ಸದ್ಯಕ್ಕಂತೂ ವೆಸ್ಟರ್ನ್ಮ್ಯೂಸಿಕ್ಕೇಳಿಸಿಕೊಳ್ಳಿ : ನೀವು ಅಮೆರಿಕಾದ ಫ್ರೆಡ್‌ ವಾರಿಂಗ್‌ ನ ಹೆಸರು ಕೇಳಿಯೇ ಇರುತ್ತೀರಿ, ಆತ ಆ ದೇಶದ ಮಂದಿಗೆ ಹಾಡನ್ನು ಕೇಳಿಸುತ್ತಾ ಬೇರೊಂದು ಲೋಕಕ್ಕೆ ಕೊಂಡೊಯ್ದಿದ್ದ! ಈಗ ಆತನ ಮೊಮ್ಮಗ ಹಾಡು ಬರೆಯುತ್ತಾ, ಆಲ್ ಫ್ರೆಡ್‌ ಗೆರಾಲ್ಡ್ ನಿಂದ ಹಾಡಿಸುತ್ತಿದ್ದಾನೆ. ಇದರಲ್ಲಿಯೂ ಸ್ವಜನ ಪಕ್ಷಪಾತ (ನ್ಯಾಪೋಟಿಸಮ್) ಹುಡುಕು ಬದಲು, ಹಾಡು ಕೇಳುತ್ತಾ ಆನಂದಿಸಿ!

the-ruins

ಖಜಾನೆಯೇ ಸಿಕ್ಕಂತೆ : ಕಳೆದುಹೋದ ನಿಧಿ/ಖಜಾನೆ ಹುಡುಕು ಖಯಾಲಿ ಅಮೆರಿಕಾ, ಯೂರೋಪಿನವರಿಗೇ ಹೆಚ್ಚು. ನಮ್ಮಲ್ಲಿ ನಿಧಿಗಾಗಿ ನೆಲ ಅಗೆದು ಹುಡುಕಂತೆ, ಅಮೆರಿಕಾದ ಹಾಲಿವುಡ್‌ ಮಂದಿ ಬೊಂಬಾಟ್‌ ಸಿನಿಮಾ ಮಾಡಿ ಹಣ ಬಾಚುತ್ತಾರೆ, ಆ ಮೂಲಕ ಖಜಾನೆ ಸಿಗುತ್ತದೆ. `ಕ್ವೀನ್ಸ್ ಜ್ವೆಲ್ಸ್‌’ ಇಂಥದ್ದೇ ಒಂದು ಚಿತ್ರ, ಇಷ್ಟರಲ್ಲಿ ಭಾರತಕ್ಕೂ ಬರಲಿದೆ. ಯಾವ ಗುಹೆ, ಕಣಿವೆಗಳಿಗೆ ಹೋಗಿ ಶೂಟಿಂಗ್‌ ನಡೆಸಿದ್ದರೋ, ಆ ಚಿತ್ರದ ತಾರೆಯರು ಪ್ರಮೋಶನ್‌ ಗಾಗಿ ಅಲ್ಲಿಂದಲೇ ಪಾರ್ಟಿ ನಡೆಸುತ್ತಿದ್ದಾರೆ. ಯಾರಿಗೆ ಈ ಪಾರ್ಟಿಗೆ ಆಹ್ವಾನ ಸಿಕ್ಕಿತೋ, ಅವರಿಗೆ ಖಜಾನೆ ಅಲ್ಲದಿದ್ದರೂ `ಖಾನಾ’ ಅಂತೂ ಗ್ಯಾರಂಟಿ!

janell-sindab-performing-at-eve

ಅಸಲಿ ಮಜಾ : ಇತ್ತೀಚೆಗೆ ಈ ಡಿಜಿಟಲ್ ಜಮಾನಾದಲ್ಲೂ ಲೈವ್ ‌ಮ್ಯೂಸಿಕ್‌ ಶೋಸ್‌ ಒಳ್ಳೆ ದುಡ್ಡು ಬಾಚುತ್ತಿವೆ! ಭಾರತದಲ್ಲೂ ಈ ಟಿಕೆಟ್‌ ದರ 25-50 ಸಾವಿರ ಮೀರಿದೆ! ಜನೇಲಿ ಸಿಂದಾಲ್ ಎಂಬಾಕೆ ಇಂಥದ್ದೇ  ಟ್ಯೂಬ್‌ ಸೆನ್ಸೇಶನ್‌ ಸಿಂಗರ್‌. ಆಕೆಯ ಲೈವ್ ಫರ್ಮಾರ್ಮೆನ್ಸ್, ನೋಡಲಿಕ್ಕಾಗಿ 50 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಒಂದೇ ಕಡೆ ನೆರೆದಿದ್ದರು. ಸ್ಟೇಜ್‌ ಮೇಲೆ ಕಣ್ಣಾರೆ ನೋಡಿದಾಗ ಸಿಗುವ ಮಜಾ, ಸ್ಕ್ರೀನ್‌ ನೋಡಿದಾಗ ಖಂಡಿತಾ ಸಿಗಲ್ಲ! ಹೀಗಾಗಿ ಈಕೆಯ ಲೈವ್‌ ಶೋಸ್‌ ದಿನೇದಿನೇ ಹೆಚ್ಚುತ್ತಿವೆ. ಹಾಗೆಯೇ ಹಾರ್ಡ್‌ ಕಾಪಿ ಪುಸ್ತಕ ಓದುವಾಗಿನ ಮಜಾ ಮೊಬೈಲ್ ‌ಸ್ಕ್ರೀನಿನ ಇಬುಕ್ಸ್ ನಿಂದ ಬಂದೀತೇ?

2025-italia-film-festival(1)

ಮನರಂಜನೆಗೆ ಭಾರಿ ಟ್ಯಾಕ್ಸ್ : ಸೋಫಿಯಾ ಮಿಲೋಸ್‌ ಎಂಬ ಈಕೆ ಇಟಲಿಯ ನಟಿ ಹಾಗೂ ಲಾಸ್‌ ಏಂಜಲೀಸ್‌ ನ ಇಟ್ಯಾಲಿಯನ್‌ ಫಿಲ್ಮ್ ಫೆಸ್ಟಿಲ್ ‌ನಲ್ಲಿ ಮೋಡಿ ಮಾಡಲೆಂದೇ ಬಂದಿದ್ದಳು. ಅಲ್ಲಿನ ಟ್ರಂಪಣ್ಣ ವಿದೇಶೀ ಚಿತ್ರಗಳಿಗೆ 100% ತೆರಿಗೆ ಹೇರುತ್ತಾನೆಂದು ಈಕೆಗೇನು ಗೊತ್ತು? ಇವರ ದೇಶದ ಒಂದಿಷ್ಟು ಚಿತ್ರಗಳು ಅಮೆರಿಕಾದಲ್ಲಿ ಓಡುತ್ತಿದ್ದುದು ನಿಜ, ಅವು ಈಗ 2 ಪಟ್ಟು ದುಬಾರಿ ಆಗಿರುವುದರಿಂದ, ಅಮೆರಿಕನ್ನರು ಅವನ್ನು ಮೂಸುತ್ತಿಲ್ಲವಂತೆ!

parent-and-child

ತಾಯಂದಿರಿಗೂ ಈಗ ತರಬೇತಿ : ಆಟಿಸ್ಟಿಕ್‌ ಚೈಲ್ಡ್ ನ್ನು ಸಾಕುವುದೆಂದರೆ ಅದಕ್ಕಿಂತ ಕಠಿಣಕರ ಕರ್ತವ್ಯ ಮತ್ತೊಂದಿಲ್ಲ. ಆದರೆ ಇಂಥ ಮಕ್ಕಳ ತಾಯಂದಿರು ನಗುನಗುತ್ತಲೇ ಆ ಹೊಣೆ ಹೊರುತ್ತಾರೆ. ತಾವು ಹೆತ್ತ ಮಗು ತಾನೇ ಎಂದು ಅದರ ನ್ಯಾಚುರಲ್ ಹ್ಯಾಂಡಿ ಕ್ಯಾಪ್‌ ಸ್ಥಿತಿಯನ್ನು ಸ್ವೀಕರಿಸುತ್ತಾರೆ. ಹ್ಞಾಂ, ಇಂಥ ಪ್ರತಿಯೊಬ್ಬ ತಾಯಿಗೂ ಅಂಥ ಮಗುವನ್ನು ಎಲ್ಲಾ ಪರಿಸ್ಥಿತಿಗಳಲ್ಲಿಯೂ ಹೇಗೆ ಹ್ಯಾಂಡ್‌ ಮಾಡುವುದೆಂದು ಖಂಡಿತಾ ಗೊತ್ತಾಗೋಲ್ಲ. ಹೀಗಾಗಿ ಆಧುನಿಕ ಚೈಲ್ಡ್ ಸೈಕಾಲಜಿಸ್ಟ್ ಇಂಥ ತಾಯಂದಿರಿಗಾಗಿ ಹೊಸ ತರಬೇತಿ ಶುರು ಮಾಡಿದ್ದಾರೆ, ಆ ಮೂಲಕ ಅಂಥ ಮಕ್ಕಳಿಗೆ ಯಾವಾಗ ಏನೇ ಕಷ್ಟ ಬಂದರೂ ಸಂಭಾಳಿಸಬಹುದಾಗಿದೆ! ಇಂಥ ಮಕ್ಕಳು ಮಾಮೂಲಿ ಮಕ್ಕಳಿಗಿಂತ ಹೆಚ್ಚ ಆಪ್ತರಾಗುತ್ತಾರೆ, ಆ ಮಕ್ಕಳು ತಾಯಿಯ ವಾತ್ಸಲ್ಯಕ್ಕೆ ತೋರುವ ಕೃತಜ್ಞತೆಯನ್ನು ಮಾಮೂಲಿ ಮಕ್ಕಳು ತೋರವರು.

patients-medical-staff

ವರದಾನವಾದ ವಿಜ್ಞಾನ : `ಸರೋಗೆಸಿ ಫಾರ್‌ ಆಲ್’ ಎಂಬ ಒಂದ ಕಂಪನಿ ಮಾಹಿತಿಪೂರ್ವಕವಾದ ಒಂದು ವೆಬ್‌ ಸೈಟ್ ತಯಾರಿಸಿ, ಬೇಕಾದವರಿಗೆ ಕಾಯುವ ಗೋಜಿಲ್ಲದಂತೆ ಆಮೆರಿಕಾದಲ್ಲಿ ಸರೊಗೇಟ್‌ ಹೆಂಗಸರ ಅರೇಂಜ್‌ ಮೆಂಟ್‌ ಮಾಡಿಕೊಟ್ಟಿದೆ. ಅಲ್ಲಿ ಇನ್ನೂ ಸರೋಗೆಸಿ ಬ್ಯಾನ್‌ ಆಗಿಲ್ಲ. ಹೆಣ್ಣು ನೌಕರಿಗೆ ತೊಡಗಿದಾಗಿನಿಂದ, ಮೊದಲು ಕೆರಿಯರ್‌ ನಂತರ  ಫ್ಯಾಮಿಲಿ ಅನ್ನುತ್ತಾರಾದ್ದರಿಂದ, ಸರೋಗೆಸಿಯ ಡಿಮ್ಯಾಂಡ್‌ ಬಹಳ ಹೆಚ್ಚಿದೆ. ಈ ರೀತಿ ವೈದ್ಯರು ತಮ್ಮ ಕೈ ಚಳಕ ತೋರಿ, ಹೆಚ್ಚು ಹೆಚ್ಚು ಪ್ರನಾಳ ಶಿಶುಗಳ ಜನನಕ್ಕೆ ಕಾರಣರಾಗಿ, ಹೆಚ್ಚು ಬಂಜೆಯರ ಮಡಿಲು ತುಂಬುತ್ತಿದ್ದಾರೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ