ಮಲೆನಾಡಿನ ಸುಂದರ ಪರಿಸರದಲ್ಲಿ ಶಿವವೊಗ್ಗ ಜಿಲ್ಲೆಯ ಹೊಸನಗರದ ಸಮೀಪ ಕಳೂರಿನಲ್ಲಿ ಕುವೆಂಪು ಅವರ ಹೆಸರಿನಲ್ಲಿ ವಸತಿ ಪ್ರೌಢಶಾಲೆಯೊಂದು ಕಾರ್ಯ ನಿರ್ವಹಿಸುತ್ತಿದೆ.

``ಎಲ್ಲರ ಆತ್ಮಗಳಲ್ಲಿನ ಪ್ರಖರ ಬೆಳಕು ಹೊರಹೊಮ್ಮಿ ಸಮಾಜದ ಮೌಢ್ಯವನ್ನು ಕೊಚ್ಚಿ ಇಲ್ಲವಾಗಿಸಬೇಕು. ಅಂತಹದೊಂದು ಮಹಾನ್‌ ಸಾಧನೆ ಮಾಡುವ ಶಿಕ್ಷಣ ಇಂದು ನಮಗೆ ಬೇಕು,'' ಎಂಬುದು ಮಹಾಕವಿ ಕುವೆಂಪುರವರ ಮಹದಾಸೆ.

ಆ ಮಹಾಕವಿಯ ಧ್ಯೇಯವನ್ನಿಟ್ಟುಕೊಂಡೇ 1995-96ನೇ ಸಾಲಿನಿಂದ ಕುವೆಂಪು ವಿದ್ಯಾಸಂಸ್ಥೆ ಶ್ರಮಿಸುತ್ತಿದೆ. ಎಳೆಯರ ಮನಸ್ಸಿನಲ್ಲಿನ ಕೀಳರಿಮೆಯನ್ನು ಕಿತ್ತೊಗೆದು, ಆಧುನಿಕ ಶಿಕ್ಷಣದ ಅಂಗವಾದ, ಪ್ರಧಾನವಾಗಿ ಇಂಗ್ಲಿಷ್‌ ವಿದ್ಯಾಭ್ಯಾಸ, ಕಂಪ್ಯೂಟರ್, ಸಾಮಾನ್ಯಜ್ಞಾನ, ಮಾತೃಭಾಷೆಯ ಮಹತ್ವಪೂರ್ಣ ಪರಿಜ್ಞಾನ, ಹೃದಯ ಸೌಂದರ್ಯ ವರ್ಧನೆ, ಸಂಗೀತ, ನೃತ್ಯ, ಕರಾಟೆ, ಆಟೋಟಗಳು, ಅದಕ್ಕೂ ಮುಖ್ಯವಾಗಿ ಮನುಕುಲದ ಉಳಿವಿಗಾಗಿ ಸಾಮಾನ್ಯ ಮಾನವರನ್ನು ವಿಶ್ವಮಾನವರನ್ನಾಗಿ ಮಾಡುವುದು ತಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ ಎಂದು ಕುವೆಂಪು ಪ್ರೌಢಶಾಲೆಯ ವ್ಯವಸ್ಥಾಪಕ ಸೋನಿ ಶ್ರೀನಿವಾಸ್‌ಹೇಳುತ್ತಾರೆ.

ಪ್ರವೇಶ ಪ್ರಕ್ರಿಯೆ ಕುವೆಂಪು ವಸತಿ ಪ್ರೌಢಶಾಲೆಯಲ್ಲಿ 5ನೇ ತರಗತಿಯಿಂದಲೇ ಪ್ರವೇಶ ನೀಡಲಾಗುತ್ತದೆ. ಇಲ್ಲಿನ ಪ್ರತಿಯೊಂದು ತರಗತಿಗೂ 50 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆಯ ಮೂಲಕ ಕೇವಲ ಜಾಣ ವಿದ್ಯಾರ್ಥಿಗಳು ಮಾತ್ರ ಆಯ್ಕೆಯಾಗುತ್ತಾರೆ. ಸಾಧಾರಣ ಬುದ್ಧಿಮಟ್ಟದ ವಿದ್ಯಾರ್ಥಿಗಳು ಎಲ್ಲರ ಜೊತೆಗೆ ಬೆರೆತು ಕಲಿಯ ಬೇಕೆಂದು ಇಲ್ಲಿ ಶೇ.50 ಮಕ್ಕಳಿಗೆ ಪ್ರವೇಶ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಪ್ರೋತ್ಸಾಹ ನೀಡುವುದರ ಮೂಲಕ ಅವರನ್ನು ಇತರೆ ವಿದ್ಯಾರ್ಥಿಗಳಂತೆ ಮುಂಚೂಣಿಗೆ ಕರೆದೊಯ್ಯಬೇಕೆನ್ನುವುದು ಇದರ ಉದ್ದೇಶ. ಜನವರಿಯಿಂದ ಮಾರ್ಚ್‌ ತನಕ ಪ್ರವೇಶಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತದೆ. ಏಪ್ರಿಲ್ ‌ನಂತರ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳಿಗೆ 6 ವಿಷಯಗಳಿಗೆ ಪ್ರವೇಶ ಪರೀಕ್ಷೆ ನಡೆಸಿ ಶೇ.50ರಷ್ಟು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಶಿಕ್ಷಣ ಮಾಧ್ಯಮ 5 ರಿಂದ 7ನೇ ತರಗತಿಯವರೆಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳೆರಡರಲ್ಲೂ ಶಿಕ್ಷಣ ನೀಡಲಾಗುತ್ತದೆ. 7 ರಿಂದ 10ನೇ ತರಗತಿ ತನಕ ಆಂಗ್ಲ ಮಾಧ್ಯಮದಲ್ಲಿ ಮಾತ್ರ ಬೋಧಿಸಲಾಗುತ್ತದೆ. 9 ಹಾಗೂ 10ನೇ ತರಗತಿಗೆ ಕೆಲವು ಸೀಟುಗಳು ಉಳಿದಿದ್ದರೆ ಅಂಥ ಸೀಟುಗಳನ್ನು ಹೊರಗಿನ ವಿದ್ಯಾರ್ಥಿಗಳಿಂದ ತುಂಬಲಾಗುತ್ತದೆ.

ಕೌಶಲ್ಯ ವೃದ್ಧಿಗೆ ಆದ್ಯತೆ

ಈ ಶಾಲೆಯಲ್ಲಿ ಒತ್ತಡಮುಕ್ತ ಪ್ರೀತಿಪೂರ್ವಕ ಕಲಿಕೆಗೆ ಆದ್ಯತೆ ನೀಡಲಾಗುತ್ತದೆ. ಜೊತೆಗೆ ಕೌಶಲ್ಯ ವೃದ್ಧಿಗೆ ಗಮನ ಕೊಡಲಾಗುತ್ತದೆ. ವಿದ್ಯಾರ್ಥಿಗಳಲ್ಲಿರುವ ಸೃಜನಾತ್ಮಕ ಕಲೆಗಳನ್ನು ಹೊರಹೊಮ್ಮಿಸಲು ವೈಯಕ್ತಿಕ ಗಮನ ನೀಡಲಾಗುತ್ತದೆ.

ಶನಿವಾರ ಭಾನುವಾರಗಳ ವಿಶೇಷತೆ

ವಿದ್ಯಾರ್ಥಿಗಳನ್ನು ಇಂದಿನ ಆಧುನಿಕ ಯುಗಕ್ಕೆ ತಕ್ಕಂತೆ ಪರಿವರ್ತಿಸಲು ಅವರಿಗೆ ರಸಪ್ರಶ್ನೆ (ಕ್ವಿಜ್‌), ಸಿಸಿಎ ಪ್ರೋಗ್ರಾಮ್, ಸ್ಪೋಕನ್‌ ಇಂಗ್ಲಿಷ್‌ ಮತ್ತು ಇಂಗ್ಲಿಷ್‌ ಗ್ರಾಮರ್‌ ಹಾಗೂ ಕರಾಟೆ ಬಗ್ಗೆ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.

ಕುವೆಂಪು (ವಸತಿ) ಪ್ರೌಢಶಾಲೆ, ಹೊಸನಗರ, ಶಿವಮೊಗ್ಗ ಜಿಲ್ಲೆ-577 418. 

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ