ಇವರು ಭಾರತದ ಪ್ರಪ್ರಥಮ ಫೀಮೇಲ್ ಹಿಪ್ಹಾಪ್ಕ್ರೂ ಆದದ್ದು ಹೇಗೆ???

ನಿಕಿತಾ ಸಕ್ಸೇನಾ ವೈಲ್ಡ್ ವೈಲ್ಡ್ ‌ವಿಮೆನ್‌ ಎದುರಿಸಿದ ಸಂಘರ್ಷ ಅಂತಿಂಥದ್ದಲ್ಲ! ಇವರು ಸಮಾಜದ ಎಲ್ಲಾ ಕಟ್ಟುಪಾಡುಗಳನ್ನೂ ಮೀರಿ, ಮಿಥ್ಯೆಗಳ ಕೈಬಿಟ್ಟು, ತಮ್ಮದೇ ಒಂದು ಸದೃಢ ಐಡೆಂಟಿಟಿ ಪಡೆದುಕೊಂಡದ್ದು ಹೇಗೆ.....?

``ಸರಿ, ಇದೀಗ ರೆಕಾರ್ಡಿಂಗ್‌ ಶುರುವಾಯಿತು,'' ಎನ್ನುತ್ತಾ ನಾನು ನನ್ನ ರೆಕಾರ್ಡರ್‌ ಆನ್‌ ಮಾಡಿದೆ, ಆಗ ಅಲ್ಲಿದ್ದ ಏಳು ಮಂದಿ ಯುವತಿಯರಲ್ಲಿ ಒಬ್ಬಾಕೆ, ಇತರರನ್ನು ಸಾವಧಾನವಾಗಿ ಇರುವಂತೆ ಎಚ್ಚರಿಸಿದಳು. `ಇದೀಗ ನಾವೆಲ್ಲರೂ ಮಾತನಾಡಿ ಉತ್ತರಿಸಬೇಕು, ತುಸು ಜೋಪಾನ!' ಎಂದು ಆಕೆ ನಸುನಗುತ್ತಾ ನುಡಿದಳು. ಎಲ್ಲರೂ ಈ ನಕಲಿ ಎಚ್ಚರಿಕೆ ಗಮನಿಸಿ ಜೋರಾಗಿ ನಕ್ಕರು. ಅವರ ಆ ನಗು ನಮ್ಮ ಎಲ್ಲಾ ಕಡೆ ಪ್ಲೇಟುಗಳ ಕರ್ಕಶ ಧ್ವನಿಯಲ್ಲಿ ಬೆರೆತುಹೋಯಿತು.

ನಾನು ಮಧ್ಯ ದೆಹಲಿಯ ಒಂದು ರೆಸ್ಟೋರೆಂಟ್‌ನಲ್ಲಿ ವೈಲ್ಡ್ ವೈಲ್ಡ್ ವಿಮೆನ್‌ ತಂಡದ ಸದಸ್ಯರ ಜೊತೆ ಮಾತುಕಥೆ ನಡೆಸಿದ್ದೆ. ಇವರು ಮುಂಬೈನ 8 ಪರ್ಫರ್ಮ್ಸೆನ ಒಂದು ಗುಂಪಿನ ಸದಸ್ಯರು. ತಮ್ಮನ್ನು ತಾವು ಭಾರತದ ಮೊಟ್ಟಮೊದಲ ಆವ್ ಫೀಮೇಲ್ ಹಿಪ್‌ ಹಾಪ್‌ ಕಿಕ್ಟಿವ್ ‌ಎನ್ನುತ್ತಾರೆ. ಸಂದರ್ಶನ ಶುರುವಾಗಿತ್ತು, ಅವರು ತಮ್ಮ ಕಥೆಯ ದಿಕ್ಕನ್ನು ಆರಂಭಿಸಿದ್ದರು. `ಉತ್ತಮ ಮಹಿಳೆ' ಎನಿಸಿಕೊಳ್ಳಬೇಕಾದರೆ ನಮ್ಮ ದೇಶದಲ್ಲಿ ಮೊದಲ ಷರತ್ತು ಸದಾ ಮೌನಕ್ಕೆ ಮೊರೆಹೋಗಬೇಕು. ಅದನ್ನು ಮೂಲತಃ ವಿರೋಧಿಸುವುದೇ ಯುವತಿಯರ ಹೋರಾಟ.

ಕಳೆದ ಅಕ್ಟೋಬರ್‌ ತಿಂಗಳ ಮೊದಲ ವಾರದ ಒಂದು ಮಧ್ಯಾಹ್ನ ನಾನು ಇವರನ್ನು ಭೇಟಿಯಾದೆ. ಆಗ ಅವರು ತಮ್ಮ ಸೌಂಡ್ ಚೆಕ್‌ ಪೂರ್ತಿ ಮಾಡಿದ್ದರು. ಆ ಸಂಜೆ ಅವರು ದೆಹಲಿಯ ಸುಂದರ ನರ್ಸರಿಯೊಂದರಲ್ಲಿ ಪ್ರದರ್ಶನ ನೀಡಲಿದ್ದರು, ಅದು 16ನೇ ಶತಮಾನದ ಐತಿಹಾಸಿಕ ನಾಟಕದ ಭಾಗವಾಗಿತ್ತು. ಅದರ 10 ಮಂದಿ ಕಲಾವಿದರು, ಈ ತಂಡದವರೇ ಆಗಿದ್ದರು. ಅವರು ಕಿರಣ್ ನಾಡರ್‌ ಮ್ಯೂಸಿಯಂ ಆನ್‌ ಆರ್ಟ್ಸ್ ನ ಮ್ಯೂಸಿಕ್‌ ಫೆಸ್ಟಿವ್ ‌`ವಾಯ್ಸೇಜ್‌ ಆಫ್‌ ಡೈವರ್ಸಿಟಿ'ಯಲ್ಲಿ ಪ್ರದರ್ಶನ ನೀಡಲಿದ್ದರು. ಈ ಫೆಸ್ಟಿವ್ ‌ನ್ನು ಕರ್ನಾಟಿಕ್‌ ಗಾಯಕರಾದ ಲೇಖಕ, ಆ್ಯಕ್ಟಿವಿಸ್ಟ್ ಟಿ.ಎಂ. ಕೃಷ್ಣಾ ಕ್ಯೂರೆಟ್‌ ಮಾಡಿದ್ದರು.

ತುಸು ವಿಶ್ರಾಂತಿಗೆಂದು ಈ ಯುವತಿಯರು ಅಲ್ಲಿನ ಹುಲ್ಲು ಹಾಸಿನ ಮೇಲೆ ಕುಳಿತಾಗ, ನಾವು ಪರಸ್ಪರ ಪರಿಚಯ ಪಡೆದುಕೊಂಡೆ. ಅವರ ಆತ್ಮೀಯತೆ ಕಂಡು ಮೂಕಳಾಗಿದ್ದೆ. ಅವರಲ್ಲಿ ಒಬ್ಬಾಕೆ ದೂರುತ್ತಾ ಹೇಳಿದಳು, ``ಇಲ್ಲಿ ಬಲು ಸೆಖೆ.'' ಅದಕ್ಕೆ ಮತ್ತೊಬ್ಬಾಕೆ, ``ಅಷ್ಟೊಂದು ಸೂಕ್ಷ್ಮ ಆಗಬಾರದು,'' ಎಂದಳು.

ವೈಲ್ಡ್ ವೈಲ್ಡ್ ‌ವಿಮೆನ್‌ ತಂಡದಲ್ಲಿ ಐವರು ರಾಂಪರ್ಸ್‌ ಸಹ ಇದ್ದಾರೆ. ಇರಲ್ಲಿ ಇಬ್ಬರು ತಂಡದ ಸಂಸ್ಥಾಪಕಿಯರು : ಅಶ್ವಿನಿ ಹಿರೇಮಠ, ಈಕೆಯ ಸ್ಟೇಜ್‌ ನೇಮ್ `ಕ್ರಾಂತಿನಾರಿ.' ಪ್ರೀತಿ . ಸುತಾರ್‌, ಈಕೆ ಹ್ಯಾಶ್‌ ಟ್ಯಾಗ್‌ ಪ್ರೀತಿ ಎಂದೇ ಪ್ರಸಿದ್ಧಳು. ಬಾಕಿ ಸದಸ್ಯರೆಂದರೆ ಜ್ಯಾಕ್ವಿಲಿನ್‌ ಲುಕಾಸ್‌, ಈಕೆ ಲಾ. ಕ್ವೀನ್‌ ಆದರೆ, ಪ್ರತೀಕ ಇವ್ಯಾಂಜೆಲಿನ್‌ ಪ್ರಭುವಾಣಿ, ಪ್ರತೀಕಾ ಹೆಸರಲ್ಲಿ ಪರ್ಫಾರ್ಮ್ ಮಾಡುತ್ತಾಳೆ. ಶೃತಿ ರಾತ್‌ ಯಾ  ಮಹಿಳೆ. ಇವರಲ್ಲಿ ಮತ್ತೊಬ್ಬಳು ಡ್ಯಾನ್ಸರ್‌ ದೀಪಾ ಸಿಂಗ್‌ ಯಾ ಫ್ಲಾರಾ, ಮತ್ತೊಬ್ಬಳು ಮುಗ್ಧಾ ಮಾಂಡೋಕರ್‌. ಈಕೆ ಬೀಗ್‌ಎಂದೇ ಪ್ರಸಿದ್ಧಳು. ಸ್ಟೇಟ್‌ ಬೋರ್ಡರ್‌ ಶೃತಿ ಭೋಂಸ್ಲೆ ಹಾಗೂ ಗ್ರಾಫಿಟಿ ಆರ್ಟಿಸ್ಟ್ ಗೌರಿ ಗಣಪತ್‌ ದಾಬೋಲ್ಕರ್‌. ಇವರೆಲ್ಲರೂ 20-30ರೊಳಗಿನವರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ