ಕರಾವಳಿ ಕರ್ನಾಟಕದ ಕಂಬಳವೆಂದರೆ ಕೇವಲ ಕೋಣಗಳ ಓಟವಲ್ಲ. ಅದು ಕರಾವಳಿಯ ಕೃಷಿ ಸಂಸ್ಕೃತಿ, ಭೂತಾರಾಧನೆ ಮತ್ತು ದೈವಾರಾಧನೆಯೊಂದಿಗೆ ಬೆಸೆದುಕೊಂಡಿರುವ ಸ್ಥಳೀಯ ಸಮುದಾಯಗಳ ಬದುಕು, ನಂಬಿಕೆ, ಸಂಪ್ರದಾಯ ಹಾಗೂ ಜನಪದ ಸೊಗಡಿನ ಪ್ರತೀಕ. ತಲೆಮಾರುಗಳಿಂದ ಬೆಳೆದುಬಂದ ಈ ಪರಂಪರೆಯನ್ನು ಮೈಸೂರು ದಸರಾ ವೇದಿಕೆಗೆ ತರುವ ಪ್ರಸ್ತಾಪವನ್ನು ಪರಿಶೀಲಿಸುವಾಗ, ಅದನ್ನು ಕೇವಲ ಮನರಂಜನೆಯ ಕಾರ್ಯಕ್ರಮವೆಂದು ನೋಡದೆ ಅದರ ಸಾಂಸ್ಕೃತಿಕ ಹಿನ್ನೆಲೆಯನ್ನೂ ಗೌರವಿಸಬೇಕು.

ಮೈಸೂರು ದಸರಾ ತನ್ನದೇ ಆದ ರಾಜಪರಂಪರೆ, ಚಾಮುಂಡೇಶ್ವರಿ ಆರಾಧನೆ, ರತ್ನಸಿಂಹಾಸನದ ಖಾಸಗಿ ದರ್ಬಾರ್, ಜಂಬೂ ಸವಾರಿ ಮತ್ತು ಕರ್ನಾಟಕದ ವೈವಿಧ್ಯಮಯ ಕಲೆಗಳ ಸಮಾಗಮದಿಂದ ವಿಶಿಷ್ಟವಾಗಿದೆ. ಇಂತಹ ವೇದಿಕೆಯಲ್ಲಿ ಕಂಬಳಕ್ಕೆ ಅವಕಾಶ ನೀಡುವುದು ಕರಾವಳಿಯ ಸಂಸ್ಕೃತಿಯನ್ನು ರಾಜ್ಯದ ಇತರ ಭಾಗಗಳಿಗೆ ಪರಿಚಯಿಸುವ ಪ್ರಯತ್ನವಾಗಬಹುದು. ಆದರೆ ಈ ಪ್ರಯತ್ನದ ಉದ್ದೇಶ, ಆಯೋಜನೆಯ ವಿಧಾನ ಮತ್ತು ಸ್ಥಳೀಯ ಸಂಪ್ರದಾಯಕ್ಕೆ ನೀಡುವ ಗೌರವವೇ ಅದರ ಔಚಿತ್ಯವನ್ನು ನಿರ್ಧರಿಸಬೇಕು.

ಕಂಬಳವನ್ನು ಮೈಸೂರಿಗೆ ತರುವ ಔಚಿತ್ಯವೇನು?

Dasara-Kambala: ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ಸಂಸದ ಯದುವೀರ್ ಬಹಿರಂಗ ವಿರೋಧ? ಸಭೆಯಲ್ಲಿ ಹೇಳಿದ್ದೇನು? | - News18 Kannada

ಕಂಬಳವನ್ನು ಮೈಸೂರು ದಸರಾದಲ್ಲಿ ಆಯೋಜಿಸುವುದಕ್ಕೆ ಬೆಂಬಲಿಗರು ಹೇಳುವ ಪ್ರಮುಖ ಕಾರಣವೆಂದರೆ, ಕರಾವಳಿಯ ಈ ವಿಶಿಷ್ಟ ಕ್ರೀಡೆಯನ್ನು ರಾಜ್ಯದ ಇತರ ಭಾಗಗಳ ಜನರಿಗೆ ಪರಿಚಯಿಸುವುದು. ಹೊಸ ಪ್ರೇಕ್ಷಕರು, ಪ್ರವಾಸಿಗರು ಮತ್ತು ಯುವಜನರಿಗೆ ಕಂಬಳದ ಪರಿಚಯವಾಗುವುದು ಅದರ ಪ್ರಚಾರಕ್ಕೂ ನೆರವಾಗಬಹುದು. ಕಂಬಳವು ಕರಾವಳಿಗೆ ಮಾತ್ರ ಸೀಮಿತವಾಗಿರಬೇಕೇ ಎಂಬ ಪ್ರಶ್ನೆಯನ್ನೂ ಅವರು ಮುಂದಿಡುತ್ತಾರೆ. ಆದರೆ, ಒಂದು ಜನಪದ ಆಚರಣೆಯನ್ನು ಅದರ ಮೂಲ ಪರಿಸರದಿಂದ ಬೇರ್ಪಡಿಸಿ ಬೇರೆಡೆ ಪ್ರದರ್ಶಿಸುವಾಗ ಕೆಲವು ಪ್ರಶ್ನೆಗಳು ಸಹಜವಾಗಿ ಎದುರಾಗುತ್ತವೆ.

ಕಂಬಳ ಕ್ರೀಡೆಯಲ್ಲ, ಕರಾವಳಿಯ ಬದುಕಿನ ಪ್ರತಿಬಿಂಬ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಭತ್ತದ ಗದ್ದೆಗಳು, ಕೃಷಿ ಚಕ್ರ, ಮಳೆಗಾಲದ ಪರಿಸರ ಹಾಗೂ ಸ್ಥಳೀಯ ಸಮುದಾಯಗಳ ಆಚರಣೆಗಳೊಂದಿಗೆ ಕಂಬಳಕ್ಕೆ ಐತಿಹಾಸಿಕ ಸಂಬಂಧವಿದೆ. ಅದರ ಸಾಂಸ್ಕೃತಿಕ ಅರ್ಥವನ್ನು ಕೇವಲ ಕೆಸರುಗದ್ದೆಯಲ್ಲಿ ಕೋಣಗಳು ಓಡುವ ದೃಶ್ಯಕ್ಕೆ ಸೀಮಿತಗೊಳಿಸಲಾಗದು. ಮೈಸೂರಿನಲ್ಲಿ ಕಂಬಳವನ್ನು ಆಯೋಜಿಸುವುದರಿಂದ ಅದರ ಮೂಲ ಸಂಪ್ರದಾಯ, ಧಾರ್ಮಿಕ ಹಿನ್ನೆಲೆ ಮತ್ತು ಜನಪದ ವೈಶಿಷ್ಟ್ಯಗಳನ್ನು ಎಷ್ಟರ ಮಟ್ಟಿಗೆ ಉಳಿಸಿಕೊಳ್ಳಲಾಗುತ್ತದೆ ಎಂಬುದನ್ನು ಪರಿಶೀಲಿಸಬೇಕು.

ರಾಜಕೀಯ ಲಾಭದ ಆರೋಪಕ್ಕೆ ಆಧಾರವೇನು?

ಮೈಸೂರು ದಸರಾದಲ್ಲಿ ಕಂಬಳ ನಡೆದೇ ನಡೆಯುತ್ತೆ, ಈಗಾಗಲೇ 182 ಕೋಣಗಳು ರಿಜಿಸ್ಟರ್ ಆಗಿದೆ: ಅಶೋಕ್ ರೈ | Public TV - Latest Kannada News, Public TV Kannada Live, Public TV News

ಮೈಸೂರು ದಸರಾದಂತಹ ವಿಶ್ವಪ್ರಸಿದ್ಧ ಉತ್ಸವಕ್ಕೆ ಹೊಸ ಆಕರ್ಷಣೆಗಳನ್ನು ಸೇರಿಸುವುದರಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆಯಬಹುದು. ಆದರೆ ಇಂತಹ ನಿರ್ಧಾರಗಳ ಹಿಂದೆ ರಾಜಕೀಯ ಪ್ರಚಾರದ ಉದ್ದೇಶವಿದೆಯೇ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಕೇಳಬಹುದು. ಆದರೆ ರಾಜಕೀಯ ಹಿತಾಸಕ್ತಿಯೇ ಕಂಬಳವನ್ನು ಮೈಸೂರಿಗೆ ತರುವ ಏಕೈಕ ಉದ್ದೇಶ ಎಂಬುದಕ್ಕೆ ಕಳೆದ ವರ್ಷ ಇದೇ ಪುತ್ತೂರಿನ ಕಾಂಗ್ರೇಸ್ ಶಾಸಕರಾದ ಅಶೋಕ್ ರೈ ಅನೇಕ ಜನರ ವಿರೋಧದ ನಡೆವೆಯೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ರೀತಿಯಲ್ಲಿ ಕಂಬಳ ನಡೆಸಿದ್ದದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

ನೀರು ಮತ್ತು ಪರಿಸರದ ಪ್ರಶ್ನೆ

2026ರ ಅಕ್ಟೋಬರ್ 18 ಮತ್ತು 19ರಂದು ಮೈಸೂರು ದಸರಾ ಅಂಗವಾಗಿ ಕಂಬಳ ಆಯೋಜಿಸಲು ಸಿದ್ಧತೆ ನಡೆದಿದ್ದು, ಕೃತಕ ಕೆಸರುಗದ್ದೆ ನಿರ್ಮಾಣಕ್ಕೆ ಅಗತ್ಯವಿರುವ ನೀರಿನ ಪ್ರಮಾಣದ ಕುರಿತು ಪರಿಸರ ಕಾರ್ಯಕರ್ತರು ಮತ್ತು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಕಟಿತ ಅಂದಾಜುಗಳು ಸುಮಾರು 10 ಲಕ್ಷದಿಂದ 25 ಲಕ್ಷ ಲೀಟರ್ ಅಥವಾ ಅದಕ್ಕಿಂತ ಹೆಚ್ಚು ನೀರಿನ ಅಗತ್ಯವಿರಬಹುದೆಂದು ಸೂಚಿಸುತ್ತವೆ. ಈ ಅಂಕಿಅಂಶಗಳ ವ್ಯತ್ಯಾಸದ ಹಿನ್ನೆಲೆಯಲ್ಲಿ ನಿಖರವಾದ ನೀರಿನ ಲೆಕ್ಕಾಚಾರ, ಮೂಲ ಮತ್ತು ಮರುಬಳಕೆಯ ಯೋಜನೆಯನ್ನು ಬಹಿರಂಗಪಡಿಸುವುದು ಅಗತ್ಯ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ