ಸುರೇಶ್‌ : ಈ ಕೊರೋನಾದ ಕರ್ಮಕಾಂಡಗಳಿಂದ ಬಂದ ದೊಡ್ಡ ತೊಂದರೆ ಏನು?

ಮಹೇಶ್‌ : ಕೊರೋನಾದಿಂದ ಲಾಕಪ್‌ ತಪ್ಪಿದ್ದಲ್ಲ. ಲಾಕಪ್‌ ಅಂದ್ರೆ ಇಲ್ಲಿ ಪೊಲೀಸ್‌ ಕಸ್ಟಡಿ, ಲಾಕ್‌ ಡೌನ್‌ ಅಂದ್ರೆ ಹೆಂಡತಿ ಕಸ್ಟಡಿ ಅಂತ!

ಗುಂಡ : ಚೀನಾದವರು ಟಚ್‌ ಮೊಬೈಲ್‌, ಕಾರ್‌, ವಾಚ್‌ ಇನ್ನು ಬೇರೆ ಏನೇನೋ ಕಂಡುಹಿಡಿದು ಎಷ್ಟು ಮುಂದುವರಿದಿದ್ದಾರೆ ಗೊತ್ತಾ?

ಸೀನ : ಜೊತೆಗೆ ಪರಸ್ಪರ ಟಚ್‌ ಮಾಡಿಕೊಂಡ್ರೆ ಬರೋ ಕೊರೋನಾ ರೋಗವನ್ನೂ ಕಂಡುಹಿಡಿದವರು ಅವರೇ ತಾನೇ?

ರಂಗಮ್ಮ : ಪ್ರಪಂಚ ಎಷ್ಟು ಬದಲಾಗಿದೆ ಅಲ್ವಾ?

ನಿಂಗಮ್ಮ : ನೀನು ಯಾವ ದೃಷ್ಟಿಯಲ್ಲಿ ಹೇಳ್ತಿದ್ದೀಯಾ?

ರಂಗಮ್ಮ : ಹಿಂದೆಲ್ಲ ನೆಗೆಟಿವ್ ಯೋಚಿಸುವ ಜನರಿಂದ ದೂರ ಇರಿ ಅಂತಿದ್ದರು, ಈಗ ಯಾರು ಪಾಸಿಟಿವ್ ‌ಆಗಿದ್ದಾರೆ, ಅವರಿಂದ ದೂರ ಓಡಿ ಅಂತಿದ್ದಾರೆ!

ನಾಣಿ : ಈ ಹಾಳಾದ ಕೊರೋನಾ ವೈರಸ್‌ ನಮ್ಮ ದೇಶ ಬಿಟ್ಟು ತೊಲಗಿದರೆ ಸಾಕಾಗಿದೆ. ಯಾವಾಗ ಹೋಗುತ್ತೋ ಏನೋ?

ವೆಂಕ : ಅದು ಹೇಗೆ ತೊಲಗಲು ಸಾಧ್ಯ? ಎಲ್ಲಿ ನೋಡಿದರೂ ಬಸ್ಸು, ರೈಲು, ವಿಮಾನ, ಹಡುಗುಗಳು ಲಾಕ್‌ ಡೌನ್‌ ನಿಂದ ಬಂದ್ ಆಗಿ ಕುಳಿತಿವೆಯಲ್ಲಾ....?

ಟೀಚರ್‌ : ಎಲ್ಲಿ.... ಯಾರಾದ್ರೂ ಕೊರೋನಾ ಬಗ್ಗೆ ಒಂದಿಷ್ಟು ಕೊರೆಯಿರಿ ನೋಡೋಣ.

ಗುಂಡ : ಈ ಕೊರೋನಾ ಹುಟ್ಟಿದ್ದು ಚೀನಾದಲ್ಲಿ, ಬೆಳೆದದ್ದು ಇಟಲಿಯಲ್ಲಿ, ಡಿಗ್ರಿ ತಗೊಂಡಿದ್ದು ಸ್ಪೇನ್‌ ನಲ್ಲಿ, ಕೆಲಸಕ್ಕೆ ಸೇರಿದ್ದು ಅಮೆರಿಕಾದಲ್ಲಿ, ರಿಟೈರ್‌ ಆಗ್ತಾ ಇರೋದು ಮಾತ್ರ ನಮ್ಮ ದೇಶದಲ್ಲಿ ಅನ್ಸುತ್ತೆ!

ರಾಮಣ್ಣ : ನಮ್ಮ ಸನಾತನ ಧರ್ಮದ ಆಚರಣೆಗೂ ಕೊರೋನಾಗೂ ಏನಾದರೂ ಹೋಲಿಕೆಗಳಿವೆಯೇ?

ಭೀಮಣ್ಣ : ಓಹೋ.... ಯಾಕಿಲ್ಲ? ಕ್ವಾರಂಟೈನ್‌ ಅಂದ್ರೆ ಮೈಲಿಗೆ, ಸೋಶಿಯ್‌ ಡಿಸ್ಟೆನ್ಸಿಂಗ್‌ ಅಂದ್ರೆ ಮಡಿ. ಸ್ಯಾನಿಟೈಸರ್‌ ಅಂದ್ರೆ ಪವಿತ್ರ ಮಂತ್ರ ಸ್ನಾನ, ಲಾಕ್‌ ಡೌನ್‌ ಅಂದ್ರೆ ಚಾತುರ್ಮಾಸ ವ್ರತ.

ಗಿರೀಶ್‌ : ಕೊರೋನಾ ಲಾಕ್‌ ಡೌನ್‌ ಕೃಪೆಯಿಂದ ಮೂಡಿದ ಹೊಸ ಗಾದೆ ಯಾವುದು?

ಸುರೇಶ್‌ : ಒಳಗೆ ಹಾಕಿಕೊಳ್ಳಲು ಚಡ್ಡಿ ಇಲ್ಲದಿದ್ದರೂ ಸರಿ, ಹೊರಗೆ ಬಾಯಿಮೂಗಿಗೆ ಹಾಕಲು ಮಾಸ್ಕ್ ಬೇಕೇಬೇಕು!

ಶೀಲಾ : ಏನು ಮಾಡಿದ್ರೂ ಈ ಕೊರೋನಾ ಲಾಕ್‌ ಡೌನ್‌ ನಿಂದ ಟೈಂಪಾಸ್‌ ಆಗ್ತಾ ಇಲ್ಲ. ಏನು ಮಾಡುವುದು?

ಲೀಲಾ : ಸಿಂಪಲ್ ಹೀಗೆ ಮಾಡು! ನೀನೇ ನಟಿಸಿರುವ ನಿನ್ನದೇ ಮದುವೆಯ ಸಿ.ಡಿ ಹಾಕಿಕೊಂಡು ನೋಡು. ಆದರೆ ಇಲ್ಲಿ ಫಾರ್ವರ್ಡ್ ಮಾಡಲು ಹೋಗಬಾರದು. ಇಲ್ಲದಿದ್ದರೆ 5 ನಿಮಿಷದಲ್ಲಿ ಕೊನೆಯ ಸೀನ್‌ ಬಂದೀತು!

ರಾಜು : ಛೇ....ಛೇ! ಈ ಹಾಳು ಲಾಕ್‌ ಡೌನ್‌ ನಿಂದಾಗಿ ಎಲ್ಲಾ ಅಂಗಡಿಗಳೂ ಮುಚ್ಚಿವೆ. ಏನೂ ಸಿಕ್ತಾ ಇಲ್ಲ.

ರವಿ : ಎಷ್ಟು ಬೇಕಾದ್ರೂ ಲಿಕ್ಕರ್‌ ಸಿಗುತ್ತೆ, ಅರ್ಜೆಂಟ್‌ ಅಂದ್ರೆ ಒಂದು ನಿಕ್ಕರ್‌ ಮಾತ್ರ ಸಿಕ್ಕಲ್ಲ!

ಸೂಚನೆ : ಲಾಕ್‌ ಡೌನ್‌ ಕಾರಣ ಮದುವೆ ನಿಲ್ಲಿಸಲಾಗದು. ಮದುವೆ ಮುಹೂರ್ತಕ್ಕೆ ಅವಕಾಶ ಇದೆ. ಆದರೆ ಜವಳಿ ಅಂಗಡಿ, ಒಡವೆ ಅಂಗಡಿ, ಫ್ಯಾನ್ಸಿ ಅಂಗಡಿ.... ಇತ್ಯಾದಿ ಎಲ್ಲಾ ಬಂದ್‌. ಛತ್ರ, ವಾಲಗದವರು, ಹೂ.... ಏನೂ ಸಿಗೋದಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ