ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಬರುವಂತಹ ಹೆತ್ತವರ ನಿಷ್ಕಲ್ಮಶ ಪ್ರೀತಿ ಮತ್ತು ಕಾಳಜಿಯಿಂದ ಕೂಡಿದಂತಹ ಚೆಂದದ ಬಾಲ್ಯ, ಅತ್ಯುತ್ತಮ ಮಟ್ಟದ ವಿದ್ಯಾಭ್ಯಾಸ, ಕನಸಿನ ಕಲ್ಪನಾ ಲೋಕದಲ್ಲಿಯೇ ವಿಹರಿಸುವಂತಹ ಯೌವನಾವಸ್ಥೆಯ ನಂತರ ಉದ್ಯೋಗದ ಅನ್ವೇಷಣೆ ಮುಂತಾದ ಬಹುಮುಖ್ಯ ಘಟ್ಟಗಳಲ್ಲಿ ಮದುವೆಯೂ ತನ್ನದೇ ಆದ ವಿಶೇಷ ಸ್ಥಾನ ಮಾನವನ್ನು ಪಡೆದಿದೆ ಅಲ್ವಾ...!?

ಹೆತ್ತವರ ಕನಸು, ಮನೆಮಂದಿಗೆ,ಹಿತೈಷಿಗಳಿಗೆ ಮತ್ತು ಸ್ನೇಹಿತರಿಗೆ ಈ "ಮದುವೆ" ಯೆಂಬುದು ಕುಣಿದು ಕುಪ್ಪಳಿಸುತ್ತಾ ಸಂಭ್ರಮಿಸುವ ಅವಿಸ್ಮರಣೀಯ ಕ್ಷಣವಾದರೆ...! ಮದುವೆಯಾಗುವ ಜೋಡಿಗೆ ಪರಸ್ಪರ ಜೀವನ ಸಂಗಾತಿಯಾಗಿ ಬಾಳ ಪಯಣಕೆ ಮುನ್ನುಡಿ ಬರೆಯುವ ಸುದಿನ. ಇವರಿಬ್ಬರಲ್ಲೂ ಮುಖ್ಯವಾಗಿ ಮೂಡಲೇಬೇಕಾದ್ದು ಒಲವು. ಪ್ರೀತಿಯೇ ಜೀವಾಳವಾಗಿ ಒಬ್ಬರಿಗೊಬ್ಬರು ಪರಸ್ಪರ ಅಭಿರುಚಿ,ಆಸೆ ಮತ್ತು ಆಸಕ್ತಿಗಳನ್ನು ಅರಿತು ಅದನ್ನು ಗೌರವಿಸುವುದರ ಮೂಲಕ ಸಮರ್ಪಣಾಭಾವದಿಂದ ಒಂದಾದಾಗ ಮಾತ್ರ ದಾಂಪತ್ಯದಲ್ಲಿ ಅಡಗಿರುವ ಅಪರಿಮಿತ ಸುಖವನ್ನು ಅನುಭವಿಸಲು ಸಾಧ್ಯ. ಈ ಹೊಂದಾಣಿಕೆ ಯೆಂಬುದು ಕೇವಲ ಹೆಣ್ಣಿಗೆ ಅಥವಾ ಗಂಡಿಗೆ ಮಾತ್ರ ಅನ್ವಯಿಸುವಂಥದ್ದಲ್ಲ...ಇಬ್ಬರಿಗೂ ಸಮಾನವಾಗಿ ಅನ್ವಯಿಸುತ್ತದೆ. ಇಬ್ಬರೂ ಹಾಲು ಜೇನಿನಂತೆ, ಹೃದಯ ಮತ್ತದರ ಬಡಿತದಂತೆ ನಿತ್ಯ ನಿರಂತರವಾಗಿ ಒಬ್ಬರು ಇನ್ನೊಬ್ಬರಿಗಾಗಿ ಮಿಡಿಯುತ್ತ ಒಂದಾಗಿ ನಡೆದಾಗ ಸ್ವರ್ಗವೇ ಧರೆಗಿಳಿದಂತೆ...!

ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎನ್ನುವಂತೆ ಯಾವುದೇ ಒಂದು ವಿಷಯದಲ್ಲಿ ಇವರಿಬ್ಬರ ಅನಿಸಿಕೆ ಮತ್ತು ಅಭಿಪ್ರಾಯಗಳು ಬೇರೆ ಬೇರೆಯಾಗಿರುವುದು ಸ್ವಾಭಾವಿಕ.ಇದು ಅವರವರು ಬೆಳೆದು ಬಂದ ಪರಿಸರದಂತೆ ಸ್ವಲ್ಪ ಭಿನ್ನವೇ ಆಗಿರುತ್ತೆ ನಿಜ. ಇದನ್ನು ಪರಸ್ಪರ ಕುಳಿತು ಮಾತನಾಡಿ ಕೂಲಂಕುಷವಾಗಿ ಪರಿಶೀಲಿಸಿ ನೋಡಿದಾಗ... ಸರಿ ತಪ್ಪುಗಳನ್ನು ಕಾಣಲು ಸಾಧ್ಯ. ಆಗ ಆ ತಪ್ಪನ್ನು ತಿದ್ದಿಕೊಂಡು ಅತ್ಯುತ್ತಮವಾದುದನ್ನು ಅಳವಡಿಸಿಕೊಳ್ಳುವತ್ತ ಇಬ್ಬರೂ ಕೂಡಿ ಒಮ್ಮತದಿಂದ ಒಂದು ನಿರ್ಧಾರಕ್ಕೆ ಬರಬೇಕು.ಅಂದಾಗ ಮಾತ್ರ ದಾಂಪತ್ಯದಲ್ಲಿ ಸಮರಸವನ್ನು ಕಾಯ್ದಿರಿಸಲು ಸಾಧ್ಯವಾಗುತ್ತೆ. ಇದನ್ನು ನಾನು ಬಾಯಿ ಮಾತಿಗೆ ಅಥವಾ ಥೀಮ್ ಗೆ ಅನ್ವಯಿಸುತ್ತದೆ ಅನ್ನುವುದಕ್ಕಾಗಲಿ ಹೇಳುತ್ತಿಲ್ಲ.

gettyimages-57037918-612x612

ನನ್ನ ವೈವಾಹಿಕ ಜೀವನದಲ್ಲಿ ಈ ನಡೆನುಡಿಯಿಂದಲೇ ಇಂದಿಗೂ ನಮ್ಮಿಬ್ಬರಲ್ಲಿ ಸತಿ ಪತಿ ಬಾಂಧವ್ಯ ಇನ್ನಷ್ಟು ಮತ್ತಷ್ಟು ಗಟ್ಟಿಯಾಗಿದ್ದು.ಮೊದಲಿನಿಂದಲೂ ಸಿಟ್ಟು ಮಾಡಿಕೊಳ್ಳೋದು/ಮಾತು ಬಿಡೋದು ಇಂಥಾದ್ದಕ್ಕೆಲ್ಲ ನಾವು ಅವಕಾಶವನ್ನೇ ಕೊಟ್ಟಿಲ್ಲ. ಮನಸ್ಸಿನಲ್ಲಿರೋದನ್ನು ನೇರವಾಗಿಯೇ ಹೇಳೋದು.ಮೊದ ಮೊದಲು ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವೆನಿಸಿದರೂ ಕ್ರಮೇಣ ನಾವಿಬ್ಬರೇ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೇವೆ . ಈಗ ಮಕ್ಕಳೂ ದೊಡ್ಡವರಾಗಿದ್ದರಿಂದ ಯಾವುದೇ ವಿಷಯದ ಬಗ್ಗೆಯಾದರೂ ಮುಖ್ಯ ತೀರ್ಮಾನ ತೆಗೆದುಕೊಳ್ಳುವ ಮುಂಚೆ ನಾವಿಬ್ಬರೂ ಮಕ್ಕಳೊಂದಿಗೆ ಕುಳಿತು ಚರ್ಚಿಸಿ ಆಮೇಲೆ ನಿರ್ಧರಿಸುತ್ತೇವೆ. ನಮ್ಮ ನಾಲ್ವರಲ್ಲಿ ಒಬ್ಬೊಬ್ಬರ ಅನಿಸಿಕೆ ಅಭಿಪ್ರಾಯ ಎಷ್ಟೇ ಬೇರೆ ಬೇರೆಯಿದ್ದರೂ... ಎಲ್ಲರೂ ಕೂಡಿ ಆರೋಗ್ಯಕರ ಚರ್ಚೆ ಮಾಡಿಯೇ  ಮುಂದುವರೆಯುತ್ತೇವೆ. ಈ ನಡೆನುಡಿಯೇ ನಮ್ಮೆಲ್ಲರ ನಡುವೆ ಇರುವ ಭದ್ರ ಬುನಾದಿ.

ಬಾಳ ಸಂಗಾತಿಯಾಗಿ ನನ್ನಾಸೆ ಆಕಾಂಕ್ಷೆಗಳಿಗೆ ನನ್ನವರು ನಿರಂತರ ಪ್ರೋತ್ಸಾಹದ ನೀರುಣಿಸುತ್ತ ಬೆಳೆಸಿದರೆ... ನಾನೂ ಕೂಡ ಜೀವನದ ಏರಿಳಿತಗಳೆರಡರಲ್ಲೂ ಅವರ ಬಾಳ ದಾರಿಗೆ ದೀವಿಗೆಯಾಗಿ ಅಂದಿನಿಂದ ಇಂದಿನವರೆಗೂ ಅಷ್ಟೇ ಪ್ರೀತಿ ಮತ್ತು ಕಾಳಜಿಯಿಂದ ನಮ್ಮದೇ ಆದ ಪುಟ್ಟ  ಸುಖೀ ಪ್ರಪಂಚವನ್ನು ಹೊಂದುವಲ್ಲಿ ಯಶಸ್ವಿಯಾಗಿದ್ದು ಅಂತ ಹೇಳಿಕೊಳ್ಳಲು ತುಂಬಾ ಹೆಮ್ಮೆಯಾಗುತ್ತೆ.ಈ ನಡೆನುಡಿಯನ್ನು ಅಳವಡಿಸಿಕೊಳ್ಳಲು ಮೊದ ಮೊದಲು ಸ್ವಲ್ಪ ಕಷ್ಟ... ಅಸಾಧ್ಯವೆನಿಸಿದರೂ...ಪರಸ್ಪರ ರ ಮೇಲಿರುವ ಅಪಾರವಾದ ಪ್ರೀತಿ ಮತ್ತುಗೌರವದಿಂದ ಇದನ್ನು ಸಾಧ್ಯವಾಗಿಸಬಹುದು ಎನ್ನುವುದು ನೂರಕ್ಕೆ ನೂರರಷ್ಟು ಸತ್ಯ. ಇದು ನನ್ನ ವೈವಾಹಿಕ ಜೀವನದ ಇಪ್ಪತ್ತಾರು ವರ್ಷಗಳ ಸ್ವಾನುಭವವೂ ಹೌದು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ