ಚಿಕ್ಕಮಗಳೂರಿನ ಮೋಟಾರ್ ಸ್ಪೋರ್ಟ್ಸ್ ಸಮುದಾಯವು “ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ 2025”ಗಾಗಿ ಸಜ್ಜಾಗುತ್ತಿದೆ. ಮೇ 3 ಮತ್ತು 4 ರಂದು ಕುರ್ವಂಗಿ ಗ್ರಾಮದಲ್ಲಿನ ಸಂಗನಿಪುರ ರಸ್ತೆ ಹತ್ತಿರ ಈ ಕ್ರೀಡಾ ಉತ್ಸವ ನಡೆಯಲಿದೆ.

ಜೆಕೆ ಟೈರ್ ಮೋಟಾರ್ಸ್ಪೋರ್ಟ್ ಸಹಯೋಗದಲ್ಲಿ ಚಿಕ್ಕಮಗಳೂರು ಮೋಟಾರ್ ಸ್ಪೋರ್ಟ್ಸ್ ಕ್ಲಬ್ (MSCC) ಆಯೋಜಿಸಿರುವ ಈ ವಾರಾಂತ್ಯದ ಈವೆಂಟ್ ಆಕ್ಟೇನ್ ಪಿಟ್ಸ್ FMSCI ಇಂಡಿಯನ್ ನ್ಯಾಷನಲ್ ಆಟೋಕ್ರಾಸ್ ಚಾಂಪಿಯನ್‌ಶಿಪ್ (INAC) 2025 ರ ಪ್ರಮುಖ ಅರ್ಹತಾ ಸುತ್ತುಗಳಲ್ಲಿ ಒಂದಾಗಲಿದ್ದು, ವಿವಿಧ ಭಾಗಗಳಿಂದ ಹಲವಾರು ಚಾಲಕರು ಆಗಮಿಸಲಿದ್ದಾರೆ.ಈ ಬಾರಿ ನಡೆಯುವ ಸ್ಪರ್ಧೆಗಳಲ್ಲಿ 100ಕ್ಕಿಂತ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ಸಾಧ್ಯತೆಗಳಿದ್ದು, ಇದರಲ್ಲಿ  INAC2/INAC3 ಓಪನ್ ವಿಭಾಗದಲ್ಲಿ ಮಹಿಳಾ ವರ್ಗವು ಕೂಡ ಇರಲಿದೆ. ಎಲ್ಲಾ ಸ್ಪರ್ಧೆಗಳು 2.2 ಕಿಲೋಮೀಟರ್ ಉದ್ದದ ಸಂಪೂರ್ಣ ಮಣ್ಣಿನ ಟ್ರ್ಯಾಕ್‌ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಲೊಕೇಶ್ ಗೌಡ ಅವರ ಆಕ್ಟೇನ್ ಪಿಟ್ಸ್ ಸಂಸ್ಥೆ ಪ್ರಚಾರ ಮಾಡುತ್ತಿದೆ.

7 ಲಕ್ಷಕ್ಕೂ ಹೆಚ್ಚು ಬಹುಮಾನ ಘೋಷಿಸಿರುವ ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ 2025, ಈವರೆಗೆ ನಡೆದಿರುವ ಎಲ್ಲಾ INAC ಅರ್ಹತಾ ಸುತ್ತುಗಳಲ್ಲಿ ಅತಿದೊಡ್ಡ ಬಹುಮಾನ ಹಣ ಹೊಂದಿರುವ ಸ್ಪರ್ಧೆ ಇದಾಗಿದೆ. ಈ ಬಾರಿ ದಿನದ ವೇಗ ಚಾಲಕರಿಗೆ “ಗ್ರಾವೆಲ್ ಫೆಸ್ಟ್ ಕಿಂಗ್” ಎಂಬ ಗೌರವ ಕಿರೀಟವೂ ನೀಡಲಾಗುತ್ತದೆ.

ಅಂತರರಾಷ್ಟ್ರೀಯ ಮೋಟಾರ್‌ಸ್ಪೋರ್ಟ್ಸ್ ಮಾನದಂಡಗಳಿಗೆ ತಕ್ಕಂತೆ, ಈ ವರ್ಷದ ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್ 2025 ಸ್ಪರ್ಧಾಕಾರರಿಗಾಗಿ ಹಲವಾರು ಅನುಕೂಲತೆಗಳನ್ನು ಒದಗಿಸುತ್ತಿದೆ. ಈ ವರ್ಷದ ಈವೆಂಟ್ ಸ್ಪರ್ಧಿಗಳಿಗೆ ಕ್ಯಾರವಾನ್ ಸೌಲಭ್ಯಗಳು ಅತ್ಯುತ್ತಮ ವಸತಿ ಸೌಕರ್ಯ ಮತ್ತು ಸ್ಪರ್ಧಿಗಳು, ಟ್ಯೂನರ್‌ಗಳು ಮತ್ತು ಅಭಿಮಾನಿಗಳಿಗೆ ಊಟ, ತಿಂಡಿಗಳು ಸೇರಿದಂತೆ ಸಮಗ್ರ ಆತಿಥ್ಯವನ್ನು ನೀಡುತ್ತದೆ.

ಭಾರತದ ಮೋಟಾರ್ ಸ್ಪೋರ್ಟ್ಸ್ ಕ್ಲಬ್‌ಗಳ ಫೆಡರೇಶನ್ (FMSCI) ಮಾನ್ಯತೆ ನೀಡಿರುವ ಮತ್ತು 2025ರ FIA ಅಂತರರಾಷ್ಟ್ರೀಯ ಕ್ರೀಡಾ ನಿಯಮಾವಳಿ ಹಾಗೂ ಸಂಬಂಧಿತ FMSCI ನಿಯಮಗಳ ಅಡಿಯಲ್ಲಿ ನಡೆಸಲಾಗುತ್ತಿರುವ ಚಿಕ್ಕಮಗಳೂರು ಗ್ರಾವೆಲ್ ಫೆಸ್ಟ್, INAC ಕಪ್ ಪರಿಕ್ರಮದ ಭಾಗವಾಗಿರುವ ಏಳು ಅರ್ಹತಾ ಸುತ್ತುಗಳಲ್ಲಿ ಒಂದಾಗಿದೆ.

ಗ್ರ್ಯಾಂಡ್ ಫೈನಲ್‌ ಗೆ ಅರ್ಹರಾಗಲು ಪ್ರತಿ ಚಾಲಕರೂ ಕನಿಷ್ಠ ಎರಡು ಸುತ್ತುಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಪ್ರತಿ ವರ್ಗದಲ್ಲಿಯು ಮೊದಲ ಐದು ಸ್ಥಾನಗಳನ್ನು ಗಳಿಸಿದ ಚಾಲಕರಿಗೆ ಮಾತ್ರ ಅಂತಿಮ ಚಾಂಪಿಯನ್‌ಷಿಪ್‌ಗೆ ಪ್ರವೇಶ ದೊರೆಯುತ್ತದೆ, ಅಲ್ಲಿ ಭಾರತದಲ್ಲಿನ ಅತ್ಯುತ್ತಮ ಆಟೋಕ್ರಾಸ್ ಚಾಲಕರಿಗೆ ಕಿರೀಟ ನೀಡಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ