ಬೇಡದ ವಸ್ತುಗಳ ಗುಲಾಮರಾಗದಿರಲಿ

ಹೊಸ ಅರ್ಥ ವ್ಯವಸ್ಥೆಯಲ್ಲಿ ಒಂದು ಭಾರಿ ಬದಲಾವಣೆ ಗೋಚರಿಸುತ್ತಿದೆ. ಅದೆಂದರೆ ಮಧ್ಯವರ್ತಿ ವ್ಯಾಪಾರಿಗಳ ಭಾರಿ ಇಳಿಕೆ. ಈಚೆಗಷ್ಟೇ ಹುಟ್ಟಿಕೊಂಡ ಹೊಸ ಕಂಪನಿಗಳನ್ನು ಸ್ಟಾರ್ಟ್‌ಅಪ್‌ಎಂದು ಹೇಳಲಾಗುತ್ತದೆ. ಅವು ವಾಸ್ತವದಲ್ಲಿ ಬೇರೆಯವರು ಉತ್ಪಾದಿಸಿದ ಉತ್ಪನ್ನಗಳನ್ನು ಗ್ರಾಹಕರ ತನಕ ಕಳುಹಿಸಿಕೊಡುವ ಕೆಲಸ ಮಾಡುತ್ತವೆ. ನಮ್ಮಲ್ಲಿ ಉತ್ಪಾದನೆಯಾಗುವುದು ಕಡಿಮೆ.

ಮೊದಲು ಈ ಕೆಲಸವನ್ನು ಅಮೆರಿಕಾದಲ್ಲಿ ವಾಲ್ ‌ಮಾರ್ಟ್‌, ಮೆಸೇಜ್‌, ಭಾರತದಲ್ಲಿ ವಿಜಯ್‌ಸೇಲ್ಸ್, ಇಂಗ್ಲೆಂಡ್‌ನಲ್ಲಿ ಹಾರ್ವರ್ಡ್ಸ್ ನಂತಹ ಕಂಪನಿಗಳು ತಮ್ಮದೇ ಆದ ಸ್ಟೋರ್‌ಮಾಡಿಕೊಂಡು ಮಾರಾಟ ಮಾಡುತ್ತಿದ್ದವು. ಈ ರೀತಿಯ ಸ್ಟಾರ್ಟ್‌ಅಪ್‌ಗಳು ಇಂಟರ್‌ನೆಟ್‌ಸೌಲಭ್ಯ ಬಳಸಿ ಕಂಪ್ಯೂಟರ್‌ಅಥವಾ ಮೊಬೈಲ್‌ನಲ್ಲಿ ಚಿತ್ರ ತೋರಿಸಿ ಇ-ಕಾಮರ್ಸ್‌ನ ಹೊಸ ಮಾರಾಟ ವಿಧಾನವನ್ನು ಆರಂಭಿಸಿವೆ. ಅದರಲ್ಲಿ ಸ್ಟೋರ್‌ಗಳು, ಭಾರೀ ಶೋರೂಮ್ ಗಳು ಹಾಗೂ ಮಾಧ್ಯಮಗಳ ಅಗತ್ಯ ಅಷ್ಟವಾಗಿ ಕಂಡುಬರುವುದಿಲ್ಲ. ಉತ್ಪಾದಕರು ಹಾಗೂ ಗ್ರಾಹಕರ ನಡುವೆ ಕೇವಲ ಸ್ಟಾರ್ಟ್‌ಅಪ್‌ಇ-ಕಾಮರ್ಸ್‌ಮಾತ್ರ ಗೋಚರಿಸುತ್ತಿದೆ.

ಈಗ ಈ ತಂತ್ರಜ್ಞಾನ ಮತ್ತು ವ್ಯಾಪಾರ ಇನ್ನೂ ಕಡಿಮೆ ಪ್ರಮಾಣದಲ್ಲಿದ್ದು, ಅವು ಬೆಳೆಯುತ್ತಿರುವ ರೀತಿ ಗಮನಿಸಿದರೆ, ಸೇವೆಗಳು ಅದರಲ್ಲಿ ಹೆಚ್ಚೆಚ್ಚು ಸೇರಿಕೊಳ್ಳುತ್ತ ಹೊರಟಿವೆ. ಟ್ಯಾಕ್ಸಿ ಸೇವೆಗಳು, ದುರಸ್ತಿ ಸೇವೆ, ಕೊರಿಯರ್‌ಸೇವೆ ಇವೇ ಆ ಸೇವೆಗಳು. ಇದರಿಂದ ವ್ಯಾಪಾರ ಮತ್ತು ಮಾರಾಟದ ವಿಧಾನವೇ ಬದಲಾಗಲಿದೆ.

ಈಗ ಈ ಹೊಸ ಇ-ಕಾಮರ್ಸ್‌ನಿಂದ ಗ್ರಾಹಕ ಎಲ್ಲಿಯೇ ಇದ್ದರೂ ಅವನಿಗೆ ಉತ್ಪಾದಕನಿಂದ ಅಥವಾ ಹಂಚಿಕೆದಾರನಿಂದ ನೇರವಾಗಿ ಆದಷ್ಟು ಬೇಗ ವಸ್ತುವನ್ನು ತಲುಪಿಸಬಹುದಾಗಿದೆ. ಇದರಲ್ಲಿ ಬರೀ ಸಾಮಗ್ರಿಗಳನ್ನಷ್ಟೇ ಅಲ್ಲ, ಸೇವೆಗಳನ್ನು ಕೂಡ ಕೊಡಿಸಬಹುದಾಗಿದೆ. ಡಾಕ್ಟರ್‌ಅಥವಾ ನರ್ಸ್‌, ಅಡುಗೆ ಮಾಡುವವರು, ಬ್ಯೂಟಿ ಎಕ್ಸ್ ಪರ್ಟ್‌, ತೆರಿಗೆ ಸಲಹೆಗಾರ ಹೀಗೆ ಏನೆಲ್ಲ ಸೇವೆಗಳು ಲಭಿಸುತ್ತವೆ. ಅಂಗಡಿಗಳು ಈಗ ಮಾರುಕಟ್ಟೆಯಿಂದ ಬದಿಗೆ ಸರಿದು ಮೊಬೈಲ್‌ನಲ್ಲಿ ಪ್ರವೇಶ ಮಾಡಿವೆ. ಖರೀದಿಯ ವಿಧಾನ ಬದಲಾಗಿದೆ.

ಇದೆಲ್ಲ ಅಮೂಲಾಗ್ರ ಬದಲಾವಣೆಯ ಒಂದು ಆರಂಭ. ಇದರಿಂದ ಮಾರುಕಟ್ಟೆಗಳು ಹೆಚ್ಚು ಕಡಿಮೆ ಮುಚ್ಚಲ್ಪಡುತ್ತವೆ. ಜನರಿಗೆ ಮನೆಯಲ್ಲಿ ಕುಳಿತುಕೊಂಡೇ ಗಳಿಸುವ ಅವಕಾಶಗಳು ಲಭಿಸುತ್ತವೆ. ಅಕ್ರಮ ಸಂಗ್ರಹ, ಲಾಭಕೋರತನ ಸಾಕಷ್ಟು ಕಡಿಮೆಯಾಗುತ್ತವೆ. ಲಕ್ಷಾಂತರ ಚಿಕ್ಕಪುಟ್ಟ ವ್ಯಾಪಾರಿಗಳು ನಿರುದ್ಯೋಗಿಗಳಾಗುತ್ತಾರೆ. ಸಾಫ್ಟ್ ವೇರ್‌ನಿರ್ವಹಣೆ ಮಾಡುವವರ ಮಟ್ಟಿಗೆ ಅವು ಸೀಮಿತವಾಗುಳಿಯುತ್ತವೆ.

ಉತ್ಪಾದಕರು ಕೆಲವೇ ಕೆಲವು ಇ-ಕಾಮರ್ಸ್‌ಕಂಪನಿಗಳ ಕಪಿಮುಷ್ಟಿಯಲ್ಲಿ ಉಳಿದುಬಿಡುತ್ತಾರೆ. ಅವರು ಅಲಿಬಾಬಾ, ಅಮೆಜಾನ್‌, ಫ್ಲಿಪ್‌ಕಾರ್ಟ್‌ಮುಂತಾದ ಕಂಪನಿಗಳು ಹೇಳಿದಂತೆ ಕೇಳಬೇಕಾಗಿ ಬರುತ್ತದೆ. ಅಂಗಡಿಕಾರನಂತೂ ಮೊಬೈಲ್‌ಸ್ಕ್ರೀನ್‌ನ ಹಿಂದೆ ಇರುತ್ತಾನೆ. ಕ್ರಮೇಣ ಉತ್ಪಾದಕರ ಹೆಸರು ಕೂಡ ಮರೆಯಾಗುತ್ತ ಹೋಗುತ್ತದೆ. ಏಕೆಂದರೆ ಇ-ಕಾಮರ್ಸ್‌ಕಂಪನಿಗಳು ತಮ್ಮದೇ ಆದ ವರ್ಚಸ್ಸಿನ ಮೇಲೆ ಉತ್ಪಾದನೆಗಳನ್ನು ಮಾಡುತ್ತವೆ ಹಾಗೂ ಹೆಚ್ಚು ಲಾಭಕರಾಗಿರುತ್ತವೆ ಅವನ್ನಷ್ಟೇ ಮಾರಾಟ ಮಾಡಲಿವೆ.

ಇದರಿಂದ ಒಳ್ಳೆಯದಾಗುತ್ತೋ, ಕೆಟ್ಟದ್ದಾಗುತ್ತೋ ಈಗಲೇ ಹೇಳುವುದು ಕಷ್ಟ. ಆದರೆ ದೈತ್ಯಾಕಾರದ ಕಂಪನಿಗಳು ಉದ್ಭವಿಸದಿರಲಿ, ಅವು ಚಿಕ್ಕಪುಟ್ಟ ಅಂಗಡಿಗಳನ್ನು ಸ್ವಾಹಾ ಮಾಡದಿರಲಿ. ಗ್ರಾಹಕರಿಗೆ ಅನಿವಾರ್ಯವಾಗಿ ಅವರ ಬಳಿಯೇ ಹೋಗಿ ಖರೀದಿಸುವಂತಹ ಸಂದರ್ಭ ಉದ್ಭವಿಸುವಂತಾಗಬಾರದು. ಗ್ರಾಹಕರು, ಉತ್ಪಾದಕರು, ಫೈನಾನ್ಸರ್‌ಗಳು, ಪ್ರಚಾರಕರು ಅಷ್ಟೇ ಏಕೆ, ತೆರಿಗೆದಾತರು ಕೂಡ ಸ್ಕ್ಕೀನ್‌ಮೇಲಿನ ಕಂಪನಿಗಳ ಗುಲಾಮರಾಗದಿರಲಿ. ಇದು ಜಾರ್ಜ್‌ಆರ್‌ಅವರ ಬಿಗ್‌ಬ್ರದರ್‌ಗಿಂತಲೂ ಹೆಚ್ಚು ಭಯಾನಕವಾಗಬಹುದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ