ಮಲೆಯಾಳಂ ಚಿತ್ರರಂಗದ ಈ ಲೀಡಿಂಗ್ ಅಭಿನೇತ್ರಿ ಆ ಇಂಡಸ್ಟ್ರಿಯ ರೂಪುರೇಷೆ ಬದಲಾಯಿಸಿದ್ದು ಹೇಗೆ....?
2017ರ ಚಳಿಗಾಲದ ದಿನಗಳು, ಪಾರ್ವತಿ ತಿರುವೋತ್ತು ತವರಿಗೆ, ಅದು ಮುಂದೆ ಬರಲಿರುವ ಚಂಡಮಾರುತದ ಸಂಕೇತವಾಗಿತ್ತು. ಆ ವರ್ಷದ ಡಿಸೆಂಬರ್ ಮಾಸದಲ್ಲಿ ಮಲೆಯಾಳಂ, ತಮಿಳು, ಹಿಂದಿ ಚಿತ್ರಗಳಲ್ಲಿ ತಮ್ಮ ಕೆರಿಯರ್ ನಿಂದ ಐಡೆಂಟಿಟಿ ಪಡೆದಿದ್ದ ಈ ನಟಿ, ಸಿನಿಮಾಗಳಲ್ಲಿ ಮಹಿಳೆಯರ ಪ್ರತಿನಿಧಿತ್ವದ ಕುರಿತಾಗಿ ಒಂದು ಪ್ಯಾನೆಲ್ ಡಿಸ್ಕಶನ್ ನಲ್ಲಿ ಭಾಗವಹಿಸಿದ್ದರು. ಈ ಚರ್ಚೆಯಲ್ಲಿ ಆಕೆ ಒಂದು ಮಲೆಯಾಳಂ ಚಿತ್ರದ ಕುರಿತಂತೆ ತಮ್ಮ ನಿರಾಶೆ ವ್ಯಕ್ತಪಡಿಸಿದರು.
ಇದರಲ್ಲಿ ಒಬ್ಬ `ಉತ್ಕೃಷ್ಟ ನಟ,' ತನ್ನ ಸಹನಟಿಗೆ ಬಹಳ ಅಪಮಾನಕಾರಕವಾದ ಮಾತನ್ನು ಎಲ್ಲರ ಮುಂದೆ ಹೇಳುತ್ತಾನೆ. ಈ ಚರ್ಚೆಯಲ್ಲಿ ಆಕೆ ಆ ಚಿತ್ರದ ಹೆಸರು ಹೇಳಲಿಲ್ಲ, ಆಗ ಒಬ್ಬ ಸಹಪ್ಯಾನಲಿಸ್ಟ್ ಆಕೆಗೆ ಅದನ್ನು ತಿಳಿಸಲು ಹೇಳಿದಾಗ, ಪಾರ್ವತಿ ಅದನ್ನು 2016ರ ಕ್ರೈಂ ಥ್ರಿಲ್ಲರ್‌ಬಾಕ್ಸ್ ಆಫೀಸ್ ನಲ್ಲಿ ಹಿಟ್ ಎನಿಸಿದವು `ಕಸಾಬಾ' ಎಂದು ತಿಳಿಸಿದರು. ಇದರಲ್ಲಿ ಮಲೆಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ಮಮ್ಮೂಟ್ಟಿ ನಟಿಸಿದ್ದರು.
ಈ ಚಿತ್ರ ರಿಲೀಸ್ ಆದಾಗ ಬಹುತೇಕ ವಿಮರ್ಶಕರು ಹಾಗೂ ಕೇರಳ ಮಹಿಳಾ ಆಯೋಗವನ್ನೂ ಒಳಗೊಂಡಂತೆ, ಈ ಚಿತ್ರದಲ್ಲಿನ ಆಕ್ಷೇಪಾರ್ಹ ಮಾತುಗಳನ್ನು ತೀವ್ರವಾಗಿ ವಿರೋಧಿಸಿದರು. ಈ ಚಿತ್ರದಲ್ಲಿನ ಒಂದು ದೃಶ್ಯದಲ್ಲಿ, ಪೊಲೀಸ್ ಆಫೀಸರ್ ಆಗಿರುವ ಮಮ್ಮೂಟ್ಟಿ ಒಬ್ಬ ಹಿರಿಯ ಮಹಿಳಾ ಸಹೋದ್ಯೋಗಿಗೆ, ತನ್ನ ಬೆರಳುಗಳ ಸಂಜ್ಞೆಯ ಮೂಲಕ, ಲೈಂಗಿಕ ದೌರ್ಜನ್ಯದ ಧಮಕಿ ಕೊಡ್ತಾನೆ.
ಪಾರ್ವತಿ ಈ ಕುರಿತಾಗಿ ಮಾಡಿದ ಟಿಪ್ಪಣಿ ಬಲು ಬೇಗ ವೈರಲ್ ಆಯಿತು, ಹೀಗಾಗಿ ಆಕೆ ಆನ್ ಲೈನ್ ನಲ್ಲಿ ಟ್ರೋಲಿಗರ ಆಕ್ರೋಶ ಎದುರಿಸಬೇಕಾಯಿತು. ಘಟಾನುಘಟಿ ಸ್ಟಾರ್ ಮಮ್ಮೂಟಿಯ ಅಭಿಮಾನಿಗಳು ಈಕೆಯನ್ನು ಬಿಟ್ಟಾರೆಯೇ? ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಬಂದು, ಈಕೆಯ ಮೇಲೆ ಅತ್ಯಾಚಾರ ಎಸಗುವ, ಕೊಲೆ ಪ್ರಯತ್ನದ ಧಮಕಿ ಸಹ ನೀಡಿದರು. ಈ ಇಂಡಸ್ಟ್ರಿಯ ಹಲವು ಖ್ಯಾತರು ಸಹ ಬಾಯಿಗೆ ಬಂದಂತೆ ಆಡಿಕೊಂಡರು. ಬೇಕೆಂದೇ ಈಕೆಗೆ ಅತಿ ಅಸಹ್ಯಕರ, ಅಶ್ಲೀಲ ಸಂದೇಶಗಳನ್ನು ಕಳಿಸಿದ ಒಬ್ಬ ದುರಾಚಾರಿಯನ್ನು ಕೇರಳದ ಪೊಲೀಸರು ಬಂಧಿಸಿದ ನಂತರ, `ಕಸಾಬಾ' ಚಿತ್ರದ ನಿರ್ಮಾಪಕ ಜಾಬಿ ಜಾರ್ಜ್ ಆತನನ್ನು ಸಾರ್ವಜನಿಕವಾಗಿ ಕರೆದು, ತಮ್ಮ ವತಿಯಿಂದ ಶಭಾಷ್ ಗಿರಿ ಎಂಬಂತೆ ನೌಕರಿ ನೀಡಿದರು! ಆದರೆ ಪಾರ್ವತಿ ಇದಾವುದಕ್ಕೂ ಮಣಿಯದೆ ದಿಟ್ಟವಾಗಿ ಮುನ್ನಡೆದರು.
ಇದೇ ಸಂದರ್ಭದಲ್ಲಿ ಈಕೆ ಮಲೆಯಾಳದ `ಟೇಕ್ ಆಫ್' ಚಿತ್ರಕ್ಕಾಗಿ ಪ್ರತಿಷ್ಠಿತ ಪ್ರಶಸ್ತಿ ಗಳಿಸಿದರು. ಈ ಚಿತ್ರದಲ್ಲಿ ಇರಾಕ್ ನಲ್ಲಿ ಭಯೋತ್ಪಾದಕರು ಕಿಡ್ ನ್ಯಾಪ್ ಮಾಡಿದಂಥ ಭಾರತೀಯ ನರ್ಸುಗಳ ವಾಸ್ತವಿಕ ವೇದನೆ ಚಿತ್ರಿಸಲಾಗಿತ್ತು. ಅದಕ್ಕಾಗಿ ಆಕೆ ಪ್ರಶಸ್ತಿ ಪಡೆದು, ಸ್ವೀಕೃತಿ ಭಾಷಣ ನೀಡಲು ವೇದಿಕೆ ಏರಿದಾಗ, ಪ್ರೇಕ್ಷಕರು ಕಿವಿಗಡಚ್ಚಿಕ್ಕುವ ಕರತನಾಡನ ಮಾಡಿದರು. ಆದರೆ ಇಲ್ಲಿನ ವಿಡಂಬನೆ ಎಂದರೆ, ಈ ಚಪ್ಪಾಳೆ ಆಕೆಯ ಸಮರ್ಥನೆಗಾಗಿ ಆಗಿರಲಿಲ್ಲ, ಆಕೆಯ ಮಾತು ಯಾರಿಗೂ ಕೇಳಬಾರದೆಂಬ ದುರುದ್ದೇಶದಿಂದ ಕೂಡಿತ್ತು!





