ಶಿಕ್ಷಣ ಕ್ಷೇತ್ರದಲ್ಲಿ ಜೈನ್‌ ಗ್ರೂಪ್‌ ಸಂಸ್ಥೆಗೆ ವಿಶೇಷ ಸ್ಥಾನಮಾನವಿದೆ. ಅತ್ಯುತ್ತಮ ಬೋಧನಾಕ್ರಮ, ವಿಶಿಷ್ಟವಾಗಿ ವಿನ್ಯಾಸಗೊಳಿಸಲ್ಪಟ್ಟ ಸುಂದರ ಕ್ಯಾಂಪಸ್‌, ಶಿಸ್ತುಬದ್ಧ ವಿದ್ಯಾರ್ಥಿ ಪಡೆ, ಸಮರ್ಪಣಾ ಮನೋಭಾವದ ಉಪನ್ಯಾಸಕ ವರ್ಗ, ನಿಷ್ಠಾವಂತ, ಪರಿಶ್ರಮಿ ಬೋಧಕೇತರ ಸಿಬ್ಬಂದಿ, ಪ್ರತಿ ಬಾರಿ ಉತ್ಕೃಷ್ಟ ಶ್ರೇಣಿಯ ಫಲಿತಾಂಶದ ಹೂರಣ....

ಇವು ಜೈನ್‌ ಇಂಟರ್‌ ನ್ಯಾಷನಲ್ ವಸತಿ ಶಾಲೆಯ ಪಕ್ಷಿನೋಟ. ಆಧುನಿಕ ತಾಂತ್ರಿಕ ಕೌಶಲ್ಯದ ಬದಾಣೊಂದಿಗೆ ಹೆಜ್ಜೆ ಹಾಕುತ್ತ, ವಿನೂತನ ಆವಿಷ್ಕಾರದತ್ತ ದಾಪುಗಾಲಿಡುತ್ತಾ, ಸದಾ ಹೊಸತನದತ್ತ ಹೊರಳುತ್ತಿರು ಈ ಶಾಿ, ಪೋಷಕರ ಪಾಲಿನ ಅಚ್ಚುಮೆಚ್ಚಿನ ವಿದ್ಯಾಲಯ. ವಿಶಿಷ್ಟ ಧ್ಯೇಯೋದ್ದೇಶಗಳೊಂದಿಗೆ 1999ರಲ್ಲಿ ಆರಂಭಗೊಂಡ ಈ ಶಾಲೆ ಸದಾ ಹೊಸತನದ ಹರಿಕಾರ ಎನಿಸಿಕೊಂಡಿದೆ.

4ನೇ ತರಗತಿಯಿಂದ ಪದವಿ ಪೂರ್ವ ಶಿಕ್ಷಣದವರೆಗೂ ಬೋಧನೆ ನೀಡುವ, ಸುಮಾರು 800 ವಿದ್ಯಾರ್ಥಿಗಳಿಂದ ಕೂಡಿದ ಈ ಶಾಲೆಯಲ್ಲಿ ಸಹಶಿಕ್ಷಣದ ಸೊಗಸಿದೆ. `ಉನ್ನತ ಬದುಕಿಗೆ ಶಿಕ್ಷಣವೊಂದೇ ದಾರಿ' ಎಂಬುದನ್ನು ಮನಗಂಡಿರುವ ಈ ಸಂಸ್ಥೆಯಲ್ಲಿ ಕಲಿಕೆಯ ವಿಧಾನವೇ ವಿಶಿಷ್ಟವಾಗಿದೆ. ಪ್ರತಿಭೆಯ ಅನ್ವೇಷಣೆಯ ಜೊತೆಗೆ ಅತ್ಯುತ್ತಮ ಮಾರ್ಗದರ್ಶನ, ಪೋಷಣೆ, ತರಬೇತಿ, ವೃತ್ತಿಪರತೆಯ ಸ್ಪರ್ಶ ನೀಡಿ ಹೊಸ ಹೊಸ ವಿಚಾರಗಳತ್ತ ತೊಡಗಿಸಿಕೊಳ್ಳಲು ಹಾಗೂ ಅವರಲ್ಲಡಗಿದ ವಿಶೇಷ ಪ್ರತಿಭೆಗೆ ಸಾಣೆಹಿಡಿದು ಪ್ರೊತ್ಸಾಹಿಸುವಲ್ಲಿ ಈ ಶಾಲೆ ಮಾದರಿ ಶಾಲೆ ಎನಿಸಿದೆ. ಬೇರೆ ಎಲ್ಲಾ ವಸತಿ ಶಾಲೆಗಳಲ್ಲಿರುವಂತೆ ಇಲ್ಲೂ ಕೂಡ ಸುಸಜ್ಜಿತ ಕಟ್ಟಡ, ವಿಶಾಲ ಕ್ರೀಡಾಂಗಣ, ಅಚ್ಚುಕಟ್ಟಾದ ವಸತಿ ಹಾಗೂ ಊಟೋಪಚಾರ, ಆರೋಗ್ಯ ಕಾಳಜಿ, ಭದ್ರತೆ, ಸಮಾನತೆ.... ಹೀಗೆ ಎಲ್ಲದರಲ್ಲೂ ಅಚ್ಚುಕಟ್ಟು.

ಶಿಸ್ತುಬದ್ಧತೆ ಹಾಗೂ ನಿರ್ಮಲ ಸೇವಾ ಮನೋಭಾವ, ಇವು ಈ ಶಾಲೆಯ ವೈವಿಧ್ಯಮಯ ನೋಟ.ಈ ಶಿಕ್ಷಣ ಸಂಸ್ಥೆಯು ಸಾಧನೆಗೆ ಹೆಚ್ಚಿನ ಒಲವು ನೀಡುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ತರ್ಕಬದ್ಧ ವಿವೇಚನೆ, ಸೈದ್ಧಾಂತಿಕ ನಿಲುವು, ಶಿಸ್ತುಪಾಲನೆ, ನಡವಳಿಕೆ, ಕ್ರೀಡಾಮನೋಭಾವ ಹಾಗೂ ಇತರ ಉತ್ತಮ ಗುಣಗಳೊಂದಿಗೆ ಬದುಕನ್ನು ರೂಪಿಸುವ ಕಲೆಯನ್ನೂ ಹೇಳಿಕೊಡಲಾಗುತ್ತದೆ. ರಾಷ್ಟ್ರ ನಿರ್ಮಾಣದಲ್ಲಿ ಯುವ ಜನಾಂಗದ ಪಾತ್ರ ಬಹಳ ಮುಖ್ಯ ಎಂಬುದನ್ನು ಮನಗಂಡು ಇಲ್ಲಿನ ವಿದ್ಯಾರ್ಥಿಗಳಿಗೆ ನಾಯಕತ್ವದ ಗುಣವನ್ನು ಎಳವೆಯಲ್ಲೇ ಹೇಳಿಕೊಡಲಾಗುತ್ತದೆ. ಎಂಥ ಪರಿಸ್ಥಿತಿಯಲ್ಲೂ ಕೂಡ ಎದೆಗುಂದದೆ ಎಲ್ಲವನ್ನೂ ಎದುರಿಸಿ ಬದುಕುವ ಧೈರ್ಯ, ಜಾಣ್ಮೆ, ಛಾತಿ ಜೊತೆಗೆ ಮಾನಸಿಕ ಹಾಗೂ ಬೌದ್ಧಿಕ ಪ್ರಬುದ್ಧತೆಯನ್ನು ಬೆಳೆಸುವಲ್ಲಿ ಈ ಸಂಸ್ಥೆಯ ಕೊಡುಗೆ ಅಪಾರ.

ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಉಪನ್ಯಾಸಕರ ಪಾತ್ರ ಹಿರಿದು ಎಂಬುದನ್ನು ನಂಬಿರುವ ಈ ಸಂಸ್ಥೆ ಪ್ರತಿಯೊಂದು ಮಗುವಿನಲ್ಲೂ ಅಡಗಿರುವ ವಿಶಿಷ್ಟ ಪ್ರತಿಭೆಯನ್ನು ಗುರುತಿಸುವಲ್ಲಿ ಹಾಗೂ ಅವರಲ್ಲಿ ಇನ್ನಷ್ಟು ಉತ್ಸಾಹ, ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ತನ್ನದೇ ಆದ ಕಾಣಿಕೆ ನೀಡಿದೆ.

ವಿದ್ಯಾರ್ಥಿಗಳ ಜ್ಞಾನ ಭಂಡಾರವನ್ನು ಸಮೃದ್ಧಿಗೊಳಿಸುವ ನಿಟ್ಟಿನಲ್ಲಿ ಈ ಶಾಲೆ ಸುಮಾರು 20,500ಕ್ಕೂ ಹೆಚ್ಚು ಪುಸ್ತಕಗಳನ್ನೊಳಗೊಂಡ ಅತ್ಯುತ್ತಮ ಲೈಬ್ರೆರಿ ಹೊಂದಿದ್ದು, ವಿದ್ಯಾರ್ಥಿಗಳ ತಿಳಿವಳಿಕೆಯ ದಾಹವನ್ನು ಇನ್ನಷ್ಟು ವಿಸ್ತರಿಸಿದೆ. ಅಲ್ಲದೆ ಸಿ.ಡಿ. ರ್ಯಾವ್‌, ಆಡಿಯೋ, ವಿಡಿಯೋ ಹಾಗೂ ಆಧುನಿಕ ಸಂಶೋಧನಾ ಪುಸ್ತಕಗಳು ಲಭ್ಯವಿದ್ದು ವಿದ್ಯಾರ್ಥಿಗಳಿಗೆ ಸದಾ ಹೊಸತನದ ವಸ್ತು ವಿಷಯದ ಹುಡುಕಾಟಕ್ಕಾಗಾಗಿ ಇದು ಸಹಕಾರಿ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ