ಮನೆ ಖರೀದಿಸುವುದು ಪ್ರತಿಯೊಬ್ಬರ ಕನಸಾಗಿರುತ್ತದೆ. ನಮ್ಮ ದೇಶದಲ್ಲಂತೂ ಸಾಲ ಪಡೆಯುವುದು ಸರಿಯಲ್ಲ ಎಂದು ತಿಳಿಯಲಾಗಿದೆ. ಆದರೆ ನಿಮ್ಮ ಪೋರ್ಟ್‌ ಪೋಲಿಯೋದಲ್ಲಿ ಹೋಮ್ ಲೋನ್‌ ಇದ್ದರೆ ಅದು ಒಳ್ಳೆಯ ಗುರುತಾಗಿದೆ. ಅಂದಹಾಗೆ ಹೋಮ್ ಲೋನ್‌ ಇತರ ಲೋನ್‌ಗಳಿಗಿಂತ ಭಿನ್ನವಾಗಿದೆ. ಕಾರಣವೇನೆಂದರೆ ಹೋಮ್ ಲೋನ್‌ ತೆಗೆದುಕೊಳ್ಳುವುದೆಂದರೆ ನಿಮ್ಮ ಬಳಿ ಒಂದು ಸಂಪತ್ತನ್ನು ಮಾಡಿಕೊಂಡಂತೆ. ಅದರ ಬೆಲೆ ಯಾವಾಗಲೂ ಹೆಚ್ಚುತ್ತಿರುತ್ತದೆ. ಇನ್ನೊಂದು ಕಡೆ ಬಾಕಿ ಸಾಲ ಸಾಲಗಾರನಿಗೆ ಆಮಂತ್ರಣ ನೀಡುತ್ತದೆ. ನೀವು ಹೋಮ್ ಲೋನ್‌ ಪಡೆದು ಮನೆ ಖರೀದಿಸಿದರೆ ಅದು ಬುದ್ಧಿವಂತಿಕೆ. ಆದರೆ ಅದರ ಸೂಕ್ಷ್ಮತೆಗಳ ಬಗ್ಗೆ ಮಾಹಿತಿ ಇರಬೇಕು. ಅಗ್ಗದ ಹೋಮ್ ಲೋನ್‌ ಹೇಗೆ ಸಿಗುತ್ತದೆ. ಒಟ್ಟಿಗೆ ಅಪ್ಲೈ ಮಾಡಿ :

ನೀವು ಮತ್ತು ನಿಮ್ಮ ಹಲವಾರು ಮಿತ್ರರು ಒಟ್ಟಿಗೆ ಹೋಮ್ ಲೋನ್‌ ಪಡೆದರೆ ಈ ಲೋನ್‌ ನಿಮಗೆ ಅಗ್ಗವಾಗುವುದು. ಒಟ್ಟಿಗೆ ಲೋನ್‌ ತೆಗೆದುಕೊಂಡಾಗ ಬ್ಯಾಂಕ್‌ ಅಥವಾ ವಿತ್ತೀಯ ಸಂಸ್ಥೆಗೆ ಅದರ ಪ್ರೋಸೆಸಿಂಗ್‌ ಮತ್ತು ಕಾನೂನು ಕಲಾಪಗಳಿಗೆ ಖರ್ಚು ಕಡಿಮೆ ಬೀಳುತ್ತದೆ. ಅದರ ಲಾಭ ನಿಶ್ಚಿತವಾಗಿ ಬ್ಯಾಂಕ್‌ ಗ್ರಾಹಕರಿಗೆ ಸಿಗುತ್ತದೆ. ಅಂದರೆ ಬ್ಯಾಂಕ್‌ ನಿಮ್ಮ ಪ್ರೋಸೆಸಿಂಗ್‌ ಫೀಸ್ ಮತ್ತು ಇತರ ಶುಲ್ಕಗಳನ್ನು ಮನ್ನಾ ಮಾಡುತ್ತದೆ.

ತಿಂಗಳ ಕೊನೆಯಲ್ಲಿ ಹೋಮ್ ಲೋನ್ಗೆ ಅಪ್ಲೈ ಮಾಡಿ : ಸಾಲ ಕೊಡಲು ಬ್ಯಾಂಕುಗಳ ತಿಂಗಳ ಆಧಾರದಲ್ಲಿ ಟಾರ್ಗೆಟ್‌ ಇರುತ್ತದೆ. ಒಂದು ವೇಳೆ ನೀವು 24ನೇ ತಾರೀಖಿನ ನಂತರ ಲೋನ್‌ಗೆ ಅರ್ಜಿ ಹಾಕುತ್ತಿದ್ದರೆ, ನಿಮಗೆ ಡಿಸ್ಕೌಂಟ್‌ ಸಿಗುವ ಸಂಭಾವ್ಯತೆ ಹೆಚ್ಚು. ಬ್ಯಾಂಕುಗಳು ತಮ್ಮ ಪ್ರತಿ ತಿಂಗಳ ಲೋನ್‌ ಟಾರ್ಗೆಟ್‌ ಪೂರೈಸಿದರೆ ಆ ಅವಧಿಯಲ್ಲಿ ಬ್ಯಾಂಕು ರಿಯಾಯಿತಿ ದರದಲ್ಲಿ ಹೋಮ್ ಲೋನ್‌ ಕೊಡಬಹುದು.

ಕ್ರೆಡಿಟ್ರೇಟಿಂಗ್ನ್ನು ಸುಸ್ಥಿತಿಯಲ್ಲಿಡಿ : ಬ್ಯಾಂಕ್‌ ತಮ್ಮ ಹಳೆಯ ವಿಶ್ವಸನೀಯ ಗ್ರಾಹಕರಿಗೆ ರಿಯಾಯಿತಿ ದರದಲ್ಲಿ ಹೋಮ್ ಲೋನ್‌ ಕೊಡಲು ಪ್ರಯತ್ನಿಸುತ್ತದೆ. ಒಂದು ವೇಳೆ ನೀವು ಬ್ಯಾಂಕಿನ ಹಳೆಯ ಗ್ರಾಹಕರಾಗಿದ್ದರೆ ಮತ್ತು ನಿಮ್ಮ ರೀಪೇಮೆಂಟ್ ರೆಕಾರ್ಡ್‌ ಚೆನ್ನಾಗಿದ್ದರೆ ಇತರ ಗ್ರಾಹಕರಿಗಿಂತ ಕಡಿಮೆ ದರದಲ್ಲಿ ನಿಮಗೆ ಲೋನ್‌ ಸಿಗುವ ಸಾಧ್ಯತೆ ಇದೆ.

ಗಮನಿಸಿ

ಬೆಸ್ಟ್ ಡೀಲ್ ‌ಅಥವಾ ಅಗ್ಗದ ಡೀಲ್ ‌ಯಾವಾಗಲೂ ಒಳ್ಳೆಯ ಡೀಲ್ ಆಗಬೇಕೆಂದೇನಿಲ್ಲ.

ಹೊಸ ಅಥವಾ ಹೆಚ್ಚು ಮಾಹಿತಿ ಇಲ್ಲದ ಸಾಲ ಕೊಡುವವರಿಂದ ಸಾಲ ಪಡೆಯಬೇಡಿ.

ಲೋನ್‌ ಪಡೆಯುವಾಗ ಕನಿಷ್ಠ 4-5 ಕಡೆ ಬೇರೆ ಬೇರೆ ಸಾಲ ಕೊಡುವವರ ಬಳಿ ಬಡ್ಡಿದರ, ಖರ್ಚು, ಅರ್ಜಿ ಪ್ರಕ್ರಿಯೆಯಲ್ಲಿ ಸರಳತೆ ಮತ್ತು ಸಾಲ ತೀರಿಸುವಿಕೆಯಲ್ಲಿ ಸರಳತೆ ಮತ್ತು ಹಳೆಯ ಸಾಲಗಾರರ ಅನುಭವಗಳ ಬಗ್ಗೆಯೂ ಅಗತ್ಯವಾಗಿ ತಿಳಿದುಕೊಳ್ಳಿ.

ಬಡ್ಡಿ ದರಗಳು ಮತ್ತು ಇತರ ಶುಲ್ಕಗಳಿಗೆ ಹೋಲಿಸಿ ನೀವು ಆನ್‌ಲೈನ್‌ ಪೋರ್ಟ್‌ನ ಆಸರೆ ಪಡೆಯಬಹುದು.

ಸಾಲ ಕೊಡುವವರ ರೇಟ್‌ ರೀಸೆಟ್‌, ಫೋರ್‌ ಕ್ಲೋಷರ್‌ನ ಷರತ್ತುಗಳ ಅಧ್ಯಯನ ಬಹಳ ಅಗತ್ಯ.

ಪ್ರೀ ಪೇಮೆಂಟ್‌ನ ನಿಯಮಗಳು ಮತ್ತು ಷರತ್ತುಗಳು ಸುಲಭವಾಗಿರಬೇಕು. ಅಂತಹ ಸಾಲ ಕೊಡುವವರನ್ನು ಹುಡುಕಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ