ಸ್ಪೆಷಲ್ ಖಾರದ ಕರಿಗಡುಬು
ಸಾಮಗ್ರಿ : 200 ಗ್ರಾಂ ಮೈದಾ, 50 ಗ್ರಾಂ ರವೆ, 250 ಗ್ರಾಂ ಖಾರದ ಮಿಕ್ಸ್ ಚರ್, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಓಮ, ಕರಿಯಲು ಎಣ್ಣೆ, ಅರ್ಧ ಸೌಟು ತುಪ್ಪ.
ವಿಧಾನ : ಜರಡಿಯಾಡಿದ ಮೈದಾಗೆ ತುಸು ಉಪ್ಪು, ನೀರಲ್ಲಿ ಕರಗಿಸಿದ ಇಂಗು, ಓಮ, ರವೆ ಸೇರಿಸಿ ಸ್ವಲ್ಪವೇ ನೀರು ಬೆರೆಸುತ್ತಾ ಮೃದುವಾದ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಇದಕ್ಕೆ ತುಪ್ಪ ಬೆರೆಸಿ ಚೆನ್ನಾಗಿ ನಾದಿಕೊಂಡು 2-3 ಗಂಟೆ ಕಾಲ ನೆನೆಯಲು ಬಿಡಿ. ನಂತರ ಮತ್ತೊಮ್ಮೆ ತುಪ್ಪ ಬೆರೆಸಿ ನಾದಿಕೊಂಡು, ಸಣ್ಣ ಉಂಡೆಗಳಾಗಿಸಿ, ಪುಟ್ಟ ಪೂರಿಗಳಾಗಿ ಲಟ್ಟಿಸಿ. ಇದನ್ನು ಕಡುಬಿನ ಅಚ್ಚಿನಲ್ಲಿರಿಸಿ, ಇದಕ್ಕೆ 3-4 ಚಮಚ ಖಾರದ ಮಿಕ್ಸ್ ಚರ್ ತುಂಬಿಸಿ, ಅಂಚು ಬಿಟ್ಟುಕೊಳ್ಳದಂತೆ ಒದ್ದೆ ಕೈಯಿಂದ ಅಂಟಿಸಿಬಿಡಿ. ಈ ರೀತಿ ಎಲ್ಲವನ್ನೂ ಸಿದ್ಧಪಡಿಸಿಕೊಂಡು, ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಗರಿಗರಿಯಾಗಿ ಕರಿದು, ಬಿಸಿ ಬಿಸಿ ಕಾಫಿ-ಟೀ ಜೊತೆ ಸವಿಯಲು ಕೊಡಿ.

ತ್ರಿವರ್ಣದ ಕಟ್ ಲೆಟ್ಸ್
ಸಾಮಗ್ರಿ : ಬೇಯಿಸಿ ಮಸೆದ ಹಸಿ ಬಟಾಣಿ, ನೀಟಾಗಿ ತುರಿದ 1 ಕಪ್ ಪನೀರ್, 4 ಚಮಚ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಇಂಗು, ಹಸಿಮೆಣಸಿನ ಪೇಸ್ಟ್, ಶುಂಠಿ ಪೇಸ್ಟ್, ಗರಂಮಸಾಲ, ಅರಿಶಿನ, ಜೀರಿಗೆ, ಕರಿಯಲು ಎಣ್ಣೆ.
ವಿಧಾನ : ಪನೀರ್ ಗೆ ಚಿಟಕಿ ಅರಿಶಿನ, ಉಪ್ಪು ಸೇರಿಸಿ ಮಿಶ್ರಣ ಕಲಸಿ, 4 ಉಂಡೆ ಮಾಡಿಡಿ. ಬಾಣಲೆಯಲ್ಲಿ ತುಸು ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಇಂಗಿನ ಒಗ್ಗರಣೆ ಕೊಟ್ಟು, ಮಂದ ಉರಿಯಲ್ಲಿ 2 ಬಗೆಯ ಪೇಸ್ಟ್ ಹಾಕಿ ಕೆದಕಬೇಕು. ನಂತರ ಉಳಿದೆಲ್ಲ ಮಸಾಲೆ ಹಾಕಿ, ಬಟಾಣಿ ಮಿಶ್ರಣ ಸೇರಿಸಿ ಕೈಯಾಡಿಸಿ. ಇದನ್ನು ಕೆಳಗಿಳಿಸಿ ಆರಿದ ನಂತರ 4 ಉಂಡೆಗಳಾಗಿಸಿ. ಆಮೇಲೆ ಮಸೆದ ಆಲೂಗೆ ಕಾರ್ನ್ ಫ್ಲೋರ್, ತುಸು ಉಪ್ಪು ಹಾಕಿ 4 ಉಂಡೆ ಮಾಡಿಡಿ. ಇದೀಗ ಬಟಾಣಿಯ ಉಂಡೆಯನ್ನು ಎಣ್ಣೆ ಸವರಿದ ಮಣೆ ಮೇಲೆ ಲಘುವಾಗಿ ಲಟ್ಟಿಸಿ. ಇದರ ಮಧ್ಯೆ 1 ಪನೀರ್ ಉಂಡೆ ಇರಿಸಿ ನೀಟಾಗಿ ಕ್ಲೋಸ್ ಮಾಡಿ, ಮತ್ತೆ ಲಟ್ಟಿಸಿ ಚೌಕಾಕಾರ ನೀಡಿ ಕಟ್ ಲೆಟ್ ಆಗಿಸಿ. ಇದೇ ತರಹ ಆಲೂ ಮಿಶ್ರಣ ಲಟ್ಟಿಸಿ ಅದರಲ್ಲಿ ಇದನ್ನು ಇರಿಸಿ ಕ್ಲೋಸ್ ಮಾಡಿ ಮತ್ತೆ ಕಟ್ ಲೆಟ್ ಲಟ್ಟಿಸಿ. ಈ ರೀತಿ ಎಲ್ಲಾ ಕಟ್ ಲೆಟ್ಸ್ ಸಿದ್ಧಪಡಿಸಿಕೊಳ್ಳಿ. ನಂತರ ಇವನ್ನು ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವಂತೆ ಕರಿದು ತೆಗೆಯಿರಿ. ಚಿತ್ರದಲ್ಲಿರುವಂತೆ ಇದನ್ನು 4 ಭಾಗವಾಗಿ ಕತ್ತರಿಸಿದರೆ, ಈ ರೀತಿ ತ್ರಿವರ್ಣ ಕಟ್ ಲೆಟ್ಸ್ ರೆಡಿ ಆಗುತ್ತದೆ!

ವೆಜಿಟೆಬಲ್ ಪಡ್ಡು
ಸಾಮಗ್ರಿ : 1 ಕಪ್ ಸಣ್ಣ ರವೆ, 1 ಕಪ್ ಮೊಸರು, ಹೆಚ್ಚಿದ 2-3 ಈರುಳ್ಳಿ, ಟೊಮೇಟೊ, ಕೊ.ಸೊಪ್ಪು, ಹಸಿ ಮೆಣಸು, ರುಚಿಗೆ ತಕ್ಕಷ್ಟು ಉಪ್ಪು, ಫ್ರೂಟ್ ಸಾಲ್ಟ್.





