ಕಾಲ್ಪನಿಕ ದೇವರ ಹೆಸರಲ್ಲಿ ಭಯ ಹುಟ್ಟಿಸಿ, ಧರ್ಮದ ಗುತ್ತಿಗೆದಾರರು ಯಾವ ತರಹ ನಮ್ಮ ಸಮಾಜ ಹಂಚಿ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ ಎಂಬ ವಿವರ ನಿಮಗೆ ಗೊತ್ತೇ.....?

ಈ ಸಮಾಜದಲ್ಲಿನ ಪ್ರತಿಯೊಬ್ಬ ವ್ಯಕ್ತಿಯ ಮನದಲ್ಲಿ ಭಯ, ದ್ವೇಷದ ವಿಷಬೀಜ ಬಿತ್ತಿಬಿಟ್ಟರೆ, ಅವರನ್ನು ಸುಲಭವಾಗಿ ಸಂಘಟಿತರನ್ನಾಗಿಸಬಹುದು. ಇದರ ನಮೂನೆಯನ್ನು ನಾವು ಎಷ್ಟೋ ವರ್ಷಗಳಿಂದ ನೋಡುತ್ತಿದ್ದೇವೆ. ದ್ವೇಷದ ದಳ್ಳುರಿ ಹೆಚ್ಚಿಸಲು ಧರ್ಮಕ್ಕಿಂತ ಮತ್ತೊಂದು ಅಗ್ಗದ, ಸುಲಭದ ದಾರಿ ಇಲ್ಲ. ಇದನ್ನು ಸನಾತನ ಕಾಲದಿಂದಲೂ ಅಧಿಕಾರ ವರ್ಗದವರು, ಧರ್ಮಗುರುಗಳು ಧಾರಾಳ ಬಳಸುತ್ತಾ ಬಂದಿದ್ದಾರೆ.

ಚುನಾಣೆಯಲ್ಲಿ ತಮ್ಮ ಗೆಲುವಿಗಾಗಿ ರಾಜಕೀಯ ಮಂದಿ ಧರ್ಮವನ್ನು ಮಹಾ ವಿಷವಾಗಿ ಬಳಸಿಕೊಳ್ಳುತ್ತಾರೆ. ಬಿಜೆಪಿಯನ್ನು ಗಮನಿಸಿ ಕಾಂಗ್ರೆಸ್‌, ಸಮಾಜವಾದಿ, ತೃಣಮೂಲ ಕಾಂಗ್ರೆಸ್‌, ಜೆಡಿಎಸ್‌, ಆಪ್‌ ಮೊದಲಾದ ಪಕ್ಷಗಳೆಲ್ಲ ಭಯಭೀತ ಜನರತ್ತ ಸಹಾನುಭೂತಿ ತೋರಿಸುವ ನೆಪದಲ್ಲಿ, ಎಲ್ಲರ ವೋಟ್‌ ತಮ್ಮ ಪಾರ್ಟಿಗೇ ಸಿಗುವಂತೆ ಪ್ರಯಾಸಪಡುತ್ತವೆ.

ಮುಸಲ್ಮಾರನ್ನು ದೇಶದ್ರೋಹಿಗಳೆಂಬಂತೆ ಬಿಂಬಿಸುತ್ತಾ ಹಿಂದೂಗಳ ವೋಟ್‌ ಗಿಟ್ಟಿಸಲು ಯತ್ನಿಸುತ್ತಾರೆ. ಅವರ ಮುಂದೆ ಇವರನ್ನು ತೆಗಳುತ್ತಾ, ಹೌದಪ್ಪನ ಚಾವಡಿಯಲ್ಲಿ ಹೌದು, ಇಲ್ಲಪ್ಪನ ಛಾವಡಿಯಲ್ಲಿ ಇಲ್ಲ ಎನ್ನುತ್ತಾ ಎಲ್ಲಾ ವೋಟ್‌ ಕಬಳಿಸಲು ಯತ್ನಿಸುತ್ತಾರೆ. ಜನರ ಅಭಿವೃದ್ಧಿ, ಬಡವರ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಯಾರಿಗೂ ಪುರಸತ್ತಿಲ್ಲ. ಎಲ್ಲಾ ಪಕ್ಷಗಳೂ `ಹೇಗಾದರೂ ಜನರನ್ನು ತುಳಿದು ಹಾಕು, ಅಧಿಕಾರ ಗಿಟ್ಟಿಸು' ಎಂಬ ಸಿದ್ಧಾಂತಕ್ಕೆ ಅಂಟಿಕೊಂಡಿವೆ.

ಲೋಕಸಭೆ, ರಾಜ್ಯಸಭೆಗಳಲ್ಲಿ ನಡೆಯುವ ಚರ್ಚೆಗಳಿಂದ ಸಾಮಾನ್ಯ ಜನತೆಗೆ ತಿಳಿದುಬರುವ ವಿಚಾರ ಎಂದರೆ, ಧರ್ಮದ ಹೆಸರಿನಲ್ಲಿ ಹೇಗೆ ತಮ್ಮ ಅಧಿಕಾರ ಉಳಿಸಿಕೊಳ್ಳುವುದು, ಧರ್ಮ ಎಂಬ ಅಸ್ತ್ರ ಉಪಯೋಗಿಸಿ ಹೇಗೆ ಅಧಿಕಾರ ಕಿತ್ತುಕೊಳ್ಳುವುದು ಎಂಬುದೇ ಪ್ರಧಾನ ವಿಷಯ. ಯಾವ ಪಕ್ಷಕ್ಕೂ ಹಿಂದೂ ಮುಸ್ಮಾನರು ಸೋದರವಾತ್ಸಲ್ಯ ಬೆಳೆಸಿಕೊಳ್ಳಲಿ ಎಂಬ ಕಾಳಜಿ ಕಿಂಚಿತ್ತೂ ಇಲ್ಲ!

ಧರ್ಮದ ಹೆಸರಲ್ಲಿ ವಿಭಜನೆ

ರಾಜಕೀಯ ನೇತಾರರು, ಧರ್ಮಗುರುಗಳ ಸಂಪಾದನೆ ಇರುವುದೇ ಧರ್ಮವನ್ನು ಮಾರಕಾಸ್ತ್ರವಾಗಿ ಪ್ರಯೋಗಿಸಿ ಸಾಮಾನ್ಯ ಜನತೆಯನ್ನು ಕುರಿಗಳನ್ನಾಗಿಸುವುದರಲ್ಲಿ. ಅವರನ್ನು ಸದಾ ವಿಭಜಿಸುತ್ತಾ ಒಗ್ಗಟ್ಟಾಗಿರಲು ಬಿಡದೆ ಬೇರೆ ಬೇರೆ ಆಗಿಸುತ್ತಾರೆ. ಸನಾತನ ಕಾಲದಿಂದಲೂ ಇದು ಹೀಗೆ ನಡೆಯುತ್ತಾ ಬಂದಿದೆ. ಆಂಗ್ಲರು ಹಿಂದೆ ನಮ್ಮನ್ನು ದಾಸ್ಯದಲ್ಲಿ ಬಂಧಿಸಿಡಲು ಪಾಲಿಸುತ್ತಿದ್ದ `ಡಿವೈಡ್‌ರೂಲ್‌' ಮನೋಧರ್ಮವನ್ನೇ ಇಂದಿನ ರಾಜಕೀಯ ಪಕ್ಷಗಳು ಅಧಿಕಾರ ದಾಹಕ್ಕಾಗಿ ಬಳಸಿಕೊಳ್ಳುತ್ತಿವೆ. ಧರ್ಮ, ಜಾತಿ, ಕೋಮುಗಲಭೆ ಎಬ್ಬಿಸಿ ಸುಲಭವಾಗಿ ಜನರನ್ನು ವಿಭಜಿಸಬಹುದಾಗಿದೆ.

ಇಡೀ ಕೋಮನ್ನು ಸಂಘಟಿತರನ್ನಾಗಿಸಲು ಸಹ ಈ ಧರ್ಮರೂಪಿ ವಿಷವನ್ನೇ ಬಳಸುತ್ತಾರೆ. ಪಾಕಿಸ್ತಾನ, ಆಫ್ಗಾನಿಸ್ತಾನಗಳು ಈ ಧರ್ಮ ವಿಷದ ಸಹಾಯದಿಂದಲೇ ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಪಶ್ಚಿಮ ಏಷ್ಯಾದ ಎಲ್ಲಾ ಅಧಿಕಾರಸ್ಥ ಧುರೀಣರೂ ಇಂಥ ಮಾರಕಾಸ್ತ್ರ ಬಳಸಿಕೊಂಡೇ ತಮ್ಮ ಅಧಿಕಾರ ಸದಾ ಉಳಿಯುವಂತೆ ಮಾಡುತ್ತಿದ್ದಾರೆ.

ಧರ್ಮದ ಹೆಸರಿನಲ್ಲಿ ಲಕ್ಷಾಂತರ ಮಂದಿ  ಅಮಾಯಕ ಮುಗ್ಧರನ್ನು ಜೇಲಿಗೆ ತುಂಬಿಸಿ, ನಿಸ್ಸಹಾಯಕರ ಮೇಲೆ ಗೋಲಿಬಾರು ನಡೆಸಿ, ಅದನ್ನು ಪುಣ್ಯಕಾರ್ಯ ಎಂದೇ ಬಿಂಬಿಸುತ್ತಾರೆ. ಸಾಮಾಜಿಕ ಕೆಟ್ಟ ಕಾರ್ಯಗಳನ್ನೂ ಘನಕಾರ್ಯವೆಂದೇ ಆದರ್ಶವಾಗಿಸಿ, ಸನ್ಮಾನ ಮಾಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ