ಕಳೆದ ತಿಂಗಳು ಜೂನ್ 15ದಂದು ಭಾರತ ಮತ್ತು ಚೀನಾ ಸೈನಿಕರ ನಡುವೆ ಲಢಾಕ್ಕಿನ ಗಾಲ್ವಾನ್ ಎಂಬ ಪ್ರದೇಶದಲ್ಲಿ ಪರಸ್ಪರ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರೆ, ಅದಕ್ಕೆ ಪ್ರತ್ಯುತ್ತರವಾಗಿ ಚೀನಾದೇಶದ 40ಕ್ಕೂ ಅಧಿಕ ಸೈನಿಯರನ್ನು ಯಮಪುರಿಗೆ ಅಟ್ಟಿದದ್ದು ಈಗ ಇತಿಹಾಸವಾಗಿದೆ. ಈ ಸಂಘರ್ಷದ ಇಡೀ ವಿಶ್ವವೇ ಏಷ್ಯಾದಲ್ಲಿ ಶಾಂತಿ ಸೌಹಾರ್ಧತೆಯನ್ನು ಕಾಪಾಡಿಕೊಂಡು ಬರಲು ಸಲಹೆ ನೀಡುತ್ತಿದ್ದರೆ, ಭಾರತ ಮತ್ತು ಚೀನಾ ದೇಶಗಳ ವಿದೇಶಾಂಗ ಸಚಿವರುಗಳು ಮತ್ತು ರಾಜತಾತಂತ್ರಿಕ ಅಧಿಕಾರಿಗಳ ನಡುವೆ ಗಡಿಯಲ್ಲಿ ಶಾಂತಿಯನ್ನು ಕಾಪಾಡಿಕೊಂಡು ಬರುವಂತೆ ಸುಧೀರ್ಘ ಮಾತುಕತೆ ನಡೆಯುತ್ತಲೇ ಇವೆ.

ಸೈನಿಕರ ಸ್ಥೈರ್ಯವನ್ನು ಹೆಚ್ಚಿಸಲು, ಪೂರ್ವನಿರ್ಧಾರಿತವಾಗಿದ್ದಂತೆ ಜನರಲ್ ಎಂ.ಎಂ.ನರವಣೆ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್ ಪ್ರಾಂತ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿತ್ತು. ಆದರೆ, ಕಳೆದ ಸಂಜೆ ಕಡೆಯ ನಿಮಿಷದ ಬೆಳವಣಿಗೆಯಲ್ಲಿ ರಾಜನಾಥ್ ಸಿಂಗ್ ಅವರ ಲೇಹ್ ಭೇಟಿ ಮುಂದೂಡಿದ್ದದ್ದು ಎಲ್ಲರಿಗೂ ಅಚ್ಚರಿ ಮೂಡಿಸುತ್ತು.

ಚೀನಾ ದೇಶದ ಸೈನಿಕರ ಈ ಉದ್ಧಟತನದ ದುಷ್ಕೃತ್ಯವನ್ನು ನಮ್ಮ ಸೈನಿಕರು ಆ ಕ್ಷಣದಲ್ಲಿಯೇ ಮಟ್ಟಹಾಕಿ, ಅವರನ್ನು ಭಾರತದ ಗಡಿಯೊಳಗೆ ಒಂದಿಚೂ ಆಕ್ರಮಣ ಮಾಡದಂತೆ ತಡೆದಿದ್ದರೂ, ನಮ್ಮ ದೇಶದ ವಿರೋಧ ಪಕ್ಷಗಳಾದ ಕಾಂಗ್ರೇಸ್ ಮತ್ತು ಸದಾ ಚೀನಾದ ಪರವಾಗಿರುವ ಕಮ್ಯೂನಿಷ್ಟರು ದೇಶದ ರಕ್ಷಣೆಯ ಬಗ್ಗೆ ಕಿಂಚಿತ್ತೂ ಗಂಭಿರವಿಲ್ಲದೇ, ತಪ್ಪೆಲ್ಲವೂ ನಮ್ಮ ಸೈನಿಕರದ್ದೇ ಎಂದು ಹೇಳುವ ಮೂಲಕ ಪರೋಕ್ಷವಾಗಿ ಶತ್ರುಗಳಿಗೆ ನೆರವಿನ ಹಸ್ತವನ್ನು ಚಾಚಿದ್ದರು ಎಂದರೂ ತಪ್ಪಾಗಲಾರದು. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದ ರಾಹುಲ್ ಗಾಂಧಿ, ಭಾರತ ಮತ್ತು ಚೀನಾದ ನಡುವೆ ದೇವೇಗೌಡುರು ಮತ್ತು ಮನ್ಮೋಹನ್ ಸಿಂಗ್ ನೇತೃತ್ವದ ಸರ್ಕಾರವಿದ್ದಾಗ ಆದ ಗಡಿ ಒಪ್ಪಂದದ ಅರಿವಿಲ್ಲದೇ, ಗಡಿ ಕಾಯುವ ಸೈನಿಕರು ನಿಶ್ಯಸ್ತ್ರರಾಗಿ ಹೋರಾಡಿದ್ದು ಏಕೆ? ಚೀನಾ ಸೈನಿಕರು ಭಾರತದ ಗಡಿಯಲ್ಲಿ ಅಕ್ರಮವಾಗಿ ಪ್ರವೇಶಿಸಿದರೂ 56 ಇಂಚಿನ ನಮ್ಮ ಪ್ರಧಾನಿಗಳು ಏಕೆ ಮಾತನಾಡುತ್ತಿಲ್ಲ? ಎಂದು ಬಹಿರಂಗವಾಗಿಯೇ ಪ್ರಧಾನಿಗಳನ್ನು ಪ್ರಶ್ನಿಸಿದ್ದರು.

WhatsApp Image 2020-07-03 at 11.41.01 AM

ಒಬ್ಬ ಸಮರ್ಥ ನಾಯಕನಾದವನ್ನು ಪರಿಸ್ಥಿತಿಯನ್ನು ಕೂಲಂಕುಶವಾಗಿ ಸಾಧಕ ಬಾಧಕಗಳನ್ನು ಗಂಭೀರವಾಗಿ ಪರಿಗಣಿಸಿ ಅದಕ್ಕೆ ಸಮಯೋಜಿತವಾಗಿ ಉತ್ತರಿಸಬೇಕೇ ಹೊರತು, ಕತ್ತೆ ಎಲ್ಲೆಂದರಲ್ಲಿ ಉಚ್ಚೆ ಹುಯ್ದಂತೆ ಆ ಕೂಡಲೇ ಉತ್ತರಿಸಬಾರದು ಎಂಬುದನ್ನು ಅಚ್ಚರಿಯ ರೀತಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಇಂದು ಬೆಳಿಗ್ಗೆ ಲೇಹ್ ಪ್ರಾಂತ್ಯಕ್ಕೆ ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್ ರಾವತ್ ಮತ್ತು ಭೂ ಸೇನಾ ಪಡೆ ಮುಖ್ಯಸ್ಥ ಜ. ಎಂ. ಎನ್ ನರವಣೆ ಯವರ ಸಹಿತ ಭೇಟಿ ನೀಡಿ ತಮ್ಮ ಪ್ರಭುದ್ಧತೆಯನ್ನು ಮೆರೆದಿದ್ದಾರೆ ಎಂದರೆ ತಪ್ಪಾಗಲಾರದು.

ಸೈನಿಕರನ್ನು ಉದ್ದೇಶಿಸಿ ಮಾತನಾಡಿದಾಗ ಕೊಳಲನ್ನು ನುಡಿಸುವ ಕೃಷ್ಣನನ್ನು ಪ್ರಾರ್ಥಿಸುವ ಜನರೂ ನಾವೇ, ಅದೇ ಸುದರ್ಶನ ಚಕ್ರವನ್ನು ಹೊತ್ತ ಭಗವಾನ್ ಕೃಷ್ಣನನ್ನು ಆರಾಧಿಸುವ ಮತ್ತು ಅನುಸರಿಸುವ ಜನರೂ ನಾವೇ. ನಮಗೆ ಕೊಳಲು ಊದಲೂ ಗೊತ್ತಿದೆ, ಸುದರ್ಶನ ಚಕ್ರ ಪ್ರಯೋಗಿಸಲೂ ಗೊತ್ತಿದೆ. ಎಂದು ನಮ್ಮ ಗಡಿ ಕಾಯುವ ಸೈನ್ಯಕರಿಗೆ ಹುರಿದುಂಬಿಸಿ, ಪರೋಕ್ಷವಾಗಿ ಶತ್ರು ರಾಷ್ಟ್ರಗಳಿಗೆ ಸ್ನೇಹಕ್ಕೆ ಬದ್ಧ. ಸಮರಕ್ಕೂ ಸಿದ್ಧ ಎಂಬ ಎಚ್ಚರಿಕೆ ನೀಡಿದ್ದಾರೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ