ಕ್ರಿಕೆಟ್‌ ವೀಕ್ಷಕ ವಿವರಣೆಯ ನಿರೂಪಕಿ ರೀನಾ ಡಿಸೋಜಾ ಕ್ರಿಕೆಟ್‌ ಕ್ಷೇತ್ರದ ಹೆಸರಾಂತ ನಿರೂಪಕಿ. 2016ರ ಮಿಸೆಸ್‌ ಇಂಡಿಯಾ ಅರ್ಥ್‌ ಟ್ಯಾಲೆಂಟೆಡ್‌ ಬ್ಯೂಟಿ ಪೇಜೆಂಟ್‌ ಆಗಿದ್ದ ಇವರು ಈವರೆಗೆ 1000+ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದ್ದಾರೆ. ಅನೇಕ ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ......

ರೀನಾ ಡಿಸೋಜಾ.... ಪ್ರತಿಯೊಬ್ಬ ಕ್ರಿಕೆಟ್‌ ಪ್ರೇಮಿಗೂ ಈ ಹೆಸರು ಚಿರಪರಿಚಿತ. ವರ್ಲ್ಡ್ ಕಪ್‌ ಇರಬಹುದು, ಐಪಿಎಲ್ ಇರಬಹುದು, ಇದರಲ್ಲಿ ತಮ್ಮ ಮಾತಿನ ವೈಖರಿಯ ಮೂಲಕ ಕನ್ನಡದ ಸೊಗಡನ್ನು ವಿಶ್ವದಾದ್ಯಂತ ಕನ್ನಡಿಗರಿಗೆ ತಲುಪಿಸಿದ ಖ್ಯಾತಿ ಇವರಿಗೆ ಸಲ್ಲುತ್ತದೆ.

ಕ್ರಿಕೆಟ್‌ ವೀಕ್ಷಕ ವಿವರಣೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ತೀರಾ ಅಪರೂಪ. ಕೆಲವು ಮಹಿಳಾ ಕ್ರಿಕೆಟ್‌ ಆಟಗಾರರು ಆಗೊಮ್ಮೆ, ಈಗೊಮ್ಮೆ  ಕ್ರಿಕೆಟ್‌ ವೀಕ್ಷಕ ವಿವರಣೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಕ್ರಿಕೆಟ್‌ ಆಟಗಾರ್ತಿಯಲ್ಲದ ರೀನಾ ಡಿಸೋಜಾ ಕ್ರಿಕೆಟ್ ಆಟಗಾರರೇ ಹುಬ್ಬೇರಿಸುವಂತೆ ವೀಕ್ಷಕ ವಿವರಣೆ ನೀಡುತ್ತಾರೆ. ಹೀಗಾಗಿ ಕನ್ನಡ ವೀಕ್ಷಕ ವಿವರಣೆ ಪ್ರಪಂಚಕ್ಕೆ ರೀನಾ ಅಪರೂಪದ ಕೊಡುಗೆ ಎನ್ನಬಹುದು.

ಮೂಡಬಿದರೆ ಹುಡುಗಿ ರೀನಾ ಡಿಸೋಜಾ ಓದಿದ್ದು, ಬೆಳೆದದ್ದು ದಕ್ಷಿಣ ಕನ್ನಡದ ಮೂಡಬಿದರೆಯಲ್ಲಿ. ಅಲ್ಲಿನ ಆಳ್ವಾಸ್‌ ನಲ್ಲಿ ಕಂಪ್ಯೂಟರ್‌ ಎಂಜಿನಿಯರಿಂಗ್‌ ಮಾಡಿದ್ದಾರೆ. ಎಂಜಿನಿಯರಿಂಗ್‌ ನ ಎರಡನೇ ವರ್ಷದಲ್ಲಿದ್ದಾಗಲೇ ಅವರ ವಾಕ್ಚಾತುರ್ಯ ಕಾಲೇಜಿನ ಉಪನ್ಯಾಸಕರೊಬ್ಬರ ಗಮನಕ್ಕೆ ಬಂದಿತು. `ಮಂಗಳೂರಿನ ನಮ್ಮ ಟಿವಿ ಚಾನೆಲ್ ‌ನ ಕಾರ್ಯಕ್ರಮವೊಂದನ್ನು ಪ್ರಸ್ತುತಪಡಿಸ್ತೀಯಾ?' ಎಂದವರು ಆಕೆಯನ್ನು ಕೇಳಿದಾಗ, ಖುಷಿಯಿಂದ ಒಪ್ಪಿಕೊಂಡು ಅದನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

ಉದ್ಯೋಗಕ್ಕಾಗಿ ಬೆಂಗಳೂರಿಗೆ

ಉದ್ಯೋಗ ಅರಸಿ ಬೆಂಗಳೂರಿಗೆ ಬಂದಾಗ, ಇಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳೇನೂ ಸಿಗಲಿಲ್ಲ. ಮೊದಲು ಐಬಿಎಂನಲ್ಲಿ ಕೆಲಸ ಮಾಡಿದರು. ಅಲ್ಲಿಂದ ಅಮೆಝಾನ್‌ ಕಂಪನಿ ಸೇರಿಕೊಂಡರು. ಈ ಕಂಪನಿಯಲ್ಲಿದ್ದಾಗ ಅವರಿಗೆ ಹೊಸದೊಂದು ತಿರುವು ಸಿಕ್ಕಿತೆನ್ನಬಹುದು. ಕಂಪನಿಯ ಮುಖ್ಯಸ್ಥ ಬೆಂಗಳೂರಿಗೆ ಬಂದಿದ್ದರು. ಅವರ ಕಾರ್ಯಕ್ರಮವನ್ನು ನಡೆಸಿಕೊಡುವ ಜವಾಬ್ದಾರಿ ರೀನಾಗೆ ವಹಿಸಿಕೊಡಲಾಗಿತ್ತು. ಅದನ್ನು ರೀನಾ ಯಶಸ್ವಿಯಾಗಿ ನಿಭಾಯಿಸಿದರು.

ಆ ಕಾರ್ಯಕ್ರಮ ಪ್ರಸ್ತುತಿಯ ಬಳಿಕ ರೀನಾಗೆ ತಾನು ಇದನ್ನೇ ಏಕೆ ಉದ್ಯೋಗವಾಗಿಸಿಕೊಳ್ಳಬಾರದು ಎನಿಸಿತು. ಅದಕ್ಕೂ ಮೊದಲು ಆಕೆ ಬಿಡುವಿನ ವೇಳೆಯಲ್ಲಿ ಓಪ್ರಾ ವಿನ್‌ ಫ್ರೇ ಅವರ ಟಾಕ್‌ ಶೋಗಳನ್ನು ನೋಡಿ ಬಹಳ ಪ್ರೇರಿತರಾಗಿದ್ದರು. ಓಪ್ರಾ ಟಿವಿ ಶೋಗಳ ಲೋಕದಲ್ಲಿ ಭಾರಿ ಜನಪ್ರಿಯರು. ಅದೇ ರೀತಿ ಸಂದೀಪ್‌ ಮಹೇಶ್ವರಿ ಅವರ ವಿಡಿಯೋಗಳು, ಇತರೆ ಕೆಲವು ಪ್ರಸಿದ್ಧ ಮಾತುಗಾರರ ಪ್ರೇರಣಾತ್ಮಕ ಸ್ಪೀಚ್‌ ಗಳನ್ನು ಆಲಿಸಿದ್ದರು. ಇವೇ ರೀನಾ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಅದ್ಭುತ ಮಾತುಗಾರ್ತಿಯಾಗಲು ಪ್ರೇರಣೆ ನೀಡಿತೆನ್ನಬಹುದು.

ಬಹುಭಾಷಾ ಪ್ರವೀಣೆ

ರೀನಾ ಕನ್ನಡದ ಜೊತೆಗೆ ತುಳು, ಕೊಂಕಣಿ, ಇಂಗ್ಲಿಷ್‌, ಹಿಂದಿಯಲ್ಲಿ ನಿರರ್ಗಳವಾಗಿ ಮಾತಾಡಬಲ್ಲರು. ಕಾರ್ಯಕ್ರಮ ನಡೆಸಿಕೊಡಬಲ್ಲರು. ಅವರ ಮಾತಿನ ಮೋಡಿಗೆ ಕಾರ್ಪೋರೇಟ್‌ ಜಗತ್ತು ಬೆರಗಾಗಿ ಹೋಗಿದೆ. ಅದೇ ರೀತಿ ಸಾಮಾಜಿಕ ವಲಯದಲ್ಲೂ ಅವರ ಖ್ಯಾತಿ ಪಸರಿಸಿದೆ. 2017ರ ಹೊತ್ತಿಗೆ ಅವರ ಖ್ಯಾತಿ ಕ್ರೀಡಾ ಜಗತ್ತಿಗೂ ತಲುಪಿತು.

ಸ್ಟಾರ್‌ ಸ್ಪೋರ್ಟ್ಸ್ ನವರು ಕನ್ನಡದಲ್ಲೂ ಒಂದು ಚಾನೆಲ್ ‌ಆರಂಭಿಸಿ, ಮಹಿಳಾ ವೀಕ್ಷಕ ವಿವರಣೆಗಾರರ ಹೊಸ ಮುಖಕ್ಕಾಗಿ ಹುಡುಕಾಟ ನಡೆಸಿದ್ದರು. ತಾನೂ ಏಕೆ ಅದಕ್ಕೆ  ಪ್ರಯತ್ನಿಸಬಾರದು ಎಂದು ಯೋಚಿಸಿ ರೀನಾ ಅದಕ್ಕೆ ಅಪ್ಲೈ ಮಾಡಿದರು. ರೀನಾ ಪ್ರಸ್ತುತಪಡಿಸುವ ರೀತಿಗೆ ಆಡಳಿತ ಮಂಡಳಿ ಅವರನ್ನು ಆಯ್ಕೆ ಮಾಡಿತು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ