ವರ್ಕ್‌ ಫ್ರಮ್ ಹೋಮ್' ಅಂದರೆ ಮನೆಯಲ್ಲಿ ಕುಳಿತುಕೊಂಡೇ ಕೆಲಸ ಮಾಡುವ ಆಪ್ಶನ್‌ ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಕಂಪನಿಗಳು ಕೂಡ ಈಗ ಫ್ಲೆಕ್ಸಿಬಲ್ ವರ್ಕ್‌ ಆಪ್ಶನ್ಸ್ ನೀಡುತ್ತಿವೆ. ಈ ವ್ಯವಸ್ಥೆಯಿಂದ ನೀವು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಬಹುದಾಗಿದೆ.

ಆದರೆ ಮನೆಯಿಂದಲೇ ಕೆಲಸ ಮಾಡುವ ಸೌಕರ್ಯ ಲಭಿಸಿದೆ ಎಂದಾಕ್ಷಣ ನಮ್ಮ ಮನಸ್ಸಿನಲ್ಲಿ ಬರುವ ಒಂದು ಆಲೋಚನೆಯೆಂದರೆ, ಯಾವಾಗ ಬೇಕೆಂದಾಗ ಕೆಲಸ ಮಾಡಿ ಮುಗಿಸಬಹುದು, ಇಲ್ಲಿ ನಮ್ಮನ್ನು ತಡೆಯುವವರು ಯಾರೂ ಇಲ್ಲ ಎಂದು. ಅಂದಹಾಗೆ ನಿಮ್ಮ ಮೇಲೆ ನಿಯಂತ್ರಣ ಹೇರುವವರು ಯಾರೂ ಇಲ್ಲದೇ ಇರಬಹುದು. ಆದರೆ ಇಲ್ಲೂ ಕೂಡ ಕೆಲಸ ಮಾಡುವ ಕೆಲವು ಶಿಷ್ಟಾಚಾರಗಳಿವೆ. ಒಂದು ವೇಳೆ ನೀವು ಅವುಗಳ ಬಗ್ಗೆ ಗಮನಹರಿಸದೆ ಹೋದರೆ `ಸ್ಟ್ರೆಸ್‌ ಫ್ರೀ' ಅಂದರೆ ಒತ್ತಡರಹಿತವಾಗಿ ಕೆಲಸ ಮಾಡಲು ಆಗುವುದಿಲ್ಲ.

ನೀವು ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಈ `ವರ್ಕ್‌ ಎಟಿಕೇಟ್ಸ್' ಅವಶ್ಯವಾಗಿ ತಿಳಿದುಕೊಳ್ಳಿ.

ವರ್ಕ್‌ ಶೆಡ್ಯೂಲ್ ‌ಅಗತ್ಯ : ಮನೆಯಿಂದ ಕೆಲಸ ಮಾಡುವಾಗ ನಾವು ಏನೇನೊ ಬರೆದು ಎಲ್ಲೆಲ್ಲೋ ಇಡುತ್ತೇವೆ. ಬಳಿಕ ಅವನ್ನು ಹುಡುಕಲು ನಮ್ಮ ಅಮೂಲ್ಯ ಸಮಯ ವ್ಯರ್ಥ ಮಾಡುತ್ತೇವೆ. ಹೀಗಾಗಿ ವರ್ಕ್‌ಶೆಡ್ಯೂಲ್ ‌ಮಾಡಿಕೊಳ್ಳುವುದು ಅತ್ಯವಶ್ಯ. ಆ ಮೂಲಕ  ಯಾವ ಕೆಲಸವನ್ನು, ಯಾವಾಗ ಮುಗಿಸಬೇಕು ಎನ್ನುವುದನ್ನು ನಿಖರವಾಗಿ ನಿರ್ಧರಿಸಬಹುದು. ಹೀಗಾಗಿ ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸವನ್ನು ಪೂರೈಸಬಹುದು.

ನಿಯಮಿತ ಕೆಲಸದ ಅವಧಿ : `ನಾನು ಯಾವಾಗ ಬೇಕಾದಾಗ ಎದ್ದು ಕೆಲಸ ಶುರು ಮಾಡಬಹುದು' ಎಂದು ನೀವು ಹೇಳಬಹುದು.  ಆದರೆ ಇದರಿಂದ ನಿಮ್ಮ ಆರೋಗ್ಯ ಹದಗೆಡಬಹುದು. ಅದರ ಪ್ರಭಾವ ಕೆಲಸದ ಮೇಲೂ ಆಗಬಹುದು. ಹೀಗಾಗಿ ಕೆಲಸದ ಜೊತೆಗೆ ನಿಮ್ಮನ್ನು ಫಿಟ್‌ ಆಗಿ, ಆರೋಗ್ಯದಿಂದಿಟ್ಟುಕೊಳ್ಳಲು ನಿಮ್ಮ ಕೆಲಸದ ಅವಧಿ ನಿಶ್ಚಿತಪಡಿಸಿಕೊಳ್ಳುವುದು ಒಳ್ಳೆಯದು.

ಶಿಸ್ತು ಕಾಪಾಡಿಕೊಳ್ಳಿ : ಕೆಲಸ ಮಾಡುವಾಗ ಚಾಟಿಂಗ್‌ ಅಥವಾ ಫೋನ್‌ನಲ್ಲಿ ಹೆಚ್ಚು ಹೊತ್ತು ಮಾತಾಡುತ್ತಿರಬೇಡಿ. ಕೆಲಸದಲ್ಲಿ ಸಮಯ ಪಾಲನೆ ಮುಖ್ಯ. ಎಲ್ಲಿಯವರೆಗೆ ನೀವು ಶಿಸ್ತುಪಾಲನೆ ಮಾಡುವುದಿಲ್ಲವೋ, ಅಲ್ಲಿಯವರೆಗೆ ಕೆಲಸದಲ್ಲಿ ಬೆಸ್ಟ್ ಆಗುವುದಿಲ್ಲ. ಹೀಗಾಗಿ ಮನೆಯವರಿಗೆ, ಸಂಬಂಧಿಕರಿಗೆ ಕೆಲಸದ ಅವಧಿಯಲ್ಲಿ ಡಿಸ್ಟರ್ಬ್‌ ಮಾಡಬಾರದು ಎಂದು ಹೇಳಿ.

ನಿಗದಿತ ಸಮಯಕ್ಕೆ ಕೆಲಸ ಪೂರೈಸಿ : ನೆಪಗಳನ್ನು ಹೇಳಿಕೊಂಡು ಕೆಲಸ ಮುಂದೂಡುತ್ತಿರಬೇಡಿ. ಅದು ನಿಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ. ಸಕಾಲದಲ್ಲಿ ಕೆಲಸ ಪೂರೈಸುವ ಪ್ರಯತ್ನ ಮಾಡಿ. ಇದರಿಂದ ಟೆನ್ಶನ್‌ ಫ್ರೀ ಆಗಿರಬಹುದು.

ಫೀಲ್ಡ್ ನ ಜನರ ಸಂಪರ್ಕದಲ್ಲಿರಿ : ನೀವು ಮನೆಯಿಂದ ಕೆಲಸ ಮಾಡುತ್ತೀರಿ, ಹೀಗಾಗಿ ಆಫೀಸಿಗೆ ಹೋಗುವ ಅಗತ್ಯವಿಲ್ಲ. ಹಾಗೆಂದು ಜನರ ಸಂಪರ್ಕದಲ್ಲಿ ಇರಬಾರದು ಎಂದಲ್ಲ. ಕೆಲವು ಸಲಹೆ ಸೂಚನೆ ಪಡೆಯಲು, ಹೊಸ ವಿಷಯ ತಿಳಿದುಕೊಳ್ಳಲು ಅವರ ಸಂಪರ್ಕದಲ್ಲಿರಿ.

- ಎನ್‌. ಅಂಜಲಿ

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ