೊಂದು ಆಭರಣದ ಗರಿಯನ್ನು ತನ್ನ ಬಂಗಾರದ ಮುಡಿಗೇರಿಸಿಕೊಂಡಿದೆ. ಪ್ಲಾಟಿನಂ ಗಿಲ್ಡ್ ಆಫ್‌ ಇಂಡಿಯಾ (ಭಾರತೀಯ ಪ್ಲಾಟಿನಂ ಒಕ್ಕೂಟ) ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಂಪ್ರದಾಯಿಕ ಮತ್ತು ಸಮಕಾಲೀನ ಆಭರಣಗಳ ಮಳಿಗೆಯು ಮನಸೂರೆಗೊಂಡಿತು.

ಭಾರತದಾದ್ಯಂತದ ಜಿಆರ್‌ಟಿ ಮಳಿಗೆಗಳಿಗೆ ಗ್ರಾಹಕರು ವರ್ಷಾನು ವರ್ಷಗಳಿಂದಲೂ ಮುಗಿಬೀಳುತ್ತಿದ್ದಾರೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಮತ್ತು ವಜ್ರಾಭರಣಗಳ ಕರಕುಶಲತೆ ಅಸಾಧಾರಣ. ಇಲ್ಲಿ ಲಭ್ಯವಿರುವ ವಿಶಾಲ ಶ್ರೇಣಿ ಮತ್ತು ಆಕರ್ಷಕ ದರಗಳು ಆಭರಣ ಖರೀದಿದಾರರನ್ನು ಎಂದಿಗೂ ನಿರಾಶೆಗೊಳಿಸಿರುವುದಿಲ್ಲ.

ಪ್ಲಾಟಿನಂ ಗಿಲ್ಡ್ ಆಫ್‌ ಇಂಡಿಯಾ (ಭಾರತೀಯ ಪ್ಲಾಟಿನಂ ಒಕ್ಕೂಟ) ಇದು ಈ ಉದ್ಯಮದ ಒಂದು ಪ್ರಖ್ಯಾತ ಸಂಸ್ಥೆಯಾಗಿದ್ದು, ಜಿಆರ್‌ಟಿಯವರ ಅಭೂತಪೂರ್ವವಾದ ಯಶಸ್ಸನ್ನು ಗುರುತಿಸಿ ಅತ್ಯುತ್ತಮ `ಪ್ಲಾಟಿನಂ ಮಾರಾಟ ಮಳಿಗೆ' ಮತ್ತು `ಭಾರತದ ಅತ್ಯುತ್ತಮ ಪ್ರದರ್ಶನ ಮಳಿಗೆ' ಎಂಬ ಈ ಎರಡು ಬೃಹತ್‌ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

``ಈ ಪ್ರಶಸ್ತಿಗಳನ್ನು ಗೆದ್ದಿರುವುದು ನಿಜವಾಗಿಯೂ ಸಂತೋಷವಾಗಿದೆ. ಪ್ಲಾಟಿನಂ ಗಿಲ್ಡ್ ಆಫ್‌ ಇಂಡಿಯಾ (ಭಾರತೀಯ ಪ್ಲಾಟಿನಂ ಒಕ್ಕೂಟ) ಇದು ಒಂದು ಪ್ರಸಿದ್ಧ ಸಂಸ್ಥೆಯಾಗಿದ್ದು, ಅಂತಹ ಸಂಸ್ಥೆಯಿಂದ ಪ್ರಶಸ್ತಿ ಗಳಿಸುವುದೇ ನಮಗೆ ದೊಡ್ಡ ವಿಷಯ. ಉತ್ತಮ ಕಾರ್ಯವನ್ನು ಮುಂದುವರಿಸಿಕೊಂಡು ಹೋಗುವಲ್ಲಿ ನಾವು ಸದಾ ಬದ್ಧರು,'' ಎಂದು ಜಿಆರ್‌ಟಿ ಜ್ಯೂವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್‌. `ಆನಂದ' ಅನಂತ ಪದ್ಮನಾಭನ್‌ ತಿಳಿಸಿದರು.

ಜಿಆರ್‌ಟಿ ಜ್ಯೂವೆಲರ್ಸ್‌ನ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಆರ್‌. ರಾಧಾಕೃಷ್ಣನ್‌ರವರೂ ಸಹ ಅತ್ಯಂತ ಹರ್ಷಚಿತ್ತದಿಂದ ಹೀಗೆ ಹೇಳಿದರು, ``ಇಂತಹ ಪ್ರಶಸ್ತಿಗಳು ನಮಗೆ ಗ್ರಾಹಕರ ನಿರೀಕ್ಷೆಯನ್ನು ಸದಾ ಪೂರ್ಣಗೊಳಿಸುವಂತಹ ಮತ್ತು ಇನ್ನೂ ಉತ್ತಮ ರೀತಿಯಲ್ಲಿ ಸೇವೆಯನ್ನು ನೀಡುವಂತಹ ಹೊಸ ಹುಮ್ಮಸ್ಸನ್ನು ನೀಡುತ್ತದೆ.''

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ : ಜಯನಗರ  080 26651515, ಮಲ್ಲೇಶ್ವರಂ  080 22921515, ಮಾರತ್‌ಹಳ್ಳಿ  080 25401515.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ