ಬೆಂಗಳೂರಿನ ಹಳೆಯ ಬಟ್ಟೆಯ ಕಸದ ಸಮಸ್ಯೆಗೆ ಇಬ್ಬರು ಯುವಕರ ವಿಭಿನ್ನ ಉತ್ತರ

ಹಳೆಯ ಬಟ್ಟೆಯಿಂದ ‘ನೋ ಕಸ’ದವರೆಗೆ… ಬದಲಾಗುತ್ತಿರುವ ನಮ್ಮ ಬದುಕಿನ ಒಂದು ನೆನಪು

ನಾವೆಲ್ಲರೂ ಚಿಕ್ಕವರಿದ್ದಾಗಿನ ದಿನಗಳನ್ನು ಒಮ್ಮೆ ನೆನಪಿಸಿಕೊಂಡರೆ, ನಮ್ಮ ಮನೆಗಳಲ್ಲಿದ್ದ ಸರಳ ಜೀವನಶೈಲಿ ಕಣ್ಣ ಮುಂದೆ ಬರುತ್ತದೆ. ಕುಟುಂಬ ಆರ್ಥಿಕವಾಗಿ ಎಷ್ಟೇ ಸಬಲವಾಗಿದ್ದರೂ ಮಕ್ಕಳಿಗೆ ಆಗಾಗ ಹೊಸ ಬಟ್ಟೆ ಹೊಲಿಸುವ ಪದ್ಧತಿ ಇರಲಿಲ್ಲ. ಯುಗಾದಿ, ಗೌರಿ-ಗಣೇಶ, ದಸರಾ, ದೀಪಾವಳಿ ಮುಂತಾದ ಪ್ರಮುಖ ಹಬ್ಬಗಳಿಗಷ್ಟೇ ಹೊಸ ಬಟ್ಟೆ ಎಂಬುದು ಒಂದು ರೀತಿಯ ಸಂಪ್ರದಾಯವಾಗಿತ್ತು. ಮನೆಯಲ್ಲಿನ ಸಾಮಾನ್ಯ ದಿನಗಳಲ್ಲಿ ಧರಿಸಲು ಅಣ್ಣ ಅಥವಾ ಅಕ್ಕ ಬಳಸಿದ್ದ ಬಟ್ಟೆಗಳೇ ನಮಗೆ ಸಿಗುತ್ತಿದ್ದವು. ಅದು ಕೇವಲ ಒಡಹುಟ್ಟಿದವರ ಬಟ್ಟೆಗಳಿಗೆ ಮಾತ್ರ ಸೀಮಿತವಾಗಿರಲಿಲ್ಲ. ಸಂಬಂಧಿಕರ ಮಕ್ಕಳ ಬಟ್ಟೆಗಳನ್ನೂ ಯಾವುದೇ ಸಂಕೋಚ ಅಥವಾ ಮುಜುಗರವಿಲ್ಲದೆ ಬಳಸುತ್ತಿದ್ದೆವು. ಅಷ್ಟೇ ಅಲ್ಲ, ನಾವು ದೊಡ್ಡವರಾದ ಮೇಲೆ ನಮ್ಮ ಬಟ್ಟೆಗಳು ನಮ್ಮ ತಮ್ಮ-ತಂಗಿಯರಿಗೆ, ಸಂಬಂಧಿಕರ ಮಕ್ಕಳಿಗೆ ಅಥವಾ ನಮ್ಮ ಮನೆಗಳಲ್ಲಿ ಕೆಲಸ ಮಾಡುತ್ತಿದ್ದವರ ಮಕ್ಕಳಿಗೆ ಹೋಗುತ್ತಿದ್ದವು. ಒಂದು ಬಟ್ಟೆ ಒಬ್ಬರಿಂದ ಮತ್ತೊಬ್ಬರಿಗೆ ಹೀಗೆ ಸಾಗುತ್ತಾ, ಅದರ ಉಪಯುಕ್ತ ಜೀವನ ಹಲವು ವರ್ಷಗಳವರೆಗೆ ಮುಂದುವರಿಯುತ್ತಿತ್ತು.

ಊರಿನ ಹಬ್ಬಕ್ಕೆ ಹೋಗುವಾಗಲೂ ಹಳೆಯದಾದರೂ ಬಳಸಬಹುದಾದ ಬಟ್ಟೆಗಳನ್ನು ತೆಗೆದುಕೊಂಡು ಹೋಗುವುದು ಸಾಮಾನ್ಯವಾಗಿತ್ತು. ಆ ಬಟ್ಟೆಗಳನ್ನು ಪಡೆಯಲು ಕಾಯುತ್ತಿದ್ದವರೂ ಇರುತ್ತಿದ್ದರು. ಹೀಗಾಗಿ ಆಗಿನ ಕಾಲದಲ್ಲಿ ‘ಹಳೆಯ ಬಟ್ಟೆ’ ಎಂದರೆ ಕಸವಲ್ಲ; ಇನ್ನೊಬ್ಬರಿಗೆ ಉಪಯೋಗವಾಗಬಹುದಾದ ಒಂದು ವಸ್ತು ಎಂಬ ಮನೋಭಾವವೇ ಸಮಾಜದಲ್ಲಿತ್ತು.

ರೆಡಿಮೇಡ್ ಬಟ್ಟೆಗಳ ಪ್ರವೇಶದೊಂದಿಗೆ ಬದಲಾದ ಚಿತ್ರ

Wholesale Readymade Garment Markets in Coimbatore

ಆದರೆ ಕಾಲ ಬದಲಾಯಿತು. ರೆಡಿಮೇಡ್ ಬಟ್ಟೆಗಳು ಕೈಗೆಟುಕುವ ಬೆಲೆಯಲ್ಲಿ ಗಲ್ಲಿ-ಗಲ್ಲಿಗಳಲ್ಲಿಯೂ ದೊರೆಯತೊಡಗಿದವು. ಜೀನ್ಸ್, ಟಿ-ಶರ್ಟ್, ಮಿಡ್ಡಿ, ಮ್ಯಾಕ್ಸಿ ಸೇರಿದಂತೆ ವಿವಿಧ ಮಾದರಿಯ ಬಟ್ಟೆಗಳು ಸುಲಭವಾಗಿ ಲಭ್ಯವಾದವು. ಬಟ್ಟೆ ಖರೀದಿಸುವುದು ಅಗತ್ಯಕ್ಕಿಂತ ಹೆಚ್ಚಾಗಿ ಫ್ಯಾಷನ್ ಮತ್ತು ಜೀವನಶೈಲಿಯ ಒಂದು ಭಾಗವಾಗತೊಡಗಿತು. ಇದರ ಪರಿಣಾಮವಾಗಿ, ಒಂದು ಕಾಲದಲ್ಲಿ ಸಹಜವಾಗಿದ್ದ ಹಳೆಯ ಬಟ್ಟೆಗಳನ್ನು ಮತ್ತೊಬ್ಬರಿಗೆ ನೀಡುವ, ಮರುಬಳಕೆ ಮಾಡುವ ಸಂಪ್ರದಾಯ ನಿಧಾನವಾಗಿ ಕಡಿಮೆಯಾಯಿತು. ಇಂದು ಸಮಸ್ಯೆ ಏನೆಂದರೆ—ನಾವು ಹಳೆಯ ಬಟ್ಟೆಗಳನ್ನು ಬಳಸುವುದನ್ನು ನಿಲ್ಲಿಸಿದ್ದೇವೆ. ಆದರೆ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡುವ ವ್ಯವಸ್ಥೆಯೂ ಎಲ್ಲೆಡೆ ಲಭ್ಯವಿಲ್ಲ. ಪರಿಣಾಮವಾಗಿ, ಬಳಸಲಾಗದ ಬಟ್ಟೆಗಳು ಕೂಡ ಕಸದ ರಾಶಿಯ ಭಾಗವಾಗುತ್ತಿವೆ.

“ನಮ್ಮ ಹಳೆಯ ಬಟ್ಟೆಗಳನ್ನು ಯಾರು ತೆಗೆದುಕೊಳ್ಳುತ್ತಾರೆ?”

ಬೆಂಗಳೂರಿನ ಸಾವಿರಾರು ಮನೆಗಳಲ್ಲಿ ಬಹುಶಃ ಯಾರೂ ಗಂಭೀರವಾಗಿ ಯೋಚಿಸದ ಈ ಸರಳ ಪ್ರಶ್ನೆಯೇ ಇಬ್ಬರು ಯುವ ಉದ್ಯಮಿಗಳ ಜೀವನದಲ್ಲಿ ಒಂದು ದೊಡ್ಡ ಬದಲಾವಣೆಗೆ ಕಾರಣವಾಯಿತು. ಕಾಗದ, ಪ್ಲಾಸ್ಟಿಕ್, ಲೋಹದಂತಹ ಒಣ ತ್ಯಾಜ್ಯವನ್ನು ಸಂಗ್ರಹಿಸಲು ವ್ಯವಸ್ಥೆಗಳಿವೆ. ಮನೆ ಬಾಗಿಲಿಗೆ ಬರುವ ಕಸದ ಸಂಗ್ರಹ ವ್ಯವಸ್ಥೆಯೂ ಇದೆ. ಆದರೆ ವಾರ್ಡ್‌ರೋಬ್‌ ತುಂಬಿಕೊಂಡಿರುವ ಹಳೆಯ ಬಟ್ಟೆಗಳನ್ನು ಏನು ಮಾಡಬೇಕು ಎಂಬ ಪ್ರಶ್ನೆಗೆ ಸಾಮಾನ್ಯವಾಗಿ ಸ್ಪಷ್ಟ ಉತ್ತರವೇ ಇರುವುದಿಲ್ಲ. ಇದೇ ಸಮಸ್ಯೆಯನ್ನು ಗಮನಿಸಿದ ಬೆಂಗಳೂರಿನ ಇಬ್ಬರು ಯುವಕರು—ಪ್ರಸಾದ್ ಲಿಂಗವಾರ್ ಮತ್ತು ನಚಿಕೇತ್ ಆಚಾರ್ಯ—ಹಳೆಯ ಬಟ್ಟೆಯನ್ನು ‘ಕಸ’ವಾಗಿ ನೋಡುವ ಬದಲು ಅದನ್ನು ಮತ್ತೆ ಆರ್ಥಿಕ ಮೌಲ್ಯ ಹೊಂದಿರುವ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಪ್ರಯತ್ನ ಆರಂಭಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ