`ಬೆಟ್ಟದ ಮೇಲೊಂದು ಮನೆಯ ಮಾಡಿ...' ಎನ್ನುವ ಮಾತಿಗೆ ಅನ್ವರ್ಥವಾಗುವಂತೆ ಬೆಂಗಳೂರಿನಿಂದ ಸುಮಾರು 65 ಕಿ.ಮೀ. ದೂರದ ಅಂತರದಲ್ಲಿರುವ ನಂದಿಬೆಟ್ಟದ ತಪ್ಪಲಿನ ಮಾಕಳಿ ದುರ್ಗದಲ್ಲಿ ಸ್ಥಾಪನೆಗೊಂಡಿರುವ ಜೆಮ್ ಇಂಟರ್‌ ನ್ಯಾಷನಲ್ ವಸತಿ ಶಾಲೆ ಪ್ರಕೃತಿಯನ್ನು ಇಷ್ಟಪಡುವ ಎಲ್ಲರಿಗೂ ಪ್ರಿಯವಾದ ಕ್ಯಾಂಪಸ್‌ ಆಗಿದೆ. ಸುಮಾರು 1350 ಮೀ. ಎತ್ತರದಲ್ಲಿ, 20 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ವಸತಿ ಶಾಲೆ ವಿಶಿಷ್ಟ ಹಾಗೂ ವಿಭಿನ್ನ ಬೋಧನೆಗೆ ಹೆಸರುವಾಸಿ. ಸುತ್ತಲೂ ಅಂದದ ಬೆಟ್ಟಗಳಿಂದ ಆವೃತ್ತವಾಗಿದ್ದು, ಚಂದದಿ ಕಂಗೊಳಿಸುವ ಖರ್ಜೂರದ ಮರಗಳ ಸಾಲು... ಲಾವಂಚದ ಸುವಾಸನೆ... ಸುತ್ತಲೂ ಹರಡಿಕೊಂಡಿರುವ ಹಚ್ಚ ಹಸಿರಿನ ಮರಗಳ ಹಿಂಡು... ಸದ್ದು ಗದ್ದಲದಿಂದ ದೂರ ನಿಂತ ನಿಶ್ಶಬ್ದ ವಾತಾವರಣ. ಅಲ್ಲದೆ 6 ಕಿ.ಮೀ. ಉದ್ದದ ಕೆರೆಯ ಮನಮೋಹಕ ನೋಟ. ವಿದ್ಯಾರ್ಥಿಗಳ ಪಾಲಿಗೆ ಒಂದು ವಿನೂತನ ತಾಣ!

ಇಂತಹ ಪ್ರಕೃತಿ ವೈಭವದ ನಡುವೆ ಅರಳಿ ನಿಂತ ಜೆಮ್ ಇಂಟರ್‌ ನ್ಯಾಷನಲ್ ವಸತಿ ಶಾಲೆ ತನ್ನದೇ ಆದ ವಿಶಿಷ್ಟ ಧ್ಯೇಯ, ಉದ್ದೇಶಗಳೊಂದಿಗೆ ವಿದ್ಯಾರ್ಥಿಗಳ ಪಾಲಿನ `ಗೆಲುವಿನ ನಗರಿ' ಯಂತಾಗಿದೆ. ಆಧುನಿಕ ತಂತ್ರಜ್ಞಾನ ಹಾಗೂ ವಿನೂತನ ಆವಿಷ್ಕಾರಗಳೊಂದಿಗೆ 2005ರಲ್ಲಿ ಆರಂಭಗೊಂಡ ಈ ಶಾಲೆ ತನ್ನದೇ ಶೈಲಿಯ ಪಾರಂಪರಿಕ ಮೌಲ್ಯಗಳನ್ನು ಹೊಂದಿದ್ದು ವೈಚಾರಿಕತೆ, ಸಂಸ್ಕೃತಿ, ಗುರುಕುಲ ಶಾಲೆಯ ಕಲ್ಪನೆ, ಶಿಸ್ತು ಸಂಯಮ ಹಾಗೂ ಸೌಹಾರ್ದತೆಯ ಸಂಕೇತವಾಗಿದೆ.

ಪರಿಪೂರ್ಣತೆ, ಗುಣಮಟ್ಟ, ಉನ್ನತ ಗುರಿ ಹಾಗೂ ಸ್ಛೂರ್ತಿಯೊಂದಿಗೆ ಆರಂಭಗೊಂಡ ಈ ಶಿಕ್ಷಣ ಸಂಸ್ಥೆಯಲ್ಲಿ ಎಲ್ಲರೂ ಸಮಾನರು. ಬಡವಬಲ್ಲಿದ ಎನ್ನುವ ಯಾವುದೇ ಭೇದಭಾವ ತೋರದೆ ಐಕ್ಯತೆಯನ್ನು ಕಾಪಾಡಿಕೊಂಡಿದೆ. ಪ್ರತಿ ವಿದ್ಯಾರ್ಥಿಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ವೈಯಕ್ತಿಕ ಆಸಕ್ತಯೊಂದಿಗೆ ಅವರಲ್ಲಿ ವಿಶೇಷ ಕಾಳಜಿ, ಪ್ರೋತ್ಸಾಹ, ಉತ್ತೇಜನ ನೀಡಿ ಬೆಂಬಲಿಸುವಲ್ಲಿ ಈ ವಸತಿ ಶಾಲೆ ಸದಾ ಮುಂದು. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಪದೇಪದೇ ಪಾಠವನ್ನು ಹೇಳಿ ಮನದಟ್ಟು ಮಾಡಿಸಿಕೊಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹಾಗೂ ಬದಲಾವಣೆ ತಂದಿದೆ.

ಇಲ್ಲಿ ಎಲ್ಲ ಪಾರದರ್ಶಕ. ಏಕರೂಪ ಶಿಸ್ತನ್ನು ಜಾರಿಗೊಳಿಸಿರುವ ಈ ಸಂಸ್ಥೆಯಲ್ಲಿ ಜಾತಿಮತ, ಪಂಥದ ಭೇದವಿಲ್ಲದೆ, `ನಾವೆಲ್ಲರೂ ಭಾರತೀಯರು' ಎನ್ನುವ ಸೌಹಾರ್ದತೆಯ ವಾತಾವರಣ ನೀಡಿದೆ. ಇಲ್ಲಿ ಕಲಿಕೆಯ ವಿಧಾನವೇ ವಿನೂತನ ಮಾದರಿಯಲ್ಲಿದೆ. ಬೆಟ್ಟದ ತುದಿಯಲ್ಲಿ ಗುರುಕುಲ ಪರಿಕಲ್ಪನೆಯ ಮಾದರಿಯಲ್ಲಿ, ಪ್ರತಿಯೊಬ್ಬ ವಿದ್ಯಾರ್ಥಿ ಬಗ್ಗೆ ವಿಶೇಷ ಕಾಳಜಿ, ಒಲವಿನೊಂದಿಗೆ ಬೋಧನೆ ಮಾಡಲಾಗುತ್ತದೆ. ಆದ್ದರಿಂದಲೇ ಜೆಮ್ ವಸತಿ ಶಾಲೆ ಎಲ್ಲರಿಗೂ ಅಚ್ಚುಮೆಚ್ಚು. ಸಿಟಿಯಿಂದ ದೂರವಿದ್ದು, ವಾಯು ಮಾಲಿನ್ಯದಿಂದ ಮುಕ್ತಿ ಹೊಂದಿ ಶುಭ್ರವಾದ ಗಾಳಿ, ಬೆಳಕು, ನೀರು, ಹಸಿರಿನ ಸಮೃದ್ಧತೆಯ ನಡುವಿನ ಈ ವಿದ್ಯಾಮಂದಿರದಲ್ಲಿ ಎಲ್ಲ ಶಿಸ್ತುಬದ್ಧ ಹಾಗೂ ಯೋಜನಾಬದ್ಧ. ಅದಕ್ಕೆ ಪೂರಕವಾಗಿ ಹಗಲಿರುಳೆನ್ನದೆ ತಮ್ಮ ಕಾಯಕದಲ್ಲಿ ನಿಷ್ಠೆಯಿಂದ ತೊಡಗಿಸಿಕೊಂಡಿರುವ ಸಿಬ್ಬಂದಿಯ ಕೊಡುಗೆ ಹಾಗೂ ಅನುಭವಿ ಉಪನ್ಯಾಸಕರ ಸೇವೆ, ಕೈಂಕರ್ಯ ನಿಜಕ್ಕೂ ಶ್ಲಾಘನೀಯ.  ಎಜುಕೇಶನ್‌ ಅಂಡ್‌ ವೆಲ್‌ಫೇರ್‌ ಟ್ರಸ್ಟ್ ನಿಂದ ಸ್ಥಾಪನೆಗೊಂಡಿರುವ ಈ ವಸತಿ ಶಾಲೆ ಮೌಲ್ಯಯುತ ಶಿಕ್ಷಣದೊಂದಿಗೆ `ಉತ್ತಮ ಪ್ರಜೆ'ಯ ನಿರ್ಮಾಣ ಈ ಸಂಸ್ಥೆಯ ಗುರಿಯಾಗಿದ್ದು, ಪ್ರತಿ ವಿದ್ಯಾರ್ಥಿಯ ಪೂರ್ಣ ವ್ಯಕ್ತಿತ್ವ ವಿಕಸನಕ್ಕೆ, ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಬೆಂಬಲಿಸುತ್ತದೆ. ಈ ಸಾಧನೆಯ ಹಿಂದೆ ನಾಲ್ವರು ಆಧಾರಸ್ತಂಭ ಎನಿಸಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ