ಪ್ರಾಡಕ್ಟ್ಸ್ ಅಂದ್ರೆ ಹೀಗಿರಬೇಕು : ಈ ಹುಡುಗಿಯರು ಮಾಡೆಲಿಂಗ್ ಮಾಡಲಿಕ್ಕಾಗಿ ಇಲ್ಲಿ ಸೇರಿಲ್ಲ. ಇವರು `ರಾಪ್ ಸ್ನಾಕ್ಸ್’ ಎಂಬ ಹೆಸರಿನ ಕುರ್ ಕುರೆ, ಚಿಪ್ಸ್ ನಂಥ ನೂರಾರು ಪ್ರಾಡಕ್ಟ್ಸ್ ತಯಾರಿಸುವ ಕಂಪನಿಯ ಬೆನ್ನೆಲುಬಾಗಿದ್ದಾರೆ. ಕಂಪನಿಯ ಓನರ್ ಇವರಿಗೆ `ಥ್ಯಾಂಕ್ಸ್’ ಹೇಳಲಿಕ್ಕಾಗಿ ಒಂದು ಅದ್ಧೂರಿ ಇವೆಂಟ್ ಏರ್ಪಡಿಸಿದ್ದರು. ಹೆಣ್ಣುಮಕ್ಕಳಿಗೆ ಎಂಥ ಜವಾಬ್ದಾರಿಯನ್ನು ಕೊಟ್ಟರೂ, ಅವರು ಗಂಡು ಮಕ್ಕಳಿಗಿಂತ ಅದನ್ನು ಒಂದು ಕೈ ಚೆನ್ನಾಗಿ ನಿಭಾಯಿಸುತ್ತಾರೆ, ಎಂದರು. ಯಾವ ಕಂಪನಿಯ ಬಳಿ ಇಂಥ ಸ್ವೀಟ್‌ಸಾಲ್ಟಿ ಪರ್ಸನಾಲಿಟೀಸ್ ಇರುತ್ತಾರೋ, ಅಂಥ ಕಂಪನಿಯ ಪ್ರಾಡಕ್ಟ್ಸ್ ಇನ್ನಷ್ಟು ಬೆಟರ್ ಆಗಿರುತ್ತದೆ…. ಅಲ್ಲವೇ?

ಮಸ್ತಿ ಮತ್ತು ರೋಮಾಂಚನ : ಟ್ರಾವೆಲ್ ಹಿಂದಿನಂತಿಲ್ಲ, ಈಗ ಬಹಳಷ್ಟು ಬದಲಾಗಿದೆ! ಜೊತೆಗೆ ಇಂದಿನ ಟ್ರಾವೆಲರ್ಸ್ 8 ಕಡೆ ಹೋಗಿಬಂದೆ ಎಂಬುದನ್ನಷ್ಟೇ ಬಯಸದೆ, ಇಡೀ ಪ್ರವಾಸದಲ್ಲಿ ಭಾಗೀದಾರರಾಗಿ ಎಂಜಾಯ್ ಮಾಡುವಂಥ ಟ್ರಾವೆಲ್ ಅನುಭವ ಬಯಸುತ್ತಾರೆ. ದ. ಅಮೆರಿಕಾದ ಟೂರುಗಳಲ್ಲಿ ಈಗ ಕೇವಲ ಮಾಯಾ ಕಲ್ಚರ್ ನ ಕಣಿವೆಗಳು ಮಾತ್ರವಲ್ಲ, ಅವರ ಹಬ್ಬಗಳಲ್ಲಿ ಭಾಗವಹಿಸುತ್ತಾ, ಇವೆಂಟ್ಸ್ ಎಂಜಾಯ್ ಮಾಡುತ್ತಾರೆ! ಕೆಲವು ಹಬ್ಬಗಳಂತೂ ಹಳೆಯವೆಂದು ಮರೆತೇಬಿಟ್ಟಿದ್ದರು. ಅದನ್ನು ಈ ಪ್ರವಾಸಿಗರಿಗೆಂದೇ ಮತ್ತೆ ಪನರುಜ್ಜೀವನಗೊಳಿಸಲಾಗುತ್ತಿದೆ.

ಖುಷಿ ಖುಷಿಯಾಗಿರುವುದು ಬಲು ಮುಖ್ಯ : ಇದಂತೂ ನಿಜಕ್ಕೂ ಒಳ್ಳೆ ವಿಚಾರ! ಈಗ ಡಾಕ್ಟರ್ಸ್ ಸಹ ತಾವು ಪರಾಮರ್ಶಿಸಬೇಕಾದ ರೋಗಗಳ ಕುರಿತು ಚರ್ಚಿಸಲು ಗ್ರೂಪ್ಸ್ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿ ಪರಸ್ಪರ ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಯಾರು ಪಾಥ್ ಬ್ರೇಕಿಂಗ್ ಸಾಧನೆ ಮಾಡಿದ್ದಾರೋ, ಅಂಥವರಿಗೆ ವಿಶೇಷ ಮಾನ್ಯತೆ ಉಂಟು! ನೆಫ್ರಾಲಜಿ ಫೌಂಡೇಶನ್ ಸಂಸ್ಥೆಯು, 20ನೇ ವಾರ್ಷಿಕೋತ್ಸವ ಆಚರಿಸಿಕೊಂಡಿತು. ಆ ದಿನವನ್ನು ವೈದ್ಯರು, ರೋಗಿಗಳಿಬ್ಬರೂ ಭಲೇ ಖುಷಿ ಖುಷಿಯಾಗಿ ಸಂಭ್ರಮಿಸಿದರು. ರೋಗಿಗಳಿಗೆ ನೆಮ್ಮದಿ, ವೈದ್ಯರಿಗೆ ಆನಂದ…. ಇಬ್ಬರಿಗೂ ಆ ದಿನ ನೋ ಟೆನ್ಶನ್ಸ್!

ಮೊಬೈಲ್ ಪಕ್ಕಕ್ಕಿಟ್ಟು ಆಟೋಟಗಳಲ್ಲಿ ಪಾಲ್ಗೊಳ್ಳಿರಿ : ಅಮೆರಿಕಾದಲ್ಲಿ ಫುಟ್ ಬಾಲ್ ನಂಥದ್ದನ್ನೇ ಹ್ಯಾಂಡ್ ಬಾಲ್ ಆಗಿ ಆಡುತ್ತಾರೆ, ಅದುವೇ ಸಾಕರ್! ಇದನ್ನು ಪ್ರಮೋಟ್ ಮಾಡಲೆಂದೇ ಒಂದು ತಂಡ, ಜನರನ್ನು ಸೋಶಿಯಲ್ ಮೀಡಿಯಾದಿಂದ ದೂರ ಇರಿಸಲು, 6 ದಿನ ಸತತ 4 ಗಂಟೆಯ ಆಟಗಳ ಇವೆಂಟ್ ಏರ್ಪಡಿಸಿದರು. ಇದರಲ್ಲಿ 30 ಹುಡುಗ ಹುಡುಗಿಯರು ಭಾಗವಹಿಸಿದ್ದರು. ಹೀಗೆ ಫಿಝಿಕಲಿ ಆಡುತ್ತಿರುವಾಗ ಮೊಬೈಲ್ ಅಂತೂ ದೂರ ಇರಲೇಬೇಕಲ್ಲವೇ? ಈ ಸ್ಕೀಮ್ ಏನೋ ಯಶಸ್ವಿಯಾಯಿತು, ಆದರೆ ನಿಜವಾದ ಯಶಸ್ಸು ಅಂದ್ರೆ ಜನತೆ ಫೋನ್ ಬದಿಗಿರಿಸಿ, ಇಂಥ ಆಟೋಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಾಗ ಮಾತ್ರ!

ನಾವು ಯಾರಿಗೇನು ಕಡಿಮೆ!? : ಅಮೆರಿಕಾದ ಟ್ರಂಪಣ್ಣನ ಸಹಚರರಾದ ಬಿಳಿಯರು, ಮತ್ತೆ ಅಲ್ಲಿನ ಕರಿಯರ ಮೇಲೆ ದಬ್ಬಾಳಿಕೆ ನಡೆಸಲು ಶುರು ಮಾಡಿಕೊಂಡಿದ್ದಾರೆ. ಹಾಗೇಂತ ಅವರು ಕೈ ಕಟ್ಟಿ ಕುಳಿತುಕೊಳ್ಳುವರೇ? ಖಂಡಿತಾ ಇಲ್ಲ, ಬದಲಿಗೆ ತಮ್ಮ ಪ್ರಾಮುಖ್ಯತೆ ಏನು ಅಂತ ತೋರಿಸಿಕೊಳ್ಳಲು, `ಬ್ಲ್ಯಾಕ್ ಮಂತ್’ ಆಚರಣೆಗೆ ತೊಡಗಿದ್ದಾರೆ. ಇಡೀ ಅಮೆರಿಕಾದ ಕರಿಯರೆಲ್ಲ ಒಗ್ಗೂಡಿ, ತಮ್ಮ ಚರಿತ್ರೆ ರಿಪೀಟ್ ಮಾಡಿದರು, ಇದಕ್ಕಾಗಿ ಎಲ್ಲರೂ ಮುಕ್ತರಾಗಿ ದೇಣಿಗೆ ನೀಡಿದರು. ಅಮೆರಿಕಾದ ಆ ಕರಿಯರ ಸ್ಥಿತಿ ನಮ್ಮಲ್ಲಿನಂತೆಯೇ ಇದೆ. ಆದರೆ ನಮ್ಮಲ್ಲಿ ಇವರುಗಳು ತಮ್ಮ ಐಡೆಂಟಿಟಿ ತೋರಿಸಿಕೊಡುವಲ್ಲಿ ವಿಫಲರಾಗಿದ್ದಾರೆ. ಈ ಹುಡುಗಿಯರು ಇಂಥದ್ದೇ ಒಂದು ಪ್ರಾಜೆಕ್ಟ್ ನಲ್ಲಿ ಪಾಲ್ಗೊಂಡು, ನಾವು ಯಾರಿಗೇನು ಕಡಿಮೆ? ಎನ್ನುತ್ತಿದ್ದಾರೆ.

ವ್ಯಾಖ್ಯಾನವನ್ನೇ ಬದಲಾಯಿಸಿದ ಟೂರಿಸಮ್ : ಇದೀಗ ನಮ್ಮ ಯಂಗ್ ಜನರೇಶನ್ ಟೂರಿಸಮ್ ನ ವ್ಯಾಖ್ಯಾನವನ್ನೇ ಬದಲಾಯಿಸಲು ಹೊರಟಂತಿದೆ. ಒಂದೊಳ್ಳೆ ಪಿಕ್ನಿಕ್ ಸ್ಪಾಟ್ ಗೆ ಹೋಗಿ, ಹಾಯಾಗಿ ಬಿಸಿ ಬಿಸಿ ಕಾಫಿ ಚಪ್ಪರಿಸುತ್ತಾ, ಮಜವಾಗಿ ಸಂಜೆಯನ್ನು ಸಂಭ್ರಮಿಸುವ ಬದಲು ಸ್ಕೀಯಿಂಗ್, ಡೈವಿಂಗ್, ಪ್ಯಾರಾಗ್ಲೈಡಿಂಗ್ ನಂಥ ಸಾಹಸಮಯ ಕ್ರೀಡೆಗಳಲ್ಲಿ ಮೈಮರೆಯುತ್ತಿದ್ದಾರೆ. ಈಗ ವಿಶ್ವದೆಲ್ಲೆಡೆ ಹರಡಿಹೋಗಿರುವ ಐಸ್ ಸ್ಲೋಪ್ಸ್ ನ್ನು ಸ್ಕೀಯಿಂಗ್ ಗಾಗಿ ರೆಡಿ ಮಾಡಲಾಗುತ್ತಿದೆ. ಹಾಗಾಗಿ ಸ್ಕೀಯಿಂಗ್ಸ್ ನ್ನು ಬಾಡಿಗೆಗೆ ಕೊಡುವವರು ಅಲ್ಲಿ ಕೂಡ ವ್ಯಾಪಾರ ಶುರು ಮಾಡಿದ್ದಾರೆ. ರಾತ್ರಿ ಆದ ನಂತರ ಬಾನ್ ಫೈರ್, ಪಾರ್ಟಿ, ಡ್ಯಾನ್ಸ್ ಗಳ ಮಜವೇ ಬೇರೆ! ಚಳಿಗೆ ರಗ್ಗು ಹೊದ್ದು ಮಲಗುವ ಕಾಲ ಇದಲ್ಲ.





