ನಮ್ಮ ದೇಶದಲ್ಲಿ  ಎರಡು ಸುಳ್ಳುಗಳು ಬಹಳ ಪ್ರಚಲಿತದಲ್ಲಿದೆ. ಒಂದು ದೇಶ ಹಾಳಾಗಿದ್ದೇ ಬ್ರಾಹ್ಮಣರಿಂದ ಎನ್ನುವುದಾದರೇ, ಮತ್ತೊಂದು ಮುಸಲ್ಮಾನರು ಈ ದೇಶದ ಅಲ್ಪಸಂಖ್ಯಾತರರು.  ನೈಜವಾದ ಇತಿಹಾಸದ ಅರಿವಿರುವವರಿಗೆ ಇವರೆಡೂ ತದ್ವಿರುದ್ಧ  ಎಂಬುದರ ಅರಿವಾಗುತ್ತದೆ. 10-12ನೇ ಶತಮಾನದ ವರೆಗೂ ನಿರಂತರವಾಗಿ ಅಖಂಡ  ಭಾರತದ ಮೇಲೆ ಧಾಳಿನಡೆಸಿದ ಮುಸಲ್ಮಾನರು ಅಂತಿಮವಾಗಿ  13ನೇ ಶತಮಾನದ ಹೊತ್ತಿಗೆ ಭಾರತದ ಬಹುತೇಕ ಭಾಗಗಳನ್ನು ಅಕ್ರಮಣ ಮಾಡಿಕೊಂಡ ಪರಿಣಾಮವಾಗಿಯೇ ಭಾರತ ದೇಶದ ಸಂಸ್ಕಾರ ಮತ್ತು ಸಂಸ್ಕೃತಿಗಳು ಹಾಳಾಗಿದ್ದಲ್ಲದೇ ಬ್ರಾಹ್ಮಣರು ಅಲ್ಪಸಂಖ್ಯಾತರಾಗಿ ಹೋದರು.

ಇನ್ನು ಎಲ್ಲರಿಗೂ ತಿಳಿದಿರುವಂತೆ  ಚ್ಬ್ರಾಹ್ಮಣ ತಂದೆ ತಾಯಿಯರ ಹೊಟ್ಟೆಯಲ್ಲಿ ಹುಟ್ಟಿದಾಕ್ಷಣ ಆತ ಬ್ರಾಹ್ಮಣ ಎನಿಸಿಕೊಳ್ಳುವುದಿಲ್ಲ. ಆ ಬಾಲಕನಿಗೆ ಸೂಕ್ತ ಸಮಯದಲ್ಲಿ ಬ್ರಹ್ಮೋಪದೇಶ ನಡೆದು ಯಜ್ಞೋಪವೀತ ಧರಿಸಿ ತಂದೆಯಿಂದ ಗಾಯತ್ರಿ ಮಂತ್ರ ಉಪದೇಶವಾದ ನಂತರ ಪ್ರತಿನಿತ್ಯವೂ ತಪ್ಪದೇ ಗಾಯತ್ರೀ ಅನುಷ್ಠಾನ ಮಾಡಿದಾಗಲೇ ಆತ ನಿಜವಾದ ಬ್ರಾಹ್ಮಣ ಎನಿಸಿಕೊಳ್ಳುತ್ತಾನೆ. ಹಾಗಾಗಿಯೇ ಬ್ರಾಹ್ಮಣರನ್ನು ದ್ವಿಜ ಎನ್ನುತ್ತಾರೆ. ಹಾಗೆ ಒಬ್ಬ ಬ್ರಾಹ್ಮಣನ ಧರಿಸುವ ಜನಿವಾರದ ತೂಕ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದಕ್ಕೆ ಈ ಪ್ರಸಂಗವೇ ತಕ್ಕ ಉದಾಹರಣೆ ಆಗಬಲ್ಲದು.  ಅದೊಂದು ರಾಜ್ಯದಲ್ಲಿದ್ದ ಬ್ರಾಹ್ಮಣ ಕವಿಯೊಬ್ಬ ಶ್ರೇಷ್ಠವಾದ ಕಾವ್ಯವನ್ನು ರಚಿಸಿ ಅದನ್ನು ತನ್ನ ರಾಜನಿಗೆ ಸಮರ್ಪಣೆ ಮಾಡಿದ. ದುರಾದೃಷ್ಟವಷಾತ್ ಆ ರಾಜನಿಗೆ ಕಾವ್ಯ, ಕವಿತೆ, ಕಥೆಗಳ ಬಗ್ಗೆ ನಿರಾಸಕ್ತಿಯಿದ್ದ ಹೊಂದಿದ್ದ ಕಾರಣ ಆ ಕವಿಯನ್ನು ವಿನಾಕಾರಣ ಅವಹೇಳನ ಮಾಡಿದ್ದಲ್ಲದೇ, ಮಾತಿನ ಭರದಲ್ಲಿ, ಈ ನಿನ್ನ ಕೃತಿಗೆ ನಿನ್ನೆತ್ತರದಷ್ಟು ಚಿನ್ನದ ನಾಣ್ಯ ಕೊಡಬೇಕೇ? ಎಂದು ವ್ಯಂಗ್ಯವಾಡಿದರೂ ಕೋಪಗೊಳ್ಳದ ಆ ಬ್ರಾಹ್ಮಣ ಕವಿ ಅಷ್ಟೆಲ್ಲಾ ಬೇಡಾ ಪ್ರಭು. ಕೆಲ ಸಮಯದ ಹಿಂದಷ್ಟೇ ಬದಲಾಯಿಸಿದ ನನ್ನ ಹಳೆಯ ಜನಿವಾರದ ತೂಕದಷ್ಟು ಬಂಗಾರವನ್ನು ಕೊಟ್ಟರೆ ಸಾಕು ಎಂದಾಗ, ಅರೇ! ಕೇವಲ ಒಂದು ಜನಿವಾರದ ತೂಕವೇ? ಎಂದು ತುಚ್ಛವಾಗಿ ನೋಡಿದ ಆ ರಾಜ, ತನ್ನ ಮಂತ್ರಿಯನ್ನು ಕರೆದು, ಈ ಬಡ ಬ್ರಾಹ್ಮಣನಿಗೆ ಒಂದೆರಡು ಚಿನ್ನದ ನಾಣ್ಯಗಳನ್ನು ಕೊಟ್ಟು ಕಳುಹಿಸಿ ಎಂದು ಆಜ್ಞಾಪಿಸುತ್ತಾರೆ.

ರಾಜನ ಆಜ್ಞೆಯನ್ನು ಕೇಳಿದ ಆ ಕವಿಗಳು ಅರೇ ಪ್ರಭೂ ನನಗೆ ಆಷ್ಟೆಲ್ಲಾ ಬೇಡ, ಕೇವಲ ನನ್ನ ಯಜ್ಞೋಪವೀತ ತೂಗುವಷ್ಟು ಕೊಟ್ಟರೆ ಸಾಕು ಎಂದು ಮತ್ತೊಮ್ಮೆ ಕೇಳಿಕೊಂಡಾಗ, ತುಸು ಕೋಪಗೊಂಡ ರಾಜ, ಸರಿ ಸರಿ ನಿನ್ನಾಸೆಯಯಂತೆಯೇ ನಡೆಯಲಿ ಎಂದು ತಕ್ಕಡಿಯೊಂದನ್ನು ತರಿಸಿ ಅದರ ಒಂದು ತಟ್ಟೆಯಲ್ಲಿ ಆ ಬ್ರಾಹ್ಮಣನ ಹಳೇ ಜನಿವಾರವನ್ನಿಟ್ಟು ಮತ್ತೊಂದು ತಟ್ಟೆಯಲ್ಲಿ ಎರಡು ಬಂಗಾರದ ನಾಣ್ಯವನ್ನಿಟ್ಟರೂ, ತಕ್ಕಡಿ ಒಂದಿಷ್ಟೂ ಅಲುಗದೇ ಹೋದದ್ದನ್ನು ಗಮನಿಸಿ ಆಶ್ಚರ್ಯ ಚಕಿತರಾಗಿ ಒಂದೊಂದೇ ನಾಣ್ಯಗಳನ್ನು ಹಾಕುತ್ತಲೇ ಹೋಗಿ ಕಡೆಗೆ ತನ್ನ ಖಜಾನೆಯಲ್ಲಿದ್ದ ಅಷ್ಟೂ ನಾಣ್ಯಗಳನ್ನು ಹಾಕಿದರೂ ಸಹ ತಕ್ಕಡಿ ಅಲಗಾಡದೇ ಹೋದಾಗ, ತನ್ನ ರಾಜ್ಯದ ಸಂಪತ್ತನ್ನೆಲ್ಲ ತಂದು ಸುರಿದರೂ ಆ ತಕ್ಕಡಿ ಸರಿದೂಗದೇ ಹೋದಾಗ ದಿಗ್ಭ್ರಮೆಗೊಳಗಾಗುತ್ತಾನೆ. ಆಗ ಆ ಬ್ರಾಹ್ಮಣ ಕವಿಗಳು  ಬಹಳ ಶಾಂತಚಿತ್ತದಿಂದ ಹೇ ರಾಜಾ, ಪ್ರತೀ ದಿನವೂ ಇದೇ ಜನಿವಾರದ ಬ್ರಹ್ಮ ಗಂಟುಗಳನ್ನು ಹಿಡಿದು ಗಾಯತ್ರಿ ಮಂತ್ರ ಜಪಿಸಿರುವ ಕಾರಣ ಅದರ ತೂಕಕ್ಕೆ ಬೆಲೆ ಕಟ್ಟಲಾಗದು. ಹಾಗಾಗಿ  ಎಂದಿಗೂ ಬ್ರಾಹ್ಮಣರ ಜುಟ್ಟು ಮತ್ತು ಜನಿವಾರವನ್ನು ತಿರಸ್ಕಾರ ಭಾವದಿಂದ ನೋಡಬೇಡಿ. ಬ್ರಾಹ್ಮಣರ ಬಳಿ ಆರ್ಥಿಕ ಸಂಪತ್ತಿಲ್ಲದೇ ಬಡವರಾಗಿರ ಬಹುದು. ಆದರೇ ತಪಃ ಶಕ್ತಿಯಿಂದ ನಾವೆಂದೂ ಬಡವರಲ್ಲ. ಬದಲಾಗಿ ನಾವು ಬೌದ್ಧಿಕವಾಗಿ ಶ್ರೀಮಂತರು. ಹಾಗಾಗಿ ನಿನ್ನ ಒಂದು ಬಿಡಿಕಾಸು ನನಗೆ ಬೇಕಿಲ್ಲ ಎಂದು ಹೇಳುತ್ತಾ ಸ್ವಾಭಿಮಾನಿಯಾಗಿ ಆಲ್ಲಿಂದ ಹೊರಟು ಹೋಗುತ್ತಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ