ನಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಬಹುತೇಕ ನಾಗರಿಕತೆಗಳು ನದಿಯ ಸುತ್ತಮುತ್ತಲೇ ಹುಟ್ಟಿಕೊಂಡಿದ್ದು ನಂತರ ಆ ಸಾಮ್ರಾಜ್ಯದ ವಿಸ್ತರಣೆಗಳು, ವ್ಯಾಪಾರ ಮತ್ತು ವಹಿವಾಟುಗಳು ಅಯಾಯಾ ಪ್ರದೇಶಕ್ಕೆ ಸೇರಿದ ಬಂದರುಗಳು ಮತ್ತು ಸಮುದ್ರ ಮಾರ್ಗಗಳ ಮೂಲಕ ನಿರ್ಮಾಣವಾಗಿವೆ.  ಜಾಗತಿಕ ಶಕ್ತಿಯಾಗಲು ಬಯಸುವ ಯಾವುದೇ ರಾಷ್ಟ್ರಕ್ಕೆ ಸಮುದ್ರವೇ ಮೊದಲ ಶಕ್ತಿಯಾಗಿದ್ದು ಅದನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತದೆಯೋ ಆಷ್ಟರ ಮಟ್ಟಿಗೆ ಆ ರಾಷ್ಟ ಬಲಿಷ್ಟವಾಗುತ್ತದೆ ಎನ್ನುವುದಕ್ಕೆ ಇತ್ತೀಚಿನ ಇರಾನ್ ಮತ್ತು ಅಮೇರಿಕಾದ ಯುದ್ಧದ ನಂತರ ಇರಾನ್ ಹಾರ್ಮುಜ್ ಬಂದರನ್ನು ಬಳಸಿಕೊಂಡು ಜಾಗತಿಕವಾಗಿ ಇಡೀ ವಿಶ್ವವನ್ನೇ ಹೇಗೆ ಆಟವಾಡಿಸುತ್ತಿದೆ ಎಂಬುದೇ ಜ್ವಲಂತ ಉದಾಹರಣೆಯಾಗಿದೆ.

ನಮ್ಮ ಭಾರತ ದೇಶದ ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ: ಅರಬ್ಬೀ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ಹೀಗೆ ಮೂರು ಕಡೆ ನೀರಿನಿಂದ ಆವೃತವಾಗಿ ಒಂದು ಕಡೆ ಭೂಮಿಯಿಂದ ಆವೃತವಾಗಿರುವ ಪರ್ಯಾಯ ದ್ವೀಪವಾಗಿದೆ. ಹೀಗೆ ಭೌಗೋಳಿಕವಾಗಿ ಕಡಲ ಚಟುವಟಿಕೆಗಳಿಗೆ ಅತ್ಯಂತ ಅನುಕೂಲಕರ ರಾಷ್ಟ್ರಗಳಲ್ಲಿ ಒಂದಾಗಿದ್ದು, 10,000 ಕಿ.ಮೀ.ಗೂ ಹೆಚ್ಚು ಕರಾವಳಿಗಳು , ಹಿಂದೂ ಮಹಾಸಾಗರದ ಪ್ರಮುಖ ವ್ಯಾಪಾರ ಮಾರ್ಗಗಳ ಕೇಂದ್ರ ಸ್ಥಾನ, ಹಲವಾರು ನೈಸರ್ಗಿಕ ಆಳ-ನೀರಿನ ಬಂದರುಗಳು ಮತ್ತು ಅನುಕೂಲಕರ ಮಾನ್ಸೂನ್ ಮಾರುತಗಳು ಐತಿಹಾಸಿಕವಾಗಿ ಸಂಚರಣೆಗೆ ಸಹಾಯ ಮಾಡುತ್ತವೆಯಾದರೂ, ಭಾರತವು ಅತ್ಯಂತ ಕಡಿಮೆ ಸಾಮರ್ಥ್ಯದಲ್ಲಿ ತನ್ನ ಕಡಲ ಸಂಪತ್ತು ಮತ್ತು ಮಾರ್ಗವನ್ನು ಬಳಸಿಕೊಳ್ಳುತ್ತಿದೆ ಎಂದು ತಿಳಿಸಲು ಬಹಳ ಬೇಸರ ಎನಿಸುತ್ತದೆ.

ನೌಕಾ ಶಕ್ತಿ ಮತ್ತು ಕಡಲ ವ್ಯಾಪಾರದ ನಿರ್ಲಕ್ಷ್ಯದಿಂದಾಗಿಯೇ ಶತಶತಮಾನಗಳಿಂದ ಭಾರತದ ಮೇಲೆ ಜಾಗತಿಕ ಶಕ್ತಿಗಳ ಆಕ್ರಮಣ ಮತ್ತು ವಸಾಹತುಶಾಹಿ ಶೋಷಣೆಗೆ ಕಾರಣವಾಗಿರುವುದರ ಹೊರತಾಗಿಯೂ, ಸ್ವಾತಂತ್ರ್ಯದ ನಂತರವೂ ನಮ್ಮ ದೇಶವನ್ನು ಆಳಿದ ಸರ್ಕಾರಗಳು ಇದರಿಂದ ಯಾವುದೇ ಪಾಠಗಳನ್ನು ಕಲಿಯದೇ ತನ್ನ ಕಡಲ ಸಾಮರ್ಥ್ಯವನ್ನು ಸೂಕ್ತವಾಗಿ ಬಳಸಿಕೊಳ್ಳದೇ ಇರುವುದು ಅಕ್ಷಮ್ಯ ಅಪರಾಧ ಎಂದರೂ ತಪ್ಪಾಗದು. ಸಿಂಗಾಪುರ, ನೆದರ್‌ಲ್ಯಾಂಡ್ಸ್, ದಕ್ಷಿಣ ಕೊರಿಯಾ ಅಥವಾ ಚೀನಾದಂತಹ ಇತರ ಸಣ್ಣ ಅಥವಾ ಕಡಿಮೆ ಅನುಕೂಲಕರ ಸ್ಥಾನದಲ್ಲಿರುವ ರಾಷ್ಟ್ರಗಳು ತಮ್ಮ ಕಡಲ ಮಾರ್ಗವನ್ನು ಅತ್ಯಂತ ಸಮರ್ಥವಾಗಿ ವ್ಯಾಪಾರ, ರಕ್ಷಣೆ ಮತ್ತು ತಮ್ಮ ದೇಶದ ಅಭಿವೃದ್ಧಿಗಾಗಿ ಬಳಸಿಕೊಳ್ಳುತ್ತಿರುವುದನ್ನು ನೋಡಿಯೂ ಸಹಾ ಹಲವಾರು ದಶಕಗಳಿಂದ ನಾವು ನಮ್ಮ ಸಮುದ್ರ ಸಾಮರ್ಥ್ಯದ ಶೇ 50ರಷ್ಟನ್ನೂ ಸಹ ಬಳಸುತ್ತಿಲ್ಲ. ವಿಪರ್ಯಾಸವೆಂದರೆ, ನಮ್ಮ ನೆರೆಹೊರೆಯವರು ನಮ್ಮ ನೀರಿನಿಂದ ಲಾಭ ಪಡೆಯುತ್ತಿದ್ದರೂ, ನಾವು ನಮ್ಮ ಭೌಗೋಳಿಕ ಸಂಪತ್ತನ್ನು ಬಳಸಿಕೊಳ್ಳದೆ ಹಿಂದುಳಿದಿದ್ದೇವೆ.

2025–26ರ ವರದಿಯಂತೆ ನಮ್ಮ ನೆರೆಹೊರೆ ರಾಷ್ಟ್ರಗಳಾದ ಚೀನಾ, ದಕ್ಷಿಣ ಕೊರಿಯಾ ಮತ್ತು ಜಪಾನ್ ದೇಶಗಳು ಹಡಗು ನಿರ್ಮಾಣ ಮಾರುಕಟ್ಟೆಯ 92% ಕ್ಕಿಂತ ಹೆಚ್ಚು ನಿಯಂತ್ರಣ ಹೊಂದಿದದ್ದರೆ, ಭಾರತವು ಜಾಗತಿಕ ಹಡಗು ನಿರ್ಮಾಣ ಮಾರುಕಟ್ಟೆಯಲ್ಲಿ 1% ಕ್ಕಿಂತ ಕಡಿಮೆ ಪಾಲನ್ನು ಹೊಂದಿದ್ದು, ವಿಶ್ವದ 16 ನೇ ಸ್ಥಾನದಲ್ಲಿದೆ.

ಹಾಗೆ ನೋಡಿದರೆ, ಚೋಳರು ಮತ್ತು ಮರಾಠರ ನೌಕಾ ಶಕ್ತಿ, ವ್ಯಾಪಾರದ ಪ್ರಭಾವ ಮತ್ತು ಕಾರ್ಯತಂತ್ರದ ಪ್ರತಿಭೆಯು ಪ್ರಗತಿ ಮತ್ತು ಶಕ್ತಿಯ ಮಾರ್ಗಗಳಾಗಿ ಮಾರ್ಪಡಿಸಿಕೊಂಡು ಸಾಗರಗಳ ಅವಕಾಶಗಳನ್ನು ಸೇತುವೆಗಳಾಗಿ ಬಳಸಿಕೊಂಡು ಹಡಗು ನಿರ್ಮಾಣ ಮತ್ತು ಕರಾವಳಿ ವ್ಯಾಪಾರಕ್ಕೆ ಹೆಸರುವಾಸಿಯಾಗಿತ್ತು. ಅದಕ್ಕಿಂತಲೂ ಮುಂಚೆಯೇ 1498 ರಲ್ಲಿ ವಾಸ್ಕೋ ಡ ಗಾಮಾ ಹಿಂದೂ ಮಹಾಸಾಗರದ ಮೂಲಕ ಭಾರತಕ್ಕೆ ಒಂದು ಸುರಕ್ಷಿತವಾದ ಮಾರ್ಗವನ್ನು ಕಂಡುಹಿಡಿಯಲು ಹೆಣಗಾಡುತ್ತಿದ್ದಾಗ, ಮಾನ್ಸೂನ್ ಮಾರುತಗಳು ಮತ್ತು ಹಿಂದೂ ಮಹಾಸಾಗರದ ವ್ಯಾಪಾರ ಮಾರ್ಗಗಳಲ್ಲಿ ಚೆನ್ನಾಗಿ ಪರಿಣತಿ ಹೊಂದಿದ್ದ ಗುಜರಾತ್ ಮೂಲಕ ಕಾಂಜಿ ಮಾಲಂ ಎಂಬ ವ್ಯಾಪಾರಿ ಅಗತ್ಯವಾದ ಸಂಚರಣೆ ಜ್ಞಾನವನ್ನು ಒದಗಿಸಿ, ವಾಸ್ಕೋಗೆ ದ ವೇ ಎಂದು ತೋರಿಸಿದ ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ. ಎಲ್ಲಕ್ಕಿಂತಲೂ ಅಚ್ಚರಿಯ ವಿಷಯ ಎಂದರೆ, ಕಾಂಜಿ ಮಾಲಂ ಅವರ ಹಡಗು ವಾಸ್ಕೋ ಡ ಗಾಮನ ಹಡಗಿಗಿಂತ ಗಮನಾರ್ಹವಾಗಿ ದೊಡ್ಡದಾಗಿದ್ದು, ಆ ಹಡಗಿನಲ್ಲಿ ಎಲ್ಲಾ ರೀತಿಯ ಸರಕುಗಳೂ ಇದ್ದು ಸಮುದ ಮಾರ್ಗದ ಮಧ್ಯದಲ್ಲೇ ವ್ಯಾಪಾರ ವಹಿವಾಟುಗಳನ್ನು ನಡೆಸುವಷ್ಟರ ಮಟ್ಟಿಗೆ ಇತ್ತು ಎನ್ನಲಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ