`ಯಾವುದೇ ಶ್ರೇಷ್ಠವಾದ ಕಲಾ ಪ್ರಕಾರಗಳು ಮಾನವನ ದೈಹಿಕ, ಭಾವನಾತ್ಮಕ, ಬೌದ್ಧಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನಗಳನ್ನು ಸಂಯೋಜಿಸಲು ತಕ್ಕುದಾದ ಶಕ್ತಿ ಸಾಮರ್ಥ್ಯವನ್ನು ನೀಡುತ್ತವೆ. ಹಾಗೆಯೇ ಕಲೆ, ಕಲಾ ಪ್ರಕಾರವೆನ್ನುವುದು ಕೇವಲ ಹವ್ಯಾಸ, ಪ್ರಸಿದ್ಧಿಗಾಗಿ ಮಾತ್ರವಲ್ಲದೆ, ಜೀವನದ ಉನ್ನತಿಗೂ ಮಾರ್ಗವಾಗಬಲ್ಲದು!'

ಇದು ಪ್ರಖ್ಯಾತ ಭರತನಾಟ್ಯ ಕಲಾವಿದರಾದ, ನಾಟ್ಯವನ್ನು `ನೃತ್ಯ ಯೋಗ'ವನ್ನಾಗಿಸಿದ ವಿದುಷಿ ಆಶಾ ಆಚಾರ್ಯ ಅಡಿಗ ಅವರ ಮಾತುಗಳು. ಮೂಲತಃ ಕರ್ನಾಟಕದ ದಾವಣಗೆರೆಯವರಾದ ಆಶಾ ಇದೀಗ ಅಮೆರಿಕಾದ ಶಿಕಾಗೋದಲ್ಲಿ ಆಚಾರ್ಯ ಪರ್ಫಾರ್ಮೆನ್ಸ್ ಆರ್ಟ್ಸ್ ಅಕಾಡೆಮಿ ಸಂಸ್ಥೆಯ ಮುಖೇನ ಅಲ್ಲಿನ ಯುವಜನತೆಗೆ ಭಾರತೀಯ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸುತ್ತಿದ್ದಾರೆ. ನೃತ್ಯವನ್ನು ತಮ್ಮ ಬದುಕಿನ ಒಂದು ಅಂಗವೆಂದು ಪರಿಭಾವಿಸಿರುವ ಆಶಾ ಅವರ ಕಿರುಪರಿಚಯ ಇಲ್ಲಿದೆ.

ಕಳೆದ ಇಪ್ಪತ್ತೈದು ವರ್ಷಗಳಿಂದಲೂ ಆ ಪ್ರಪಂಚದಲ್ಲಿ ಸಕ್ರಿಯವಾಗಿರುವ ಅಶಾ ವಿದ್ಯಾರ್ಥಿಯಾಗಿ, ಅಭಿನೇತ್ರಿಯಾಗಿಯೂ ಮಾತ್ರವಲ್ಲ ಉತ್ತಮ ತರುಬೇತುದಾರರಾಗಿಯೂ ಹೆಸರಾದರು.

ಶ್ರೀಮತಿ ಅಡಿಗ ಹಾಗೂ ದಿ. ಚಂದ್ರಶೇಖರ ಅಡಿಗ ಅವರ ಮಗಳಾದ ಆಶಾ, ಅತ್ಯಂತ ಕಿರಿಯ ವಯಸ್ಸಿನಿಂದಲೂ ನೃತ್ಯ ಕುರಿತು ಆಸಕ್ತಿ ಮೂಡಿಸಿಕೊಂಡರು. ಇವರ ತಂದೆ ತಾಯಿ ಸಹ ಸಮಾಜ ಸೇವಾ ಕ್ಷೇತ್ರದಲ್ಲಿ ಸಾಕಷ್ಟು ಹೆಸರಾಗಿದ್ದು ನಾನಾ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ಹೀಗಾಗಿ ಅವರೆಂದಿಗೂ ಮಗಳ ಕಲಾಸಕ್ತಿಯನ್ನು ಹತ್ತಿಕ್ಕುವ ಪ್ರಯತ್ನ ನಡೆಸಲಿಲ್ಲ, ಬದಲಾಗಿ ಹುರಿದುಂಬಿಸಿದರು.

ಆಶಾ ತಮ್ಮ  ಬಾಲ್ಯದಲ್ಲಿಯೇ ಮನೆಯ ಟಿ.ವಿ, ರೇಡಿಯೋಗಳಲ್ಲಿ ಪ್ರಸಾರವಾಗುತ್ತಿದ್ದ ಸಂಗೀತಕ್ಕೆ ಹೆಜ್ಜೆ ಹಾಕುತ್ತಿದ್ದರು. ಅವರ ಹಿರಿಯ ಸೋದರಿಯಾದ ಉಷಾ ಸಹ ಭರತನಾಟ್ಯ ಪ್ರವೀಣೆಯಾಗಿದ್ದು, ಅವರು ನೃತ್ಯಾಭ್ಯಾಸಕ್ಕೆ ತೊಡಗಿದ್ದ ವೇಳೆ ಆಶಾ ಅವರಿಗೂ ಸಹ ನೃತ್ಯ ಕಲಿಯುವ ಬಯಕೆ ಮೊಳೆಯಿತು. ಆಗಿನ್ನೂ ಮೂರು ವರ್ಷ ವಯಸ್ಸಿನವರಾಗಿದ್ದ ಆಶಾ, ತನ್ನ ಅಕ್ಕನೊಂದಿಗೆ ನೃತ್ಯ ತರಬೇತಿಗೆ ಸೇರಿಕೊಂಡರು.

ವಿದ್ವಾನ್‌ ರಾಜಗೋಪಾಲ್ ‌ಭಾಗವತ್‌ ಹಾಗೂ ವಿದುಷಿ ಪೂರ್ಣಿಮಾ ಭಾಗವತ್‌ ಅವರಿಂದ ವಿದ್ಯುಕ್ತವಾಗಿ ಭರತನಾಟ್ಯ ತರಬೇತಿಯನ್ನು  ಹೊಂದಿದ ಆಶಾ `ಕಲಾಕ್ಷೇತ್ರ' ಶೈಲಿಯಲ್ಲಿ ವಿಶೇಷ ನೈಪುಣ್ಯತೆ ಸಾಧಿಸಿದ್ದಾರೆ. ಭಾಗವತ್‌ ದಂಪತಿಗಳು ವಿದ್ವಾನ್‌ ಜನಾರ್ದನ ಅವರ ಶಿಷ್ಯರಾಗಿದ್ದು, ವಿದ್ವಾನ್‌ ಜನಾರ್ಧನ, ಪ್ರೊ. ಎಂ.ಆರ್‌. ಕೃಷ್ಣಮೂರ್ತಿಗಳ ಶಿಷ್ಯರಾಗಿದ್ದರು. ಎಂ.ಆರ್‌. ಕೃಷ್ಣಮೂರ್ತಿ ಕಲಾಕ್ಷೇತ್ರದ ಮೇರು ನೃತ್ಯ ಕಲಾವಿದೆ ರುಕ್ಮಿಣಿ ದೇವಿ ಅರುಂಡೇಲ್‌ರಲ್ಲಿ ಶಾಸ್ತ್ರೀಯ ನೃತ್ಯಾಭ್ಯಾಸ ನಡೆಸಿದ್ದರು. ಈ ರೀತಿಯಲ್ಲಿ ನೋಡಿದರೆ ಆಶಾ, ರುಕ್ಮಿಣಿದೇವಿಯವರ ಶಿಷ್ಯ ಪರಂಪರೆಗೆ ಸೇರಿದವರಾಗಿದ್ದಾರೆ. ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ವಿದ್ವತ್‌ ಪದವಿಯನ್ನು ಪೂರ್ಣಗೊಳಿಸಿದ ಆಶಾ, ಕರ್ನಾಟಕ ಸರ್ಕಾರ ನಡೆಸುವ ವಿದ್ವತ್‌ ಪರೀಕ್ಷೆಯಲ್ಲಿ ಮೂರನೇ ರಾಂಕ್‌ ಪಡೆದಿದ್ದಾರೆ.

ಎಂಬಿಎ ವಿದ್ಯಾಭ್ಯಾಸ ಮಾಡಿದ್ದ ಆಶಾ, ಕೆಲಕಾಲ ಮ್ಯಾನೇಜ್‌ಮೆಂಟ್‌ ಕ್ಷೇತ್ರದಲ್ಲಿ ಕೆಲಸ ಮಾಡಿದ್ದರು. ಆದರೆ ನೃತ್ಯ ಕ್ಷೇತ್ರದತ್ತ ಅವರಿಗಿದ್ದ ಬಲವಾದ ಆಸಕ್ತಿಯಿಂದಾಗಿ ಕಲಾ ಕ್ಷೇತ್ರಕ್ಕೆ ಮರಳಿ ಅದರಲ್ಲಿಯೇ ಸಂಪೂರ್ಣವಾಗಿ ತೊಡಗಿಸಿಕೊಂಡರು. ಮುಂದೆ ಸಂಧ್ಯಾ, ಕಿರಣ್‌ ಸುಬ್ರಹ್ಮಣ್ಯನ್‌ ಹಾಗೂ ಚೆನ್ನೈ ಕಲಾಕ್ಷೇತ್ರದ ಪ್ರೊ. ಸೂರ್ಯನಾರಾಯಣ ಮೂರ್ತಿಯವರ ಮಾರ್ಗದರ್ಶನದಲ್ಲಿ ತಮ್ಮ ಭರತನಾಟ್ಯ ಅಭ್ಯಾಸವನ್ನು ಮುಂದುವರಿಸಿದ್ದ ಆಶಾ, ಮುಂದಿನ ದಿನಗಳಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತ ನೃತ್ಯ ಸೇರಿದಂತೆ ಜನಪದ ನೃತ್ಯ ಶೈಲಿಗಳಲ್ಲಿಯೂ ಪರಿಣಿತಿ ಪಡೆದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ