ಜೈಲಿನಲ್ಲಿ ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ. ಅವರ ಸ್ಥಿತಿ ನೋವಿನಿಂದ ಕೂಡಿದೆ. ತಾಯಿಯಾಗಿ ನಮಗೆ ಪವಿತ್ರಾಗೌಡ ಅಥವಾ ಇತರ ಯಾವುದೇ ಹೆಣ್ಣುಮಗಳು ಇರಲಿ ಎಲ್ಲರೂ ಒಂದೇ, ಆಕೆಯೂ ನನಗೆ ಮಗಳ ಸಮಾನ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಮಹಿಳಾ ಕೈದಿಗಳ ಯೋಗಕ್ಷೇಮ ಹಾಗೂ ಸಮಸ್ಯೆಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಪವಿತ್ರಾಗೌಡ ಮತ್ತು ಎಲ್ಲರ ಜೊತೆಗೆ ಮಾತನಾಡಿದ್ದೇನೆ.

ಮಹಿಳಾ ಕೈದಿಗಳನ್ನು ಇಟ್ಟಿರುವ ಬ್ಯಾರಕ್‌ಗಳನ್ನು ಪರಿಶೀಲಿಸಿದ್ದೇನೆ. ಕೈದಿಗಳಿಗೆ ನೀಡುವ ಊಟ, ಸೋಪು, ಪೇಸ್ಟ್‌ ಸೇರಿದಂತೆ ಇತರೆ ಸೌಲಭ್ಯಗಳನ್ನೂ ಪರಿಶೀಲಿಸಿದ್ದೇನೆ. ಇದೇ ವೇಳೆ ಸೊಳ್ಳೆಗಳ ಕಾಟ ವಿಪರೀತವಿದೆ ಎಂಬುದಾಗಿ ಹಲವು ಕೈದಿಗಳು ನೋವು ತೋಡಿಕೊಂಡರು ಎಂದು ಹೇಳಿದ್ದಾರೆ. ಪವಿತ್ರಾ ಗೌಡ ಸೇರಿದಂತೆ ಹಲವು ಕೈದಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದುಕೊಂಡೆ. ಅವರ ಸ್ಥಿತಿ ಹೇಳಬಾರದು. ಪವಿತ್ರಾ ನನಗೆ ಮಗಳ ಸಮಾನ. ಕಾನೂನು ಪ್ರಕಾರ ಏನು ಆಗಬೇಕೊ ಅದು ಆಗುತ್ತದೆ. ಮಹಿಳೆಯರು ಭಾವನಾತ್ಮಕ ಜೀವಿಗಳು. ಇತರೆ ಮಹಿಳಾ ಕೈದಿಗಳ ಸಮಸ್ಯೆಯನ್ನೂ ಆಲಿಸಿದ್ದೇನೆ. ಒಂದು ತಪ್ಪನ್ನು ಮಾಡಿ ಜೈಲಿಗೆ ಹೋಗಿರುತ್ತಾರೆ. ಮತ್ತೆ ನಾವು ಅವರ ಬಗ್ಗೆ ಹೆಚ್ಚಾಗಿ ಮಾತನಾಡಿದಾಗ ಮಾನಸಿಕವಾಗಿ ಕುಗ್ಗಿ ಹೋಗುತ್ತಾರೆ ಎಂದು ಹೇಳಿದರು.

200 ಮಂದಿ ಮಹಿಳಾ ಖೈದಿಗಳು ಜೈಲಿನಲ್ಲಿದ್ದಾರೆ. ಇಂದು ಆರು ಮಂದಿ ರಿಲೀಸ್ ಆಗಿದ್ದಾರೆ. ಮಹಿಳಾ ಕೈದಿಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ಮಹಿಳಾ ಕೈದಿಗಳಿಗೆ ನೀಡುವ ಊಟವನ್ನು ಸೇವಿಸಿ ಪರಿಶೀಲನೆ ಮಾಡಿದ್ದೇನೆ. ತರಕಾರಿ ದಿನಸಿ ಸ್ಟೋರ್ ರೂಮ್ ಸ್ವಚ್ಛತೆ ಬಗ್ಗೆ ಪರಿಶೀಲಿಸಲಾಗಿದೆ ಎಂದು ಹೇಳಿದರು.

ಎಷ್ಟೋ ಮಂದಿಗೆ ಬೇಲ್ ಆಗಿದೆ ಶ್ಯೂರಿಟಿ ಇಲ್ಲ. ಪ್ರಕರಣಗಳಲ್ಲಿ ಖುಲಾಸೆಯಾಗಿದ್ದಾರೆ. ಆದರೆ ಹಣ ಕಟ್ಟಲಾಗದೆ ಜೈಲಿನಲ್ಲಿದ್ದಾರೆ. ನೈಜೀರಿಯಾ, ಸೌತ್ ಆಫ್ರಿಕಾ ಸೇರಿದಂತೆ ಹತ್ತು ಮಂದಿ ಪುಟ್ಟ ಮಕ್ಕಳಿದ್ದಾರೆ. ಅಂಗನವಾಡಿಯಲ್ಲಿ ನಾಲ್ಕು ಮಂದಿ ಟೀಚರ್ಸ್ ಇದ್ದಾರೆ. ಮಕ್ಕಳು ಕನ್ನಡ, ಇಂಗ್ಲಿಷ್ ಭಾಷೆ ಮಾತನಾಡುವುದನ್ನು ಕಂಡರೆ ಖುಷಿಯಾಗುತ್ತದೆ. ಜೈಲು ಭೇಟಿ ಒಂದು ಭಾವನಾತ್ಮಕ ಕ್ಷಣ. ಟೈಮ್‌ ಪಾಸ್​ಗಾಗಿ ಮಾಡುವ ಕರಕುಶಲ ವಸ್ತುಗಳು ಅದ್ಭುತ ಎಂದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ