ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಪುಟ್ಟ ದೇಶ ಯೂಕ್ರೇನ್‌ ಮೇಲೆ ದಾಳಿ ನಡೆಸಿ, ಭಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದಾರೆ. ಈವರೆಗೆ 25 ಲಕ್ಷದಷ್ಟು ಜನರು ಯೂಕ್ರೇನ್‌ ತೊರೆದು ಬೇರೆ ದೇಶ ತಲುಪಿದ್ದಾರೆ. ರಷ್ಯಾ ಹೇಳಿದ್ದಕ್ಕೆ ಒಪ್ಪದೇ ಇರುವುದರ ಪರಿಣಾಮ ಸಾವಿರಾರು ಮನೆಗಳು ಬಾಂಬ್‌ ಗಾಳಿಯನ್ನು ಎದುರಿಸಬೇಕಾಗಿ ಬಂದಿದೆ. ಇಡೀ ವಿಶ್ವ ಅದನ್ನು ಕಂಡು ಸ್ತಬ್ಧವಾಗಿದ್ದು, ತಾವೇನು ಮಾಡಬೇಕೆಂದು ತೋಚದ ಸ್ಥಿತಿ ಉಂಟಾಗಿದೆ.

ಅಮೆರಿಕಾ ಹಾಗೂ ಯೂರೋಪ್‌ ವತಿಯಿಂದ ತಮಗೇನೂ ಮಾಡಬೇಕೊ ಅದನ್ನು ಮಾಡಿದ್ದಾರೆ. ಆದರೆ ಆಟಂಬಾಂಬ್‌ ಗಳನ್ನು ಹೊಂದಿರುವ ರಷ್ಯಾದ ಮೇಲೆ ದಾಳಿ ನಡೆಸುವುದು ಭಾರಿ ಅಪಾಯಕಾರಿಯಾಗಿದೆ.

ಯೂಕ್ರೇನ್‌ ಸಂಕಷ್ಟಕ್ಕೆ ಕಾರಣವೇನೆಂದರೆ ಅವರು ಇನ್ನೊಬ್ಬರ ದೌರ್ಜನ್ಯ ಸಹಿಸಿಕೊಳ್ಳುವುದಿಲ್ಲ. ಸಾವಿರಾರು ವರ್ಷಗಳಿಂದ ಇದೇ ಅಲ್ಲಿ ನಡೆದುಕೊಂಡು ಬರುತ್ತಿದೆ. ತಮ್ಮ ಮಕ್ಕಳು, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ತಡೆಗಟ್ಟಲು ತಮ್ಮ ಪ್ರಾಣ ಕೂಡ ಕೊಡುತ್ತಾರೆ. ಆದರೆ ಈ ಬಲಿದಾನದಿಂದ ಯಾವುದೇ ಲಾಭವಾಗುವುದಿಲ್ಲ. ಏಕೆಂದರೆ ದುರ್ಬಲರನ್ನೇ ಗುಲಾಮರನ್ನಾಗಿಸಲಾಗುತ್ತದೆ. ಅದು ಸತ್ತು ಹೋಗುವವರಿಗಿಂತ ಕಠಿಣ ಸ್ಥಿತಿಯಾಗಿರುತ್ತದೆ.

ಯೂಕ್ರೇನ್‌ ನ ಅಂತ್ಯ ಹೇಗೇ ಆಗಬಹುದು, ಯೂಕ್ರೇನಿ ಹೋರಾಟಗಾರರು ಸತ್ತು ಹೋಗಬಹುದು. ಆದರೆ ಯೂಕ್ರೇನಿ ಮಹಿಳೆಯರ ತ್ಯಾಗ, ತಮ್ಮ ಮಕ್ಕಳು ಹಾಗೂ ಪತಿಯಂದಿರನ್ನು ಯುದ್ಧಕ್ಕೆ ಕಳಿಸಿಕೊಡಲು ರಾಜಿಯಾಗುವುದು ಮತ್ತು ತಮ್ಮದೇ ಮನೆಯನ್ನು ತೊರೆದು ವಿದೇಶದಲ್ಲಿ ನೆಲೆ ನಿಲ್ಲುವುದು ಇಡೀ ವಿಶ್ವವನ್ನು ಸಾಲಗಾರರನ್ನಾಗಿಸುತ್ತದೆ. ಈ ಮಹಿಳೆಯರು ವಾಸ್ತವದಲ್ಲಿ ಹೊಸ ಹಕ್ಕುಗಳ ಮೊದಲ ರಕ್ಷಕರಾಗುತ್ತಿದ್ದಾರೆ.

ಒಂದು ವೇಳೆ ಈ ಮಹಿಳೆಯರು ತಮ್ಮ ಮಕ್ಕಳು ಹಾಗೂ ಪತಿಯಂದಿರ ಎದುರು ನಿಂತು ಅವರಿಗೆ ಸರೆಂಡರ್‌ ಆಗಲು ಹೇಳಿದ್ದಿದ್ದರೆ, ಅವರ ಜೀವ ಉಳಿಯುತ್ತಿತ್ತು. ಆದರೆ ಇಡೀ ವಿಶ್ವದಲ್ಲಿ ರಷ್ಯಾದ ಬಲಿಷ್ಠ ಬಾಹುಗಳು ಚಾಚುತ್ತಿದ್ದವು. ಯೂಕ್ರೇನ್ ನಂತೆಯೇ ಪಕ್ಕದ ಮಾಲ್ಬೋವಾ, ಎಸ್ಬೋನಿಯಾ, ವ್ಯಾಟ್ವಿಯಾ, ಅಥುವೇನಿಯಾದಲ್ಲಿಯೂ ಹಾಗೆಯೇ ಆಗುತ್ತಿದೆ. ರಷ್ಯಾದ ನಿರ್ಧಾರ ಎಲ್ಲಿಯವರೆಗೆ ಸ್ಥಗಿತಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ಅಣುಬಾಂಬ್‌ ನ ಯುದ್ಧಕ್ಕೆ  ಸಿದ್ಧವಾಗುವುದಿಲ್ಲ. ಯೂಕ್ರೇನಿ ಮಹಿಳೆಯರು ತಮ್ಮ ದೃಢತೆಯಿಂದ ಕೊಟ್ಟ ಸಂದೇಶವೆಂದರೆ, ಅನ್ಯಾಯವನ್ನು ಧೈರ್ಯದಿಂದ ಎದುರಿಸಬೇಕೆನ್ನುವುದು.

ಭಾರತದಲ್ಲಿ ಕೆಲವೇ ಕೆಲವು ಜನರು ಬಹುಸಂಖ್ಯಾತ ಶೂದ್ರರು ಹಾಗೂ ದಲಿತರ ಮೇಲೆ ಭಕ್ತಿ, ಹಿಂದಿನ ಜನ್ಮದ ಕರ್ಮಗಳ ಫಲದ ಹೆಸರಿನಲ್ಲಿ ರಾಜ್ಯಭಾರ ಮಾಡುತ್ತಾ ಬಂದಿದ್ದಾರೆ. ಸಂವಿಧಾನದ ಹೊರತಾಗಿಯೂ ಮೀಸಲಾತಿಯ ಹೊರತಾಗಿಯೂ ಉನ್ನತ ವರ್ಗದ ಹಾಗೂ ಕೆಳವರ್ಗದ ಮಹಿಳೆಯರ ನಡುವೆ ಸ್ಪಷ್ಟ ವಿಭಜನೆ ಕಂಡುಬರುತ್ತಿದೆ. ಕೆಳವರ್ಗದ ಮನೆಯ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಎಸಲಾಗುತ್ತಿದೆ. ಅವರನ್ನು ದೇವದಾಸಿಯರನ್ನಾಗಿಸಲಾಗುತ್ತಿದೆ. ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ. ಏಕೆಂದರೆ ಈ ಮಹಿಳೆಯರು ತಮ್ಮ ಮಕ್ಕಳನ್ನು ಯೂಕ್ರೇನಿ ಮಹಿಳೆಯರ ಹಾಗೆ ತಮ್ಮ ಭೂಮಿ, ಸರ್ಕಾರ, ಹಕ್ಕುಗಳಿಗಾಗಿ ಹೋರಾಡಲು ಕಳಿಸಿಕೊಡುವುದಿಲ್ಲ.

ಎಲ್ಲಿಯವರೆಗೆ ಯೂಕ್ರೇನ್‌ ವಿಶಾಲ ಸೋವಿಯತ್‌ ಒಕ್ಕೂಟದ ಭಾಗವಾಗಿತ್ತೊ, ಮಾಸ್ಕೋ ಯೂಕ್ರೇನ್‌ ನಲ್ಲಿ ಆಟಂಬಾಂಬ್‌ ಗಳನ್ನು ಸಂಗ್ರಹಿಸಿಡುವುದು, ಏನಾದರೂ ಅನಾಹುತ ಸಂಭವಿಸಿದರೆ ಯೂಕ್ರೇನಿಯನ್ನರೇ ಸತ್ತು ಹೋಗಬೇಕು. ರಷ್ಯನ್ನರಿಗೆ ಏನೂ ಆಗಬಾರದು ಎಂಬ ತರ್ಕ ಇದ್ದಿರಬೇಕು. ಈಗ ಯೂಕ್ರೇನಿ ಜನತೆ ಈ ಬೇಕಾಬಿಟ್ಟಿ ನೀತಿಯನ್ನು ಮತ್ತೊಮ್ಮೆ ಅನುಸರಿಸಲು ಕೊಡುವ ಮನಸ್ಥಿತಿಯಲ್ಲಿಲ್ಲ. ಮಾಸ್ಕೋದ ಸೂತ್ರದ ಬೊಂಬೆಯಾಗಲು ಅವರಿಗೆ ಇಷ್ಟವಿಲ್ಲ. ಅದಕ್ಕಾಗಿ ಏನು ಬೇಕಾದರೂ ಬೆಲೆ ತೆರಬೇಕಾಗಿ ಬಂದರೂ ಬರಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ