ದೀಪಾವಳಿಯಲ್ಲಿ ನಾವು ಪ್ರತಿವರ್ಷ ನಮ್ಮವರೊಂದಿಗೆ ಸೇರಿ ಮೋಜು ಮಾಡುತ್ತೇವೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು, ಉಡುಗೊರೆಗಳು ಮತ್ತು ಪಟಾಕಿಗಳ ರಾಶಿ ಇರುತ್ತವೆ. ಬಣ್ಣ ಬಣ್ಣದ ಬಲ್ಬ್ ಗಳಿಂದ ಮನೆಯನ್ನು ಅಲಂಕರಿಸುತ್ತೇವೆ, ಪಾರ್ಟಿ ಮಾಡುತ್ತೇವೆ, ಪೂಜೆ ಮಾಡುತ್ತೇವೆ. ಆದರೆ ಹಬ್ಬದ ಅರ್ಥ ಇಷ್ಟೇ ಅಲ್ಲ, ಮನಸ್ಸಿಗೆ ನಿಜವಾದ ಸಂತೋಷ ತರುವಂತಾಗಬೇಕು. ದೀಪಾವಳಿ ಆಚರಿಸುವ ಕೆಲವು ಸುಂದರ ವಿಧಾನಗಳು ಹೀಗಿವೆ :

ಲೋಕಲ್ ಪೇರೆಂಟ್ಸ್ ನ್ನು ಅಡಾಪ್ಟ್ ಮಾಡಿಕೊಳ್ಳಿ

ಕೇಳಲು ಕೊಂಚ ವಿಚಿತ್ರ ಅನ್ನಿಸುತ್ತಿದೆಯಲ್ಲವೇ? ಭಾರತದಲ್ಲಿ 10 ಕೋಟಿಗೂ ಹೆಚ್ಚು ಜನ 60 ವರ್ಷಕ್ಕೂ ಅಧಿಕ ವಯಸ್ಸಿನವರು. 2025ರ ವೇಳೆಗೆ ಇನ್ನೂ 8 ಕೋಟಿ ಹೆಚ್ಚಳವಾಗುವ ಸಂಭವವಿದೆ. ಅದರಲ್ಲಿ ಬಹಳಷ್ಟು ವೃದ್ಧರು ಏಕಾಂಗಿಯಾಗಿದ್ದಾರೆ. ಇನ್ನೂ ಬಹಳಷ್ಟು ವೃದ್ಧರು ತಮ್ಮ ಮಕ್ಕಳಿಂದ ಹಿಂಸೆಗೆ ಗುರಿಯಾಗುತ್ತಿದ್ದಾರೆ. ಇತ್ತೀಚೆಗೆ ಹೆಲ್ತ್ ಏಜ್‌ ಇಂಡಿಯಾ ಮೂಲಕ ಮಾಡಿದ ಸಮೀಕ್ಷೆಯ ಪ್ರಕಾರ, ಶೇ.30ಕ್ಕೂ ಹೆಚ್ಚು ವೃದ್ಧರು ದೇಶದ ರಾಜಧಾನಿಗಳಲ್ಲಿ ದೂಷಣೆಗೆ ಗುರಿಯಾಗುತ್ತಿದ್ದಾರೆ. ಅದರಲ್ಲಿ ಶೇ.60 ಕೇಸುಗಳಲ್ಲಿ ವೃದ್ಧರು ತಮ್ಮ ಗಂಡು ಮಕ್ಕಳಿಂದ ಮತ್ತು ಶೇ.24 ಕೇಸುಗಳಲ್ಲಿ ಸೊಸೆಯರಿಂದ ದೂಷಣೆಗೆ ಗುರಿಯಾಗುತ್ತಿದ್ದಾರೆ. ಶೇ.76ರಷ್ಟು ವೃದ್ಧರು ತಮ್ಮ ಕುಟುಂಬದ ಮರ್ಯಾದೆ ಮತ್ತು ಮಕ್ಕಳ ಮೇಲಿನ ಪ್ರೀತಿಯಿಂದ ದೂರು ನೀಡುವುದಿಲ್ಲ. ಹೀಗಾಗಿ ಅವರು ಮನೆಯವರೊಂದಿಗಿದ್ದೂ ಏಕಾಂಗಿಗಳು, ಹೆಚ್ಚಿನವರ ಮಕ್ಕಳು ನೌಕರಿಗಾಗಿ ದೂರದ ನಗರಗಳಿಗೆ, ವಿದೇಶಗಳಿಗೆ ಹೋಗಿದ್ದಾರೆ. ಅವರ ಸಂಗಾತಿಗಳೂ ಒಂಟಿಯಾಗಿರುತ್ತಾರೆ. ಮಕ್ಕಳಿಗಾಗಿ ಕಾಯುತ್ತಿರುವ ವೃದ್ಧರ ಉದಾಸ ಕಣ್ಣುಗಳಲ್ಲಿ ನಿಮ್ಮ ಪ್ರೀತಿ ಮತ್ತು ಜೊತೆ ಕೊಟ್ಟು ಸಂತಸದ ದೀಪ ಹಚ್ಚುವಂತಹ ಸಂದರ್ಭ ಈ ದೀಪಾವಳಿಯಂದು ಬಂದಿದೆ. ಏಕಾಂತ, ಉಪೇಕ್ಷೆ, ಕಾಯಿಲೆ ಇತ್ಯಾದಿಗಳಿಂದ ಬಳಲುತ್ತಿರುವ ವೃದ್ಧರ ಬದುಕಿನ ಕತ್ತಲೆಯ ಕ್ಷಣಗಳನ್ನು ಬೆಳಗಿಸಬಹುದು. ಅದಕ್ಕಾಗಿ ನೀವು ಹೆಚ್ಚೇನೂ ಮಾಡಬೇಕಾಗಿಲ್ಲ. ಕೊಂಚ ಸಮಯ ಹಣ, ಸಹಕಾರ ನೀಡಬೇಕು. ಒಂಟಿಯಾಗಿ ಇರುವ ಅಥವಾ ಓಲ್ಡ್ ಏಜ್‌ ಹೋಮ್ ನಲ್ಲಿ ಬದುಕಿನ ಸಂಜೆಯನ್ನು ಕಳೆಯುತ್ತಿರುವ ವೃದ್ಧರನ್ನು ನಿಮ್ಮ ಬದುಕಿನ ಭಾಗವಾಗಿ ಮಾಡಿಕೊಂಡು ಅವರ ಬದುಕಿನಲ್ಲಿ ದೀಪಾವಳಿಯ ಕಾಂತಿಯನ್ನು ತುಂಬಿಸಿ.

ಕ್ರಿಮಿನಲ್ ಸೈಕಾಲಜಿಸ್ಟ್ ಮತ್ತು ಸಮಾಜ ಸೇವಕಿ ತನುಜಾ ಹೀಗೆ ಹೇಳುತ್ತಾರೆ, ``ಫ್ಯಾಮಿಲಿ ಮೌಲ್ಯಗಳಲ್ಲಿ ಬದಲಾವಣೆಯಿಂದ ವೃದ್ಧರ ಪರಿಸ್ಥಿತಿ ನಿಕೃಷ್ಟವಾಗಿದೆ. ತಮ್ಮ ಕೈಯಾರೆ ಮಕ್ಕಳಿಗೆ ಊಟ ಮಾಡಿಸಿದ್ದ ಮಕ್ಕಳ ಬೆರಳು ಹಿಡಿದು ನಡೆಯಲು ಕಲಿಸಿದ ವೃದ್ಧರು ಮಕ್ಕಳು ಯುವಕರಾದ ನಂತರ ಅವರಿಗೆ ಸಮಸ್ಯೆಯಂತಾಗಿಬಿಡುತ್ತಾರೆ. ``ರಾತ್ರಿ ಕ್ಲಬ್‌ಗಳಲ್ಲಿ ಪಾರ್ಟಿ ಎಂಜಾಯ್‌ಮಾಡಲು, ನಶೆಯಲ್ಲಿ ಮುಳುಗಲು ಮತ್ತು ಸ್ವಚಂದವಾಗಿ ಬದುಕಲು ಮತ್ತು ಅರೆಬರೆ ಉಡುಪು ತೊಡಲಿಚ್ಛಿಸುವ ಯುವಜನತೆ ತಮ್ಮ ಅಪ್ಪ ಅಮ್ಮನ ಜೊತೆ ಇರಲು ಇಚ್ಛಿಸುವುದಿಲ್ಲ. ಅವರು ಯಾವುದಾದರೊಂದು ನೆಪ ಹೇಳಿ ಅವರಿಂದ ದೂರ ಹೋಗುತ್ತಾರೆ.'' ಹೀಗಿರುವಾಗ ಈ ವೃದ್ಧರ ನಿರೀಕ್ಷೆಗಳಲ್ಲಿ ಅಸಹಾಯಕತೆ, ಏಕಾಂಗಿತನ, ಕಾಯುವಿಕೆ ಮತ್ತು ಶೋಕವಲ್ಲದೆ ಬೇರೇನೂ ಇರುವುದಿಲ್ಲ. ನಾವು ಇವರ ಬದುಕನ್ನು ಬದಲಿಸಲು ಆಗುವುದಿಲ್ಲ. ಆದರೆ ಈ ಮನಸ್ಥಿತಿಯಿಂದ ಅವರನ್ನು ಹೊರಕ್ಕೆ ತರಲು ಸಹಾಯ ಮಾಡಬಹುದು. ಅವರೊಂದಿಗೆ ಸ್ವಲ್ಪ ಹೊತ್ತು ಕಳೆದು ಅವರ ಮನದಲ್ಲಿ ಸುರಕ್ಷತೆ ಹಾಗೂ ಆತ್ಮೀಯತೆಯ ಅನುಭವ ಉಂಟು ಮಾಡಬಹುದು.ಇದಕ್ಕಾಗಿ ನೀವೇನೂ ಹೆಚ್ಚಿಗೆ ಮಾಡಬೇಕಿಲ್ಲ. ಅವರಿಗೆ ಮನೆಯಲ್ಲಿ ತಯಾರಿಸಿದ ಸ್ವೀಟ್ಸ್ ಹಾಗೂ ಗಿಫ್ಟ್ ತೆಗೆದುಕೊಂಡು ಹೋಗಿ. ಅವರೊಂದಿಗೆ ಕುಳಿತು ಅವರ ಕಷ್ಟ ಸುಖ ಹಂಚಿಕೊಳ್ಳಿ. ಅವರ ಜೀವನದ ಅನುಭವಗಳನ್ನು ಕೇಳಿ. ನಿಮ್ಮ ಜೀವನಾನುಭವಗಳನ್ನು ಹೇಳಿ. ನಿಮಗೂ ಹೃದಯ ಹಗುರವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ