ಎಲ್ಲರಿಗೂ ಜೀವನದಲ್ಲಿ ಕೆಲವು ಆಸೆಗಳಿರುವುದು ಸಹಜ. ಕೆಲವುರು ಅವುಗಳನ್ನು ಹೇಗೋ ಏನೋ ಯಾವಾಗಲಾದರೂ ಸರಿ, ತೀರಿಸಿಕೊಳ್ಳುತ್ತಾರೆ. ಇವರ ಜೀವನದಲ್ಲಿ ಆದದ್ದು ಅಷ್ಟೇ. ಇವರಿಗೆ ಮೊದಲಿನಿಂದ ಸಾಹಿತ್ಯದಲ್ಲಿ ಬಹಳ ಆಸಕ್ತಿ. ಯಾವ ಕಥೆ ಪುಸ್ತಕ, ಕಾದಂಬರಿ ಸಿಕ್ಕರೂ ಸಾಕು ಮನೆಯವರು ಎಷ್ಟೇ ಬೈದರೂ ಸರಿ ಕದ್ದು ಮುಚ್ಚಿಯಾದರೂ ಓದುತ್ತಾ ಇದ್ದರಂತೆ. ಓದುವುದೇನೋ ಸರಿ, ಆ ಕಥೆಯ ಕೆಳಗೆ ಅದನ್ನು ಬರೆದವರ ಹೆಸರು ಇರುತ್ತಲ್ಲ ಅದರ ಮೇಲೆ ಏನೋ ಮೋಹ. ಅದಕ್ಕೆ ಬೈ ಲೈನ್‌ ಎನ್ನುತ್ತಾರೆ. `ಪತ್ರಿಕೆಯಲ್ಲಿ ತನ್ನ ಹೆಸರು ಬಂದ್ರೆ ಎಷ್ಟು ಚೆನ್ನ! ತನ್ನ ಹೆಸರು ಬರಲಿ,' ಎನ್ನುವುದು ಅವರ ಆಸೆ. ಅದಕ್ಕಾಗಿ `ತಾನೂ ಸಹಾ ಏನಾದರೂ ಬರಲೇಬೇಕು, ಬರೆಯೋಕೇನೋ ಆಸೆ, ಆದ್ರೆ ಹೇಗೆ ಅಂತಾ ಗೊತ್ತಿಲ್ಲ. ಹೋಗಲಿ ಬರೆದ ಮೇಲೆ ಪತ್ರಿಕೆಗೆ ಕಳಿಸುವುದು ಹೇಗೆ ಅದೂ ಗೊತ್ತಿಲ್ಲ,' ಎನ್ನುವ ಅಳುಕು. ಅಂತೂ ಆಸೆಯಂತೂ ಮನಸ್ಸಿನಲ್ಲಿ ಇದ್ದೇ ಇತ್ತು. ಆದರೆ ಜೀವನ ನಿಂತು ಹೋಗುತ್ತಾ? ಅದು ತನ್ನಷ್ಟಕ್ಕೆ ಮುಂದುವರಿಯಿತು. ಬಾಲ್ಯದಿಂದ ಹರೆಯ, ಮುಂದೆ ಸಂಸಾರ, ಹೀಗೆ ಸಾಗಿತು ಜೀವನ. ಮಕ್ಕಳು ನಂತರ ಮೊಮ್ಮಕ್ಕಳು. ಆದರೆ ಆಸೆ ಮಾತ್ರ ಮನಸ್ಸಿನಲ್ಲಿ ಹಾಗೆಯೇ ಇತ್ತು. ತಮ್ಮೆಲ್ಲ ಜವಾಬ್ದಾರಿಗಳು ಒಂದು ಮಟ್ಟಕ್ಕೆ ಬಂತು ಅಂದಾಗ ಇವರಲ್ಲಿ ಸುಪ್ತವಾಗಿ ಮನಸ್ಸಿನಲ್ಲೇ ಇದ್ದ ಆಸೆ ಮತ್ತೆ ಚಿಗುರೊಡೆಯಿತು ಎನ್ನಬಹುದು.

ಅಷ್ಟು ಹೊತ್ತಿಗಾಗಲೇ ಇವರಿಗೆ ಐವತ್ತು ವರ್ಷ, ಆದರೆ ಯಾವಾಗಲೂ ಇವರ ಮನಸ್ಸಿನಲ್ಲಿ ಮೂಡುತ್ತಿದ್ದ ಪ್ರಶ್ನೆ ತಾನು ಏನು? ತನ್ನ ಐಡೆಂಟಿಟಿ ಏನು?

ಮಗಳು ಡೆಕ್ಕನ್‌ ಹೆರಾಲ್ಡ್ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದಳು. ಟಿ.ವಿ. ಪ್ರೋಗ್ರಾಂ ಮಾಡುತ್ತಿದ್ದಳು. ಅವಳ ಲೇಖನಗಳಿಗೆ, ಟಿ.ವಿ. ಪ್ರೋಗ್ರಾಂಗೆ ಸ್ಕ್ರಿಪ್ಟ್ ಬರೆಯಲು ಸಹಾಯ ಮಾಡುತ್ತಿದ್ದರು. ಮಗ ಒಳ್ಳೆಯ ಚರ್ಚಾಪಟು. ಅವನ ಭಾಷಣಗಳಿಗೆ ಇವರದೇ ಸ್ಕ್ರಿಪ್ಟ್. ಹೀಗೆ ಇವರ ಬರವಣಿಗೆ ಅಷ್ಟಕ್ಕೇ ಸೀಮಿತ ಆಗಿತ್ತು. ಇವರಿಗೆ ತಮ್ಮ ಮಕ್ಕಳು, ಪತಿಯ ಬಗ್ಗೆ ಬಹಳ ಹೆಮ್ಮೆ. ಯಾರಿಗಾದ್ರೂ ಅವರನ್ನ ಪರಿಚಯ ಮಾಡಿಸೋಕೆ ಬಹಳ ಖುಷಿ. ನನ್ನವರು ಡಾಕ್ಟರ್‌, ನನ್ನ ಮಗಳು ಡಬ್ಬಲ್ ಗ್ರ್ಯಾಜುಯೆಟ್‌, ಮಗ ಎಂ.ಡಿ.ಎಸ್‌ ಮತ್ತು ಚಿಕ್ಕ ಮಗ ಎಂ.ಎಸ್‌ ಅಂತ. ಆದರೆ ಮನಸ್ಸಿನಲ್ಲಿ ಏನೋ ಕೊರತೆ, ಹಾಗಾದರೆ ತಾನು ಏನು? ಇವರ ತಾಯಿ ಅನ್ನೋದು ಬಿಟ್ಟರೆ ತಾನು ಬೇರೆ ಏನೂ ಅಲ್ಲಾ ಎನ್ನುವ ಬೇಸರ. ಹಾಗಾದರೆ ಏನು ಮಾಡಬೇಕು ಅಥವಾ ಏನು ಮಾಡಬಹುದು ಎಂದೂ ಗೊತ್ತಿರಲಿಲ್ಲ.

ಎದೆಯಲ್ಲಿ ಹುದುಗಿದ್ದ ಸಾಹಿತ್ಯ ಪ್ರೇಮ

ಬಹುತೇಕ ಮಹಿಳೆಯರು ಮಗಳಾಗಿ, ವಿದ್ಯಾರ್ಥಿನಿಯಾಗಿ, ಪತ್ನಿಯಾಗಿ, ತಾಯಿಯಾಗಿ, ಅತ್ತೆಯಾಗಿ, ಅಜ್ಜಿಯಾಗಿ ತಮ್ಮ ಕರ್ತವ್ಯಗಳನ್ನು ಪೂರೈಸುತ್ತಾರೆ. ಆದರೆ ಅವರ ವೈಯಕ್ತಿಕ ಆಸೆಗಳು ಅನೇಕ ಬಾರಿ ಮುದುಡಿ ಹೋಗುತ್ತವೆ. ಚಿಕ್ಕಂದಿನಲ್ಲಿ ಟಿಸಿಲೊಡೆದ ಹಲವಾರು ಹವ್ಯಾಸಗಳು ಬಹಳಷ್ಟು ಮಹಿಳೆಯರಿಗೆ ಸಂಸಾರದ ಜಂಜಾಟದಲ್ಲಿ ಬಾಡಿ ಹೋಗುತ್ತದೆ. ಆದರೆ ಮಂಜುಳಾ ರಾಜ್‌ ಎದೆಯಲ್ಲಿ ಬೆಚ್ಚಗೆ ಹುದುಗಿದ್ದ ಸಾಹಿತ್ಯ ಪ್ರೇಮ ತಾಯಿ. ಅಜ್ಜಿಯಾದ ನಂತರವೇ ಸರಿಯಾದ ರೂಪ ಪಡೆದದ್ದು. ನಂತರ ಅವರ ಪ್ರತಿಭೆಯ ಗುರುತಿಸುವಿಕೆಗೂ ಕಾರಣವಾಯಿತು. ಮಂಜುಳಾ ರಾಜ್‌ ತಮ್ಮೆಲ್ಲಾ ಸಂಸಾರದ ಜವಾಬ್ದಾರಿಗಳನ್ನು ಮುಗಿಸಿ ಬರವಣಿಗೆಯನ್ನು ಆರಂಭಿಸಿದರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ