ದೇಶದಲ್ಲಿರುವ ಸುಮಾರು 8 ಕೋಟಿ ಮಂದಿ ಮಧುಮೇಹದಿಂದ ಬಳಲುತ್ತಿದ್ದು, ಇವರಲ್ಲಿ ಬಹುತೇಕ ಮಂದಿ ಕಾಲುಗಳಿಗೆ ಸಂಬಂಧಿಸಿದ ಮತ್ತೊಂದು ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಎಂಬುದು ವರದಿಗಳಲ್ಲಿ ಕಂಡುಬಂದಿದೆ.

ಮಧುಮೇಹ ಪಾದದ ಹುಣ್ಣು ಅಂದರೆ ಡಯಾಬಿಟಿಕ್‌ ಫುಟ್‌ ಅಲ್ಸರ್‌ (DFU) ಮಧುಮೇಹ ರೋಗಿಗಳಲ್ಲಿ 25% ರಿಂದ 34% ರವರೆಗೆ ಒಂದು ಹಂತದಲ್ಲಿ ಪರಿಣಾಮ ಬೀರುತ್ತದೆ. ಆ ಪ್ರಕರಣಗಳಲ್ಲಿ ಅರ್ಧದಷ್ಟು ಗಂಭೀರ ಸೋಂಕಿಗೆ ತುತ್ತಾಗುತ್ತದೆ. ಈ ರೀತಿಯ ಸಮಸ್ಯೆಗಳಿಗೆ ಹೈಪರ್‌ಬೇರಿಕ್ ಆಮ್ಲಜನಕ ಚಿಕಿತ್ಸೆ (HBOT) ಪರಿಣಾಮಕಾರಿಯಾಗಿದ್ದು, ರೋಗಿಗಳಿಗೆ ಸಾಕಷ್ಟು ಸಮಾಧಾನ ಒದಗಿಸುತ್ತದೆ.

ಇಂದಿರಾನಗರದಲ್ಲಿರುವ ಕರ್ನಾಟಕ ಎಂಡೊಕ್ರೈನಾಲಜಿ ಮತ್ತು ಸಂಶೋಧನಾ ಸಂಸ್ಥೆಯಲ್ಲಿ (KIER) ಅಂತಹ ಚಿಕಿತ್ಸೆಯನ್ನು ಆರಂಭಿಸಲಾಗಿದೆ. "HBOT ಕೇವಲ ವೈದ್ಯಕೀಯ ಚಿಕಿತ್ಸೆಯಲ್ಲ. ಇದು ಸಮಾಧಾನಕರ ಜೀವನೋಪಾಯಕ್ಕೆ ಅವಕಾಶ ಕಲ್ಪಿಸುವುದಾಗಿದೆ.ಈ ಚಿಕಿತ್ಸಾ ಪದ್ಧತಿಯನ್ನು ಉದ್ಘಾಟಿಸಿ ಮಾತನಾಡಿದ ವೈದ್ಯಕೀಯ ಶಿಕ್ಷಣ, ಸಚಿವ ಡಾ. ಶರಣಪ್ರಕಾಶ್ ಆರ್. ಪಾಟೀಲ್ ಈಗ ಮಧುಮೇಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ನಾವು ಸಜ್ಜಾಗಿದ್ದೇವೆ ಎಂದಿದ್ದಾರೆ.

ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ಜಗತ್ತಿನ ದೇಶಗಳ ಪೈಕಿ ಭಾರತ ಕೂಡ ಒಂದು. ಪ್ರತಿ 7 ವಯಸ್ಕರಲ್ಲಿ ಒಬ್ಬರಿಗೆ ಮಧುಮೇಹ ಇದೆ. ಜೊತೆಗೆ ಮಧುಮೇಹ ಪಾದದ ಕಾಯಿಲೆಯು ಇರುವುದು ಸಮಸ್ಯೆಯನ್ನು ಹೆಚ್ಚಿಸಿದೆ. ದೈನಂದಿನ ಸಮಯದಲ್ಲಿ ಬರಿಗಾಲಿನಲ್ಲಿ ನಡೆಯುವುದು ಇವರಿಗೆ ದುಸ್ತರವಾಗಿದೆ. ಇದರಿಂದ ಆರ್ಥಿಕ ಹಾನಿಯೂ ಆಗುತ್ತಿದೆ. ಮಧುಮೇಹ ಪಾದದ ರೋಗನಿರ್ಣಯದಿಂದ ಗುಣಪಡಿಸುವವರೆಗೆ ಸರಾಸರಿ ₹1.5 ಲಕ್ಷ ವೆಚ್ಚವಾಗುತ್ತದೆ.

ಈ ಕುರಿತು ಮಾತನಾಡಿದ ಕೆಐಇಆರ್‌ ನಿರ್ದೇಶಕ ಡಾ. ರವಿ, ಮಧುಮೇಹ ಪಾದದ ಗಾಯದ ರೋಗಿಗಳಿಗೆ ಹೆಚ್ಚಿನ ಸಾಂದ್ರತೆಯ ಆಮ್ಲಜನಕವನ್ನು ನೀಡುವ ಮೂಲಕ ಇದನ್ನು ಗುಣಪಡಿಸಬಹುದು. ಈ ಚಿಕಿತ್ಸೆಯು ಸೋಂಕಿನ ವಿರುದ್ಧ ಹೋರಾಡುತ್ತದೆ ಅಥವಾ ಕತ್ತರಿಸಬಹುದಾದ ಅಂಗಗಳನ್ನು ಉಳಿಸಲು ನಿರ್ಣಾಯಕವಾಗಿ ಸಹಾಯ ಮಾಡುತ್ತದೆ" ಎಂದು ವಿವರಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ